ಭವಿಷ್ಯದ ಸಂಚಾರಿ; ಜೋಹಮ್ಮೆರ್ ವಿದ್ಯುತ್ ಚಾಲಿತ ಬೈಕ್
ಭವಿಷ್ಯದ ಸಂಚಾರದ ವಾಹಕದ ನಿಟ್ಟಿನಲ್ಲಿ ಅನೇಕ ವಾಹನ ತಯಾರಕ ಸಂಸ್ಥೆಗಳು ಪರಿಸರ ಸ್ನೇಹಿ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇಲ್ಲಿ ಕಾರುಗಳಂತೆಯೇ ದ್ವಿಚಕ್ರ ವಾಹನಗಳ ನಿರ್ಮಾಣಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡುತ್ತಿರುವುದು ಸ್ವಾಗತಾರ್ಹವೇ ಸರಿ.
ಪ್ರಸ್ತುತ ಆಸ್ಟ್ರೀಯಾದ ಹ್ಯಾಮ್ಮರ್ಸ್‌ಮಿಡ್ ಮ್ಯಾಶಿನೆಂಬ್ಯೂ (Hammerschmid Maschinenbau) ಸಂಸ್ಥೆಯು 'ಜೋಹಮ್ಮೆರ್' (Johammer) ಎಂಬ ನೂತನ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದೆ. ಇತರ ಸಾಂಪ್ರದಾಯಿಕ ಬೈಕ್‌ಗಳಿಗಿಂತ ಭಿನ್ನವಾಗಿ ವಿನೂತನ ನೋಟ ಕಾಪಾಡಿಕೊಳ್ಳುವಲ್ಲಿ ಇದು ಯಶಸ್ವಿಯಾಗಿದೆ.

ಒಟ್ಟು ಎರಡು ವೆರಿಯಂಟ್‌ಗಳಲ್ಲಿ ಮಾತ್ರ ಜೋಹಮ್ಮರ್ ಎಲೆಕ್ಟ್ರಿಕ್ ಬೈಕ್ ಲಭ್ಯವಾಗಲಿದೆ. ಅವುಗಳೆಂದರೆ ಜೆ1.150 ಹಾಗೂ ಜೆ1.200. ಇವೆರಡು ಬೈಕ್‌ಗಳು ಅನುಕ್ರಮವಾಗಿ 158 ಹಾಗೂ 177 ಕೆ.ಜಿ ತೂಕವನ್ನು ಹೊಂದಿರುತ್ತದೆ.

ಹೆಸರಲ್ಲೇ ಸೂಚಿಸಿರುವಂತೆಯೇ ಜೆ1.150 ವೆರಿಯಂಟ್, 8.3 ಕೆಡಬ್ಲ್ಯುಎಚ್ ಬ್ಯಾಟರಿ ಹೊಂದಿದ್ದು, 150 ಕೀ.ಮೀ. ರೇಂಜ್ ವರೆಗೂ ಚಲಿಸಬಲ್ಲದು. ಹಾಗೆಯೇ 2.5 ತಾಸಿನಲ್ಲಿ ಚಾರ್ಜ್ ಮಾಡಿಸಬಹುದಾಗಿದೆ.

ಅದೇ ರೀತಿ 12.7 ಕೆಡಬ್ಲ್ಯುಎಚ್‌ನಿಂದ ನಿಯಂತ್ರಿಸಲ್ಪಟ್ಟಿರುವ ಜೆ1.200, 3.5 ತಾಸು ಚಾರ್ಜ್ ಮಾಡಿಸಿದ್ದಲ್ಲಿ 200 ಕೀ.ಮೀ. ವರೆಗೆ ಸರಾಗವಾಗಿ ಚಲಿಸಬಹುದಾಗಿದೆ.

ಪ್ರಮುಖವಾಗಿಯೂ ನಗರ ಪ್ರದೇಶದ ಸಂಚಾರಿಗಳನ್ನು ಗುರಿಯಾಗಿರಿಸಿಕೊಂಡು ಇದನ್ನು ತಯಾರಿಸಲಾಗಿದೆ. ಹಾಗಾಗಿ ಹೆಚ್ಚು ವೇಗ ನಿರೀಕ್ಷೆ ಮಾಡುವಂತಿಲ್ಲ.

ಆಸ್ಟ್ರೀಯಾ ಸಂಸ್ಥೆಯ ಪ್ರಕಾರ ಇದರಲ್ಲಿ ಆಳವಡಿಸಲಾಗಿರುವ ಲಿಥಿಯಂ ಇಯಾನ್ ಬ್ಯಾಟರಿ ಜೀವಮಾನ ಬಳಕೆ ಬರಲಿದೆ.

ಇನ್ನೊಂದು ಗಮನಾರ್ಹ ಅಂಶವೆಂದರೆ ಇದರಲ್ಲಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇರುವುದಿಲ್ಲ. ಬದಲಾಗಿ ಎಲ್ಲ ಮಾಹಿತಿಯನ್ನು ರಿಯರ್ ವ್ಯೂ ಮಿರರ್‌ನಲ್ಲೇ ಪಡೆಯಬಹುದಾಗಿದೆ.

ಅಂದ ಹಾಗೆ ಸದ್ಯಕ್ಕಂತೂ ಇದರ ಭಾರತ ಪ್ರವೇಶ ಸಾಧ್ಯತೆ ಕಡಿಮೆಯಾಗಿದೆ. ಎಲ್ಲದಕ್ಕಿಂತಲೂ ಮಿಗಿಲಾಗಿ ಬೆಲೆ ಮುಖ್ಯ ಪಾತ್ರ ವಾಹಿಸಲಿದೆ. ಇದು 25,000 ಯುರೋಗಳಷ್ಟು ದುಬಾರಿಯೆನಿಸಲಿದೆ.

ಬಣ್ಣಗಳು
ಬೆಳ್ಳಿ,
ಬಿಳಿ,
ನೀಲಿ,
ಹಳದಿ,
ಹಸಿರು

ವೈಶಿಷ್ಟ್ಯ
ಪರಿಸರ ಸ್ನೇಹಿ,
ಬಹು ಕ್ರಿಯಾತ್ಮಕ ರಿಯರ್ ವ್ಯೂ ಮಿರರ್,
ವಿಭಿನ್ನ ನೋಟ,
ಯೂನಿಕ್ ಕಾನ್ಸೆಪ್ಟ್,
ಚಾಸೀಸ್,
ಪರಿಪೂರ್ಣ ಹ್ಯಾಂಡ್ಲಿಂಗ್,


Click it and Unblock the Notifications