ಮಂಗಳೂರು ಕರಾವಳಿ ಕಾಲೇಜು ವಿದ್ಯಾರ್ಥಿಗಳಿಂದ ಹೈಬ್ರಿಡ್ ಬೈಕ್ ತಯಾರಿ

By Nagaraja

ಇಂಧನ ಬೆಲೆ ದಿನಂದಿನ ದಿನಕ್ಕೆ ಗಗನಕ್ಕೇರುತ್ತಲೇ ಇದೆ. ಇನ್ನೊಂದೆಡೆ ವಾಹನಗಳಿಂದ ಹೊರಸೂಸುವ ಹೊಗೆಯಿಂದಾಗಿ ಇಡೀ ಪರಿಸರ ಮಾಲಿನ್ಯವಾಗುತ್ತಿದೆ. ಈಗಿನಿಂದಲೇ ಇವೆಲ್ಲಕ್ಕೂ ಪರಿಹಾರ ಹುಡುಕದಿದ್ದಲ್ಲಿ ಮುಂದಿನ ಪೀಳಿಗೆಯ ಜೀವನ ಡೋಲಾಯಮಾನ ಆಗಲಿದೆ ಎಂಬುದರಲ್ಲಿ ಯಾವುದೇ ಸಂಶಯವೇ ಬೇಡ.

ಈ ಎಲ್ಲದರ ನಡುವೆ ಮಂಗಳೂರಿನ ಕರಾವಳಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಅಂತಿಮ ವರ್ಷದ ಮೆಕ್ಯಾನಿಕಲ್ ಎಂಜಿನಿಯರ್ ವಿದ್ಯಾರ್ಥಿಗಳು ನೂತನ ಹೈಬ್ರಿಡ್ ಬೈಕ್ ಅಭಿವೃದ್ಧಪಡಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಇದು ಹೆಚ್ಚು ಶಕ್ತಿಶಾಲಿ ಚಾಲನೆ ಜೊತೆಗೆ ಇಂಧನ ಹಾಗೂ ಹಣ ಉಳಿತಾಯ ಮಾಡಲು ನೆರವಾಗಲಿದೆ.

ಮಂಗಳೂರಿನ ಕರಾವಳಿ ಕಾಲೇಜು ವಿದ್ಯಾರ್ಥಿಗಳಿಂದ ಹೈಬ್ರಿಡ್ ಬೈಕ್ ತಯಾರಿ

ಈ ಹೈಬ್ರಿಡ್ ಬೈಕನ್ನು ಅಂತಿಮ ವರ್ಷದ ಪ್ರೊಜೆಕ್ಟ್ ಭಾಗವಾಗಿ ಕರಾವಳಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳಾಗಿರುವ ಸುಬಿನ್ ಡ್ಯಾನಿಯಲ್ ತಂಬಿ ಮತ್ತು ಅನಾಜ್ ಐಸಾಕ್ ಅಭಿವೃದ್ಧಿಪಡಿಸಿದ್ದಾರೆ. ಇವರಿಗೆ ಶಿಕ್ಷಕರಾದ ಪಿ ರಮೇಶ್ ಕುಮಾರ್ (ಬಿ.ಇ, ಎಂಟೆಕ್) ಸಾಥ್ ನೀಡಿದ್ದರು.

ಮಂಗಳೂರಿನ ಕರಾವಳಿ ಕಾಲೇಜು ವಿದ್ಯಾರ್ಥಿಗಳಿಂದ ಹೈಬ್ರಿಡ್ ಬೈಕ್ ತಯಾರಿ

ಪ್ರಸ್ತುತ ಹೈಬ್ರಿಡ್ ಬೈಕ್, ಎಂಜಿನ್ ಜತೆಗೆ ಎಲೆಕ್ಟ್ರಿಕ್ ನಿಯಂತ್ರಿತ ಬ್ಯಾಟರಿ ಪಡೆದುಕೊಂಡಿದೆ. ಅಂತೆಯೇ ಸಾಮಾನ್ಯ ದ್ವಿಚಕ್ರ ವಾಹನಗಳು ಬ್ಯಾಕ್ ವೀಲ್ ಡ್ರೈವ್ ಮಾತ್ರ ಇರುವಾಗ ಈ ಹೈಬ್ರಿಡ್ ಬೈಕ್ ಫ್ರಂಟ್ ಹಾಗೂ ಬ್ಯಾಕ್ ವೀಲ್ ಡ್ರೈವ್‌ನಿಂದ ಚಾಲನೆಯಾಗಲಿದೆ. ಮುಂಭಾಗದ ವೀಲ್‌ಗೆ ಬ್ಯಾಟರಿ ನಿಯಂತ್ರಿತ ವಿಶೇಷ ಹಬ್ ಮೋಟಾರ್ ವಿಧಾನ ಅಳವಡಿಸಲಾಗಿದೆ.

ಮಂಗಳೂರಿನ ಕರಾವಳಿ ಕಾಲೇಜು ವಿದ್ಯಾರ್ಥಿಗಳಿಂದ ಹೈಬ್ರಿಡ್ ಬೈಕ್ ತಯಾರಿ

ಆಟೋಮೊಬೈಲ್ ಕ್ಷೇತ್ರದಲ್ಲಿದು ಹೊಸ ತಂತ್ರಜ್ಞಾನವಾಗಿದ್ದು, ಟು ವೀಲ್ ಡ್ರೈವ್ ವ್ಯವಸ್ಥೆ ಅಳವಡಿಸುವ ಮೂಲಕ ಸಾಮಾನ್ಯ ಬೈಕ್‌ಗಿಂತಲೂ ಹೆಚ್ಚು ಶಕ್ತಿ ಉತ್ಪಾದಿಸಬಹುದಾಗಿದೆ. ಇಲ್ಲಿ ಪರಿಷ್ಕೃತ ಹೀರೊ ಹೋಂಡಾ ಸಿಡಿ-100 ಗೇರ್ ಜೊತೆಗೆ ಫ್ರಂಟ್ ವೀಲ್‌ಗಾಗಿ 550 ಡಬ್ಲ್ಯು ಹಬ್ ಮೋಟಾರು ಬಳಕೆ ಮಾಡಲಾಗಿದೆ.

ಮಂಗಳೂರಿನ ಕರಾವಳಿ ಕಾಲೇಜು ವಿದ್ಯಾರ್ಥಿಗಳಿಂದ ಹೈಬ್ರಿಡ್ ಬೈಕ್ ತಯಾರಿ

ಅಷ್ಟೇ ಅಲ್ಲದೆ ಚಾಲಕರ ಇಚ್ಛೆಗಾನುಸಾರವಾಗಿ ಹೆಚ್ಚು ಪರಿಸರ ಸ್ನೇಹಿ ಬ್ಯಾಟರಿ ನಿಯಂತ್ರಿತ ಫ್ರಂಟ್ ವೀಲ್ ಡ್ರೈವ್ (ಎಲೆಕ್ಟ್ರಿಕ್ ಬೈಕ್ ತರಹನೇ ಕೆಲಸ ಮಾಡಲಿದೆ) ಅಥವಾ ಎಂಜಿನ್‌ನಿಂದ ಓಡುವ ಬ್ಯಾಕ್ ವೀಲ್ ಡ್ರೈವ್ (ಐಸಿ ಎಂಜಿನ್ ನಿಯಂತ್ರಿತ ಬೈಕ್) ಆಯ್ಕೆ ಮಾಡಬಹುದಾಗಿದೆ.

ಮಂಗಳೂರಿನ ಕರಾವಳಿ ಕಾಲೇಜು ವಿದ್ಯಾರ್ಥಿಗಳಿಂದ ಹೈಬ್ರಿಡ್ ಬೈಕ್ ತಯಾರಿ

ಇನ್ನು ಇವೆರಡನ್ನು ಜೊತೆಯಾಗಿ ಬಳಕೆ ಮಾಡಿದಾಗ ಸಾಮಾನ್ಯ ಬೈಕ್‌ಗಿಂತಲೂ ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದೆ. ಅಂದರೆ ಬೆಟ್ಟವನ್ನು ಏರುವುದು ಹಾಗೂ ಒರಟಾದ ರಸ್ತೆಗಳ ಪಯಣ ಇನ್ನಷ್ಟು ಸಲೀಸಾಗಲಿದೆ. ಅಂತೆಯೇ ಬ್ಯಾಟರಿ ಮೋಡ್‌ನಲ್ಲಿ ಮಾತ್ರವಾಗಿ ಗಂಟೆಗೆ 60 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ.

ಮಂಗಳೂರಿನ ಕರಾವಳಿ ಕಾಲೇಜು ವಿದ್ಯಾರ್ಥಿಗಳಿಂದ ಹೈಬ್ರಿಡ್ ಬೈಕ್ ತಯಾರಿ

ಬ್ಯಾಟರಿ ಸಂಪೂರ್ಣ ಚಾರ್ಜ್ ಮಾಡಿಸಿದಾಗ 6.5 ತಾಸಿನ ವರೆಗೂ ಆರಾಮದಾಯಕವಾಗಿ ಚಲಿಸಬಹುದಾಗಿದೆ. ಇದಕ್ಕಾಗಿ 10 ರು.ಗಳ ಮೂರು ಯುನಿಟ್ ವಿದ್ಯುತ್ ಮಾತ್ರ ವ್ಯಯವಾಗಲಿದೆ. ಹಾಗೆಯೇ ಒಂದೇ ಚಾರ್ಜ್‌ನಲ್ಲಿ 45 ಕೀ.ಮೀ. ವರೆಗೂ ಚಲಿಸಬಹುದು. ಇನ್ನು ಬೈಕ್ ಚೈನ್‌ಗೆ ಆವರ್ತಕ ಲಗತ್ತಿಸಿರುವುದರಿಂದ ಸಂಚರಿಸುತ್ತಿರುವಾಗಲೇ ಸ್ವಯಂಚಾಲಿತವಾಗಿ ಚಾರ್ಜ್ ಆಗಲಿದೆ.

ಮಂಗಳೂರಿನ ಕರಾವಳಿ ಕಾಲೇಜು ವಿದ್ಯಾರ್ಥಿಗಳಿಂದ ಹೈಬ್ರಿಡ್ ಬೈಕ್ ತಯಾರಿ

ವಿಪರೀತ ವಾಹನ ದಟ್ಟಣೆಗಳಲ್ಲಿ ಸಂಚರಿಸುವಾಗ ಪದೇ ಪದೇ ಗೇರ್ ಬದಲಾವಣೆ ಅಗತ್ಯವಿರುವುದರಿಂದ ಹೆಚ್ಚಿನ ಇಂಧನ ವ್ಯಯವಾಗುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ ನೀವು ಬ್ಯಾಟರಿ ಮೋಡ್‌ಗೆ ಬದಲಾಯಿಸಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ. ಅದೇ ರೀತಿ ಪರಿಸರ ಮಾಲಿನ್ಯವನ್ನು ಸಹ ತಪ್ಪಿಸಬಹುದಾಗಿದೆ. ಅಷ್ಟೇ ಅಲ್ಲದೆ ಕಡಿಮೆ ಇಂಧನ ಬಳಕೆ ಮೂಲಕ ನಿಮ್ಮ ಹಣವನ್ನು ಉಳಿತಾಯ ಮಾಡಬಹುದು.

More from DriveSpark

Article Published On: Tuesday, June 17, 2014, 13:56 [IST]
English summary
The Hybrid Bike, developed by two final-year mechanical engineering students of Karavali Institute of Technology , helps two-wheeler users save fuel and money, while delivering a more powerful ride.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+