ಭಾರತಕ್ಕೆ ಬರುತ್ತಾ ಕವಾಸಕಿ 250 ಸಿಸಿ ಬೈಕ್?
ಬಹುನಿರೀಕ್ಷಿತ ಕವಾಸಕಿ ನಿಂಜಾ ಆರ್‌ಆರ್ ಮೊನೊ ಅಥವಾ 250 ಎಸ್‌ಎಲ್ ಆವೃತ್ತಿಯು ಇಂಡೋನೇಷ್ಯಾದಲ್ಲಿ ಭರ್ಜರಿ ಅನಾವರಣ ಕಂಡಿದೆ.
2014 ಆಟೋ ಎಕ್ಸ್ ಪೋ
ಹೆಸರಲ್ಲೇ ಸೂಚಿಸಿರುವಂತೆಯೇ ನಿಂಜಾ ಆರ್‌ಆರ್ ಮೊನೊ ಬೈಕ್ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್, 249 ಸಿಸಿ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 28 ಪಿಎಸ್ ಪವರ್ (22.6 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಆರು ಸ್ಪಿಡ್ ಗೇರ್ ಬಾಕ್ಸ್ ಹೊಂದಿದೆ.

151 ಕೆ.ಜಿ ಕರ್ಬ್ ಭಾರ ಹೊಂದಿರುವ ಪ್ರಸ್ತುತ ಬೈಕ್ ಗಂಟೆಗೆ ಗರಿಷ್ಠ 153 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ನಿಂಜಾ 300ಆರ್‌ಗೆ ಸಮಾನತೆ ಹೊಂದಿರುವ ಕವಾಸಕಿ 250 ಬೈಕ್ ಪರಿಪೂರ್ಣ ಫೇರ್ಡ್ ಬೈಕ್ ಎನಿಸಿಕೊಂಡಿದೆ.

ಕವಾಸಕಿಯ ಸಮಕಾಲೀನ ಡಿಸೈನ್‌ನಿಂದ ಸ್ಪೂರ್ತಿ ಪಡೆದು ಇದರ ವಿನ್ಯಾಸ ರಚಿಸಲಾಗಿದೆ.

ಇನ್ನು ಬೈಕ್ ಆಯಾಮದ ಬಗ್ಗೆ ಮಾತನಾಡುವುದಾದ್ದಲ್ಲಿ 1935 ಎಂಎಂ ಉದ್ದ, 685 ಎಂಎಂ ಅಗಲ ಮತ್ತು 1075 ಎಂಎಂ ಎತ್ತರ ಹೊಂದಿರಲಿದೆ.

ಹಾಗೆಯೇ ನಿಂಜಾ ಆರ್‌ಆರ್ ಮೊನೊ ಬೈಕ್ ಮುಂದುಗಡೆ 263 ಎಂಎಂ ಪೆಡಾಲ್ ಡಿಸ್ಕ್ ಹಾಗೂ ಹಿಂದುಗಡೆ 193 ಎಂಎಂ ಪೆಡಾಲ್ ಡಿಸ್ಕ್ ಹೊಂದಿದೆ.

ಕವಾಸಕಿ 300ಆರ್ ಕೆಳಗಡೆ ಗುರುತಿಸಿಕೊಳ್ಳಲಿರುವ ಆರ್‌ಆರ್ ಮೊನೊ ಬೈಕ್ ಹೆಚ್ಚು ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗಲಿದೆ.

ಇದು ಹೋಂಡಾ ಸಿಬಿಆರ್250ಆರ್ ಮತ್ತು ಇನ್ನಷ್ಟೇ ಆಗಮನವಾಗಲಿರುವ ಯಮಹಾ ಆರ್25 ಆವೃತ್ತಿಗಳಿಗೆ ಸ್ಪರ್ಧೆ ಒಡ್ಡಲಿದೆ.

ಹಾಗೊಂದು ವೇಳೆ ನಿಂಜಾ ಆರ್‌ಆರ್ ಮೊನೊ ಬೈಕ್ ಭಾರತಕ್ಕೆ ಪರಿಚಯಿಸುವುದಾದ್ಧಲ್ಲಿ ಕವಾಸಕಿಗೆ ಅಂದೊಂದು ದೊಡ್ಡ ಸವಾಲೇ ಆಗಿರಲಿದೆ. ಯಾಕೆಂದರೆ ಸ್ಥಳೀಯವಾಗಿ ಉತ್ಪಾದಿಸಲ್ಪಡುವ ಹೋಂಡಾ ಸಿಬಿಆರ್250ಆರ್ ಆವೃತ್ತಿಗೆ ಹೆಚ್ಚು ಬೇಡಿಕೆಯಿದೆ.

ಒಟ್ಟಿನಲ್ಲಿ ಕವಾಸಕಿ ನಿಂಜಾ ಆರ್‌ಆರ್ ಮೊನೊ ಮಾರ್ಚ್ ತಿಂಗಳಲ್ಲೇ ಇಂಡೋನೇಷ್ಯಾ ಮಾರುಕಟ್ಟೆಗೆ ತಲುಪಲಿದೆ. ಹಾಗಿದ್ದರೂ ದರಗಳ ಬಗ್ಗೆ ಇದುವರೆಗೆ ಮಾಹಿತಿ ಲಭಿಸಿಲ್ಲ.


Click it and Unblock the Notifications








