ಅತಿ ಶೀಘ್ರದಲ್ಲೇ ಕವಾಸಕಿ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಬೈಕ್ ಲಾಂಚ್
ದೇಶೀಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ನಿರ್ವಹಣಾ ಬೈಕ್‌ಗಳಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇದು ಸಣ್ಣ ಎಂಜಿನ್ ಸಾಮರ್ಥ್ಯವುಳ್ಳ ಕ್ರೀಡಾ ಬೈಕ್‌ಗಳ ಯಶಸ್ಸಿಗೆ ಕಾರಣವಾಗಿದೆ.
ಯುವ ಮನಸ್ಕರ ಮನಸೊರೆಗೊಳ್ಳುವ ಇಂತಹ ಬೈಕ್‌ಗಳು ಅತಿ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿದೆ. ಇದೀಗ ಜಪಾನ್ ಮೂಲದ ಕವಾಸಕಿ, ಅತಿ ಶೀಘ್ರದಲ್ಲೇ ಝಡ್250 ಆವೃತ್ತಿಯನ್ನು ಲಾಂಚ್ ಮಾಡಲಿದೆ.

ವರದಿಗಳ ಪ್ರಕಾರ ಕವಾಸಕಿ ಝಡ್250 ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ಬಿಡುಗಡೆಯಾಗಲಿದೆ. ಇದು ವರ್ಷಾಂರಂಭದಲ್ಲಿ ಬಿಡುಗಡೆಯಾಗಿದ್ದ ಪವರ್‌ಫುಲ್ ಝಡ್800 ಆವತ್ತಿಯ ಸಣ್ಣ ರೂಪವಾಗಿರಲಿದೆ.

ಅಂದರೆ ಮೊದಲ ನೋಟಕ್ಕೆ ಝಡ್800 ಸಮಾನವಾದ ವಿನ್ಯಾಸ ಪಡೆದುಕೊಂಡಿರುವ ಕವಾಸಕಿ ಝಡ್250 ಗ್ರಾಹಕರಿಗೆ ಅತ್ಯುತ್ತಮ ಚಾಲನಾ ಅನುಭವ ನೀಡಲಿದೆ.

ಈಗಾಗಲೇ ತಿಳಿಸಿರುವಂತೆಯೇ ಹೆಡ್‌ಲ್ಯಾಂಪ್ ಹಾಗೂ ಮುಂದುಗಡೆಯ ವಿನ್ಯಾಸ ಝಡ್800 ಆವೃತ್ತಿಗೆ ಸಮಾನವಾಗಿದೆ. ಆದರೆ ಝಡ್ ಆಕಾರದ ಎಂಜಿನ್ ಹೋದಿಕೆ ಹಾಗೂ ವಿಭಜಿತ ಸೀಟುಗಳು ಇವೆರಡು ಆವೃತ್ತಿಗಳನ್ನು ಭಿನ್ನವಾಗಿಸಲಿದೆ.

ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್ ಜತೆ ಅನಲಾಗ್ ಟ್ಯಾಕೋಮೀಟರ್ ಪಡೆದುಕೊಂಡಿದೆ. ಇದು ಗ್ರಾಹಕರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಲಿದೆ.

ಅಂದ ಹಾಗೆ ಕವಾಸಕಿ ಝಡ್250, 33 ಅಶ್ವಶಕ್ತಿ ಉತ್ಪಾದಿಸಬಲ್ಲ 249 ಸಿಸಿ, ಲಿಕ್ವಿಡ್ ಕೂಲ್ಡ್, ಪ್ಯಾರಲಲ್ ಟ್ವಿನ್, ಫ್ಯೂಯಲ್ ಇಂಜೆಕ್ಟಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಜತೆಗೆ ಡ್ಯುಯಲ್ ಥ್ರಾಟ್ ವಾಲ್ವೆ ತಂತ್ರಗಾರಿಕೆಯು ಗರಿಷ್ಠ ಇಂಧನ ಕ್ಷಮತೆ ನೀಡಲು ಯಶಸ್ವಿಯಾಗಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಕೂಡಾ ಇರಲಿದೆ.

ಇನ್ನು ಕವಾಸಕಿ ಝಡ್250 ಎರಡು ಚಕ್ರಗಳಿಗೂ ಸಿಂಗಲ್ ಪೆಡಾಲ್ ಡಿಸ್ಕ್ ಪಡೆದುಕೊಂಡಿದ್ದು, ಮುಂದುಗಡೆ ಫೋರ್ಕ್ ಹಾಗೂ ಹಿಂದುಗಡೆ ಮೊನೊ ಶಾಕ್ ಪಡೆದುಕೊಂಡಿದೆ.

ಅಂತೆಯೇ 10 ಸ್ಪೋಡ್ ಅಲಾಯ್ ವೀಲ್ ಸೌಲಭ್ಯಗಳನ್ನು ನೀಡುವಲ್ಲಿ ಕವಾಸಕಿ ಯಶಸ್ವಿಯಾಗಿದೆ.

ಒಟ್ಟಿನಲ್ಲಿ 2014 ಮಧ್ಯಂತರ ಅವಧಿಯಲ್ಲಿ ಆಗಮನವಾಗಲಿರುವ ಕವಾಸಕಿ ಝಡ್250, 2.5 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಅಷ್ಟಕ್ಕೂ ನೀವು ಕವಾಸಕಿ ಝಡ್250 ಖರೀದಿಸಲು ಬಯಸುವೀರಾ? ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿರಿ.


Click it and Unblock the Notifications








