ಭಾರತದತ್ತ ಹೆಜ್ಜೆಯನ್ನಿಟ್ಟ ಕವಾಸಕಿ ಝಡ್250 ಶಕ್ತಿ ಪ್ರದರ್ಶನ
ಇದೀಗ ಎಲ್ಲವೂ ಅಂತಿಮಗೊಂಡಿದ್ದು, ಕವಾಸಕಿ ಝಡ್ 250 ಸಿಸಿ ಬೈಕ್ ಭಾರತ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿ ನಿಂತಿದೆ. ಇದಕ್ಕೆ ಮುನ್ನಡಿಯೆಂಬಂತೆ ಟೊಕಿಯೊದಲ್ಲಿ ಸಾಗುತ್ತಿರುವ ಮೋಟಾರ್ ಶೋದಲ್ಲಿ ಕವಾಸಕಿಯ ಈ ನೆಕ್ಡ್ ಬೈಕ್ ಭರ್ಜರಿ ಅನಾವರಣ ಕಂಡಿದೆ.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಕೆಲವು ದಿನಗಳ ಹಿಂದೆಯಷ್ಟೇ ಕವಾಸಕಿ ಝಡ್1000 ಮತ್ತು ಝಡ್250 ಬಗ್ಗೆ ಹೆಚ್ಚಿನ ಮಾಹಿತಿಗಳು ಹೊರಬಂದಿದ್ದವು. ಇದರ ಬೆನ್ನಲ್ಲೇ ಪ್ರತಿಷ್ಠಿತ ಆಟೋ ಶೋದಲ್ಲಿ ಪ್ರದರ್ಶನ ಕಂಡಿದೆ. ಇದು ಪ್ರಮುಖವಾಗಿಯೂ ಹೋಂಡಾ ಸಿಬಿಆರ್‌ಗಳಂತಹ ಆವೃತ್ತಿಗಳಿಗೆ ಪೈಪೋಟಿ ಒಡ್ಡಲಿದೆ.
ಡ್ರೈವ್ ಸ್ಪಾರ್ಕ್ ಬೈಕ್ ಲೋಕಕ್ಕೆ ಭೇಟಿ ಕೊಡಲು ಮರೆಯದಿರಿ

ನಿಂಜಾ 300 ಬೈಕ್‌ನಿಂದ ಸ್ಫೂರ್ತಿ ಪಡೆದು ಕವಾಸಕಿ ಝಡ್250 ವಿನ್ಯಾಸ ರೂಪಿಸಲಾಗಿದೆ. ಇದರ ಅಲಾಯ್ ವೀಲ್ ವಿನ್ಯಾಸ ಮತ್ತು ಕ್ರೋಮ್ ಪ್ಲೇಟ್ ಎಕ್ಸ್‌ಹಾಸ್ಟ್ ಸಾಮತ್ಯೆಯನ್ನು ಪಡೆದುಕೊಂಡಿರಲಿದೆ.

ಇದು ಝಡ್1000 ಬೈಕ್‌ನ ಸಣ್ಣ ಆವೃತ್ತಿಯಾಗಿರಲಿದೆ. ಅಂದ ಹಾಗೆ ಝಡ್1000 ಡಿಸೆಂಬರ್ ವೇಳೆ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ಇನ್ನು ತಾಂತ್ರಿಕತೆ ಬಗ್ಗೆ ಕಂಪನಿ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇದು 33 ಅಶ್ವಶಕ್ತಿ ಉತ್ಪಾದಿಸುವ 249 ಸಿಸಿ, ಫ್ಯೂಯೆಲ್ ಇಂಜೆಕ್ಟಡ್, ಲಿಕ್ವಿಡ್ ಕೂಲ್ಡ್ ಮೋಟಾರ್‌ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ.

ಡೈಮಂಡ್ ವಿಧದ ಸ್ಟೀಲ್ ಫ್ರೇಮ್, ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಮತ್ತು ಹಿಂದುಗಡೆ ಸಿಂಗಲ್ ಬ್ರೇಕ್ ಡಿಸ್ಕ್ ಇತರ ಪ್ರಮುಖ ಆಕರ್ಷಣೆಯಾಗಿರಲಿದೆ.

ಕವಾಸಕಿ ನೂತನ 250 ಸಿಸಿ ಬೈಕ್ ಬಗ್ಗೆ ಭಾರತದಲ್ಲಿ ಅತಿ ಹೆಚ್ಚು ಕ್ರೇಜ್ ಹುಟ್ಟಿಸಿದೆ. ಇದಕ್ಕೆ ಕಾರಣ ದೇಶದಲ್ಲಿ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಬೈಕ್‌ಗಳ ಬೇಡಿಕೆ ದಿನದಿಂದ ದಿನಕ್ಕೆ ವರ್ಧಿಸುತ್ತಿರುವುದು.

ಒಟ್ಟಿನಲ್ಲಿ ಮುಂದಿನ ಸಾಲಿನಲ್ಲಿ ಭಾರತವು ಜಾಗತಿಕ ವಾಹನೋದ್ಯಮದ ಕೇಂದ್ರ ಬಿಂದುವಾಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವೂ ಬೇಡ ಎಂದು ಅಭಿಪ್ರಾಯಪಡುತ್ತಾರೆ ವಿಶ್ಲೇಷಕರು.

ಸದ್ಯ ಟೊಕಿಯೊದಲ್ಲಿ ಅನಾವರಣಗೊಂಡಿರುವ ಕವಾಸಕಿ ಝಡ್250, 2014 ಇಡಿಯಾ ಆಟೋ ಎಕ್ಸ್ ಪೋದಲ್ಲೂ ಶಕ್ತಿ ಪ್ರದರ್ಶನ ಮಾಡಲಿದೆ.


Click it and Unblock the Notifications








