ಕಾಯುವಿಕೆ ಅಂತ್ಯ; ಕೆಟಿಎಂ ಡ್ಯೂಕ್ ರಸ್ತೆಗಿಳಿಯಲು ರೆಡಿ
ಅಂತೂ ದೇಶದ ಬೈಕ್ ಪ್ರಿಯರ ದೀರ್ಘ ಕಾಯುವಿಕೆ ಕೊನೆಗೂ ಅಂತ್ಯಗೊಂಡಂತಾಗಿದೆ. ಕಳೆದ ಎಂಟು ತಿಂಗಳಿಂದ ಕೆಟಿಎಂ ಡ್ಯೂಕ್ ಆಗಮನಕ್ಕೆ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ಬಂದಿದೆ.
ನೂತನ ಕೆಟಿಎಂ ಡ್ಯೂಕ್ 390 ಜೂನ್ 25ರಂದು ಅಧಿಕೃತ ಲಾಂಚ್ ಕಾಣಲಿದೆ. ಅಂದರೆ ಇನ್ನು ಎರಡು ವಾರದೊಳಗೆ ದೇಶದ ಬೈಕ್ ಪ್ರೇಮಿಗಳಿಗೆ ಮತ್ತೊಂದು ಆಕರ್ಷಕ ಬೈಕ್‌ನ ಪ್ರದರ್ಶನವಾಗಲಿದೆ. ಕೆಟಿಎಂ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಈ ಉಲ್ಲೇಖಿಸಲಾಗಿದ್ದು, ಡ್ರೈವ್ ಸ್ಪಾರ್ಕ್ ತನ್ನ ಓದುಗರಿಗಾಗಿ ಆಕರ್ಷಕ ಗ್ಯಾಲರಿಯನ್ನು ತೆರೆದುಕೊಂಡಿದೆ.
ನೂತನ ಕೆಟಿಎಂ ಡ್ಯೂಕ್ ಬೈಕ್, 373 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 43 ಅಶ್ವಶಕ್ತಿ (354 ಎನ್‌ಎಂ ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಇದರ ಮೆಟ್ಜೆಲೆರ್ ಟೈರ್ ಮತ್ತೊಂದು ಪ್ರಮುಖ ಆಕರ್ಷಣೆಯಾಗಿರಲಿದೆ.
ಪ್ರಸ್ತುತ ದರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದರೆ ಆಟೋ ವಿಶ್ಲೇಷಕರ ಪ್ರಕಾರ 2 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಇನ್ನು ಇದೇ ಮೊದಲ ಬಾರಿಗೆ ಎಬಿಎಸ್ ತಂತ್ರಜ್ಞಾನ ಕೂಡಾ ಆಳವಡಿಕೆಯಾಗಲಿದೆ.

ಕೆಟಿಎಂ ಡ್ಯೂಕ್ 390
ಹೊಸ ಕೆಟಿಎಂ ಡ್ಯೂಕ್ 390 ಕೇವಲ ಏಳು ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪ್ರತಿ ಗಂಟೆಗೆ 170 ಕೀ.ಮೀ. ಗರಿಷ್ಠ ವೇಗವನ್ನು ಪಡೆಯಲಿದೆ.

ಕೆಟಿಎಂ ಡ್ಯೂಕ್ 390
ಕೆಟಿಎಂ ಡ್ಯೂಕ್ ಆಲ್ ನ್ಯೂ ಗೇರ್ ಬಾಕ್ಸ್ ಪಡೆದುಕೊಂದಿದ್ದು, ಇದರಲ್ಲಿ 6 ಗೇರ್ ಇರಲಿದೆ. ಹಾಗೆಯೇ ಕೇವಲ 139 ಕೆ.ಜಿ ತೂಕ ಹೊಂದಿರುವ ಪ್ರಸ್ತು ಬೈಕ್ ಸಣ್ಣದಾದ ಹಾಟ್ ರಾಕೆಟ್ ಎನಿಸಿಕೊಳ್ಳಲಿದೆ.

ಕೆಟಿಎಂ ಡ್ಯೂಕ್ 390
ಇದರ ಮೆಟ್ಜೆಲೆರ್ ಎಂ5 ಸ್ಪೋರ್ಟೆಕ್ ಟೈರ್, ಯಾವುದೇ ರೀತಿಯ ರಸ್ತೆ ಪರಿಸ್ಥಿತಿಯಲ್ಲೂ (ತೇವ ಹಾಗೂ ಒಣ) ಉತ್ತಮ ಗ್ರಿಪ್ ಒದಗಿಸಲಿದೆ.

ಕೆಟಿಎಂ ಡ್ಯೂಕ್ 390
ಕೆಟಿಎಂ ಡ್ಯೂಕ್ ಬೈಕ್ ಬಹುತೇಕ ಸ್ಥಳೀಯವಾಗಿ ನಿರ್ಮಿಸಿರುವುದರಿಂದ ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಸಾಧ್ಯವಾಗಲಿದೆ. ಬಜಾಜ್ ಆಟೋ ನೇತೃತ್ವದಲ್ಲಿ ತಯಾರಿಸಲಾಗುತ್ತಿರುವ ಕೆಟಿಎಂ ಡ್ಯೂಕ್ ಇತರ ಅನೇಕ ದೇಶಗಳಿಗೂ ರವಾನೆಯಾಗಲಿದೆ.

ಕೆಟಿಎಂ ಡ್ಯೂಕ್ 390
ದೇಶದ ಎಲ್ಲ ಮಹಾನಗರಗಳಲ್ಲೂ ಕೆಟಿಎಂ ಬೈಕ್ ವಿತರಣೆ ನಡೆಯಲಿದೆ. ಹಾಗೆಯೇ ಬಜಾಜ್ ಆಟೋದ ನುರಿತ ಎಂಜಿನಿಯರ್‌ಗಳಿಂದ ಸರ್ವೀಸ್ ಪಕ್ರಿಯೆ ಸಾಗಲಿದೆ.

ಕೆಟಿಎಂ ಡ್ಯೂಕ್ 390

ಕೆಟಿಎಂ ಡ್ಯೂಕ್ 390

ಕೆಟಿಎಂ ಡ್ಯೂಕ್ 390

ಕೆಟಿಎಂ ಡ್ಯೂಕ್ 390



Click it and Unblock the Notifications








