ಬರಲಿದೆ ಕೆಟಿಎಂ 'ಇ-ಸ್ಪೀಡ್' ಎಲೆಕ್ಟ್ರಿಕ್ ಸ್ಕೂಟರ್
ಟೊಕಿಯೋ ಮೋಟಾರ್‌ಸೈಕಲ್ ಶೋದಲ್ಲಿ ಕೆಟಿಎಂ 'ಇ-ಸ್ಪೀಡ್' ವಿದ್ಯುತ್ ಚಾಲಿತ ಸ್ಕೂಟರ್ ಪರಿಕಲ್ಪನೆ ಪ್ರದರ್ಶನಗೊಂಡಿದೆ.
ನಗರ ಪ್ರದೇಶದ ಸಂಚಾರವನ್ನು ಗಮನ ಕೇಂದ್ರಿಕರಿಸಿ ಈ ಝಿರೋ ಎಮಿಷನ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ರೂಪುರೇಷೆ ನೀಡಲಾಗಿದೆ. ಇದು ಫ್ರೀರೈಡ್ ಇ ಬಳಿಕ ಆಸ್ಟ್ರೀಯಾ ಮೋಟಾರ್ ಸೈಕಲ್ ತಯಾರಕರಿಂದ ರೂಪುಗೊಳ್ಳುತ್ತಿರುವ ಎರಡನೇ ವಿದ್ಯುತ್ ಚಾಲಿತ ದ್ವಿಚಕ್ರ ವಾಹನವಾಗಿದೆ.
'ಇ-ಸ್ಪೀಡ್' ಎಮಿಷನ್ ಹಾಗೂ ಶಬ್ದ ರಹಿತ ಸ್ಕೂಟರ್ ಆಗಿದ್ದು, ಫ್ರೀರೈಡ್‌ನಲ್ಲಿ ಬಳಕೆಯಾದ ಅದೇ ತಂತ್ರಜ್ಞಾನದೊಂದಿಗೆ ಓಡಾಟ ನಡೆಸಲಿದೆ.

KTM Freeride E Concept
ಕೆಟಿಎಂನ ಮೊದಲ ಝಿರೋ ಎಮಿಷನ್ ಆಫ್ ರೋಡ್ ಸ್ಪೋರ್ಟ್ಸ್ ಮೋಟಾರ್ ಸೈಕಲ್ 29.5 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು.

ಕೆಟಿಎಂ 'ಇ-ಸ್ಪೀಡ್' ಸ್ಕೂಟರ್ ಕೂಡಾ ಲಿಥಿಯಂ ಇಯಾನ್ ಬ್ಯಾಟರಿಯಿಂದ ನಿಯಂತ್ರಿಸ್ಪಡಲಿದ್ದು, ಫ್ರೀರೈಡ್ ತಂತ್ರಜ್ಞಾನವನ್ನೇ ಆಳವಡಿಸಲಾಗಿದೆ. ಎರಡು ಗಂಟೆ ಅವಧಿಯಲ್ಲಿ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಮಾಡಿಸಬಹುದಾಗಿದೆ. ಹಾಗೆಯೇ ರಿಜನರೇಟಿವ್ ಬ್ರೇಕಿಂಗ್ ಮೂಲಕವೂ ರಿಚಾರ್ಜ್ ಮಾಡಿಸಬಹುದು.

ಕೆಟಿಎಂ ಪ್ರಕಾರ ಇಸ್ಪೀಡ್ ಸ್ಕೂಟರ್ 11ಕೆಡಬ್ಲ್ಯು ಪವರ್ ಉತ್ಪಾದಿಸಲಿದ್ದು, 36 ಎನ್‌ಎಂ ಪವರ್ ಹೊಂದಿರಲಿದೆ.

ಕೆಟಿಎಂ ಇ-ಸ್ಪೀಡ್ ವಿದ್ಯುತ್ ಚಾಲಿತ ಸ್ಕೂಟರ್ ಆಗಿದ್ದರೂ ಸ್ಟೈಲಿಷ್ ರೈಡಿಂಗ್‌ಗಾಗಿ ಸ್ಪೋರ್ಟಿ ಲುಕ್ ಪ್ರದಾನ ಮಾಡಲಾಗಿದೆ. ಹಾಗೆಯೇ ಗಂಟೆಗೆ 85 ಕೀ.ಮೀ. ಗರಿಷ್ಠ ವೇಗದಲ್ಲಿ ಚಲಿಸಲಿದೆ.

ಹೈಬ್ರಿಡ್ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್,ವಿಪಿ ಸಸ್ಷೆಷನ್ ಹಾಗೂ ಅಲ್ಯೂಮಿನಿಯಂ ಬ್ಯಾಟರಿಗಳಂತಹ ಇತರ ಆಕರ್ಷಕ ಫೀಚರ್‌ಗಳನ್ನು 'ಇ-ಸ್ಪೀಡ್' ಸ್ಕೂಟರ್ ಹೊಂದಿದೆ.


Click it and Unblock the Notifications








