2014ರಲ್ಲಿ ದೇಶಕ್ಕೆ ಎಂಟ್ರಿ ಕೊಡಲಿರುವ ಕೆಟಿಎಂ ಆರ್‌ಸಿ390
ಬೈಕ್ ಉತ್ಸಾಹಿಗಳಿಗೆ ಸಿಹಿ ಸುದ್ದಿಯೊಂದು ಬಂದಿದ್ದು, ಆಸ್ಟ್ರೀಯಾ ಬೇಕ್ ಉತ್ಪಾದಕ ಸಂಸ್ಥೆಯು ಮೂರು ನೂತನ ಬೈಕ್‌ಗಳನ್ನು ಪರಿಚಯಿಸಲಿದೆ. ಇಲ್ಲಿ ಖುಷಿ ಕೊಡುವ ವಿಚಾರ ಏನೆಂದರೆ ಈ ಎಲ್ಲ ಮಾಡೆಲ್‌ಗಳು ಭಾರತ ಪ್ರವೇಶ ಪಡೆಯಲಿದೆ.
ಇದು ಕೆಟಿಎಂ ಸಿಇಒ ಖಚಿತಪಡಿಸಿದ್ದಾರೆ. ಪ್ರಸ್ತು ಬೈಕ್ 2013 EICMA ಆಟೋ ಶೋದಲ್ಲಿ ಭರ್ಜರಿ ಪ್ರದರ್ಶನ ಕಾಣಲಿದೆ. ಬಲ್ಲ ಮೂಲಗಳ ಪ್ರಕಾರ 2014ನೇ ಇಸವಿಯಲ್ಲಿ ಭಾರತಕ್ಕೆ ಆಗಮಿಸಲಿದೆ.

ಆರ್‌ಸಿ 390, ಆರ್‌ಸಿ 200 ಹಾಗೂ ಆರ್‌ಸಿ125ಗಳೆಂಬ ಮೂರು ಬೈಕ್‌ಗಳು ಭಾರತ ಹಾದಿ ಹಿಡಿಯುತ್ತಿದೆ. ಡ್ಯೂಕ್ ಸಿರೀಸ್‌ನಲ್ಲಿ ಕಾಣಿಸಿಕೊಂಡಿರುವ ಈ ಎಲ್ಲ ಬೈಕ್‌ಗಳು ಸ್ಪೋರ್ಟ್ಸ್ ಎಂಜಿನ್ ಪಡೆಯಲಿದೆ.

ಮಿಲಾನ್‌ನಲ್ಲಿ ವರ್ಷಾಂತ್ಯದಲ್ಲಿ ಸಾಗಲಿರುವ ಆಟೋ ಶೋದಲ್ಲಿ ಈ ಎಲ್ಲ ಬೈಕ್‌ಗಳು ಪ್ರದರ್ಶನ ಕಾಣಲಿದೆ. ಆ ಬಳಿಕ ಮುಂದಿನ ವರ್ಷ ಯುರೋಪ್ ಪ್ರವೇಶ ಪಡೆಯಲಿದ್ದು, ಬೆನ್ನಲ್ಲೇ ಭಾರತಕ್ಕೂ ಆಗಮಿಸಲಿದೆ.

ಡ್ಯೂಕ್ 125 ಹಾದಿ ಹಿಡಿಯಲಿರುವ ಆರ್‌ಸಿ 125 ಬೈಕ್‌ಗೆ ಭಾರತದಲ್ಲಿ ಉತ್ತಮ ಬೇಡಿಕೆ ಕಂಡುಬರುವ ನಿರೀಕ್ಷೆಯಿದೆ. ಇದರ ಸ್ಪೋರ್ಟಿ ಲುಕ್ ಈಗಾಗಲೇ ಗಮನ ಸೆಳೆದಿದೆ.

ಕೆಟಿಎಂ ಬೈಕ್ ಪಲ್ಸರ್ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದೆ. ಇದರಂತೆ ಭಾರತೀಯ ಮಾರುಕಟ್ಟೆಯಲ್ಲಿ ಹೇಗೆ ಅಧಿಪತ್ಯ ಸಾಧಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.





Click it and Unblock the Notifications








