ಕೆಟಿಎಂನಿಂದ ಇನ್ನೊಂದು ಸ್ಪೋರ್ಟ್ಸ್ ಬೈಕ್ ನಿರೀಕ್ಷಿಸಿ
390 ಕೆಟಿಎಂ ಡ್ಯೂಕ್‌ನ ಹೊಸ ರೂಪವೆಂದೇ ವ್ಯಾಖ್ಯಾನಿಸಬಹುದಾದ 2014 ಕೆಟಿಎಂ ಆರ್‌ಸಿ390 ಫೇರ್ಡ್ ಸ್ಪೋರ್ಟ್ಸ್ ಬೈಕ್ ಬಗ್ಗೆ ಹೆಚ್ಚಿನ ವಿವರಗಳು ಹೊರಬಂದಿದೆ. ಬಹುನಿರೀಕ್ಷಿತ ಮಿಲಾನ್ ಆಟೋ ಶೋಗಿಂತಲೂ ಮುಂಚಿತವಾಗಿ ಕೆಟಿಎಂ ಕೆನಡಾ ವೆಬ್‌ಸೈಟ್‌ನಲ್ಲಿ ಹೆಚ್ಚಿನ ವಿವರಗಳನ್ನು ಹೊರಗೆಡವಲಾಗಿದೆ.
ನಿಮ್ಮ ಮಾಹಿತಿಗಾಗಿ ಎರಡು ವರ್ಷಗಳ ಹಿಂದೆ ಆರ್‌ಸಿ390 ಮೊದಲ ಬಾರಿಗೆ ಪ್ರದರ್ಶನ ಕಂಡಿತ್ತು. ಆ ಬಳಿಕ ಕಳೆದ ವರ್ಷ ಮೊದಲ ಚಿತ್ರಣ ಬಿಡುಗಡೆಗೊಂಡಿತ್ತು. ಇದೀಗ ಹೆಚ್ಚು ಮಾಹಿತಿಗಳು ಸೋರಿಕೆ ಆಗಿವೆ.

ಮಗದೊಮ್ಮೆ ಡ್ಯೂಕ್ ವಿನ್ಯಾಸ ಆಟೋ ವಿಮರ್ಶಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದು ಯುರೋಪ್‌ನಲ್ಲಿ ರೇಸ್ ಬೈಕ್ ಕೊರತೆಯನ್ನು ನೀಗಿಸಲಿದೆ.

ಹಾಗಿದ್ದರೂ ಎಂಜಿನ್ ತಾಂತ್ರಿಕ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು 390 ಡ್ಯೂಕ್‌ನಲ್ಲಿ ಕಂಡುಬಂದಿರುವುದಕ್ಕೆ ಸಮಾನ ಎಂಜಿನ್ ಪಡೆಯಲಿದೆ.

ವಿನ್ಯಾಸದ ಬಗ್ಗೆ ಮಾತನಾಡುವುದಾದರೆ ನೂತನ ಆರ್‌ಸಿ390 ಹೆಚ್ಚು ಆಕ್ರಮಣಕಾರಿ ಲುಕ್ ಪಡೆದುಕೊಂಡಿದೆ. ಹಾಗೆಯೇ ವಿಭಜಿತ ಸೀಟು ವಿನ್ಯಾಸ ಹೆಚ್ಚು ಆಕರ್ಷಕವಾಗಿದೆ.

ಎದುರಗಡೆಯ ವಿನ್ಯಾಸದಲ್ಲೂ ಬದಲಾವಣೆ ತರುವ ಪ್ರಯತ್ನ ಮಾಡಲಾಗಿದೆ. ಹಾಗೆಯೇ ವೈಯಕ್ತಿಕ ಲ್ಯಾಂಪ್‌ಗಳನ್ನು ಲಂಬವಾಗಿ ಬದಲು ಅಡ್ಡವಾಗಿ ಲಗತ್ತಿಸಲಾಗಿದೆ. ಹಾಗೆಯೇ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಪ್ಯಾನೆಲ್ ಕೂಡಾ ಇದೆ.

ಎಂಜಿನ್
ವಿನ್ಯಾಸ: 1 ಸಿಲಿಂಡರ್, 4 ಸ್ಟ್ರೋಕ್ ಎಂಜಿನ್, ವಾಟರ್ ಕೂಲ್ಡ್
ಡಿಸ್‌ಪ್ಲೇಸ್‌ಮೆಂಟ್: 373.2 cm³
ಬೋರ್: 89 ಎಂಎಂ
ಸ್ಟ್ರೋಕ್: 60 ಎಂಎಂ
ನಿರ್ವಹಣೆ: 32 ಕೆಡಬ್ಲ್ಯು (43 ಪಿಎಸ್)

ಟ್ರಾನ್ಸ್‌ಮಿಷನ್: 6 ಸ್ಪೀಡ್, ಕ್ಲೌ ಶಿಫ್ಟಡ್
ಎಂಜಿನ್ ಲ್ಯೂಬ್ರಿಕೇಷನ್
ಪ್ರಾಥಮಿಕ ಗೇರ್ ನಿಷ್ಫಕ್ತಿ: 30:80
ದ್ವಿತೀಯ ಗೇರ್ ನಿಷ್ಫಕ್ತಿ: 15:45

ಕೂಲಿಂಗ್ ಸಿಸ್ಟಂ: ಲಿಕ್ವಿಡ್ ಕೂಲಿಂಗ್ ಸಿಸ್ಟಂ
ಕ್ಲಚ್: ವೆಟ್ ಮಟ್ಲಿ ಡಿಸ್ಕ್ ಕ್ಲಚ್
ಇಗ್ನಿಷನ್ ಸಿಸ್ಟಂ: ಕಾಂಟಾಕ್ಟ್‌ಲೆಸ್, ಎಲೆಕ್ಟ್ರಾನಿಕ್ ಇಗ್ನಿಷನ್ ಸಿಸ್ಟಂ

ಫ್ರೇಮ್: ಸ್ಟೀಲ್‌ನಿಂದ ತಯಾರಾದ ಟ್ಯೂಬುಲರ್ ಸ್ಪೇಸ್ ಫ್ರೇಮ್, ಪೌಡರ್ ಕೋಟಡ್
ಫೋರ್ಕ್: ಡಬ್ಲ್ಯುಪಿ ಸಸ್ಪೆಷನ್ ಅಪ್ ಸೈಡ್ ಡೌನ್
ಶಾಕ್ ಅಬ್ಸಾಬರ್: ಡಬ್ಲ್ಯುಪಿ ಮೊನೊಶಾಕ್
ಸಸ್ಪೆಷನ್ ಟ್ರಾವೆಲ್ ಫ್ರಂಟ್: 125 ಎಂಎಂ
ಸಸ್ಪೆಷನ್ ಟ್ರಾವೆಲ್ ರಿಯರ್: 150 ಎಂಎಂ

ಗ್ರೌಂಡ್ ಕ್ಲಿಯರನ್ಸ್: 178.5 ಎಂಎಂ
ಸೀಟು ಎತ್ತರ: 820 ಎಂಎಂ
ಇಂಧನರಹಿತ ಭಾರ: 147 ಕೆ.ಜಿ


Click it and Unblock the Notifications








