ಇನ್ಯಾಕೆ ತಡ ಸರಕು ಸಾಗಣೆಗೆ ಬಳಸಿ ಎಲೆಕ್ಟ್ರಿಕ್ ಸ್ಕೂಟರ್
ನಮ್ಮ ದಿನನಿತ್ಯ ಜೀವನದಲ್ಲಿ ಶಾಂಪಿಂಗ್ ಮಾಲ್ ಅಥವಾ ಅಂಗಡಿಗಳಿಂದ ಮನೆಗೆ ಸಾಮಾಗ್ರಿಗಳನ್ನು ಸಾಗಿಸಲು ಹರಸಾಹಸವೇ ಪಡಬೇಕಾಗಿದೆ. ಸಾಮಾನ್ಯ ದ್ವಿಚಕ್ರ ವಾಹನಗಳಲ್ಲಿ ಹೆಚ್ಚು ಭಾರವನ್ನು ಸಾಗಿಸುವುದಂತೂ ಅಪಾಯಕರ. ಹಾಗಿರುವಾಗ ಮುಂದೆ ಬಂದಿರುವ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊ ತಲಹದಿಯ ಕಂಪನಿಯೊಂದು ವಿಶೇಷ ರೀತಿಯ ಸ್ಕೂಟರ್‌ವೊಂದನ್ನು ವಿನ್ಯಾಸಗೊಳಿಸಿದೆ.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ
ಲಿಟ್ ಮೋಟಾರ್ಸ್ (Lit Motors) ಎಂಬ ಕಂಪನಿಯೇ ಅತಿ ನೂತನ ಕುಬೊ (kubo) ಎಲೆಕ್ಟ್ರಿಕ್ ಕಾರ್ಗೊ ಸ್ಕೂಟರನ್ನು ಅಭಿವೃದ್ಧಿಪಡಿಸಿದೆ. ಇಲ್ಲಿ ಪ್ರಮುಖ ಅಂಶವೆಂದರೆ ಇದು ಸಂಪೂರ್ಣ ಪರಿಸರ ಸ್ನೇಹಿಯೆನಿಸಿಕೊಳ್ಳಲಿದೆ. ಅಷ್ಟಕ್ಕೂ ಈ ಸರಕು ಸಾಗಣೆಯ ಸ್ಕೂಟರ್ ಬಂಡಿ ಪ್ರಾಯೋಗಿಕವಾಗಿಯೂ ಎಷ್ಟರ ಮಟ್ಟಿಗೆ ಯಶ ಕಾಣಲಿದೆ ಎಂಬುದಕ್ಕೆ ಸ್ಲೈಡರ್‌ನಲ್ಲಿ ಮಾಹಿತಿ ಪಡೆಯಿರಿ...

ಚಮತ್ಕಾರಿ ಉತ್ಪನ್ನಗಳನ್ನು ಉತ್ಪಾದಿಸುವುದರಲ್ಲಿ ಲಿಟ್ ಮೋಟಾರ್ಸ್ ಹೆಸರುವಾಸಿಯಾಗಿದೆ. ತನ್ನದೇ ಆದ ವಿಶಿಷ್ಟ ವಿನ್ಯಾಸ ಪಡೆದುಕೊಂಡಿರುವ ಈ ಸ್ಕೂಟರ್ ಆಸಕ್ತರನ್ನು ಕೈಬೀಸಿ ಕರೆಯುತ್ತಿದೆ. ಇದಕ್ಕಾಗಿ ಕಿಕ್ ಸ್ಟಾರ್ಟರ್ ಪುಟ ಸಂದರ್ಶಿಸಿರಿ...

22 ಇಂಚಿನ ಚತುಷ್ಕೋನ ಸರಕು ಸಾಗಣಿಗೆ ಪ್ರದೇಶ ಇದರ ಪ್ರಮುಖ ವೈಶಿಷ್ಟ್ಯವಾಗಿದೆ. ಇದನ್ನು ಸಂಪೂರ್ಣವಾಗಿಯೂ ಕ್ಯಾಲಿಫೋರ್ನಿಯಾದ ಲಿಟ್ ಮೋಟಾರ್ಸ್ ಘಟಕದಲ್ಲಿ ವಿನ್ಯಾಸಗೊಳಿಸಲಾಗಿದೆ.

ಲಿಟ್ ಮೋಟಾರ್ಸ್ ಪ್ರಕಾರ ಇದರಲ್ಲಿ 136 ಕೆ.ಜಿ ಭಾರವನ್ನು ಆರಾಮದಾಯಕವಾಗಿ ಹೊತ್ತೊಯ್ಯಬಹುದಾಗಿದೆ. ಅಂದರೆ ವಾರದ ಕಚೇರಿ ಕಲಾಪದ ಬಳಿಕ ವಾರಂತ್ಯದಲ್ಲಿ ಮನೆ ಬಳಕೆಯ ಸಾಮಾಗ್ರಿಗಳಿಗಾಗಿ ಶಾಂಪಿಂಗ್ ತೆರಳುವ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಇದರ ಜತೆಗೆ ಮೊಬೈಲ್ ಫೋನ್‌ಗಳಂತಹ ಇನ್ನಿತರ ಸಣ್ಣ ಪುಟ್ಟ ವಸ್ತುಗಳನ್ನು ಸೇಫ್ ಆಗಿ ಇಡಲು ಲಾಕ್ ಕಂಪಾರ್ಟ್‌ಮೆಂಟ್ ವ್ಯವಸ್ಥೆ ಕೂಡಾ ಮಾಡಲಾಗಿದೆ.

ಅಂದ ಹಾಗೆ ಕುಬೊ ಎಲೆಕ್ಟ್ರಿಕ್ ಸ್ಕೂಟರ್ 3 ಕೆಡ್ಲ್ಯು ಹೈ ಟಾರ್ಕ್ ರಿಯರ್ ಹಬ್ ಮೋಟಾರ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಗಂಟೆಗೆ ಗರಿಷ್ಠ 72.42 ಕೀ.ಮೀ. ವೇಗತೆಯಲ್ಲಿ ಸಂಚರಿಸಬಹುದಾಗಿದೆ.

ಹಾಗಿದ್ದರೂ ಬ್ಯಾಟರಿ ಬಗ್ಗೆ ಹೆಚ್ಚಿನ ಮಾಹಿತಿ ಬಂದಿಲ್ಲ. ಇದು ಸಂಪೂರ್ಣ ಚಾರ್ಜ್ ಬಳಿಕ 80.46 ಕೀ.ಮೀ. ರೇಂಜ್ ವರೆಗೂ ಚಲಿಸುವ ಸಾಮರ್ಥ್ಯ ಹೊಂದಿರಲಿದೆ.

ಇದು ಹೊಂದಾಣಿಸಬಹುದಾದ ಸಿಟ್ಟಿಂಗ್ ವ್ಯವಸ್ಥೆಯನ್ನು ಸಹ ಹೊಂದಿರುತ್ತದೆ. ಅಲ್ಲದೆ ಯಾವುದೇ ಸಾಮಾನ್ಯ ವಿದ್ಯುತ್ ಸಾಕೆಟ್‌ನಿಂದಲೂ ಸುಲಭವಾಗಿ ಚಾರ್ಜ್ ಮಾಡಿಸುವ ತಂತ್ರಜ್ಞಾನವನ್ನು ಪಡೆದಿದೆ.

ಫ್ರಂಟ್ ಡಿಸ್ಕ್ ಬ್ರೇಕ್, ಇಂಟೇಗ್ರೇಟಡ್ ಡಿಜಿಟಲ್ ಸ್ಪೀಡೋಮೀಟರ್, ಓಡೊಮೀಟರ್, ಬ್ಯಾಟರಿ ಇಂಡಿಕೇಟರ್ ಎಲ್‌ಇಡಿ ಹೆಡ್‌ಲೈಟ್ ಮತ್ತು ಟೈಲ್ ಲೈಟ್ ಇತರ ಪ್ರಮುಖ ವೈಶಿಷ್ಟ್ಯವಾಗಿರಲಿದೆ.
ವೀಡಿಯೋ ವೀಕ್ಷಿಸಿ


Click it and Unblock the Notifications








