ಶೀಘ್ರದಲ್ಲೇ ಮಹೀಂದ್ರ 110 ಸಿಸಿ ಸ್ಕೂಟರ್ ಲಾಂಚ್
ಸೆಂಚುರೊ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಮಹೀಂದ್ರ ಟು ವೀಲರ್ಸ್, ಸದ್ಯದಲ್ಲೇ ನೂತನ 100ಸಿಸಿ ಸ್ಕೂಟರ್ ಬಿಡುಗಡೆಗೊಳಿಸಲಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಬಲ್ಲ ಮೂಲಗಳ ಪ್ರಕಾರ ಮಹೀಂದ್ರ ನೂತನ ಸ್ಕೂಟರ್ ಮುಂಬರುವ 2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಲಿದೆ. ಮುಂದಿನ ಎರಡು ವರೆ ವರ್ಷಗಳಲ್ಲಿ 10 ನೂತನ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವುದರ ಅಂಗವಾಗಿ ಮಹೀಂದ್ರ ಹೊಸ ಸ್ಕೂಟರ್ ರಸ್ತೆ ಪ್ರವೇಶಿಸಲಿದೆ ಎಂದು ಕಂಪನಿ ತಿಳಿಸಿದೆ. ಈ ಪೈಕಿ ಪ್ರತಿ ಮೂರು ತಿಂಗಳಿಗೊಂದು ಬೈಕ್ ರಸ್ತೆ ತಲುಪಲಿದೆ.

ಪ್ರಸ್ತುತ ನಗರ ಪ್ರದೇಶದ ಪ್ರಯಾಣಿಕ ದ್ವಿಚಕ್ರ ಮಾರುಕಟ್ಟೆಯಲ್ಲಿ ಸ್ಕೂಟರುಗಳಿಗೆ ಹೆಚ್ಚಿನ ಬೇಡಿಕೆಯಿದೆ. ವಾಹನ ದಟ್ಟಣೆಯಿಂದ ಪಾರಾಗಲು ಬಹುತೇಕ ದೈನಂದಿನ ಪ್ರಯಾಣಿಕರು ಸ್ಕೂಟರ್ ಖರೀದಿಯತ್ತ ವಾಲುತ್ತಿದ್ದಾರೆ.

ಬಲ್ಲ ಮೂಲಗಳ ಪ್ರಕಾರ ಮಹೀಂದ್ರ ನೂತನ ಸ್ಕೂಟರ್ 'ಜಿ101' ಕೋಡ್ ಪಡೆದುಕೊಂಡಿದ್ದು, ಫೆಬ್ರವರಿಯಲ್ಲಿ ಲಾಂಚ್ ಆಗಲಿದೆ.

110ಸಿಸಿ ವಿಭಾಗದಲ್ಲಿ ಮಹೀಂದ್ರದಿಂದ ಯಾವುದೇ ಸ್ಕೂಟರ್ ಇಲ್ಲದಿರುವುದರಿಂದ ಹೊಸ ಸ್ಕೂಟರ್ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಡ್ಯುರೊ ಡಿಝಡ್ ಮತ್ತು ರೊಡಿಯೊ ಆರ್‌ಝಡ್ 125 ಸಿಸಿ ವಿಭಾಗವನ್ನು ಪ್ರತಿನಿಧಿಸುತ್ತಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ 2014 ಆಟೋ ಎಕ್ಸ್ ಪೋದಲ್ಲಿ ಸ್ಕೂಟರ್ ಹೊರತಾಗಿ ಮೊಜೊ ಸ್ಪೋರ್ಟ್ಸ್ ಬೈಕನ್ನು ಸಹ ಮಹೀಂದ್ರ ಅನಾವರಣಗೊಳಿಸಲಿದೆ. ಸಂಪೂರ್ಣ ಹೊಸ ವಿನ್ಯಾಸ ಹೊಂದಿರುವ ಮೊಜೊ ಗ್ರಾಹಕರಲ್ಲಿ ಹೆಚ್ಚಿನ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಒಟ್ಟಿನಲ್ಲಿ ದೇಶದ ಪ್ರಯಾಣಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಭದ್ರ ತಲಹದಿ ರೂಪಿಸಲು ಹೊರಟಿರುವ ಮಹೀಂದ್ರ ಟು ವೀಲರ್ಸ್, ಮುಂದಿನ ದಿನಗಳಲ್ಲಿ ಇನ್ನಷ್ಟು ಆಕರ್ಷಕ ಬೈಕ್‌ಗಳನ್ನು ಪರಿಚಯಿಸಲಿದೆ.


Click it and Unblock the Notifications








