ಪ್ರಸಕ್ತ ಸಾಲಿನಲ್ಲೇ ಮಹೀಂದ್ರ 160 ಸಿಸಿ ಬೈಕ್ ಲಾಂಚ್
ಸೆಂಚುರೊ ಯಶಸ್ಸಿನ ಗುಂಗಿನಲ್ಲಿರುವ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಮಹೀಂದ್ರ ಟು ವೀಲರ್ಸ್ ವಿಭಾಗವು, ಪ್ರಸಕ್ತ ಸಾಲಿನಲ್ಲೇ ನೂತನ 160ಸಿಸಿ ಬೈಕ್ ಪರಿಚಯಿಸುವ ಯೋಜನೆ ಹೊಂದಿದೆ.
2014 ಆಟೋ ಎಕ್ಸ್ ಪೋ
ಸದ್ಯ ಅಭಿವೃದ್ಧಿ ಹಂತದಲ್ಲಿರುವ 160 ಸಿಸಿ ಪ್ರೀಮಿಯಂ ಪ್ರಯಾಣಿಕ ಬೈಕ್ ಅನ್ನು ಪ್ರಸಕ್ತ ಸಾಲಿನಲ್ಲೇ ಅಥವಾ ಜಾಸ್ತಿ ಮುಂದೂಡಿದರೆ 2016ರ ವೇಳೆಯಾಗುವಾಗ ರಸ್ತೆಗೆ ಬಿಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಇದೇ ಸಂದರ್ಭದಲ್ಲಿ ನೂತನ 110 ಸಿಸಿ ಸ್ಕೂಟರ್ ಬಿಡುಗಡೆ ಮಾಡುವ ಯೋಜನೆಯನ್ನು ಮಹೀಂದ್ರ ಹೊಂದಿದೆ. ಈ ಹಿಂದೆ ಕಳೆದ ಡಿಸೆಂಬರ್ ತಿಂಗಳಲ್ಲೇ ಲಾಂಚ್ ಮಾಡುವ ಬಗ್ಗೆ ಸೂಚನೆ ಲಭಿಸಿದ್ದರೂ ಬಹುನಿರೀಕ್ಷಿತ 2014 ಆಟೋ ಎಕ್ಸ್ ಪೋದಿಂದಲೂ ಮಿಸ್ ಮಾಡಿಕೊಂಡಿತ್ತು.

ಮಹೀಂದ್ರ ಪಾಲಿಗೆ ಅತ್ಯಂತ ಹೆಚ್ಚು ಯಶಸ್ಸನ್ನು ತಂದುಕೊಟ್ಟಿರುವ ಮಹೀಂದ್ರ ಸೆಂಚುರೊ ಅತ್ಯಧಿಕ ವೈಶಿಷ್ಟ್ಯಗಳನ್ನು ಹೊಂದಿದ್ದವು. ಇದೀಗ ಆಗಮನವಾಗಲಿರುವ 160ಸಿಸಿ ಬೈಕ್ ಸಹ ಇದಕ್ಕಿಂತಲೂ ಗರಿಷ್ಠ ಫೀಚರುಗಳನ್ನು ಪಡೆಯುವ ಸಾಧ್ಯತೆಯಿದೆ.

ಸೆಂಚುರೊ ಜೆಸಿಮೊಟೊ
ಈ ಬಾರಿಯ ಆಟೋ ಎಕ್ಸ್ ಪೋದಲ್ಲಿ ಒಟ್ಟು ಎರಡು ಅವತಾರಗಳಲ್ಲಿ ಸೆಂಚುರೊ ಆಗಮನವಾಗಿತ್ತು. ಈ ಪೈಕಿ ಮೊದಲನೆಯದ್ದು ಕೆಫೆ ರೇಸಲ್. ಇದನ್ನು ಮುಂಬೈ ಮೂಲದ ಜೆಸಿಮೊಟೊ ತಯಾರಿಸಿದ್ದು, ಸಾಮಾನ್ಯ ಬೈಕ್‌ಗಿಂತಲೂ 20 ಕೆ.ಜಿ. ಹಗುರ ಭಾರವಾಗಿದೆ.

ಸೆಂಚುರೊ ಸ್ಕ್ರಾಂಬ್ಲರ್
ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಮಗದೊಂದು ಕಸ್ಟಮ್ ಬೈಕ್ ಸೆಂಚುರೊ ಸ್ಕ್ರಾಂಬ್ಲರ್ ಆಗಿದೆ. ಇದನ್ನು ಬೊಂಬೆ ಕಸ್ಟಮ್ ವರ್ಕ್ಸ್ ತಯಾರಿಸಿದ್ದು, ಅತ್ಯಧಇಕ ಗ್ರೌಂಡ್ ಕ್ಲಿಯರನ್ಸ್, ಡರ್ಟ್ ಚಕ್ರ, ಲೆಥರ್ ಸೀಟು ಹಾಗೂ ಎತ್ತರದಲ್ಲಿ ಎಕ್ಸಾಸ್ಟ್ ಹೊಂದಿರಲಿದೆ.

ಮೊಜೊ
ಇನ್ನೊಂದೆಡೆ ಕೊನೆಗೂ 28 ಬಿಎಚ್‌ಪಿ ಉತ್ಪಾದಿಸಬಲ್ಲ (25 ಎನ್‌ಎಂ ಟಾರ್ಕ್) 295 ಸಿಸಿ ಲಿಕ್ವಿಡ್ ಕೂಲ್ಡ್ ಮಹೀಂದ್ರ ಮೊಜೊ ಉತ್ಪಾದನಾ ವರ್ಷನ್ ಪ್ರದರ್ಶಿಸುವಲ್ಲಿ ಮಹೀಂದ್ರ ಯಶಸ್ವಿಯಾಗಿತ್ತು.

ಭವಿಷ್ಯದಲ್ಲಿ ಗರಿಷ್ಠ ನಿರ್ವಹಣೆ ಬೈಕ್‌ಗಳನ್ನು ಉತ್ಪಾದಿಸಲು ಮಹೀಂದ್ರ ಮೊಟೊ3 ನೆರವಾಗಲಿದೆ. ಇದು ಹಗುರ ಭಾರದ ಜತೆಗೆ ಶಕ್ತಿಶಾಲಿ ಚಾಸೀಸ್ ಪಡೆಯಲಿದೆ.


Click it and Unblock the Notifications








