ಸೆಂಚುರೊ ಸೆಕ್ಸಿ ವೀಡಿಯೋ 2 ಲಕ್ಷ ವೀಕ್ಷಣೆ; ನೀವು ನೋಡಿದ್ರಾ?
ಅತ್ಯಧಿಕ ಮಾರಾಟ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಸೆಕ್ಸಿ ಜಾಹೀರಾತುಗಳನ್ನು ಪ್ರದರ್ಶಿಸುವುದು ಕಾರು ತಯಾರಕ ಸಂಸ್ಥೆಗಳ ಮಾರಾಟ ತಂತ್ರವಾಗಿದೆ. ಇದೇ ಚಿಂತನೆಯಲ್ಲಿ ತೊಡಗಿರುವ ದೇಶದ ದ್ವಿಚಕ್ರ ತಯಾರಕ ಸಂಸ್ಥೆಯಾದ ಮಹೀಂದ್ರ ಟು ವೀಲರ್ಸ್, ತನ್ನ ನೂತನ ಆವೃತ್ತಿಯಾದ ಮಹೀಂದ್ರ ಸೆಂಚುರೊ ಪ್ರಚಾರಾರ್ಥವಾಗಿ ನೂತನ ಹಾಟ್ ಜಾಹೀರಾತುವೊಂದನ್ನು ಬಿಡುಗಡೆ ಮಾಡಿದೆ.
ಇಲ್ಲಿ ವಿಶೇಷತೆಯೆಂದರೆ ಮಹೀಂದ್ರ ಸೆಂಚುರೊ ಸೆಕ್ಸಿ ಜಾಹೀರಾತು ಬಿಡುಗಡೆಯಾದ ಎರಡು ದಿನಗಳಲ್ಲೇ 2,00000 ವೀಕ್ಷಣೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಾಮಾಜಿಕ ಜಾಲತಾಣ ಯೂಟ್ಯೂಬ್‌ನಲ್ಲಿ ಪ್ರಸ್ತುತ ವೀಡಿಯೋ ವೈರಲ್ ಆಗಿ ಪಸರಿಸಿದೆ.
ಅಷ್ಟಕ್ಕೂ ಮಹೀಂದ್ರ ಸೆಂಚರೊ ಜಾಹೀರಾತಿನಲ್ಲಿ ಅಂತದ್ದೇನಿದೆ ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್ ಕ್ಲಿಕ್ಕಿಸಿರಿ...

ನಿಮ್ಮ ಮಾಹಿತಿಗಾಗಿ ಇತ್ತೀಚೆಗಷ್ಟೇ ಮಹೀಂದ್ರ ಸೆಂಚುರೊ 100ಸಿ ಬೈಕನ್ನು ಲಾಂಚ್ ಮಾಡಲಾಗಿತ್ತು.

ಗರಿಷ್ಠ ತಂತ್ರಗಾರಿಕೆಯನ್ನು ಹೊಂದಿರುವ ಸೆಂಚುರೊ, ರಿಮೋಟ್ ಪ್ಲಿಪ್ ಕಿ, ಕಳ್ಳತನ ವಿರೋಧಿ ವ್ಯವಸ್ಥೆ, ಫೈಂಡ್ ಮಿ ಪಾರ್ಕಿಂಗ್ ಲ್ಯಾಂಪ್‌ಗಳಂತಹ ಆಧುನಿಕ ಫೀಚರ್‌ಗಳನ್ನು ಒಳಗೊಂಡ ಮೊದಲ ಬೈಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಂಪನಿಯ ಪ್ರಕಾರ ಎಆರ್‌ಎಐ ಮಾನ್ಯತೆ ಪ್ರಕಾರ ಮಹೀಂದ್ರ ಸೆಂಚುರೊ ಪ್ರತಿ ಲೀಟರ್‌ಗೆ 85.4 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಇದರ ದೆಹಲಿ ಎಕ್ಸ್ ರೂಂ ದರ 45,000 ರು.ಗಳಾಗಿವೆ. ಇದು ಗ್ರಾಹಕರನ್ನು ಹೆಚ್ಚು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಇದೇ ನಿಟ್ಟಿನಲ್ಲಿ ಸೆಂಚುರೊ ಪ್ರಚಾರಾರ್ಥವಾಗಿ ಹೊಸ ಜಾಹೀರಾತುವೊಂದನ್ನು ಮಹೀಂದ್ರ ಬಿಡುಗಡೆಗೊಳಿಸಿತ್ತು. ಆದರೆ ವೀಡಿಯೋ ಬಿಡುಗಡೆಯಾದ ಎರಡು ದಿನಗಳೊಳಗೆ ಯೂಟ್ಯೂಬ್‌ನಲ್ಲಿ 2 ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ.

ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಪ್ರಸ್ತುತ ಜಾಹೀರಾತು ಇನ್ನಷ್ಟೇ ಟಿ.ವಿ.ಗಳಲ್ಲಿ ಬಿಡುಗಡೆಯಾಗಬೇಕಾಗಿದೆ. ಈ ನಡುವೆ ಯೂಟ್ಯೂಬ್‌ನಲ್ಲಿ ಭಾರಿ ಪ್ರಚಾರ ಗಿಟ್ಟಿಸಿಕೊಂಡಿದೆ.

ಮಹೀಂದ್ರ ಸೆಂಚುರೊ ವೀಡಿಯೋವನ್ನು ಪೊಲೇಂಡ್‌ನಲ್ಲಿ ಚಿತ್ರಿಕರಿಸಲಾಗಿದೆ.

ಅಷ್ಟಕ್ಕೂ ಈ ಸೆಕ್ಸಿ ಜಾಹೀರಾತಿನಲ್ಲಿ ಅಂತದ್ದೇನಿದೆ? ವೀಡಿಯೋಗಾಗಿ ಮುಂದಿನ ಪುಟ ತಿರುವಿರಿ
ವೀಡಿಯೋ ವೀಕ್ಷಿಸಿ


Click it and Unblock the Notifications








