ಬಿಡುಗಡೆಗೂ ಮುನ್ನ ಮಹೀಂದ್ರ ಮೊಜೊಗೆ ಗಲ್ಲುಶಿಕ್ಷೆ
ಹ್ಹಾಂ ಅದೇನಂತೀರಾ..? ಅಷ್ಟಕ್ಕೂ ಬೈಕನ್ನು ಗಲ್ಲುಗೇರಿಸಿ ಪ್ರಯೋಜನವಾದರೂ ಏನು ಅಂತೀರಾ..? ಇಲ್ಲಿದೆ ನೋಡಿ ಕುತೂಹಲಕಾರಿ ವರದಿ.
ವಿಷಯ ಇಷ್ಟೇ, ಇತ್ತೀಚೆಗಷ್ಟೇ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಲೋಹಿಯಾ ಆಟೋ (Lohia Auto) ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಜಾಹೀರಾತುವೊಂದನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿ ಲೋಹಿಯಾ ಸ್ಕೂಟರ್‌ಗಳ ಮೇಲ್ಗಡೆ ಬೈಕ್‌ವೊಂದನ್ನು ನೇಣಿಗೇರಿಸಲಾಗಿತ್ತು.
ಇಲ್ಲಿಯ ವರೆಗೆ ಎಲ್ಲವೂ ಓಕೆ, ಸಹಜವಾಗಿಯೇ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉತ್ತೇಜಿಸಿರುವುದು ಉತ್ತಮ ವಿಷಯವೇ ಸರಿ. ಆದರೆ ಕೆಳಗಡೆಯ ಚಿತ್ರದಲ್ಲಿ ತೋರಿಸಿರುವಂತೆಯೇ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲ್ಗಡೆ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಮಹೀಂದ್ರದ ಮೊಜೊ ಬೈಕನ್ನು ನೇಣಿಗೇರಿಸಿರುವುದು ವಿವಾದಕ್ಕೆ ಕಾರಣವಾಗುತ್ತಿದೆ.
ಅಷ್ಟೇ ಯಾಕೆ ಇದರಲ್ಲಿ ದುಬಾರಿ ಪಟ್ರೋಲ್ ಹಾಗೂ ಕಲುಷಿತ ವಾಹನಗಳಿಂದ ಮುಕ್ತಿಯನ್ನು ಪಡೆಯಿರಿ ಎಂಬ ಬೈ ಲೈನ್ ಕೂಡಾ ಹಾಕಲಾಗಿತ್ತು. ಇನ್ನು ಕುತೂಹಲಕಾರಿ ವಿಷಯ ಏನೆಂದರೆ ಹಿಂದೊಮ್ಮೆ ಪ್ಲಾಪ್ ಆಗಿದ್ದ ಮಹೀಂದ್ರ ಟು ವೀಲ್ಹರ್ಸ್‌ನ ಬಹುನಿರೀಕ್ಷಿತ ಮೊಜೊ ಬೈಕ್ ಇನ್ನು ಕೆಲವೇ ತಿಂಗಳುಗಳಲ್ಲಿ ಮಾರುಕಟ್ಟೆಗೆ ರಿ ಎಂಟ್ರಿ ಕೊಡುತ್ತಿದೆ. ಹಾಗಿರುವಾಗ ಇಂತಹದೊಂದು ಜಾಹೀರಾತು, ಕಂಪನಿಯ ವರ್ಚಸ್ಸನ್ನು ಕುಗ್ಗಿಸುವ ಸಾಧ್ಯತೆಯಿದೆ.
ಮತ್ತೊಂದೆಡೆ ಲೋಹಿಯಾ ಆಟೋ ಉದ್ದೇಶಪೂರ್ವಕವಾಗಿಯೇ ಇದನ್ನು ಮಾಡಿದೆಯೇ ಎಂಬುದು ತಿಳಿದು ಬಂದಿಲ್ಲ. ಒಟ್ಟಿನಲ್ಲಿ ಬಿಡುಗಡೆಗೂ ಮುನ್ನ ಮಹೀಂದ್ರ ಮೊಜೊ ಗಲ್ಲಿಗೇರಿಸಿರುವುದು ಆಟೋ ಮೊಬೈಲ್ ಜಗತ್ತಿನಲ್ಲಿ ಸದ್ಯದ ಚರ್ಚಾ ವಿಷಯ.

ಇದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಲೋಹಿಯಾ ಆಟೋದಿಂದ ಪ್ರಕಟವಾಗಿರುವ ಜಾಹೀರಾತು. ಇದು ಮೊಜೊ ಆಗಿರಬಹುದೇ ಎಂಬ ಅನುಮಾನ ನಿಮ್ಮಲ್ಲಿ ಮೂಡುತ್ತಿದ್ದರೆ ಮುಂದಿನ ಚಿತ್ರ ಕ್ಲಿಕ್ಕಿಸಿ ಸಂಶಯ ಬಗೆಹರಿಸಿಕೊಳ್ಳಿರಿ

Mahindra Mojo
ಇದು ಮಹೀಂದ್ರದ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಮೊಜೊ ಬೈಕಾಗಿದೆ.

ಫೇಸ್‍ಬುಕ್‌ನಲ್ಲಿ ಪೋಸ್ಟ್ ಆಗಿರುವ ಲೋಹಿಯಾ ಆಟೋ ಜಾಹೀರಾತಿನ ಸ್ಕ್ರೀನ್ ಶಾಟ್ ಇಲ್ಲಿದೆ ನೋಡಿ.

Lohia Genius
ಲೋಹಿಯಾ ಆಟೋದ ಕೆಲವು ಆಕರ್ಷಕ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇಲ್ಲಿವೆ ನೋಡಿ. ನಿಜಕ್ಕೂ ಜೀನಿಯಸ್ ಎನಿಸಿಕೊಂಡಿದೆ.

Lohia Genius

Lohia Genius

Lohia Oma

Lohia Oma

ಲೋಹಿಯಾ ಸ್ಕೂಟರ್ಸ್

ಮಹೀಂದ್ರ ಮೊಜೊ

ಮಹೀಂದ್ರ ಮೊಜೊ

ವಿದಾದಕ್ಕೀಡಾಗುತ್ತಿರುವ ಲೋಹಿಯಾ ಜಾಹೀರಾತು


Click it and Unblock the Notifications








