ವರ್ಷಾಂತ್ಯದಲ್ಲಿ ಆಟೋಮ್ಯಾಟಿಕ್ ಸ್ಕೂಟರ್ 2014ರಲ್ಲಿ ಮೊಜೊ ಎಂಟ್ರಿ
2013ನೇ ಸಾಲಿನಲ್ಲಿ ಅಂತ್ಯದ ವೇಳೆಗೆ ಹೊಚ್ಚ ಹೊಸತಾದ ಸ್ಕೂಟರ್ ಲಾಂಚ್ ಮಾಡುವ ಇರಾದೆ ಹೊಂದಿರುವುದಾಗಿ ದೇಶದ ಮುಂಚೂಣಿಯ ದ್ವಿಚಕ್ರ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಟು ವೀಲರ್ಸ್ ತಿಳಿಸಿದೆ. ಅಂತೆಯೇ ಮುಂದಿನ ವರ್ಷ ಅಂದರೆ 2014ರಲ್ಲಿ ಗರಿಷ್ಠ ನಿರ್ವಹಣೆಯ ಮೊಜೊ ಬೈಕ್ ಆಗಮನವಾಗಲಿದೆ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿದೆ
ಕಂಪನಿ ಆಕ್ರಮಣಕಾರಿ ವೃದ್ಧಿ ಯೋಜನೆಯ ಅಂಗವಾಗಿ ನೂತನ ಆಟೋಮ್ಯಾಟಿಕ್ ಸ್ಕೂಟರ್ ಪರಿಚಯವಾಗಲಿದೆ. ಈ ಬಗ್ಗೆ ಪ್ರತಿಕಾಗೋಷ್ಠಿಯಲ್ಲಿ ಮಾತಾನಾಡಿರುವ ಅನೂಪ್ ಮಥುರ್, ಡಿಸೈನ್‌ನಿಂದ ಆರಂಭಿಸಿ ತಂತ್ರಗಾರಿಕೆ ವೈಶಿಷ್ಟ್ಯದ ವರೆಗೆ ಇತರ ಸೂಟ್ಕರ್‌ಗಿಂತ ಮಹೀಂದ್ರ ವಿಭಿನ್ನವಾಗಿರಲಿದೆ ಎಂದಿದ್ದಾರೆ.
ಇದಕ್ಕವರು ಕೆಲವು ತಿಂಗಳುಗಳ ಹಿಂದೆಯಷ್ಟೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಮಹೀಂದ್ರ ಸೆಂಚುರೊ ಉದಾಹರಣೆಯಾಗಿ ನೀಡಿದ್ದಾರೆ. ಕಾರಿನಲ್ಲಿ ಲಭ್ಯವಿರುವ ಆಧುನಿಕ ಫೀಚರುಗಳನ್ನು ಸೆಂಚುರೊಗೆ ಆಳವಡಿಸಿರುವುದು ಮಹೀಂದ್ರ ವಿಶಿಷ್ಟತೆಗೆ ಸಾಕ್ಷಿಯಾಗಿತ್ತು.

ಮಹೀಂದ್ರ ಬೊಲೆರೊ, ಸ್ಕಾರ್ಪಿಯೊ ಅಥವಾ ಎಕ್ಸ್‌ಯುವಿ 500 ತರಹನೇ ದ್ವಿಚಕ್ರ ವಿಭಾಗವೂ ಸಹ ತನ್ನದೇ ಬ್ರಾಂಡ್ ಗುರುತನ್ನು ಹೊಂದುವ ಗುರಿಯನ್ನು ಮಹೀಂದ್ರ ಹೊಂದಿದೆ. ಈ ನಿಟ್ಟಿನಲ್ಲಿ ವಿನ್ಯಾಸ ಹಾಗೂ ವೈಶಿಷ್ಟ್ಯಗಳು ಪ್ರಮುಖ ಪಾತ್ರ ವಹಿಸಲಿದೆ. ಇದಕ್ಕಾಗಿ ಸೆಂಚುರೊ ಸ್ಪೂರ್ತಿಯನ್ನು ಪಡೆಯಲಿದೆ.

ಅಂದ ಹಾಗೆ ಮುಂದಿನ ಎರಡು ವರೆ ವರ್ಷಗಳಲ್ಲಿ ಹತ್ತು ನೂತನ ಮಾದರಿಗಳನ್ನು ಪರಿಚಯಿಸುವ ಬೃಹತ್ ಯೋಜನೆಯನ್ನು ಮಹೀಂದ್ರ ಟು ವೀಲರ್ಸ್ ಹೊಂದಿದೆ. ಅಂದರೆ ಪ್ರತಿ ಮೂರು ತಿಂಗಳಿಗೊಂದು ನೂತನ ಮಾದರಿ ಮಾರುಕಟ್ಟೆ ಪ್ರವೇಶ ಪಡೆಯಲಿದೆ.

ಇದರಲ್ಲಿ 100ಸಿಸಿಯಿಂದ ತೊಡಗಿ 300ಸಿಸಿ ವರೆಗೆ ಬೈಕ್ ಸೇರಿದಂತೆ ಸ್ಕೂಟರ್ ಒಳಗೊಂಡಿರಲಿದೆ.

ಈ ನಡುವೆ 2014 ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ತನ್ನ ಬಹುನಿರೀಕ್ಷಿತ ನಿರ್ವಹಣಾ ಬೈಕಾದ ಮೊಜೊ ಪರಿಚಯಿಸುವುದಾಗಿ ಮಹೀಂದ್ರ ಘೋಷಿಸಿದೆ.

ಮೊಜೊ 300 ಸಿಸಿ ಬೈಕ್ ಬಗೆಗಿನ ಹೆಚ್ಚಿನ ವಿವರಗಳು ಲಾಂಚ್ ವೇಳೆಯಷ್ಟೇ ಹೊರಬರಲಿದೆ. ಅಲ್ಲದೆ ಹೀರೊ ಹಾಗೂ ಬಜಾಜ್ ತರಹನೇ ವಿದೇಶಿ ಜತೆಗಾರರೊಬ್ಬರನ್ನು ಹುಡುಕಾಡುತ್ತಿದೆ ಎಂದಿದೆ.


Click it and Unblock the Notifications








