ಮಹೀಂದ್ರ ಮೊಜೊ ಬೈಕ್ ರಿಲೀಸ್ ಮುಂದಕ್ಕೆ
ಕಳೆದ ದೆಹಲಿ ಆಟೋ ಷೋದಲ್ಲಿಯೇ ಪ್ರದರ್ಶನಗೊಂಡಿದ್ದ ಬಹುನಿರೀಕ್ಷಿತ ಮೊಜೊ 300 ಸಿಸಿ ಸ್ಪೋರ್ಟ್ಸ್ ಬೈಕ್ ಲಾಂಚ್ ಇನ್ನಷ್ಟು ತಡವಾಗಲಿದೆ.
ಹೊಸ ವರ್ಷದಲ್ಲಿ ಈಗಾಗಲೇ ಎರಡು ಬೈಕ್‌ಗಳನ್ನು ಲಾಂಚ್ ಮಾಡಿರುವ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಮೊಜೊ ಬೈಕ್ ಬಿಡುಗಡೆಯನ್ನು ಮುಂದೂಡಿದೆ.
ಪ್ರಸ್ತುತ ಮೊಜೊ ಬೈಕ್‌ನ ಎಂಜಿನ್ ಟೆಸ್ಟಿಂಗ್ ಹಂತದಲ್ಲಿದೆ. ಮುಂದಿನ ಆರ್ಥಿಕ ಸಾಲಿನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದ್ದೇವೆ ಎಂದು ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ದ್ವಿಚಕ್ರ ವಿಭಾಗ ಮಹೀಂದ್ರ ಟು ವೀಲ್ಹರ್ಸ್ ತಿಳಿಸಿದೆ.
ನಿರೀಕ್ಷಿತ ಬೈಕ್ ರಸ್ತೆಗಿಳಿಸುವ ಮುನ್ನ ಎಂಜಿನ್, ವಾಹನ ಹಾಗೂ ಇತರ ಬಿಡಿಭಾಗಗಳು ಸರಿಯಾಗಿ ಕೆಲಸ ನಿರ್ವಹಿಸುವುದನ್ನು ಖಾತ್ರಿಪಡಿಸಬೇಕು. ಅಲ್ಲದೆ ಮುಂದಿನ ಐದು ವರ್ಷಗಳಲ್ಲಿ ನಿರಂತರ ಅಂತರಾಳಗಳಲ್ಲಿ ದೇಶಕ್ಕೆ ಹೊಸ ಮಾದರಿಗಳನ್ನು ಪರಿಚಿಯಿಸುವುದು ನಮ್ಮ ಗುರಿಯಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಲವು ದಿಗಳ ಹಿಂದೆಯಷ್ಟೇ ಪ್ಯಾಂಥರೊ ಹಾಗೂ ಸೆಂಚುರೊ ಎಂಬ ಎರಡು ಬೈಕ್‌ಗಳನ್ನು ಮಹೀಂದ್ರ ಲಾಂಚ್ ಮಾಡಿತ್ತು. ಇದರ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಮಹೀಂದ್ರ ಮೊಜೊ 300ಸಿಸಿ ಬೈಕ್

ಮಹೀಂದ್ರ ಮೊಜೊ 300ಸಿಸಿ ಬೈಕ್

ಮಹೀಂದ್ರ ಮೊಜೊ 300ಸಿಸಿ ಬೈಕ್

ಮಹೀಂದ್ರ ಮೊಜೊ 300ಸಿಸಿ ಬೈಕ್

ಮಹೀಂದ್ರ ಮೊಜೊ 300ಸಿಸಿ ಬೈಕ್

ಮಹೀಂದ್ರ ಮೊಜೊ 300ಸಿಸಿ ಬೈಕ್

ಮಹೀಂದ್ರ ಮೊಜೊ 300ಸಿಸಿ ಬೈಕ್

ಮಹೀಂದ್ರ ಮೊಜೊ 300ಸಿಸಿ ಬೈಕ್



Click it and Unblock the Notifications








