ನೂತನ ಬೈಕ್ ಬರಮಾಡಿಕೊಳ್ಳಲು ಸಜ್ಜಾಗಿರಿ!
ಇಟಲಿಯ ವಾಹನ ತಯಾರಕ ಸಂಸ್ಥೆಯಾದ ಪಿಯಾಜಿಯೊ ಒಡೆತನದಲ್ಲಿರುವ ಮೊಟೊ ಗುಝಿ (Moto Guzzi), ಭಾರತೀಯ ಮಾರುಕಟ್ಟೆಗೆ ಬೆಲಾಜಿಯೊ 935 ಸಿಸಿ ನೆಕ್ಡ್ ಸ್ಪೋರ್ಟ್ಸ್ ಬೈಕನ್ನು ಬಿಡುಗಡೆಗೊಳಿಸಿದೆ. ಕಳೆದ ವರ್ಷಾಂತ್ಯದಲ್ಲಿ ಭಾರತ ಮಾರುಕಟ್ಟೆ ಗುರಿಯಾಗಿರಿಸಿಕೊಂಡಿದ್ದ ಮೊಟೊ ಗುಝಿ, ಗ್ರಿಸೊ 1200 8ವಿ, ವಿ7 ಹಾಗೂ ಬ್ರೇವಾ ವಿ1100 ಆವೃತ್ತಿಗಳನ್ನು ಪರಿಚಯಿಸಿತ್ತು.
ನೀವು ಇದೀಗ ಗುರ್ಗಾಂವ್‌ನ ಅಧಿಕೃತ ಡೀಲರ್‌ಶಿಪ್‌ನಲ್ಲಿ ಮೊಟೊ ಗುಝಿ ಮೋಟಾರ್‌ಸೈಕಲ್ ಬುಕ್ಕಿಂಗ್ ಮಾಡಿಸಿಕೊಳ್ಳಬಹುದಾಗಿದೆ. ನಿಮ್ಮ ಮಾಹಿತಿಗಾಗಿ ಬೆಲಾಜಿಯೊ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿದ್ದು, ನಿಮ್ಮ ಕೈ ಸೇರಬೇಕಾದರೆ ಆರು ತಿಂಗಳು ಕಾಯಬೇಕಾಗುತ್ತದೆ.
ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿರುವ ವಿದೇಶಿ ಕಂಪನಿಗಳು ವ್ಯಾಪಾರ ಕುದುರಿಸಿಕೊಳ್ಳುವ ನಿಟ್ಟಿನಲ್ಲಿ ದೇಶದತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿದೆ. ಇದೀಗ ಮೊಟೊ ಗುಝಿ ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮೊಟೊ ಗುಝಿ ಬೆಲಾಜಿಯೊ ಫೋರ್ ಸ್ಟ್ರೋಕ್, 935 ಸಿಸಿ ಟ್ರಾನ್ಸ್‌ವರ್ಸ್ ಮೌಂಟೆಡ್ ಎಂಜಿನ್‌ನಿಂದ ನಿಯಂತ್ರಿಸ್ಪಲಡಲಿದೆ.

ಇದು 7200 ಆರ್‌ಪಿಎಂನಲ್ಲಿ ಗರಿಷ್ಠ 74 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ. ಹಾಗೆಯೇ 6000 ಆರ್‌ಪಿಎಂನಲ್ಲಿ ಪೀಕ್ ಟರ್ಕ್ಯೂ 7.95 ಕೆಜಿಎಂ ಆಗಿದೆ.

ಪ್ರಸ್ತುತ ಕಪ್ಪು ಕಲರ್ ವೆರಿಯಂಟ್‌ನಲ್ಲಿ ಮಾತ್ರ ಬೆಲಾಜಿಯೊ ಬೈಕ್ ಲಭ್ಯವಿದೆ.

ಮೊಟೊ ಗುಝಿ ಬೆಲಾಜಿಯೊ

ಮೊಟೊ ಗುಝಿ ಬೆಲಾಜಿಯೊ

ಮೊಟೊ ಗುಝಿ ಬೆಲಾಜಿಯೊ

ಮೊಟೊ ಗುಝಿ ಬೆಲಾಜಿಯೊ

ಮೊಟೊ ಗುಝಿ ಬೆಲಾಜಿಯೊ

ಮೊಟೊ ಗುಝಿ ಗ್ರಿಸೊ

ಮೊಟೊ ಗುಝಿ ಗ್ರಿಸೊ

ಮೊಟೊ ಗುಝಿ ಗ್ರಿಸೊ

ಮೊಟೊ ಗುಝಿ ಗ್ರಿಸೊ



Click it and Unblock the Notifications








