ವೆಸ್ಪಾ ಎಕ್ಸ್‌ಕ್ಲೂಸಿವ್ ಸೀಮಿತ ಆವೃತ್ತಿ ಭಾರತದಲ್ಲಿ ಲಾಂಚ್
ಇಟಲಿಯ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಪಿಯಾಜಿಯೊ ಪ್ರಖ್ಯಾತ ದ್ವಿಚಕ್ರ ಬ್ರಾಂಡ್ ಆಗಿರುವ ವೆಸ್ಪಾ ಭಾರತದಲ್ಲಿ 'ಎಕ್ಸ್‌ಕ್ಲೂಸಿವ್' (Vespa Esclusivo) ಸೀಮಿತ ಆವೃತ್ತಿಯ ಸ್ಕೂಟರನ್ನು ಲಾಂಚ್ ಮಾಡಿದೆ.
ಈ ವಿಶೇಷ ಆವೃತ್ತಿಯ ಸ್ಕೂಟರ್‌ನ ದೆಹಲಿ ಎಕ್ಸ್ ಶೋ ರೂಂ ಬೆಲೆ 74,355 ರು. ಆಗಿರಲಿದೆ. ಈ ಮೂಲಕ ದೇಶದ ಪ್ರೀಮಿಯಂ ಸ್ಕೂಟರುಗಳ ಬೇಡಿಕೆಯನ್ನು ಮನಗಂಡಿರುವ ಪಿಯಾಜಿಯೊ ಮಗದೊಂದು ಆಕರ್ಷಕ ಮಾದರಿಯನ್ನು ಪರಿಚಯಿಸಿದೆ.

ನಿಮ್ಮ ಮಾಹಿತಿಗಾಗಿ, ವೆಸ್ಪಾ ಎಕ್ಸ್‌ಕ್ಲೂಸಿವ್ ಕೇವಲ ಸೀಮಿತ 1,000 ಎಕ್ಸ್‌ಕ್ಲೂಸಿವ್ ಯುನಿಟ್‌ಗಳು ಮಾತ್ರ ಲಭ್ಯವಾಗಲಿದೆ.

ಇದು ವಿಶೇಷ ವೆಸ್ಪಾ ಎಕ್ಸ್‌ಕ್ಲೂಸಿವ್ ಬ್ಯಾಡ್ಜ್ ಸಹ ಗಿಟ್ಟಿಸಿಕೊಳ್ಳಲಿದೆ ಎಂದು ಪಿಯೊಜಿಯೊ ವೆಹಿಕಲ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಇದರಲ್ಲಿ ವಿಶೇಷ ವಿನ್ಯಾಸಿತ ಡ್ಯುಯಲ್ ಕಲರ್, ಕಪ್ಪು ಹಾಗೂ ಬೆಳ್ಳಿ ಬಣ್ಣದ ಅಲಾಯ್ ವೀಲ್‌ಗಳ ಸಂಯೋಜನೆಯು ವಿಶೇಷವಾಗಿರಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಯಾಜಿಯೊ ವೆಹಿಕಲ್ಸ್ ಸಿಎಂಡಿ ರವಿ ಚೋಪ್ರಾ, ದೇಶದೆಲ್ಲಡೆ ವೆಸ್ಪಾ ಎಕ್ಸ್‌ಕ್ಲೂಸಿವ್ ಲಭ್ಯವಾಗಲಿದ್ದು, ಇದು ಪ್ರೀಮಿಯಂ ಸ್ಕೂಟರ್ ವಿಭಾಗದಲ್ಲಿ ಪಿಯಾಜಿಯೊ ಸ್ಥಾನವನ್ನು ಸಂಕೇತಿಸಲಿದೆ ಎಂದಿದ್ದಾರೆ.

ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ವೆಸ್ಪಾ ಎಕ್ಸ್‌ಕ್ಲೂಸಿವ್ ಆವೃತ್ತಿ ಬಿಡುಗಡೆ ಮಾಡಲಿದೆ.

ಮೂರು ಬಣ್ಣಗಳ ಆಯ್ಕೆ ಇಂತಿದೆ:
ಮೊಂಟೆ ಬಿಯಾನ್ಕೊ (ಬಿಳಿ),
ರುಸ್ಸೊ ಡ್ರಾಗನ್ (ಕೆಂಪು),
ನೀರೊ ಮ್ಯಾಟ್ (ಕಪ್ಪು)

ಅಷ್ಟಕ್ಕೂ ವೆಸ್ಪಾ ಸ್ಕೂಟರ್ ಅಂದ್ರೆ ನಿಮಗೆ ಯಾಕಿಷ್ಟ? ಎಂಬುದನ್ನು ನಿಮ್ಮ ಅಮೂಲ್ಯವಾದ ಕಾಮೆಂಟ್ಸ್ ಮೂಲಕ ತಿಳಿಸಿರಿ.


Click it and Unblock the Notifications