ಬಹುಬೇಗನೇ ದೇಶದ ರಸ್ತೆಗೆ ವಿಕ್ಟರಿ ಸೂಪರ್ ಬೈಕ್
ಬೈಕ್ ಉತ್ಸಾಹಿ ಗ್ರಾಹಕರಿಗೆ ಸಿಹಿ ಸುದ್ದಿ ಬಂದಿದ್ದು, ನಿಕಟ ಭವಿಷ್ಯದಲ್ಲಿ ಅಮೆರಿಕ ಮೂಲಕ ಕಂಪನಿಯೊಂದು ದೇಶಕ್ಕೆ ಅತಿ ನೂತನ ಸೂಪರ್ ಬೈಕ್‌ವೊಂದನ್ನು ಪರಿಚಯಿಸಲಿದೆ.
2013ನೇ ಸಾಲಿನ ಅಂತ್ಯದ ವೇಳೆಗೆ ಭಾರತದಲ್ಲಿ ವಿಕ್ಟರಿ ಸೂಪರ್ ಬೈಕ್ ಲಾಂಚ್ ಮಾಡಲು ವಿಕ್ಟರಿ ಮೋಟಾರ್‌ಸೈಕಲ್ಸ್ ಇಂಡಿಯಾ ಪೊಲಾರಿಷ್ ಯೋಜನೆ ಇರಿಸಿಕೊಂಡಿದೆ.
ಈ ಮೂಲಕ ಜನಪ್ರಿಯ ಎಟಿವಿ ತಯಾರಕರಾದ ಪೊಲಾರಿಷ್, ಇಂಡಿಯನ್ ಆಲ್ ಟೆರೈನ್ ವೆಹಿಕಲ್ ಮಾರುಕಟ್ಟೆಯಲ್ಲಿ ಕ್ಷಿಪ್ರ ಗತಿಯ ಪ್ರಗತಿಯನ್ನು ಗುರಿಯಿರಿಸಿಕೊಂಡಿದೆ. ವಿಕ್ಟರಿ ಮಾಲಿಕನೂ ಆಗಿರುವ ಪೊಲರಿಸ್, ಭಾರತೀಯ ಜೀವನಶೈಲಿಗೆ ಅನುಗುಣವಾದ ಹೈ ಎಂಡ್ ಮೋಟಾರ್‌ಸೈಕಲ್ ಸೆಗ್ಮೆಂಟ್ ಬಿಡುಗಡೆ ಮಾಡಲು ಸನ್ನದ್ಧವಾಗಿದ್ದಾರೆ.

ಪೊಲಾರಿಷ್ ಇಂಡಿಯಾ ಮಹಾ ನಿರ್ದೇಶಕರಾಗಿರುವ ಪಂಕಜ್ ದುಬೆ ಇದನ್ನು ಖಾತ್ರಿಪಡಿಸಿದ್ದು, ವಿಕ್ಟರಿ ಕ್ರೂಸರ್ ಬೈಕ್ ದೇಶದಲ್ಲಿ ಪೊಲಾರಿಷ್‌ನಿಂದ ಬಿಡುಗಡೆಯಾಗಲಿರುವ ಮೊದಲ ಬೈಕ್ ಆಗಿರಲಿದೆ ಎಂದಿದ್ದಾರೆ.

ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿರುವ ಹರ್ಲಿ ಡೇವಿಡ್ಸನ್, ಹ್ಯೊಸಂಗ್, ಹೋಂಡಾ ಹಾಗೂ ಸುಜುಕಿ ಕ್ರೂಸರ್ ಬೈಕ್‌ಗಳಿಗೆ ವಿಕ್ಟರಿ ಮೋಟಾರ್‌ಸೈಕಲ್ ಕಠಿಣ ಪೈಪೋಟಿ ನೀಡುವ ಸಾಧ್ಯತೆಯಿದೆ.

ಕಂಪ್ಲೀಟ್ ಬಿಲ್ಟ್ ಯುನಿಟ್ (CBU) ಮೂಲಕ ವಿಕ್ಟರಿ ದೇಶದ ಮಾರುಕಟ್ಟೆಗಿಳಿಯಲಿದ್ದು, ಸ್ಪರ್ದಾತ್ಮಕ 12 ಲಕ್ಷ ರು.ಗಳ ಅಸುಪಾಸಿನಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಇದರಿಂದ ಇತರ ಬ್ರಾಂಡ್‌ಗಳ ಜತೆ ಪೈಪೋಟಿ ಒಡ್ಡಲು ನೆರವಾಗಲಿದೆ.

ವಿಕ್ಟರಿ ಮೋಟಾರ್‌ಸೈಕಲ್‌ಗಳು 1,731 ಸಿಸಿ ವಿ ಟ್ವಿನ್ ಎಂಜಿನ್ ನಿಯಂತ್ರಿಸಲ್ಪಡಲಿದ್ದು, ಸಿಕ್ಸ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ.

ಸ್ವಯಂ ಹೊಂದಾಣಿಕೆಯ ಕ್ಯಾಮ್ ಚೈನ್ಸ್, ಹೈಡ್ರಾಲಿಕ್ ಲಿಫ್ಟರ್ಸ್, ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಹಾಗೂ ಪ್ರತಿ ಸಿಲಿಂಡರ್‌ಗೆ SOHC/4 ವಾಲ್ವೆ ಇರಲಿದೆ.

ಭಾರತೀಯ ವಾಹನ ಮಾರುಕಟ್ಟೆಯು ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿದ್ದು, ಇದರಿಂದಾಗಿ ಜಗತ್ತಿನೆಲ್ಲೆಡೆಯ ವಾಹನ ತಯಾರಕ ಕಂಪನಿಗಳು ತಮ್ಮ ವ್ಯಾಪಾರ ಕುದುರಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಇದು ದೇಶದ ವಾಹನ ಮಾರುಕಟ್ಟೆ ದೃಷ್ಟಿಕೋನದಲ್ಲಿ ಉತ್ತಮ ಬೆಳವಣಿಗೆಯಾಗಿದೆ.

ವಿಕ್ಟರಿ ಸೂಪರ್ ಬೈಕ್ಸ್



Click it and Unblock the Notifications








