ವೆಸ್ಪಾ ಮೋಡಿ; ತುಮಕೂರಿನ ಪ್ರತೀಕ್‌ಗೆ ಡಬಲ್ ಧಮಾಕಾ

By Nagaraja

ಕೆಲವು ದಿನಗಳ ಹಿಂದೆಯಷ್ಟೇ 'ತುಮಕೂರು ಹುಡುಗನ ಗ್ರಾಫಿಕ್ಸ್ ಮೋಡಿಗೆ ವೆಸ್ಪಾ ಕ್ಲೀನ್ ಬೌಲ್ಡ್' ಎಂಬ ಲೇಖನವೊಂದನ್ನು ಪ್ರಕಟಿಸಿದ್ದೆವು. ಇದೀಗ ಇಂತಹದೊಂದು ನವೀನ ವಿನ್ಯಾಸಕ್ಕೆ ಮೊರೆ ಹೋಗಿರುವ ತುಮಕೂರಿನ ಪ್ರತೀಕ್ ಜೈನ್ ಅವರನ್ನು ಎರಡೆರಡು ಪ್ರಶಸ್ತಿ ಪತ್ರಗಳು ಹರಸಿಕೊಂಡು ಬಂದಿದ್ದು, ಡಬಲ್ ಧಮಾಕಾ ಪಡೆದಂತಾಗಿದೆ.

ವೆಸ್ಪಾಗೆ ಮಾರು ಹೋದ ಲಕ್ಕಿ ಸ್ಟಾರ್ ರಮ್ಯಾ

ಮೂಲತ: ತುಮಕೂರಿನ ಜಿಲ್ಲೆಯವರಾಗಿರುವ ಪ್ರತೀಕ್ ಸದಾ ಒಂದಲ್ಲ ಒಂದು ಹೊಸತನವನ್ನು ಸಾಧಿಸಬೇಕೆಂಬ ಹಂಬಲವುಳ್ಳವರಾಗಿದ್ದಾರೆ. ಅವರಿಗೀಗ ಮಿರಕಲ್ಸ್ ವರ್ಲ್ಡ್ ರೆಕಾರ್ಡ್ಸ್‌ನಿಂದ 'ಭಾರತದ ಮೊದಲ ನಾವೀನ್ಯತೆಯ ಗ್ರಾಫಿಕ್ ವಿನ್ಯಾಸ ವಾಹನ' ಹಾಗೆಯೇ ಹೈ ರೇಂಜ್ ಬುಕ್ ಆಫ್ ರೆಕಾರ್ಡ್ಸ್‌ನಿಂದ 'ಅತಿ ಹೆಚ್ಚು ಗ್ರಾಫಿಕ್ಸ್ ವಿನ್ಯಾಸ ಹೊಂದಿರುವ ಸ್ಕೂಟರ್‌' ಎಂಬ ಪ್ರಶಸ್ತಿ ಪತ್ರಗಳಿಗೆ ಭಾಜನರಾಗಿದ್ದಾರೆ.

ಹಿನ್ನೆಲೆ

ಹಿನ್ನೆಲೆ

ಇತರ ಸ್ಕೂಟರ್‌ಗಳಿಗಿಂತಲೂ ತಮ್ಮ ಪ್ರೀತಿಯ ವೆಸ್ಪಾ ವಿಶೇಷವಾಗಿ ಗುರುತಿಸಬೇಕು ಎಂಬ ಆಸೆಯನ್ನು ಕಟ್ಟಿಕೊಂಡಿದ್ದ ಪ್ರತೀಕ್ ನೇರವಾಗಿ ಬೆಂಗಳೂರಿನ ರಾಜಾಜಿನಗರಕ್ಕೆ ಪಯಣಕ್ಕೆ ಬೆಳೆಸಿದ್ದರು.

ವೆಸ್ಪಾ ಮೋಡಿ; ತುಮಕೂರಿನ ಪ್ರತೀಕ್‌ಗೆ ಡಬಲ್ ಧಮಾಕಾ

ಇದರಂತೆ ರಾಜಾಜಿನಗರದ ವರ್ಕ್ ಶಾಪ್‌ವೊಂದರಲ್ಲಿ ಕೇವಲ ಎರಡು ತಾಸಿನೊಳಗೆ ವೆಸ್ಪಾ ಎಲ್‌ಎಕ್ಸ್ 125 ಸಿಸಿ ಮಾದರಿಗೆ ವಿಶಿಷ್ಟ ಗ್ರಾಫಿಕಲ್ ರೇಡಿಮೇಡ್ ಸ್ಟಿಕ್ಕರ್ ಹಾಕಿಸಿಕೊಂಡಿದ್ದರು.

ವೆಸ್ಪಾ ಮೋಡಿ; ತುಮಕೂರಿನ ಪ್ರತೀಕ್‌ಗೆ ಡಬಲ್ ಧಮಾಕಾ

ಜನಪ್ರಿಯ ಪ್ರೀಮಿಯಂ ಸ್ಕೂಟರ್ ಮಾದರಿಗಳಲ್ಲಿ ಒಂದಾಗಿರುವ ವೆಸ್ಪಾ ಎಲ್‌ಎಕ್ಸ್125, ಭಾರತದಲ್ಲಿ ಇಟಲಿ ಮೂಲದ ಪಿಯಾಜಿಯೊ ಸಂಸ್ಥೆ ಮಾರಾಟ ಮಾಡುತ್ತಿದೆ.

ವೆಸ್ಪಾ ಮೋಡಿ; ತುಮಕೂರಿನ ಪ್ರತೀಕ್‌ಗೆ ಡಬಲ್ ಧಮಾಕಾ

'786' ಎಂಬ ಫ್ಯಾನ್ಸಿ ನಂಬರನ್ನು ಹೊಂದಿರುವ ಪ್ರತೀಕ್ ತಮ್ಮ ವೆಸ್ಪಾ ಸ್ಕೂಟರಿಗೆ ಇನ್ನಷ್ಟು ಅಂದತೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ವೆಸ್ಪಾ ಮೋಡಿ; ತುಮಕೂರಿನ ಪ್ರತೀಕ್‌ಗೆ ಡಬಲ್ ಧಮಾಕಾ

ಸದ್ಯ ಈ ವಿಷಯವನ್ನು ವೆಸ್ಪಾ ಅಧಿಕೃತರಿಗೂ ಮುಟ್ಟಿಸುವ ಪ್ರಯತ್ನ ಮಾಡಿರುವ ಪ್ರತೀಕ್, ತಮ್ಮ ಕನಸಿನ ಸ್ಕೂಟರ್, ವೆಸ್ಪಾದ ಅಂಬಾಸಿಡರ್ ಆಗಬೇಕೆಂಬ ಆಸೆ ಹೊಂದಿದ್ದಾರೆ. ಇದನ್ನು ಪಿಯಾಜಿಯೊ ಘೋಷಣೆ ಮಾಡಿತೇ ಎಂಬುದು ಕುತೂಹಲದ ವಿಷಯ.

ವೆಸ್ಪಾ ಮೋಡಿ; ತುಮಕೂರಿನ ಪ್ರತೀಕ್‌ಗೆ ಡಬಲ್ ಧಮಾಕಾ

ಒಟ್ಟಿನಲ್ಲಿ ವಾಹನ ಪ್ರೇಮಿ ಅದರಲ್ಲೂ ನಮ್ಮ ನಿಮ್ಮಲ್ಲಿ ಓರ್ವರಾಗಿರುವ ಕನ್ನಡಿಗ ಪ್ರತೀಕ್ ಪ್ರಯತ್ನವನ್ನು ಮೆಚ್ಚಲೇಬೇಕು.

ವೆಸ್ಪಾ ಮೋಡಿ; ತುಮಕೂರಿನ ಪ್ರತೀಕ್‌ಗೆ ಡಬಲ್ ಧಮಾಕಾ

ಅಂದ ಹಾಗೆ ಪ್ರತೀಕ್ ಜೈನ್ ಇಂದು ಏಳು ವಿಶ್ವ ದಾಖಲೆಗಳ ಒಡೆಯರಾಗಿದ್ದಾರೆ. ಅವರು ಹುಟ್ಟು ಹಾಕಿರುವ 'ಡಬ್ಲ್ಯುಎಫ್1008' ತಂಡವು ಕೇವಲ 12 ತಾಸು 51 ನಿಮಿಷ ಹಾಗೂ 20 ಸೆಕೆಂಡುಗಳಲ್ಲೇ 36 ವೆಬ್‌ಸೈಟ್‌ಗಳನ್ನು ಅಭಿವೃದ್ಧಿಪಡಿಸಿತ್ತು. ಇದರಲ್ಲಿ ಯೂನಿಕ್ ವರ್ಲ್ಡ್ ರೆಕಾರ್ಡ್ಸ್, ಹೈ ರೇಂಜ್ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಅಮೇಜಿಂಗ್ ರೆಕಾರ್ಡ್ಸ್ - ಬಿಕಮ್ ಎ ರೆಕಾರ್ಡ್ ರೆಕಾರ್ಡ್ಸ್, ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ ಮತ್ತು ಮಿರಕಲ್ಸ್ ವರ್ಲ್ಡ್ ರೆಕಾರ್ಡ್ಸ್‌ನಿಂದ ಮಾನ್ಯತೆಗೆ ಪಾತ್ರವಾಗಿದೆ.

ವೆಸ್ಪಾ ಮೋಡಿ; ತುಮಕೂರಿನ ಪ್ರತೀಕ್‌ಗೆ ಡಬಲ್ ಧಮಾಕಾ

ವೆಸ್ಪಾ ಪ್ರವೇಶದೊಂದಿಗೆ 125 ಸಿಸಿ ಸ್ಕೂಟರ್‌ನ ಶೈಲಿಯೇ ಬದಲಾಗಿದೆ. ಇದು ನಿಜಕ್ಕೂ ಪ್ರೀಮಿಯಂ ಜೀವನ ಶೈಲಿಯ ಸ್ಕೂಟರ್ ಅಗಿದೆ. ಇದು ನಿಮಗೆ ಹಣಕ್ಕೆ ತಕ್ಕ ಮೌಲ್ಯ ನೀಡಲಿದೆ.

ವೆಸ್ಪಾ ಮೋಡಿ; ತುಮಕೂರಿನ ಪ್ರತೀಕ್‌ಗೆ ಡಬಲ್ ಧಮಾಕಾ

ಕೈಗೆಟಕುವ ದರದಲ್ಲಿ ಸಿಗುವ ವೆಸ್ಪಾ ಸ್ಕೂಟರ್, ಕ್ಲಾಸಿಕ್ ವಿನ್ಯಾಸ, ಶಕ್ತಿಯುತ ಮೆಟ್ಯಾಲಿಕ್ ಮೊನೊಕಾಕ್ ಬಾಡಿ, ಆರಾಮದಾಯಕ ಸೀಟು ಜೊತೆಗೆ ಶಕ್ತಿಶಾಲಿ 125 ಸಿಸಿ ಎಂಜಿನ್ ಮತ್ತು ಮೈಲೇಜ್‌ನಲ್ಲಿ ಯಾವುದೇ ರಾಜಿಗೆ ತಯಾರಾಗಿಲ್ಲ.

ಮೈಲೇಜ್

ಮೈಲೇಜ್

ವೆಸ್ಪಾ ಪ್ರಕಾರ ಎಲ್‌ಎಕ್ಸ್125 ಪ್ರತಿ ಲೀಟರ್‌ಗೆ 60 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಆದರೆ ನೈಜ ರಸ್ತೆ ಪರಿಸ್ಥಿತಿಯಲ್ಲಿ 50ರಿಂದ 55 ಕೀ.ಮೀ.ಗಳಷ್ಟು ಮೈಲೇಜ್ ನೀಡುವ ಸಾಮರ್ಥ್ಯವಿದೆ.

ವೆಸ್ಪಾ ಮೋಡಿ; ತುಮಕೂರಿನ ಪ್ರತೀಕ್‌ಗೆ ಡಬಲ್ ಧಮಾಕಾ

ಇಂಧನ ಟ್ಯಾಂಕ್: 8.5 ಲೀಟರ್

ಎಂಜಿನ್: 125 ಸಿಸಿ, ಸಿಂಗಲ್ ಸಿಲಿಂಡರ್ (10.06 ಅಶ್ವಶಕ್ತಿ, 10.60 ಎನ್‌ಎಂ ಟಾರ್ಕ್)

ಸೀಟು ಕೆಳಗಡೆ ಸ್ಟೋರೆಜ್: 16.5 ಲೀಟರ್

ಭಾರ: 114 ಕೆ.ಜಿ

ಬೆಲೆ: ರು. 56,996 (ಎಕ್ಸ್ ಶೋ ರೂಂ ದೆಹಲಿ)

ವೆಸ್ಪಾ ಮೋಡಿ; ತುಮಕೂರಿನ ಪ್ರತೀಕ್‌ಗೆ ಡಬಲ್ ಧಮಾಕಾ

ಸ್ಯಾಂಡಲ್‌ವುಡ್ ಕ್ವೀನ್ ಶ್ವೇತಾ ಪಂಡಿತ್

ಚಿತ್ರ ಕೃಪೆ: ಪ್ರತೀಕ್ ಜೈನ್

More from DriveSpark

Article Published On: Monday, June 16, 2014, 5:02 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+