ಕೆಫೆ ರೇಸರ್ ಕಾಂಟಿನೆಂಟಲ್ ಜಿಟಿಗೆ 'ವರ್ಷದ ಬೈಕ್' ಪ್ರಶಸ್ತಿ

By Nagaraja

ಕಳೆದ ದಿನವಷ್ಟೇ ಹ್ಯುಂಡೈ ಗ್ರಾಂಡ್ ಐ10 'ವರ್ಷದ ಕಾರು 2014' ಪ್ರಶಸ್ತಿಯನ್ನು ಬಾಚಿಕೊಂಡಿರುವ ಬಗ್ಗೆ ವರದಿ ಮಾಡಿದ್ದೆವು. ಇದರ ಬೆನ್ನಲ್ಲೇ 'ವರ್ಷದ ಬೈಕ್ 2014' ಪ್ರಶಸ್ತಿಗೆ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕೆಫೆ ರೇಸರ್ ಅರ್ಹವಾಗಿದೆ.

ಅಗ್ಗದ ದರದಲ್ಲಿ ಎಂಟ್ರಿ ಕೊಟ್ಟ ಕಾಂಟಿನೆಂಟಲ್ ಜಿಟಿ

ಇತ್ತೀಚೆಗಷ್ಟೇ ಲಾಂಚ್ ಆಗಿರುವ ಕಾಂಟಿನೆಂಟಲ್ ಜಿಟಿ, ತನ್ನ ನಿಕಟ ಪ್ರತಿಸ್ಪರ್ಧಿ ಕೆಟಿಎಂ 390 ಡ್ಯೂಕ್ ಮತ್ತು ಹ್ಯೊಸಂಗ್ ಅಕ್ವಿಲಾ ಪ್ರೊ ಬೈಕ್‌ಗಳನ್ನು ಹಿಂದಿಕ್ಕಿ '2014 ಜೆಕೆ ಇಂಡಿಯನ್ ಮೋಟಾರು ಸೈಕಲ್ ಆಫ್ ದಿ ಇಯರ್' (ಐಎಂಒಟಿವೈ) ಪ್ರಶಸ್ತಿಗೆ ಭಾಜನವಾಗಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿಗೆ 'ವರ್ಷದ ಬೈಕ್ ಪ್ರಶಸ್ತಿ 2014' ಗರಿ

ನಿಮ್ಮ ಮಾಹಿತಿಗಾಗಿ, ದೇಶಿಯವಾಗಿ ವಾಹನ ತಯಾರಕ ಸಂಸ್ಥೆಗಳೊಳಗಿನ ಪೈಪೋಟಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಮೆರಿಕ, ಜಪಾನ್ ಹಾಗೂ ಇತರ ಯುರೋಪ್ ರಾಷ್ಟ್ರಗಳಂತೆ ಭಾರತದಲ್ಲೂ ವರ್ಷದ ಕಾರು ಹಾಗೂ ಬೈಕ್ ಪ್ರಶಸ್ತಿಗಳನ್ನು ವಿತರಿಸಲಾಗುತ್ತಿದೆ. ಇದು ನಾವೀನ್ಯತೆಯ ಚಾಲನಾ ಅನುಭವ, ಉತ್ತಮ ಗುಣಮಟ್ಟದ ಉತ್ಪನ್ನ ಹಾಗೂ ವಿನ್ಯಾಸವನ್ನು ಗುರುತಿಸಿಕೊಳ್ಳಲು ನೆರವಾಗುತ್ತದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿಗೆ 'ವರ್ಷದ ಬೈಕ್ ಪ್ರಶಸ್ತಿ 2014' ಗರಿ

ಭಾರತ ವಾಹನೋದ್ಯಮದ ಪ್ರಖ್ಯಾತ ವ್ಯಕ್ತಿಗಳು ತೀರ್ಪುಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿರುತ್ತಾರೆ. ಈ ಪೈಕಿ ಬಿಬಿಸಿ ಟಾಪ್ ಗೇರ್‌ನ ಗಿರೀಶ್ ಕರ್ಕೆರಾ, ಶ್ರೀರಾಮ್ ನಾರಾಯಣನ್, ಓವರ್‌ಡ್ರೈವ್‌ನ ವಿಕ್ರಾಂತ್ ಸಿಂಗ್, ಬೆಟ್ರಾಂಡ್ ಡಿಸೋಜ, ಸುಬ್ರಾಟಾ ಮರ್ಮರ್, ಆಟೋ ಬಿಲ್ಡ್ನ್ ಯೋಗೇಂದ್ರ ಪ್ರತಾಪ, ರಾಹುಲ್ ಘೋಷ್, ಆಟೋ ಇಂಡಿಯಾದ ಬಾಬ್ ರುಪಾನಿ, ಗೌತಮ್ ಸೆನ್, ಆಟೋಎಕ್ಸ್‌ನ ಧ್ರುವ್ ಬೆಹ್ಲ್, ಆಶಿಶ್ ಝಾ, ಮೊಟೋರಿಂಗ್‌ನ ಫಬ್ಲೊ ಚಟರ್ಜಿ, ರೊಹಿನ್ ನಾಗರಾಣಿ, ಕಾರ್ತೀಕ್ ವಾರೆ, ಕಾರ್ ಇಂಡಿಯಾ ಆಂಡ್ ಬೈಕ್ ಇಂಡಿಯಾದ ಆಸ್ಪಿ ಭಾಥೆನಾ, ಸರ್ಮಾದ್ ಕದಿರಿ, ಇವೊ ಇಂಡಿಯಾದ ಸಿರಿಶ್ ಚಂದ್ರನ್ ಮತ್ತು ಹಿಂದೂ ಬ್ಯುಸಿನೆಸ್ ಲೈನ್‌ನ ಮುರಳೀಧರ್ ಸ್ವಾಮಿನಾಥನ್ ಪ್ರಮುಖರಾಗಿದ್ದಾರೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿಗೆ 'ವರ್ಷದ ಬೈಕ್ ಪ್ರಶಸ್ತಿ 2014' ಗರಿ

ಹಲವಾರು ಬೈಕ್‌ಗಳು ಪ್ರಶಸ್ತಿ ರೇಸ್‌ನಲ್ಲಿದ್ದರೂ ಅಂತಿಮವಾಗಿ ಮಹೀಂದ್ರ ಸೆಂಚುರೊ, ಕೆಟಿಎಂ ಡ್ಯೂಕ್ 390, ಹ್ಯೊಸಂಗ್ ಅಕ್ವಿಲಾ ಪ್ರೊ ಮತ್ತು ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಸೇರಿದಂತೆ ಒಂಬತ್ತು ಬೈಕ್‌ಗಳು ಆಯ್ದ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದವು.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿಗೆ 'ವರ್ಷದ ಬೈಕ್ ಪ್ರಶಸ್ತಿ 2014' ಗರಿ

ದರ, ಇಂಧನ ಕ್ಷಮತೆ, ವಿನ್ಯಾಸ, ಆರಾಯದಾಯಕ, ಸುರಕ್ಷತೆ, ನಿರ್ವಹಣೆ, ಪ್ರಾಯೋಗಿಕತೆ, ತಾಂತ್ರಿಕತೆ ಮತ್ತು ಭಾರತೀಯ ರಸ್ತೆ ಪರಿಸ್ಥಿತಿಗೆ ಹೊಂದಿಕೊಳ್ಳುವಿಕೆ ಮುಂತಾದ ಪ್ರಮುಖ ಮಾನದಂಡಗಳ ಆಧಾರದಲ್ಲಿ ವರ್ಷದ ಬೈಕನ್ನು ಆರಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿಗೆ 'ವರ್ಷದ ಬೈಕ್ ಪ್ರಶಸ್ತಿ 2014' ಗರಿ

ಈ ಬಗ್ಗೆ ಅಭಿಪ್ರಾಯ ಪಟ್ಟಿರುವ ತೀರ್ಪುಗಾರರು, ಶ್ರೇಷ್ಠ ಬೈಕ್ ಆರಿಸುವುದು ಕಠಿಣ ಕೆಲಸವಾಗಿತ್ತು. ಒಂದೆಡೆ ಎನ್‌ಫೀಲ್ಡ್ ಕ್ರೂಸಿಂಗ್ ಸಾಮರ್ಥ್ಯ ಹೊಂದಿದ್ದರೆ ಇನ್ನೊಂದೆಡೆ 390 ಡ್ಯೂಕ್ ವೇಗ ಹಾಗೂ ಮನರಂಜನೆಯಲ್ಲಿ ಶ್ರೇಷ್ಠತೆಯನ್ನು ಪಡೆದಿದೆ. ಇನ್ನು ಮಹೀಂದ್ರ ಸೆಂಚುರೊ ಪ್ಯಾಕೇಜ್‌ನಲ್ಲಿ ಅತ್ಯುನ್ನತವಾಗಿದೆ. ಆದರೆ ಅಂತಿಮವಾಗಿ ಚಾಲನಾ ಸ್ಥಿರತೆ, ಉತ್ತಮ ವಿನ್ಯಾಸ ಹಾಗೂ ಗುಣಮಟ್ಟವನ್ನು ಹೊಂದಿರುವ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ವಿಜಯಿಯಾಗಿ ಹೊರಹೊಮ್ಮಿದೆ ಎಂದಿದ್ದಾರೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿಗೆ 'ವರ್ಷದ ಬೈಕ್ ಪ್ರಶಸ್ತಿ 2014' ಗರಿ

ಮೊದಲ ಬಾರಿ 1965ನೇ ಇಸವಿಯಲ್ಲಿ ಎಂಟ್ರಿ ಪಡೆದಿದ್ದ ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್ ಕಾಂಟಿನೆಂಟಲ್ ಜಿಟಿ ಇತ್ತೀಚೆಗಷ್ಟೇ ಪುನರ್ಜನ್ಮ ಪಡೆದಿತ್ತು. ಇದೀಗ ಕ್ಲಾಸಿಕ್ ಕೆಫೆ ರೇಸರ್ ಮೂಲಕ ತನ್ನ ಗತಕಾಲದ ವೈಭವವನ್ನು ಮರುಕಳಿಸುವ ಪ್ರಯತ್ನದಲ್ಲಿದೆ.

ವರ್ಷದ ಬೈಕ್ ಪ್ರಶಸ್ತಿ; ಒಂದು ಹಿನ್ನೋಟ

ವರ್ಷದ ಬೈಕ್ ಪ್ರಶಸ್ತಿ; ಒಂದು ಹಿನ್ನೋಟ

  • ಆರ್‌ಇ ಕಾಂಟಿನೆಂಟಲ್ ಜಿಟಿ (2014)
  • ಕೆಟಿಎಂ ಡ್ಯೂಕ್ 200 (2013),
  • ಹೋಂಡಾ ಸಿಬಿಎರ್ 250ಆರ್ (2012),
  • ಹೋಂಡಾ ಸಿಬಿ ಟ್ವಿಸ್ಟರ್ (2011),
  • ಕವಾಸಕಿ ನಿಂಜಾ 250ಆರ್ (2010),
  • ಯಮಹಾ ಆರ್15 (2009)
  • ಬಜಾಜ್ ಪಲ್ಸರ್ 220 ಡಿಟಿಎಸ್-ಎಫ್‌ಐ (2008)

More from DriveSpark

Article Published On: Friday, December 20, 2013, 13:09 [IST]
English summary
The recently launched Royal Enfield Continental GT has been named 2014 JK Indian Motorcycle of the Year (IMOTY). The Continental GT took on the KTM 390 Duke and Hyosung Aquila Pro to claim the title of this year's best motorcycle in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+