ನವೆಂಬರ್ ತಿಂಗಳ ಅಗ್ರ 10 ದ್ವಿಚಕ್ರ ವಾಹನಗಳು

Written By:

ದೇಶದಲ್ಲಿ ರಸ್ತೆಯಲ್ಲಿ ಓಡಾಡುವ ಬೈಕ್‌ಗಳು ಯಾವತ್ತೂ ಸುಲಭ ಹಾಗೂ ಸಮರ್ಥ ಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತದೆ. ಆದರೆ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಲ್ಲಿ ಎಡವುದರಿಂದ ಅತಿ ಹೆಚ್ಚು ಅಪಘಾತಗಳು ಇದರಿಂದಲೇ ಸಂಭವಿಸುತ್ತದೆ.

ದೇಶದ ಮಧ್ಯಮ ವರ್ಗ ಜನರ ಸಣ್ಣ ಪುಟ್ಟ ವ್ಯವಹಾರಗಳಿಂದ ಹಿಡಿದು ದೈನಂದಿನ ಸಂಚಾರ ಹಾಗೂ ಫ್ಯಾಮಿಲಿ ಸಮಾರಂಭಗಳಿಗೆ ತೆರಳುವಾಗಲೂ ಮೋಟಾರುಸೈಕಲ್‌ಗಳನ್ನೇ ಹೆಚ್ಚಾಗಿ ಆಶ್ರಯಿಸಿಕೊಂಡಿರುತ್ತಾರೆ.

  

ಇಂದಿನ ಈ ಲೇಖನದಲ್ಲಿ 2014 ನವೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾಗಿರುವ ಟಾಪ್ 10 ದ್ವಿಚಕ್ರ ವಾಹನಗಳನ್ನು ಪಟ್ಟಿ ಮಾಡಿಕೊಡಲಿದ್ದೇವೆ. ವಿಶೇಷವೆಂದರೆ ಏಕಮಾತ್ರ ಸ್ಕೂಟರ್ ಮಾತ್ರ ಇಲ್ಲಿ ಕಾಣಿಸಿಕೊಂಡಿದೆ. ಅದು ಯಾವುದು ಅಂತೀರಾ? ಉತ್ತರಕ್ಕಾಗಿ ಮುಂದುವರಿಯಿರಿ...

10. ಬಜಾಜ್ ಡಿಸ್ಕವರ್
  

10. ಬಜಾಜ್ ಡಿಸ್ಕವರ್

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಬಜಾಜ್ ಆಟೋ ಕಂಪನಿಯ ಜನಪ್ರಿಯ ಮಾದರಿಗಳಲ್ಲಿ ಒಂದಾಗಿರುವ ಡಿಸ್ಕವರ್ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಹಾಗಿದ್ದರೂ 2014 ಅಕ್ಟೋಬರ್ (70,461) ತಿಂಗಳಿಗೆ ಹೋಲಿಸಿದರೆ ನವೆಂಬರ್ ತಿಂಗಳ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದೆ.

ಒಟ್ಟು ಮಾರಾಟ - 42,317

 

09. ಬಜಾಜ್ ಪಲ್ಸರ್
  

09. ಬಜಾಜ್ ಪಲ್ಸರ್

ಬಜಾಜ್‌ನ ಮಗದೊಂದು ಹಾಗೂ ದೇಶದ ನಂ.1 ಕ್ರೀಡಾ ಬೈಕಾಗಿರುವ ಪಲ್ಸರ್ ಒಂಬತ್ತನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇದು ವಿಭಿನ್ನ ಎಂಜಿನ್ ಸಿಸಿಗಳಲ್ಲಿ ಲಭ್ಯವಿರುತ್ತದೆ. ಇವುಗಳಲ್ಲಿ ಎನ್‌ಎಸ್ 200 ಹಾಗೂ 150 ಸಿಸಿ ಪ್ರಮುಖವಾಗಿದೆ. ಡಿಸ್ಕವರ್‌ನಂತೆಯೇ ಪಲ್ಸರ್ ಕೂಡಾ ಅಕ್ಟೋಬರ್‌ಗೆ (70,763) ಹೋಲಿಸಿದಾಗ ನವೆಂಬರ್ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದೆ.

ಒಟ್ಟು ಮಾರಾಟ - 48,361

 

 08. ಹೀರೊ ಗ್ಲಾಮರ್
  

08. ಹೀರೊ ಗ್ಲಾಮರ್

ಹೀರೊ ಪಾಲಿಗೆ ನಿಜಕ್ಕೂ ಗ್ಲಾಮರ್ ಎನಿಸಿಕೊಂಡಿರುವ ಈ ಮಾದರಿಯು ಗಮನಾರ್ಹ ಮಾರಾಟ ಕಾಯ್ದುಕೊಂಡಿರುವುದು ವಿಶೇಷವೆನಿಸಿದೆ.

ಒಟ್ಟು ಮಾರಾಟ - 52,807

 

7. ಹೋಂಡಾ ಡ್ರೀಮ್
  

7. ಹೋಂಡಾ ಡ್ರೀಮ್

ಎಂಟ್ರಿ ಲೆವೆಲ್ ಬೈಕ್‌ಗಳ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಹೋಂಡಾ ಡ್ರೀಮ್ ಶ್ರೇಣಿಯ ಬೈಕ್‌ಗಳು ಉತ್ತಮ ಮಾರಾಟ ಕಾಯ್ದುಕೊಂಡಿದೆ. ಆದರೆ ಅಕ್ಟೋಬರ್ (73,010) ತಿಂಗಳಿನಲ್ಲಿದ್ದ ಐದನೇ ಸ್ಥಾನದಿಂದ ಏಳಕ್ಕೆ ಕುಸಿತ ಕಂಡಿದೆ.

ಒಟ್ಟು ಮಾರಾಟ - 56,414

 

06. ಮೊಪೆಡ್
  

06. ಮೊಪೆಡ್

ಇಲ್ಲಿ ಕೊಟ್ಟಿರುವ ಸಂಖ್ಯೆಯನ್ನು ನೋಡಿದರೆ ನಿಮ್ಮಲ್ಲಿ ಅಚ್ಚರಿಗೆ ಕಾರಣವಾಗಬಹುದು. ಟಿವಿಎಸ್‌ನ ಐಕಾನಿಕ್ ದ್ವಿಚಕ್ರ ವಾಹನಗಳಲ್ಲಿ ಒಂದಾಗಿರುವ ಮೊಪೆಡ್ ಈಗಲೂ ತನ್ನ ಸಾನಿಧ್ಯವನ್ನು ಉಳಿಸಿಕೊಂಡಿದೆಯಷ್ಟೇ ಅಲ್ಲದೆ ಸ್ಥಿರವಾದ ಮಾರಾಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಣ್ಣ ಪುಟ್ಟ ವ್ಯವಹಾರಗಳನ್ನು ಆಶ್ರಯಿಸಿಕೊಂಡಿರುವ ಟಿವಿಎಸ್ ಮೊಪೆಡ್ ನಿಜಕ್ಕೂ ಅನ್ನದಾತವೆನಿಸಿದೆ.

ಒಟ್ಟು ಮಾರಾಟ - 61,630

 

05. ಹೋಂಡಾ ಸಿಬಿ ಶೈನ್
  

05. ಹೋಂಡಾ ಸಿಬಿ ಶೈನ್

ಹೋಂಡಾದ ಸರ್ವಕಾಲಿಕ ಶ್ರೇಷ್ಠ ಹಾಗೂ ಅಗ್ರ 125 ಸಿಸಿ ಬೈಕ್ ಆಗಿರುವ ಸಿಬಿ ಶೈನ್ ಅಗ್ರ ಐದು ಬೈಕ್‌ಗಳಲ್ಲಿ ಗುರುತಿಸಿಕೊಂಡಿದೆ. ಇತರ ಬೈಕ್‌ಗಳಿಗೆ ಹೋಲಿಸಿದರೆ ಅಕ್ಟೋಬರ್‌ಗಿಂತಲೂ (64,115 ) ನವೆಂಬರ್ ತಿಂಗಳಲ್ಲಿ ಹೆಚ್ಚಿನ ಮಾರಾಟ ಗಿಟ್ಟಿಸಿಕೊಂಡಿರುವುದು ಶೈನ್ ವಿಶೇಷತೆಯಾಗಿದೆ.

ಒಟ್ಟು ಮಾರಾಟ - 66,648

 

04. ಹೀರೊ ಪ್ಯಾಶನ್
  

04. ಹೀರೊ ಪ್ಯಾಶನ್

ಅಕ್ಟೋಬರ್ ತಿಂಗಳಲ್ಲಿ ಒಂದು ಲಕ್ಷ ಮಾರಾಟ (1,02,866) ಸಂಖ್ಯೆಯನ್ನು ದಾಟುವ ಮೂಲಕ ಗಮನ ಸೆಳೆದಿದ್ದ ಹೀರೊ ಪ್ಯಾಶನ್ ಒಂದು ಸ್ಥಾನ ಕುಸಿದ ಕಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಒಟ್ಟು ಮಾರಾಟ - 92,434

 

 03. ಹೀರೊ ಎಚ್‌ಎಫ್ ಡಿಲಕ್ಸ್
  

03. ಹೀರೊ ಎಚ್‌ಎಫ್ ಡಿಲಕ್ಸ್

ಹೀರೊದ ಅಗ್ಗದ ಬೈಕ್‌ಗಳಲ್ಲಿ ಒಂದಾಗಿರುವ ಹೀರೊ ಎಚ್‌ಎಫ್ ಡಿಲಕ್ಸ್ ಅತ್ಯುತ್ತಮ ಮಾರಾಟವನ್ನು ಕಾಯ್ದುಕೊಂಡಿದೆಯಷ್ಟೇ ಅಲ್ಲದೆ ಅಗ್ರ ಮೂರರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ಒಟ್ಟು ಮಾರಾಟ - 97,229

 

02. ಹೋಂಡಾ ಆಕ್ಟಿವಾ
  

02. ಹೋಂಡಾ ಆಕ್ಟಿವಾ

ಬೈಕ್‌ಗಳೇ ಸದ್ದು ಮಾಡುತ್ತಿರುವ ಈ ನಡುವೆ ಪುಟಿದೆದ್ದು ಬಂದಿರುವ ಹೋಂಡಾ ಆಕ್ಟಿವಾ ಸ್ಕೂಟರ್‌ಗೆ ಈ ವಿಭಾಗದಲ್ಲಿ ಸದ್ಯಕ್ಕಂತೂ ಸೆಡ್ಡು ನೀಡುವವರು ಯಾರು ಇಲ್ಲ. ಹಾಗಿದ್ದರೂ ಅಕ್ಟೋಬರ್ (1,91,175) ತಿಂಗಳಿಗೆ ಹೋಲಿಸಿದರೆ ನವೆಂಬರ್‌ನಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದೆ.

ಒಟ್ಟು ಮಾರಾಟ - 1,76,087

 

 01. ಹೀರೊ ಸ್ಪ್ಲೆಂಡರ್
  

01. ಹೀರೊ ಸ್ಪ್ಲೆಂಡರ್

ಟಾಪ್ 10 ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ನಂ.1 ಯಾರು ಎಂದು ಕೇಳುವ ಅಗತ್ಯವೇ ಇಲ್ಲ. ಯಾಕೆಂದರೆ ದೇಶದ ಸರ್ವಕಾಲಿಕ ಶ್ರೇಷ್ಠ ಬೈಕ್ ಸ್ಪ್ಲೆಂಡರ್ ಈ ಸ್ಥಾನವನ್ನು ಭದ್ರವಾಗಿಟ್ಟುಕೊಂಡಿದೆ. ವಿಶೇಷವೆಂದರೆ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಸ್ಪ್ಲೆಂಡರ್ (2,21,084) ಮಾರಾಟ ಸಹ ಕುಸಿತ ಕಂಡಿದೆ. ಹಾಗಿದ್ದರೂ ತಿಂಗಳೊಂದರಲ್ಲೇ ಎರಡು ಲಕ್ಷ ಮಾರಾಟ ಸಂಖ್ಯೆ ದಾಟಿದ ಏಕೈಕ ದ್ವಿಚಕ್ರ ವಾಹನ ಎನಿಸಿಕೊಂಡಿದೆ.

ಒಟ್ಟು ಮಾರಾಟ - 2,04,919

 

English summary
Sales of these motorcycles being in thousands, lets take a look at top 10 motorcycles that have been sold in November 2014, compared to those sold in October 2014, along with their sales numbers.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more