ಟ್ರಯಂಪ್ ಮೋಟಾರ್‌ಸೈಕಲ್ಸ್ ಆಗಮನ ಖಚಿತ

By Nagaraja

ಇದೀಗ ಎಲ್ಲವೂ ಅಧಿಕೃತಗೊಂಡಿದ್ದು, ಬ್ರಿಟನ್ ನಿರ್ವಹಣಾ ಬೈಕ್ ತಯಾರಕರಾದ ಟ್ರಯಂಪ್ ಮೋಟಾರ್ ಸೈಕಲ್ಸ್ ಸದ್ಯದಲ್ಲೇ ಭಾರತಕ್ಕೆ ಎಂಟ್ರಿ ಕೊಡುವುದಾಗಿ ಖಚಿತಪಡಿಸಿದೆ. ಅಂದರೆ ಮುಂಬರುವ ನವೆಂಬರ್ ತಿಂಗಳಲ್ಲಿ ಟ್ರಯಂಪ್ ಭಾರತ ಪ್ರವೇಶ ಪಡೆಯಲಿದೆ. ಇದು ಬೈಕ್ ಪ್ರಿಯರನ್ನು ಹೆಚ್ಚು ಖುಷಿಗೊಳಿಸಿದೆ.

ಈ ಹಿಂದೆ 2012ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಟ್ರಯಂಪ್ ಮೋಟಾರ್ ಸೈಕಲ್ ಮೊದಲ ಬಾರಿಗೆ ಅನಾವರಣಗೊಂಡಿತ್ತು. ಹಾಗಿದ್ದರೂ ಭಾರತ ಪ್ರವೇಶ ಮಾತ್ರ ಎರಡು ವರ್ಷಗಳಷ್ಟು ವಿಳಂಬವಾಗಿದೆ.

Bonneville

Bonneville

ಸಿಕೆಡಿ ಅಂದರೆ ಕಂಪ್ಲೀಟ್ ನೌಕ್ಡ್ ಡೌನ್ ಸಿದ್ಧಾಂತ ಮೂಖಾಂತರ ಟ್ರಯಂಪ್ ಬೈಕ್‌ಗಳು ಸಿದ್ಧಗೊಳ್ಳಲಿದೆ. ಇದು ದೇಶದ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರಗಳಲ್ಲಿ ಪ್ರವೇಶಿಸಲು ನೆರವಾಗಲಿದೆ.

Speed Triple

Speed Triple

ಸದ್ಯ ಮಾನೇಸರ್‌ನಲ್ಲಿರುವ ಸಣ್ಣ ಘಟಕದಲ್ಲಿ ಟ್ರಯಂಪ್ ಬೈಕ್‌ಗಳ ಉತ್ಪಾದನೆ ನಡೆಯಲಿದೆ. ಭಾರತದ ಗ್ರಾಹಕರಿಂದ ಲಭಿಸುವ ಪ್ರತಿಕ್ರಿಯೆ ಆಧಾರದ ಮೇಲೆ ಕಂಪನಿಯ ಮುಂದಿನ ಯೋಜನೆ ಅನುಷ್ಠಾನಗೊಳ್ಳಲಿದೆ.

Daytona 675

Daytona 675

ಇನ್ನೊಂದೆಡೆ ಸಮಕಾಲೀನ ಪರಿಸ್ಥಿತಿಯಲ್ಲಿ ರುಪಾಯಿ ಮೌಲ್ಯ ಕುಸಿದಿರುವುದು ಸಹ ಟ್ರಯಂಪ್ ಮಾಡೆಲ್‌ಗಳ ದರ ಏರಿಕೆಗೆ ಕಾರಣವಾಗಲಿದೆ. ಹರ್ಲಿ ಡೇವಿಡ್ಸನ್ ತರಹನೇ ಟ್ರಯಂಪ್ ಕೂಡಾ ಕಡಿಮೆ ಸ್ತರದ ಬೈಕ್‌ಗಳನ್ನು ಉತ್ಪಾದಿಸಲಿದೆ.

Tiger 800 XC

Tiger 800 XC

ನಿಮ್ಮ ಮಾಹಿತಿಗಾಗಿ, ನಮ್ಮ ಬೆಂಗಳೂರಿನ ಹೊರವಲಯದಲ್ಲಿರುವ ನರ್ಸಾಪುರ ಘಟಕದಲ್ಲೂ ಟ್ರಯಂಪ್ ಬೈಕ್‌ಗಳು ಭವಿಷ್ಯದಲ್ಲಿ ಸಿದ್ಧಗೊಳ್ಳಲಿದೆ. ಇದು ಟ್ರಯಂಪ್‌ನ ದಿರ್ಘಾವಧಿಯ ಯೋಜನೆಯಾಗಿದೆ.

Thundebird Storm

Thundebird Storm

ಅಂದ ಹಾಗೆ 2013 ಸಾಲು ಟ್ರಯಂಪ್ ಪಾಲಿಗೆ ನಿರ್ಣಾಯಕವೆನಿಸಲಿದೆ. ಇದು ದೇಶದ ಗ್ರಾಹಕರಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Rocket III

Rocket III

ಒಟ್ಟಿನಲ್ಲಿ ಗ್ರಾಹಕರಿಗೆ ಹಲವು ಬ್ರಾಂಡ್‌‍ಗಳ ಪರಿಚಯವಾಗುತ್ತಿರುವುದು ದೇಶದ ಮಾರುಕಟ್ಟೆ ದೃಷ್ಟಿಕೋನದಿಂದ ಉತ್ತಮ ಬೆಳವಣಿಗೆಯಾಗಿದೆ.

More from DriveSpark

Article Published On: Thursday, August 1, 2013, 14:15 [IST]
English summary
It's official. The British performance bike maker, Triumph Motorcycles will finally be setting up camp in India in November.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+