ಇಂಡಿಯಾ ಬೈಕ್ ವೀಕ್‌ನಲ್ಲಿ ಘರ್ಜಿಸಿದ ಟ್ರಯಂಪ್ ಟೈಗರ್
ದೇಶದ ನೆಚ್ಚಿನ ಪ್ರವಾಸಿ ತಾಣ ಗೋವಾದಲ್ಲಿ ಆಯೋಜನೆಯಾಗುತ್ತಿರುವ ಮೂರನೇ ಆವೃತ್ತಿಯ 2015 ಇಂಡಿಯಾ ಬೈಕ್ ವೀಕ್‌ನಲ್ಲಿ ಐಕಾನಿಕ್ ಟ್ರಯಂಪ್ ಬೈಕ್‌ಗಳು ಘರ್ಜಿಸಿವೆ.
ನಿಸ್ಸಂಶಯವಾಗಿಯೂ ನಮ್ಮ ಶೀರ್ಷಿಕೆಯಲ್ಲಿ ಘರ್ಜನೆ ಎಂದು ಉಲ್ಲೇಖಿಸಿರುವುದಕ್ಕೆ ಸಮಾನವಾಗಿವೇ ಇಂಡಿಯಾ ಬೈಕ್ ವೀಕ್‌ನಲ್ಲಿ ಟ್ರಯಂಪ್ ಬೈಕ್‌ಗಳು ರಾರಾಜಿಸಿವೆ.

2015 ಇಂಡಿಯಾ ಬೈಕ್ ವೀಕ್‌ನಲ್ಲಿ ಟ್ರಯಂಪ್ ಟೈಗರ್ ಎಕ್ಸ್‌ಸಿಎಕ್ಸ್ ಹಾಗೂ ಎಕ್ಸ್‌ಆರ್‌ಎಕ್ಸ್ ಅನಾವರಣಗೊಳಿಸಲಾಗಿದೆ.

ಎರಡು ಬೈಕ್‌ಗಳ ವ್ಯತ್ಯಾಸ ಏನೆಂದರೆ ಎಕ್ಸ್‌ಆರ್‌ಎಕ್ಸ್ ಅಲಾಯ್ ವೀಲ್ ಪಡೆದುಕೊಂಡರೆ ಎಕ್ಸ್‌ಸಿಎಕ್ಸ್ ಸ್ಪೋಕ್ ವೀಲ್ ಪಡೆಯಲಿದೆ.

ಇವೆರಡು ಆಫ್ ರೋಡ್ ಬೈಕ್‌ಗೆ ಹೊಂದಿಕೆಯಾಗುವ ರೀತಿಯಲ್ಲಿ ಗ್ರೌಂಡ್ ಕ್ಲಿಯರನ್ಸ್ ಪಡೆದುಕೊಂಡಿದೆ.

ಟೂರಿಂಗ್ ಬೈಕ್ ಉತ್ಸಾಹಿಗಳಿಗೆ ಇದೊಂದು ಉತ್ತಮ ಆಯ್ಕೆಯಾಗಲಿದ್ದು, ಎಬಿಎಸ್ ಹಾಗೂ ಡಿಸ್ಕ್ ಬ್ರೇಕ್‌ಗಳಂತಹ ಸೌಲಭ್ಯಗಳನ್ನು ಪಡೆದುಕೊಂಡಿದೆ.

3 ಸಿಲಿಂಡರ್ 800 ಸಿಸಿ ಎಂಜಿನ್‌ನಿಂದ ನಿಯಂತ್ರಿಸ್ಪಡುವ ಎಕ್ಸ್‌ಸಿಎಕ್ಸ್ ಹಾಗೂ ಎಕ್ಸ್‌ಆರ್‌ಎಕ್ಸ್ ಮಾದರಿಗಳು 79 ತಿರುಗುಬಲದಲ್ಲಿ 94 ಅಶ್ವಶಕ್ತಿ ಉತ್ಪಾದಿಸಲಿದೆ.

19 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿರುವ ಟ್ರಯಂಪ್ ಬೈಕ್, ಹಿಂದಿನ ಮಾದರಿಗಿಂತಲೂ ಹೆಚ್ಚು ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಇವೆರಡು ಮಾದರಿಗಳಲ್ಲದೆ 2015 ಇಂಡಿಯಾ ಬೈಕ್ ವೀಕ್‌ನಲ್ಲಿ ಇನ್ನು ಹತ್ತು ಹಲವಾರು ಟ್ರಯಂಪ್ ಸೂಪರ್ ಬೈಕ್‌ಗಳು ಪ್ರದರ್ಶನ ಕಂಡಿದ್ದವು.


Click it and Unblock the Notifications








