ಪ್ರಸಕ್ತ ಸಾಲಿನಲ್ಲೇ ವೆಸ್ಪಾದಿಂದ ಮಗದೊಂದು ಸ್ಕೂಟರ್ ಕೊಡುಗೆ
ಈಗಾಗಲೇ ವೆಸ್ಪಾ ಎಸ್ ಬಿಡುಗಡೆ ಮೂಲಕ ಭಾರಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ವೆಸ್ಪಾ, ಪ್ರಸಕ್ತ ಸಾಲಿನಲ್ಲೇ ದೇಶದ ಗ್ರಾಹಕರಿಗಾಗಿ ಮಗದೊಂದು ಸ್ಕೂಟರ್ ಕೊಡುಗೆ ನೀಡಲಿದೆ.
ವೆಸ್ಪಾ ಎಸ್ ಭರ್ಜರಿ ಲಾಂಚ್ - ಮುಂದಕ್ಕೆ ಓದಿರಿ
ವರದಿಗಳ ಪ್ರಕಾರ ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಪಿಯಾಜಿಯೊ, 2014 ಜೂನ್ ವೇಳೆಯಾಗುವಾಗ ನೂತನ ವೆಸ್ಪಾ 946 ಮಾದರಿಯನ್ನು ದೇಶಕ್ಕೆ ಪರಿಚಯಿಸಲಿದೆ.

ಸಮಕಾಲೀನ ಮಾರುಕಟ್ಟೆಯಲ್ಲಿ ಸ್ಕೂಟರ್ ವಿಭಾಗ ಅತಿ ಹೆಚ್ಚು ಬೇಡಿಕೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದನ್ನೇ ಗಮನ ಹರಿಸಿರುವ ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ತಮ್ಮ ತಮ್ಮ ಸ್ಕೂಟರ್ ಅವತರಣಿಕೆಗಳನ್ನು ಪರಿಚಯಿಸುವುದರಲ್ಲಿ ಮಗ್ನವಾಗಿದೆ.

ಈ ನಡುವೆ ಪ್ರೀಮಿಯಂ ಸ್ಕೂಟರ್ ವಿಭಾಗದಲ್ಲಿ ತನ್ನದೇ ಆದ ಸ್ಥಾನಮಾನ ಸಾಬೀತುಪಡಿಸಿರುವ ವೆಸ್ಪಾ, ಸ್ಥಿರವಾದ ವೃದ್ಧಿ ದರ ದಾಖಲಿಸುವುದಲ್ಲದೆ ನೂತನ ಮಾದರಿಗಳನ್ನು ಪ್ರದರ್ಶಿಸುವುದರಲ್ಲಿ ತಲ್ಲೀನವಾಗಿದೆ.

ವೆಸ್ಪಾ ವಿಎಕ್ಸ್/ವಿಎಕ್ಸ್ 125 ಬಳಿಕ ರು. 75,424ಗಳಷ್ಟು (ಮುಂಬೈ ಎಕ್ಸ್ ಶೋ ರೂಂ) ಬೆಲೆಬಾಳುವ ವೆಸ್ಪಾ ಎಸ್ ಸ್ಕೂಟರನ್ನು ಕಳೆದ ವಾರವಷ್ಟೇ ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಇದೀಗ ಈ ಸಾಲಿಗೆ ಮಗದೊಂದು ಸ್ಕೂಟರ್ ಸೇರ್ಪಡೆಯಾಗಲಿದೆ.

ವರದಿಗಳ ಪ್ರಕಾರ ಮುಂದಿನ ಮೂರು ತಿಂಗಳೊಳಗೆ ವೆಸ್ಪಾ 946 ವಿತರಕರ ಬಳಿ ತಲುಪಲಿದೆ. ಕಂಪ್ಲೀಟ್ ಬಿಲ್ಡ್ ಮುಖಾಂತರ ಮಾರುಕಟ್ಟೆ ತಲುಪಲಿರುವ ವೆಸ್ಪಾ 946, 8 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

ಇದು ವೆಸ್ಪಾದಿಂದ ದೇಶಕ್ಕೆ ಆಗಮನವಾಗಲಿರುವ ಅತಿ ದುಬಾರಿ ಸ್ಕೂಟರ್ ಎನಿಸಿಕೊಳ್ಳಲಿದೆ. ಇನ್ನೊಂದೆಡೆ ವೆಸ್ಪಾ ಮಾತೃಸಂಸ್ಥೆಯಾಗಿರುವ ಪಿಯಾಜಿಯೊ ಇನ್ನಷ್ಟು ಆಕ್ರಮಣಕಾರಿ ಮಾರಾಟ ಯೋಜನೆ ಹೊಂದಿದ್ದು, ವಿವಿಧ ಶೈಲಿಯ ಸ್ಕೂಟರುಗಳನ್ನು ಪರಿಚಯಿಸುವ ಇರಾದೆ ಹೊಂದಿದೆ.

ಇವುಗಳೆಲ್ಲವೂ 300 ಸಿಸಿಯಿಂದ ಆರಂಭವಾಗಿ 400 ಸಿಸಿ ವರೆಗಿರಲಿದೆ. ಅಂದರೆ ಎಲ್ಲವೂ ಪವರ್‌ಫುಲ್ ಸ್ಕೂಟರ್ ಆಗಿರಲಿದೆ. ಅಲ್ಲದೆ 125 ಸಿಸಿ ದೊಡ್ಡ ಚಕ್ರದ (14 ಇಂಚು) ಲಿಬರ್ಟಿ ಸ್ಕೂಟರನ್ನು ಕಳೆದ ಆಟೋ ಎಕ್ಸ್ ಪೋದಲ್ಲಿ ಪರಿಚಯಿಸಲಾಗಿತ್ತು.


Click it and Unblock the Notifications








