ಸ್ಟೈಲಿಷ್ ವೆಸ್ಪಾ ಎಲೆಗಂಟ್ ಸ್ಕೂಟರ್ ಬಿಡುಗಡೆ
ಕೆಲವು ದಿನಗಳ ಹಿಂದೆಯಷ್ಟೇ ಅನಾವರಣಗೊಳಿಸಿದ್ದ ಹೊಸತಾದ ಎಲೆಗಂಟ್ ಸ್ಕೂಟರನ್ನು ಭಾರತ ಮಾರುಕಟ್ಟೆಗೆ ವೆಸ್ಪಾ ಇಂಡಿಯಾ ಸಂಸ್ಥೆಯು ಬಿಡುಗಡೆಗೊಳಿಸಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 78,999 ರು.ಗಳಾಗಿರಲಿದೆ.
ಈ ಮೊದಲೇ ತಿಳಿಸಿರುವಂತೆಯೇ ಹಬ್ಬದ ಆವೃತ್ತಿಯನ್ನು ಮನಗಂಡಿರುವ ಸಂಸ್ಥೆಯು ವೆಸ್ಪಾ ಎಲೆಗಂಟ್ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಮೂಲತ: ವಿಎಕ್ಸ್ ತಲಹದಿಯಲ್ಲಿ ನಿರ್ಮಾಣವಾಗಿರುವ ವೆಸ್ಪಾ ಎಲೆಗಂಟ್ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ.

ಹೊಸತಾದ ಕ್ರೋಮ್ ಗ್ರಿಲ್, ಕ್ರೋಮ್ ಗಾರ್ಡ್ ಕಿಟ್, ಫ್ರಂಟ್ ಬಂಪರ್ ಗಾರ್ಡ್, ಬಣ್ಣ ಹೊಂದಿಕೆಯ ಲೆಥರ್ ಫಿನಿಶ್ಡ್ ಟ್ವಿನ್ ಸೀಟು, ಸೀಮಿತ ಆವೃತ್ತಿಯ ಎಲೆಗಂಟ್ ಬ್ಯಾಡ್ಜ್ ಮತ್ತು ಬಣ್ಣ ಹೊಂದಿಕೆಯ ಹೆಲ್ಮೆಟ್ ಮುಂತಾದ ಇನ್ನಿತರ ಸೌಲಭ್ಯಗಳನ್ನು ಹೊಸ ಸ್ಕೂಟರ್ ಹೊಂದಿರಲಿದೆ.

ವಿಎಕ್ಸ್ ಮಾದರಿಗೆ ಸಮಾನವಾದ ಎಂಜಿನ್ ಮಾದರಿಗಳನ್ನು ವೆಸ್ಪಾ ಎಲೆಗಂಟ್ ಪಡೆದುಕೊಂಡಿದೆ. ಇದು ತ್ರಿ ವಾಲ್ವ್ 125 ಸಿಸಿ ಎಂಜಿನ್ ಪಡೆದುಕೊಂಡಿದ್ದು, 10.06 ಅಶ್ವಶಕ್ತಿ (10.60 ಎನ್‌ಎಂ ಟಾರ್ಕ್) ಹೊಂದಿರಲಿದೆ. ಅಲ್ಲದೆ ವೆರಿಯೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇದರಲ್ಲಿರಲಿದೆ.

ಸಂಸ್ಥೆಯ ಪ್ರಕಾರ ವೆಸ್ಪಾ ಎಲೆಗಂಟ್ ಅತ್ಯುತ್ತಮ ಇಂಧನ ಕ್ಷಮತೆಯನ್ನು ನೀಡಲಿದ್ದು, ಪ್ರತಿ ಲೀಟರ್‌ಗೆ 60 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ವಿಶಿಷ್ಟತೆಗಳು
ಬೀಜ್ ಮೆರಗಿನ ವಿಭಜಿತ ಸೀಟು,
ಹಿಂದುಗಡೆ ಕ್ರೋಮ್ ಸ್ಪರ್ಶದ ಸಹ ಸವಾರ ಗ್ರಾಬ್ ರೈಲ್,
ಎಲೆಗಂಟ್ ಬ್ಯಾಡ್ಜ್
ಲಗ್ಗೇಜ್‌ಗಾಗಿ ಮುಂದುಗಡೆ ಮಡಚಬಹುದಾದ ಕ್ಯಾರಿಯರ್
ವಿಶೇಷ ಬಣ್ಣಗಳು (ಪಿಯರ್ಲ್ ವೈಟ್, ಮರಕೆಖ್ ಬ್ರೌನ್)
ವೃತ್ತಾಕಾರದ ಹೆಡ್ ಲೈಟ್,
ಟ್ಯೂಬ್‌ಲೆಸ್ ಚಕ್ರಗಳು

ಒಟ್ಟಿನಲ್ಲಿ ಇದು ದೇಶಕ್ಕೆ ಪರಿಚಯವಾಗುತ್ತಿರುವ ಐದನೇ ಹಾಗೂ ಎರಡನೇ ವೆಸ್ಪಾ ಸೀಮಿತ ಆವೃತ್ತಿಯ ಸ್ಕೂಟರ್ ಆಗಿರಲಿದೆ. ಇದುವರೆಗೆ ವೆಸ್ಪಾ ಎಲ್‌ಎಕ್ಸ್, ವೆಸ್ಪಾ ವಿಎಕ್ಸ್, ವೆಸ್ಪಾ ಎಸ್ ಮತ್ತು ವೆಸ್ಪಾ ಎಕ್ಸ್‌ಕ್ಲೂಸಿವ್ ಸೀಮಿತ ಆವೃತ್ತಿಯ ಸ್ಕೂಟರುಗಳನ್ನು ಬಿಡುಗಡೆ ಮಾಡಲಾಗಿದೆ.


Click it and Unblock the Notifications








