ಭಾರತಕ್ಕೆ ವೆಸ್ಪಾ ಎಸ್ ಆಗಮನ ಖಚಿತ
ನಿಧಾನವಾಗಿ ಭಾರತದಲ್ಲಿನ ತನ್ನ ಸಾನಿಧ್ಯ ಬಲಪಡಿಸುತ್ತಿರುವ ಇಟಲಿ ಮೂದಲ ಐಕಾನಿಕ್ ಸ್ಕೂಟರ್ ತಯಾರಕ ಕಂಪನಿಯಾಗಿರುವ ಪಿಯಾಜಿಯೊ, ಮತ್ತೊಂದು ವೆಸ್ಪಾ ಬ್ರಾಂಡ್ ದೇಶಕ್ಕೆ ಪರಿಚಯಿಸಲು ಯೋಜನೆ ಹೊಂದಿದೆ.
ಇದಕ್ಕೆ ನೂತನ ಸೇರ್ಪಡೆಯೆಂಬಂತೆ 'ವೆಸ್ಪಾ ಎಸ್' ಭಾರತ ಆಗಮನವನ್ನು ಕಂಪನಿ ಖಚಿತಪಡಿಸಿದೆ. ಕಳೆದ ವರ್ಷವಷ್ಟೇ ಎಲ್‌ಎಕ್ಸ್125 ಮೂಲಕ ಭಾರತಕ್ಕೆ ಕಾಲಿರಿಸಿದ್ದ ಪಿಯಾಜಿಯೊ ಇತ್ತೀಚೆಗಷ್ಟೇ ವಿಎಕ್ಸ್125 ದೇಶಕ್ಕೆ ಪರಿಚಯಿಸಿತ್ತು.
ಇದರ ಯಶಸ್ಸಿನ ಬಳಿಕ ನಿಕಟ ಭವಿಷ್ಯದಲ್ಲೇ ವೆಸ್ಪಾ 946 ಎಂಟ್ರಿ ಕೊಡುವುದಾಗಿ ಕಂಪನಿ ಘೋಷಿಸಿತ್ತು. ಇದೀಗ ವೆಸ್ಪಾ ಎಸ್ ಕೂಡಾ ಪ್ರಸಕ್ತ ಸಾಲಿನಲ್ಲಿ ಆಗಮನವಾಗುವುದಾಗಿ ಕಂಪನಿ ತಿಳಿಸಿದೆ.

ವೆಸ್ಪಾ ಎಸ್
ಎಲ್‌ಎಕ್ಸ್ ಹಾಗೂ ವಿಕ್ಸ್ 125 ಮಾಡೆಲ್ ದರಗಳ ಅಸುಪಾಸಿನಲ್ಲೇ ವೆಸ್ಪಾ ಎಸ್ ಆಗಮನವಾಗಲಿದೆ.

ವೆಸ್ಪಾ ಎಸ್
ವೆಸ್ಪಾ ಎಸ್ ಆವೃತ್ತಿ ಎಲ್‌ಎಕ್ಸ್125 ಮೂಲ ವಿನ್ಯಾಸ ಪಡೆದುಕೊಂಡಿದ್ದರೂ, ಆಯತಕಾರದ ಹೆಡ್‌ಲೈಟ್ ಕ್ಲಾಸಿಕ್ ವಿನ್ಯಾಸವನ್ನು ಪ್ರಸ್ತುತಪಡಿಸುತ್ತಿದೆ.

ವೆಸ್ಪಾ ಎಸ್
ಎಲ್‌ಎಕ್ಸ್125 ಮಾಡೆಲ್‌ನಲ್ಲಿ ಬಳಸಲಾಗಿರುವ 125 ಸಿಸಿ ಸಮಾನವಾದ ಎಂಜಿನ್ ಆಳವಡಿಸಲಾಗುವುದು.

ವೆಸ್ಪಾ ಎಸ್
ಸಣ್ಣ ಆಕಾರವನ್ನು ಹೊಂದಿರುವುದರಿಂದ ಹೆಣ್ಮಕ್ಕಳಿಗೆ ಹೆಚ್ಚು ಹೊಂದಿಕೆಯಾಗಲಿದೆ.

ವೆಸ್ಪಾ ಎಸ್
ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿ ವೆಸ್ಪಾ ಸ್ಕೂಟರ್‌ಗಳಿಗೆ ಉತ್ತಮ ಬೇಡಿಕೆಯಿದೆ.

ವೆಸ್ಪಾ ಎಸ್
ಇದೀಗ ನಿಮ್ಮ ನೆಚ್ಚಿನ ಸ್ಕೂಟರ್ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿರಿ...


Click it and Unblock the Notifications








