ಮಾರ್ಚ್ 4; ವೆಸ್ಪಾ ಎಸ್ ಅಧಿಕೃತ ಲಾಂಚ್ ಖಚಿತ
2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ವೆಸ್ಪಾ ಎಸ್ (ಸ್ಪೋರ್ಟ್) ಇದೇ ಮುಂಬರುವ ಮಾರ್ಚ್ 4ರಂದು ಅಧಿಕೃತ ಲಾಂಚ್ ಆಗಲಿದೆ ಎಂದು ಕಂಪನಿ ಮೂಲಗಳು ಖಚಿತಪಡಿಸಿವೆ. ಇಟಲಿಯ ಪಿಯಾಜಿಯೊ ವಾಹನ ತಯಾರಕ ಸಂಸ್ಥೆಯ ದ್ವಿಚಕ್ರ ಬ್ರಾಂಡ್ ಆಗಿರುವ ವೆಸ್ಪಾ ದೇಶಕ್ಕೆ ಎರಡನೇ ಸ್ಕೂಟರ್ ಪರಿಚಯಿಸುತ್ತಿದೆ.
2014 ಆಟೋ ಎಕ್ಸ್ ಪೋ
ಇದು ವೆಸ್ಪಾ ವಿಎಕ್ಸ್ 125ಗಿಂತ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ. ವೆಸ್ಪಾ ವಿಎಕ್ಸ್ 125 ದೆಹಲಿ ಎಕ್ಸ್ ಶೋ ರೂಂ ದರ 71,380 ರು.ಗಳಾಗಿವೆ. ಅಂದರೆ ನೂತನ ವೆಸ್ಪಾ ಎಸ್ ಇದಕ್ಕಿಂತಲೂ ನಾಲ್ಕು ಸಾವಿರ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

ಮುಂದುಗಡೆಯಿಂದ ಆಯಾತಾಕೃತಿಯ ಹೆಡ್‌ಲೈಟ್ ಹಾಗೂ ಕನ್ನಡಿ ನೂತನ ವೆಸ್ಪಾದ ಪ್ರಮುಖ ಆಕರ್ಷಣೆಯಾಗಿರಲಿದೆ. ಹಾಗೆಯೇ ಕಪ್ಪು ವರ್ಣದ ಅಲಾಯ್ ವೀಲ್ ಲಭ್ಯವಿರಲಿದೆ.

ಅಂತೆಯೇ ಎಕ್ಸ್ ಹಾಗೂ ವಿಎಕ್ಸ್ ಮಾದರಿಗಳಲ್ಲಿ ಕಂಡುಬಂದಿರುವುದಕ್ಕಿಂತಲೂ ವಿಭಿನ್ನವಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕೂಡಾ ಲಗತ್ತಿಸಲಾಗಿದೆ.

ಸಂಸ್ಥೆಯ ಪ್ರಕಾರ ಹೆಚ್ಚು ಆರಾಮದಾಯಕ ಸೀಟುಗಳು ವೆಸ್ಪಾ ಎಸ್‌ನಲ್ಲಿ ನಿಮಗೆ ಕಾಣಸಿಗಬಹುದು.

ಅಂದ ಹಾಗೆ ನೂತನ ಪಿಯಾಜಿಯೊ ವೆಸ್ಪಾ ಎಸ್ ಪ್ರೀಮಿಯಂ ಸ್ಕೂಟರ್, 125 ಸಿಸಿ, 3ವಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 10.06 ಪಿಎಸ್ ಪವರ್ (10.6 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಕಲರ್ ವೆರಿಯಂಟ್ ಇಂತಿದೆ:
ಕೇಸರಿ,
ಮ್ಯಾಟ್ ಬ್ಲ್ಯಾಕ್,
ಬಿಳಿ,
ಕೆಂಪು


Click it and Unblock the Notifications








