ಬಹುನಿರೀಕ್ಷಿತ ವೆಸ್ಪಾ ಎಸ್ ಭಾರತದಲ್ಲಿ ಭರ್ಜರಿ ಲಾಂಚ್
ಹೆಣ್ಮಕ್ಕಳ ಫೇವರಿಟ್ ಬಹುನಿರೀಕ್ಷಿತ 'ವೆಸ್ಪಾ ಎಸ್' ಭಾರತದಲ್ಲಿ ಭರ್ಜರಿ ಲಾಂಚ್ ಆಗಿದೆ. ಇಟಲಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ಪಿಯಾಜಿಯೊ ವೆಸ್ಪಾ ಎಸ್ ಪ್ರೀಮಿಯಂ ಸ್ಕೂಟರ್ ಬ್ರಾಂಡ್ ಅನ್ನು ಭಾರತಕ್ಕೆ ಪರಿಚಯಿಸಿದೆ. ಈ ಸಂದರ್ಭದಲ್ಲಿ ಬಾಲಿವುಡ್ ನಟ ಇಮ್ರಾನ್ ಖಾನ್ ಪ್ರಮುಖ ಆಕರ್ಷಣೆಯಾಗಿದ್ದರು.
ಈ ಮೊದಲು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ವೆಸ್ಪಾ ಎಸ್, ಭಾರತಕ್ಕೆ ಇಟಲಿಯ ಈ ವಾಹನ ತಯಾರಕ ಸಂಸ್ಥೆಯಿಂದ ಆಗಮನವಾಗುತ್ತಿರುವ ಎರಡನೇ ಸ್ಕೂಟರ್ ಮಾದರಿ ಆಗಿದೆ.

ವೆಸ್ಪಾ ಎಲ್‌ಎಕ್ಸ್ ಹಾಗೂ ವಿಎಕ್ಸ್ ವೆರಿಯಂಟ್‌ಗಿಂತಲೂ ಭಿನ್ನ ವಾಗಿರುವ ವೆಸ್ಪಾ ಎಸ್‌ನಲ್ಲಿ ಎಸ್ ಎಂಬುದು ಸ್ಪೋರ್ಟ್ಸ್ ಎಂಬುದನ್ನು ಸಾರುತ್ತದೆ. ಇದರ ಪ್ರಾರಂಭಿಕ ದರ 75,424 ರು.ಗಳಾಗಿರಲಿದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು ವೆಸ್ಪಾ ಎಲ್‌ಎಖ್ಸ್ ಮತ್ತು ವಿಎಕ್ಸ್ ಮಾದರಿಗಳಿಗೆ ಸಮಾನವಾದ 125 ಸಿಸಿ ಎಂಜಿನ್ ಪಡೆದುಕೊಳ್ಳಲಿದೆ. ಇದು 10.06 ಬಿಎಚ್‌ಪಿ (10.59 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಇದು ಫ್ರಂಟ್ ಡಿಸ್ಕ್ ಬ್ರೇಕ್ ಹಾಗೂ ರಿಯರ್ ಡ್ರಮ್ ಬ್ರೇಕ್ ಪಡೆದುಕೊಂಡಿದೆ. ಅಲ್ಲದೆ ಕಪ್ಪು ಹೋದಿಕೆಯ ಅಲಾಯ್ ವೀಲ್ ಇದರಲ್ಲಿರಲಿದೆ.

ಆದರೆ ನೂತನ ವೆಸ್ಪಾ ಎಸ್ ಮಾದರಿಯಲ್ಲಿ ಆಯಾತಾಕೃತಿಯ ಹೆಡ್‌ಲ್ಯಾಂಪ್ ಮತ್ತು ರಿಯರ್ ವ್ಯೂ ಮಿರರ್ ಕಾಣಸಿಗಬಹುದಾಗಿದೆ. ಇದು ಎರಡು ಆವೃತ್ತಿಗಳನ್ನು ಭಿನ್ನವಾಗಿಸಲಿದೆ.

ಹೊಸತಾದ ಸೀಟು ಪ್ರೀಮಿಯಂ ಲುಕ್ ನೀಡುತ್ತಿದ್ದು, ಹೆಚ್ಚು ಆರಾಮದಾಯಕ ಪಯಣ ಖಾತ್ರಿಪಡಿಸಲಿದೆ.

ಇನ್ನು ವೆಸ್ಪಾ ಸಾಂಪ್ರದಾಯಕತೆ ಪ್ರತೀಕವಾಗಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಅನಲಾಗ್ ಸ್ಪೀಡೋಮೀಟರ್ ಲಗತ್ತಿಸಲಾಗಿದೆ.

ದರ ಮಾಹಿತಿ - ಎಕ್ಸ್ ಶೋ ರೂಂ
ದೆಹಲಿ - ರು. 75,424
ಪುಣೆ - ರು. 74,414
ಮುಂಬೈ - ರು. 76,495

ಕಲರ್ ವೆರಿಯಂಟ್
ಕೇಸರಿ,
ಕೆಂಪು,
ಮ್ಯಾಟ್ ಬ್ಲ್ಯಾಕ್,
ಬಿಳಿ


Click it and Unblock the Notifications








