ಜಗತ್ತಿನ ಅತ್ಯಂತ ವೇಗದ ಎಲೆಕ್ಟ್ರಿಕ್ ಕ್ರೂಸರ್ ಬೈಕ್
ನೀವು ಹಲವು ವಿಧದ ಕ್ರೂಸರ್ ಬೈಕ್‌ಗಳ ಬಗ್ಗೆ ಕೇಳಿರುತ್ತೀರಾ? ಆದರೆ ಕೇವಲ ನಾಲ್ಕೈದು ಸೆಕೆಂಡುಗಳಲ್ಲಿ ಗಂಟೆಗೆ 150 ಕೀ.ಮೀ.ಗಿಂತಲೂ ಹೆಚ್ಚು ವೇಗವರ್ಧಿಸುವ ಕ್ರೂಸರ್ ಬೈಕ್‌ಗಳ ಬಗ್ಗೆ ತಿಳಿದುಕೊಂಡಿದ್ದೀರಾ?
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಹೌದು ನಾವು ಪರಿಚಯಿಸುವ ವೋಕ್ಸನ್ ವ್ಯಾಟ್‌ಮ್ಯಾನ್ (Voxan Wattman) ವಿದ್ಯುತ್ ಚಾಲಿತ ಕ್ರೂಸರ್ ಬೈಕ್ ಕೇವಲ 5.9 ಸೆಕೆಂಡುಗಳಲ್ಲಿ ಗಂಟೆಗೆ 0-160 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.
ಸಾಮಾನ್ಯವಾಗಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ವೇಗತೆಯಲ್ಲಿ ಚಲಿಸುವಲ್ಲಿ ಎಡವುತ್ತದೆ. ಅದೇ ಅಂತಹ ವಾಹನಗಳ ವೈಫಲ್ಯಕ್ಕೆ ಎಡೆ ಮಾಡಿಕೊಡುತ್ತದೆ. ಆದರೆ ಇವೆಲ್ಲಕ್ಕಿಂತಲೂ ವಿಭಿನ್ನವಾಗಿರು ವೋಕ್ಸನ್ ವ್ಯಾಟ್‌ವ್ಯಾನ್ ವಾಹನ ಪ್ರಿಯರಲ್ಲಿ ಹೆಚ್ಚು ಕುತೂಹಲ ಮನೆ ಮಾಡುವಂತೆ ಮಾಡಿದೆ.

ಫ್ರಾನ್ಸ್‌ನ ವೋಕ್ಸನ್ ಮೋಟಾರ್ಸ್ ಸಂಸ್ಥೆಯು ಈ ಅತ್ಯಾಕರ್ಷಕ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ತಯಾರಿಸಿದೆ. ಇದು ಭವಿಷ್ಯದ ಸಂಚಾರ ವಾಹಕಕ್ಕೆ ಉತ್ತಮ ಬದಲಿ ಆಯ್ಕೆಯಾಗಿರಲಿದೆ.

ಸಾಮಾನ್ಯ ಬೈಕ್‌ಗಳನ್ನು ಹೋಲಿಸಿದರೆ ವ್ಯಾಟ್‌ವ್ಯಾನ್ ವಿನ್ಯಾಸ ತುಂಬಾನೇ ವಿನ್ಯಾಸವಾಗಿದೆ. ಇದರ ಮೋಟಾರು ಎಂಜಿನ್ ಇಡೀ ದೇಹವನ್ನೇ ಆವರಿಸಿಕೊಂಡಿದೆ. ಇದು ಬೈಕ್‌ಗೆ ವಿಶಿಷ್ಟ ಸ್ವರೂಪ ಕಲ್ಪಿಸುವುದರಲ್ಲಿ ನೆರವಾಗಿದೆ.

ಇದರ ಹೆಡ್‌ಲೈಟ್, ಆಸನ ವ್ಯವಸ್ಥೆ ಹಾಗೂ ಹ್ಯಾಂಡ್ಲಿಂಗ್ ಸಹ ತನ್ನದೇ ಆದ ಯೂನಿಕ್ ವಿನ್ಯಾಸವನ್ನು ಕಾಪಾಡಿಕೊಂಡು ಬಂದಿದೆ.

ವೋಕ್ಸನ್ ವ್ಯಾಟ್‌ಮ್ಯಾನ್ ಬೈಕ್ ಸೂತ್ರಧಾರಿ ಸಾಚಾ ಲಾಕಿಕ್ ಪ್ರಕಾರ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬ್ಯಾಟರಿಯು ಬೈಕ್‌ನ ಸಂಕೇತವಾಗಿದೆ.

ಇನ್ನು ಕೇವಲ 30 ನಿಮಿಷಗಳೊಳಗೆ ಶೇಕಡಾ ಚಾರ್ಜಿಂಗ್ ಮಾಡಿಸುವ ಶಕ್ತಿ ಹೊಂದಿದೆ. ಇದರಲ್ಲಿ ಯುರೋಪ್‌ನ ತ್ವರಿತ ಚಾರ್ಜಿಂಗ್ ಆದ ಕೊಂಬೊ II (COMBO II) ಸಾಕೆಟ್ ಆಳವಡಿಸಲಾಗಿದೆ.

ಅಷ್ಟೇ ಅಲ್ಲದೆ ಮನೆಯಲ್ಲಿ ಲಭ್ಯವಾಗುವಂತಹ ಸಾಕೆಟ್ ಸೌಲಭ್ಯ ಕೂಡಾ ಕೊಡಲಾಗಿದೆ. ಹಾಗೆಯೇ 12.8 ಕೆಡಬ್ಲ್ಯುಎಚ್ ಅಲ್ಟ್ರಾ ಕಾಂಪಾಕ್ಟ್ ಬ್ಯಾಟರಿ 180 ಕೀ.ಮೀ. ರೇಂಜ್ ವರೆಗೂ ಚಲಿಸಲು ನೆರವಾಗಲಿದೆ.

ಪ್ರಸ್ತುತ ಬೈಕ್ ವೋಕ್ಸ್ನ್‌ನ ಫ್ರಾನ್ಸ್‌ನ ಸೋಲ್ಸ್‌ಮೆಸ್ ಎಲೆಕ್ಟ್ರಿಕ್ ವಾಹನ ತಯಾರಕ ಘಟಕದಲ್ಲಿ ಬೇಡಿಕೆಗೆ ಅನುಸಾರವಾಗಿ ಉತ್ಪಾದನೆಯಾಗಲಿದೆ.


Click it and Unblock the Notifications








