ಯಮಹಾ ಆಲ್ಫಾ ಸ್ಕೂಟರ್‌ಗೆ ಬೆಂಗಳೂರಿನಲ್ಲಿ ಭಾರಿ ಬೇಡಿಕೆ

By Nagaraja

ಯಮಹಾ ಮೋಟಾರ್ ಇಂಡಿಯಾ ಸೇಲ್ಸ್ ಲಿಮಿಟೆಡ್ ಸಂಸ್ಥೆಯು 113 ಸಿಸಿ ಸಾಮರ್ಥ್ಯದ ಕೌಟುಂಬಿಕ ಸ್ಕೂಟರ್ ಆಲ್ಫಾದ ಯಶಸ್ಸು ಆಚರಿಸಲು ಬೆಂಗಳೂರಿನಲ್ಲಿ ವಿಶಿಷ್ಟ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಬೆಂಗಳೂರಿನಲ್ಲಿ 10 ದಿನದ ಅವಧಿಯಲ್ಲಿ ಒಟ್ಟು 500 ಸ್ಕೂಟರ್‍ ಳನ್ನು ಮಾರಾಟ ಮಾಡಿದ ಸಂಭ್ರಮದ ಆಚರಣೆಗಾಗಿ ಇದನ್ನು ಆಯೋಜಿಸಲಾಗಿತ್ತು. ಇದಲ್ಲದೆ ಹೆಚ್ಚುವರಿಯಾಗಿ 3,000 ಆಲ್ಫಾ ಸ್ಕೂಟರಿಗಳಿಗಾಗಿ ಗ್ರಾಹಕರು ಬುಕ್ಕಿಂಗ್ ಮಾಡಿದ್ದು, ಬಿಡುಗಡೆಯಾದ ಒಂದು ತಿಂಗಳಲ್ಲೇ ಇಂಥಹದೊಂದು ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಯಮಹಾ 113 ಸಿಸಿ ಆಲ್ಫಾ ಸ್ಕೂಟರ್ ಲಾಂಚ್

ಆರಿಯನ್ ಮಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿಸ್ ಇಂಡಿಯಾ ಅರ್ಥ್ 2013 ಹಾಗೂ ಕಿಂಗ್‍ಫಿಶರ್ ಕ್ಯಾಲೆಂಡರ್‍ ಸೂಪರ್ ಮಾಡೆಲ್ ಶೋಭಿತಾ ದುಲ್ಪಿವಾಲಾ ಮತ್ತು ಯಮಹಾ ಮೋಟಾರ್ ಇಂಡಿಯಾ ಸೇಲ್ಸ್‌ನ ಉಪಾಧ್ಯಕ್ಷ ರಾಯ್ ಕುರಿಯನ್ ಅವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಹಕರು ಕೊಡುಗೆಗಳನ್ನು ಪಡೆದು ಸಂಭ್ರಮಿಸಿದರು. ಎಲ್ಲ ಗ್ರಾಹಕರಿಗೂ ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಯಮಹಾ ಮರ್ಚೈಂಡೈಸ್, ಮೂವಿ ಟಿಕೆಟ್‍ಗಳು ಮತ್ತು ಆಲ್ಫಾ ಸ್ಕೂಟರ್ ಸೇರಿ ವಿವಿಧ ಬಹುಮಾನಗಳಿದ್ದವು. ಇದನ್ನು ಎಲ್ಲ ವಯೋಮಾನದ ಗ್ರಾಹಕರ ಜೊತೆಗೆ ನಿಕಟ ಸಂಬಂಧ ಹೊಂದಲು ಆಯೋಜಿಸಲಾಗಿತ್ತು. ಯಮಹಾದ ಮಸ್ಕಟ್ ಜಿಪ್ಪಿ ಕೂಡಾ ಮಕ್ಕಳ ಜೊತೆಗೆ ಸುತ್ತಾಡಿ ಸಂಭ್ರಮ ಹೆಚ್ಚಿಸಿತು. ರಿಚರ್ಡ್ ಲೂಯಿಸ್ ಮತ್ತು ಕಿರ್ಲೋಸ್ಕರ್ ಸತ್ಯ ಅವರ ಹಾಸ್ಯ ಭಾಷಣದ ಜೊತೆಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಯಮಹಾ ಆಲ್ಫಾ ಸ್ಕೂಟರ್‌ಗೆ ಬೆಂಗಳೂರಿನಲ್ಲಿ ಭಾರಿ ಬೇಡಿಕೆ

ಈ ಸಂದರ್ಭದಲ್ಲಿ ಮಾತನಾಡಿದ ಯಮಹಾ ಮೋಟಾರ್ ಇಂಡಿಯಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್‍ನ ಉಪಾಧ್ಯಕ್ಷ ರಾಯ್ ಕುರಿಯನ್ ಅವರು, ಭಾರತದಲ್ಲಿನ ಅತಿದೊಡ್ಡ ದ್ವಿಚಕ್ರ ವಾಹನಗಳ ಮಾರುಕಟ್ಟೆಯಾಗಿ ಬೆಂಗಳೂರು ಸಂಸ್ಥೆಯ ದೃಷ್ಟಿಯಿಂದ ಮುಖ್ಯವಾದ ಸ್ಥಾನ ಹೊಂದಿದೆ. ಸ್ಥಳೀಯ ವಿತರಕರಿಗೂ ನಾವು ಕೃತಜ್ಞತೆ ಸಲ್ಲಿಸಲು ಬಯಸುತ್ತೇವೆ. ಅವರ ಸಹಕಾರವಿಲ್ಲದೇ ಯಶಸ್ಸು ಸಾಧಿಸುವುದು ಕಷ್ಟ. ಹೆಚ್ಚುವರಿ ಬುಕ್ಕಿಂಗ್ ಗ್ರಾಹಕರು ಯಮಹಾ ಮೇಲೆ ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ. ಪ್ರಸ್ತುತ ದಕ್ಷಿಣ ಭಾಗದಲ್ಲಿ 120 ಅಧಿಕೃತ ವಿತರಕರನ್ನು ಹೊಂದಿದ್ದು, ಕರ್ನಾಟಕದಲ್ಲಿ 25 ಮಂದಿ ವಿತರಕರು ಇದ್ದಾರೆ. ಭವಿಷ್ಯದಲ್ಲಿ ದಕ್ಷಿಣ ಭಾಗದಲ್ಲಿ ನಮ್ಮ ವಿತರಕರ ಜಾಲವವನ್ನು 130ಕ್ಕೆ ಏರಿಸಲು ಬಯಸಿದ್ದೇವೆ. ಇದರೊಂದಿಗೆ ವಿಶ್ವದರ್ಜೆಯ ಗುಣಮಟ್ಟದ ಉತ್ಪನ್ನಗಳು, ಮಾರಾಟ ನಂತರದ ಉತ್ತಮ ಸೇವೆ, ಯಮಹಾದ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದರು.

ಯಮಹಾ ಆಲ್ಫಾ ಸ್ಕೂಟರ್‌ಗೆ ಬೆಂಗಳೂರಿನಲ್ಲಿ ಭಾರಿ ಬೇಡಿಕೆ

ಯಮಹಾ ಭಾರತದ ಸ್ಕೂಟರ್ ಮಾರುಕಟ್ಟೆಯನ್ನು 2012ರಲ್ಲಿ ಪ್ರವೇಶಿಸಿದ್ದು, ಮಹಳೆಯರಿಗಾಗಿ ರೂಪಿಸಿದ ರೇ ವಾಹನ ಬಿಡುಗಡೆ ಮಾಡಿತ್ತು. ನಂತರ 20013ರಲ್ಲಿ ಪುರುಷರನ್ನು ಗುರಿಯಾಗಿಸಿಕೊಂಡು ರೇ ಝಡ್ ಬಿಡುಗೆಯಾಯಿತು. ಎರಡೂ ಮಾದರಿಗಳಲ್ಲಿ 2013ರ ಅಂತ್ಯದ ವೇಳೆಗೆ ಒಟ್ಟು 150,000 ವಾಹನ ಮಾರಾಟವಾಗಿತ್ತು.

ಯಮಹಾ ಆಲ್ಫಾ ಸ್ಕೂಟರ್‌ಗೆ ಬೆಂಗಳೂರಿನಲ್ಲಿ ಭಾರಿ ಬೇಡಿಕೆ

ಸ್ಕೂಟರ್ ವಲಯವನ್ನು ಬಲಪಡಿಸಲು ಯಮಹಾ ಮೋಟಾರ್ ಇಂಡಿಯಾ ಸೇಲ್ಸ್ 113 ಸಿಸಿ ಸಾಮರ್ಥ್ಯದ ಸ್ವಯಂ ಚಾಲಿತ ಸ್ಕೂಟರ್ ಆಲ್ಫಾ ಬಿಡುಗಡೆ ಮಾಡಿತು. ಇದು, ಯಮಾಹಾ ಸಮೂಹದಿಂದ ಕುಟುಂಬ ದೃಷ್ಟಿಯಲ್ಲಿ ಇರಿಸಿಕೊಂಡು ರೂಪಿಸಿದ ಮೊದಲ ವಾಹನ.

ಯಮಹಾ ಆಲ್ಫಾ ಸ್ಕೂಟರ್‌ಗೆ ಬೆಂಗಳೂರಿನಲ್ಲಿ ಭಾರಿ ಬೇಡಿಕೆ

ತನ್ನ ಮಾರಾಟ ಪ್ರಮಾಣ ನಿರಂತರವಾಗಿ ಇದ್ದು, ಯಮಹಾ ಮೋಟಾರ್ಸ್ ಇಂಡಿಯಾ ಫೆಬ್ರುವರಿ 2014ರಲ್ಲಿ 42,548 ವಾಹನಗಳನ್ನು ಮಾರಾಟ ಮಾಡಿದೆ. ಇದು, ಕಳೆದ ವರ್ಷದ ಫೆಬ್ರವರಿ ಮಾರಾಟಕ್ಕೆ ಹೋಲಿಸಿದರೆ ಶೇ 32.5ರಷ್ಟು ಏರಿಕೆಯಾಗಿದೆ. ನವೀನ ತಂತ್ರಜ್ಞಾನ, ಗ್ರಾಹಕ ಕೇಂದ್ರೀತವಾದ ಕಾರ್ಯಕ್ರಮಗಳು ಆಲ್ಫಾ ಮಾರಾಟ ಏರಿಕೆಗೆ ಕಾರಣವಾಗಿದೆ.

ಯಮಹಾ ಆಲ್ಫಾ ಸ್ಕೂಟರ್‌ಗೆ ಬೆಂಗಳೂರಿನಲ್ಲಿ ಭಾರಿ ಬೇಡಿಕೆ

ಏಪ್ರಿಲ್ 2013ರಲ್ಲಿ ಇಂಡಿಯಾ ಯಮಹಾ ಮೋಟಾರ್ ಪ್ರತ್ಯೇಕವಾಗಿ ಯಮಹಾ ಮೋಟಾರ್ ಇಂಡಿಯಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್ (ವೈಎಂಐಎಸ್) ಹೆಸರಿನಲ್ಲಿ ಸೋದರ ಸಂಸ್ಥೆ ಆರಂಭಿಸಿತು. ಇದು ಕಂಪನಿಯ ಮಾರುಕಟ್ಟೆಯ ಅಗತ್ಯಗಳನ್ನು ನೋಡಲಿದ್ದು, ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ.

More from DriveSpark

Article Published On: Tuesday, April 1, 2014, 11:26 [IST]
English summary
To celebrate the success of its newly launched 113cc family scooter, Yamaha Alpha, that has received over 3,000 bookings in less than a month since reveal, in Bangalore alone, the company held a huge public event at a shopping mall in the city.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+