ಯಮಹಾದಿಂದ 2 ವಿಶೇಷ ಆವೃತ್ತಿ ಬೈಕ್‌ ಲಾಂಚ್

By Nagaraja

ಬೈಕ್ ಪ್ರಿಯರಿಗೆ ಮತ್ತೊಂದು ಖುಷಿ ಸುದ್ದಿ ಬಂದಿದ್ದು, ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಯಮಹಾ ಮೋಟಾರ್ ಇಂಡಿಯಾ, ಹಬ್ಬದ ಆವೃತ್ತಿಗಿಂತ ಮುಂಚಿತವಾಗಿ ಎಫ್‌ಝಡ್-ಎಸ್ ಹಾಗೂ ಫೇಜರ್‌ಗಳೆಂಬ ಎರಡು ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡಿವೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆಯೇ ಸ್ಪೆಷಲ್ ಎಡಿಷನ್ ಆವೃತ್ತಿಗಳಲ್ಲಿ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳ ಹೊರತಾಗಿ ವಿಶೇಷವಾದ ಬದಲಾವಣೆಗಳು ಕಂಡುಬರುವುದಿಲ್ಲ. ಅಂದ ಹಾಗೆ ಯಮಹಾ ನೂತನ ಆವೃತ್ತಿಯು ಹೊಸ ಬಣ್ಣಗಳ ಆಯ್ಕೆಗಳಲ್ಲಿ ಆಗಮನವಾಗಿದೆ. ಜತೆಗೆ ಆಕ್ರಮನಕಾರಿ ಹಳದಿ ಗ್ರಾಫಿಕ್ಸ್ ಹೆಚ್ಚಿನ ಆಕರ್ಷತೆ ನೀಡುತ್ತಿದೆ.

ಎಂಜಿನ್

ಎಂಜಿನ್

ಯಮಹಾ ನೂತನ ವಿಶೇಷ ಆವೃತ್ತಿಯ ಎಂಜಿನ್ ಆಯ್ಕೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದು 153 ಸಿಸಿ, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 14 ಅಶ್ವಶಕ್ತಿ (13.6 ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಗೇರ್ ಬಾಕ್ಸ್ ಆಳವಡಿಸಲಾಗಿದೆ.

ದರ ಮಾಹಿತಿ

ದರ ಮಾಹಿತಿ

ಯಮಹಾ ಎಫ್‌ಝಡ್-ಎಸ್ ಸಾಮಾನ್ಯ ಆವೃತ್ತಿಯ ದರ 74,385 ರು.ಗಳಾಗಿವೆ. ಆದರೆ ಸ್ಪೆಷಲ್ ಎಡಿಷನ್ ಸ್ವಲ್ಪ ದುಬಾರಿಯಾಗಲಿದ್ದು, ಹೆಚ್ಚುವರಿ 5,000 ರು.ಗಳನ್ನು ಪಾವತಿಸಬೇಕಾಗಿದೆ. ಅಂದರೆ ನೂತನ ಎಡಿಷನ್ 79,485 ರು.ಗಳಿಗೆ ಲಭ್ಯವಾಗಲಿದೆ.

ಯಮಹಾ ಚಾಲೆಂಜ್

ಯಮಹಾ ಚಾಲೆಂಜ್

ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ಯಮಹಾ ತನ್ನ ಜನಪ್ರಿಯ ಆವೃತ್ತಿಯಲ್ಲಿ ಕೆಲವೊಂದು ಬದಲಾವಣೆ ತರುತ್ತಿರುವುದು. 2008ರಲ್ಲಿ ಲಾಂಚ್ ಆಗಿದ್ದ ಈ ಬೈಕಿನ ಬೇಡಿಕೆ ಕಾಯ್ದುಕೊಳ್ಳಲು ಹಲವು ಬಾರಿಯಾಗಿ ವಿಶೇಷ ಬಣ್ಣಗಳ ಆಯ್ಕೆಗಳನ್ನು ನೀಡಿತ್ತು.

ಹೊಸ ವರ್ಣ

ಹೊಸ ವರ್ಣ

ಈ ಸ್ಪೆಷಲ್ ಎಡಿಷನ್ ಆವೃತ್ತಿಯಲ್ಲೂ ಯಮಹಾ ವಿಶೇಷವಾದ Battle Green ಬಣ್ಣದ ಆಯ್ಕೆ ನೀಡುತ್ತಿದೆ.

ಯಮಹಾ ನಿರೀಕ್ಷೆ

ಯಮಹಾ ನಿರೀಕ್ಷೆ

ಒಟ್ಟಿನಲ್ಲಿ ಹಬ್ಬದ ಆವೃತ್ತಿಗೂ ಮೊದಲೇ ಎಂಟ್ರಿ ಕೊಟ್ಟಿರುವ ಯಮಹಾ ವಿಶೇಷ ಆವೃತ್ತಿಗಳು ಮಾರುಕಟ್ಟೆಯಲ್ಲಿ ಹೇಗೆ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Article Published On: Monday, August 12, 2013, 10:21 [IST]
English summary
Yamaha Motor India has come out with a special edition of its FZ-S and Fazer motorcycles ahead of the festive season. As is always the case, the special edition models offer just a few visual updates in the form of new colour and graphics.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+