ಕಾದಿರಿ; 2015ರಲ್ಲಿ ಯಮಹಾ ಆರ್25 ಲಾಂಚ್
ಜಪಾನ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳ ಪೈಕಿ ದೇಶದಲ್ಲಿ ಯಮಹಾ ಅತಿ ಹೆಚ್ಚು ಹೆಸರು ಮಾಡಿಕೊಂಡಿದೆ. ಪ್ರಸ್ತುತ ಕೆಲವೊಂದು ಬದಲಾವಣೆಗಳೊಂದಿಗೆ ಯಮಹಾ ಆರ್25 ಆಗಮನವಾಗುತ್ತಿದೆ.
ವರದಿಗಳ ಪ್ರಕಾರ ಯಮಹಾ ಆರ್25 ಭಾರತದಲ್ಲಿ 2015ನೇ ಸಾಲಿನಲ್ಲಿ ಲಾಂಚ್ ಆಗಲಿದೆ. ಈ ಹಿಂದೆ 2013ರಲ್ಲಿ ನಡೆದ ಟೊಕಿಯೊ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿದ್ದ ಪ್ರಸ್ತುತ ಬೈಕ್ ಇತ್ತೀಚಗೆಷ್ಟೇ ನವದೆಹಲಿಯಲ್ಲಿ ಆಯೋಜನೆಯಾಗಿದ್ದ 2014 ಆಟೋ ಎಕ್ಸ್ ಪೋದಲ್ಲೂ ತನ್ನ ಶಕ್ತಿ ಪ್ರದರ್ಶನ ನಡೆಸಿತ್ತು. ಕಡಿಮೆ ಸಾಮರ್ಥ್ಯದ ಕ್ರೀಡಾ ಬೈಕ್‌ಗಳಿಗೆ ದೇಶದಲ್ಲಿ ಭಾರಿ ಬೇಡಿಕೆಯಿದೆ. ಇದನ್ನು ಕೇಂದ್ರಿಕರಿಸಿರುವ ಯಮಹಾ, ನಿರ್ವಹಣಾ ಬೈಕ್‌ಗಳನ್ನು ದೇಶಕ್ಕೆ ಪರಿಚಯಿಸುವ ಯೋಜನೆ ಹೊಂದಿದೆ.

ನೂತನ ಯಮಹಾ ಆರ್25, 250 ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಯಲ್ ಇಂಜೆಕ್ಟಡ್, ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಯಮಹಾ ವೈಝಡ್‌ಆರ್-ಎಂ1 ಮೊಟೊಜಿಪಿ ರೇಸರ್‌ನಿಂದ ಸ್ಪೂರ್ತಿ ಪಡೆದು ಆರ್25 ವಿನ್ಯಾಸಗೊಳಿಸಲಾಗಿದೆ.

ಹಾಗಿದ್ದರೂ ಯಮಹಾ ಆರ್25 ನಿರ್ಮಾಣ ವರ್ಷನ್‌ನಲ್ಲಿ ಕೆಲವೊಂದು ಬದಲಾವಣೆ ಕಂಡುಬರುವ ಸಾಧ್ಯತೆಗಳಿವೆ.

ಒಟ್ಟಿನಲ್ಲಿ ಯಮಹಾ ಆರ್25 ಸ್ವಾಗತಿಸಲು ಗ್ರಾಹಕರು ತುದಿಗಾಲಲ್ಲಿ ನಿಂತಿದ್ದಾರೆ. ಇದು ರೈಟ್ ಸೈಡ್ ಅಪ್ ಫ್ರಂಟ್ ಫಾರ್ಕ್ಸ್ ಹಾಗೆಯೇ ರಿಯರ್ ಮೊನೊಶಾಕ್ ಸಸ್ಫೆಷನ್ ಪಡೆದುಕೊಂಡಿದೆ.

ಇಷ್ಟೆಲ್ಲ ಆದರೂ ನೂತನ ಯಮಹಾ ಆರ್25 ಬರಮಾಡಿಕೊಳ್ಳಲು 2015ನೇ ಇಸವಿಯ ವರೆಗೆ ಕಾಯಬೇಕಾಗಿದೆ.


Click it and Unblock the Notifications