ಒಕ್ಟಾವಿಯಾ ಈಸ್ ಬ್ಯಾಕ್; ನಿಮ್ಮ ನಿರೀಕ್ಷೆ ಮುಟ್ಟಿತೇ?

ಹೌದು, ಒಕ್ಟಾವಿಯಾ ಈಸ್ ಬ್ಯಾಕ್. ಚೆಕ್ ಗಣರಾಜ್ಯದ ಈ ಕಾರು ತಯಾರಕ ಸಂಸ್ಥೆಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ 2013 ಒಕ್ಟಾವಿಯಾ ಭಾರತೀಯ ಮಾರುಕಟ್ಟೆಗೆ ಸದ್ಯದಲ್ಲೇ ಭರ್ಜರಿ ಎಂಟ್ರಿ ಕೊಡಲಿದೆ.

ದಶಕದ ಹಿಂದೆ ಮೊದಲ ಜನಾಂಗದ ಒಕ್ಟಾವಿಯಾ ಸೆಡಾನ್ ಕಾರಿನೊಂದಿಗೆ ಭಾರತ ಪ್ರವೇಶಿಸಿದ್ದ ಸ್ಕೋಡಾ ನಿರೀಕ್ಷಿಸಿದಷ್ಟು ಯಶ ಸಾಧಿಸುವಲ್ಲಿ ವಿಫಲವಾಗಿತ್ತು. ಹೆಚ್ಚು ನಿರ್ವಹಣಾ ವೆಚ್ಚ ಸ್ಕೋಡಾ ಕೇವಲ ಶ್ರೀಮಂತರ ಕಾರು ಎನ್ನುವ ಮಾತಿಗೆ ಸೀಮಿತಗೊಳಿಸಿತ್ತು.

ಈ ನಡುವೆ ಎರಡನೇ ಜನರೇಷನ್ ಸ್ಕೋಡಾ ಒಕ್ಟಾವಿಯಾ 2010ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು. ಇದು ಕೂಡಾ ಪ್ರೀಮಿಯಂ ಲುಕ್ ಪಡೆದಿದ್ದರೂ ಗ್ರಾಹಕರ ಮನ ಗೆಲ್ಲುವಲ್ಲಿ ವಿಫಲವಾಗಿತ್ತು. ಹಾಗಿದ್ದರೂ ಛಲ ಬಿಡದ ಸ್ಕೋಡಾ 2013 ಆಗಸ್ಟ್ 10ರಂದು ಥರ್ಡ್ ಜನರೇಷನ್ ಸ್ಕೋಡಾ ಕಾರನ್ನು ಘೋಷಿಸಿತ್ತು. ಈಗಾಗಲೇ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿರುವ ನೂತನ ಒಕ್ಟಾವಿಯಾ ಇತರ ಕಾರುಗಳಿಗಿಂತ ಹೇಗೆ ಭಿನ್ನವಾಗಿರಲಿದೆ ಎಂಬುದನ್ನು ಸ್ಲೈಡರ್ ಮೂಲಕ ತಿಳಿಯೋಣವೇ...

ಒಕ್ಟಾವಿಯಾ ಈಸ್ ಬ್ಯಾಕ್; ನಿಮ್ಮ ನಿರೀಕ್ಷೆ ಮುಟ್ಟಿತೇ?

ಈ ಲೇಖನದ ಮೂಲಕ 2013 ಸ್ಕೋಡಾ ಒಕ್ಟಾವಿಯಾ ದರ, ಎಂಜಿನ್, ಮೈಲೇಜ್, ವೈಶಿಷ್ಟ್ಯ ಹಾಗೂ ವೆರಿಯಂಟ್‌ಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಲಿದ್ದೇವೆ.

ಆಯಾಮ

ಆಯಾಮ

ಉದ್ದ: 4659 ಎಂಎಂ

ಅಗಲ: 1814 ಎಂಎಂ

ಎತ್ತರ: 1416 ಎಂಎಂ

ವೀಲ್ ಬೇಸ್: 2688 ಎಂಎಂ

ಗ್ರೌಂಡ್ ಕ್ಲಿಯರನ್ಸ್: 155 ಎಂಎಂ

ಒಕ್ಟಾವಿಯಾ ಈಸ್ ಬ್ಯಾಕ್; ನಿಮ್ಮ ನಿರೀಕ್ಷೆ ಮುಟ್ಟಿತೇ?

ನೂತನ ಒಕ್ಟಾವಿಯಾದ ಪ್ರಮುಖ ಆಕರ್ಷಣೆಯೆಂದರೆ ದೊಡ್ಡದಾದ ಆಕಾರ ಪಡೆದುಕೊಂಡಿರಲಿದೆ. ಇದು ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಸುತ್ತಳತೆಯನ್ನು ಪಡೆದುಕೊಂಡಿದೆ.

ಎಂಕ್ಯೂಬಿ ಫ್ಲಾಟ್‌ಫಾರ್ಮ್

ಎಂಕ್ಯೂಬಿ ಫ್ಲಾಟ್‌ಫಾರ್ಮ್

ಫೋಕ್ಸ್‌ವ್ಯಾಗನ್ ಎಂಕ್ಯೂಬಿ ಫ್ಲಾಟ್‌ಫಾರ್ಮ್‌ನಲ್ಲಿ ನೂತನ ಒಕ್ಟಾವಿಯಾ ನಿರ್ಮಿಸಲಾಗಿದೆ. ಇದು ಕಾರಿನ ಭಾರ ಕಡಿಮೆ ಮಾಡುವಲ್ಲಿ ನೆರವಾಗಿದೆ. ಅಂದರೆ 1350 ಕೆ.ಜಿ. ತೂಕ ಮಾತ್ರ ಹೊಂದಿರಲಿದೆ.

ಹೊರಮೈ ವಿನ್ಯಾಸ

ಹೊರಮೈ ವಿನ್ಯಾಸ

ಹೆಚ್ಚು ತೀಕ್ಷ್ಣವಾದ ವಿನ್ಯಾಸವನ್ನು ನೂತನ ಒಕ್ಟಾವಿಯಾ ಪಡೆದುಕೊಂಡಿದೆ. ಈ ಕಾರನ್ನು ದೂರದಿಂದ ನೋಡಿದರೆ ಆಡಿ ಸೆಡಾನ್ ಕಾರುಗಳೊಂದಿಗೆ ಸಾಮ್ಯತೆಯನ್ನು ಪಡೆದುಕೊಂಡಿದೆ.

ಮುಂಭಾಗ

ಮುಂಭಾಗ

ಇತರ ಸ್ಕೋಡಾ ಆವೃತ್ತಿಗಳಿಗೆ ಭಿನ್ನವಾಗಿ ಮುಂಭಾಗ ಸ್ಲಿಮ್ ಆಗಿರುವ ಕ್ರೋಮ್ ಸ್ಟ್ರಿಪ್ ಪಡೆದುಕೊಳ್ಳಲಿದೆ. ಒಟ್ಟಿನಲ್ಲಿ ಮುಂಭಾಗವು ಆಕ್ರಮಣಕಾರಿ ಸ್ಕೋಡಾ ವಿನ್ಯಾಸವನ್ನು ಗಿಟ್ಟಿಸಿಕೊಂಡಿದೆ.

ಪರಿಷ್ಕೃತ ಹೆಡ್‌ಲ್ಯಾಂಪ್

ಪರಿಷ್ಕೃತ ಹೆಡ್‌ಲ್ಯಾಂಪ್

ಪರಿಷ್ಕೃತ ಹೆಡ್ ಲ್ಯಾಂಪ್ ಹಾಗೂ ಫಾಗ್ ಲ್ಯಾಂಪ್ ಸ್ಕೋಡಾ ಕಾರಿನ ಪ್ರಮುಖ ಆಕರ್ಷಣೆಯಾಗಿದೆ. ಇನ್ನು ಟಾಪ್ ಎಂಡ್ ವೆರಿಯಂಟ್ ಬೈ-ಕ್ಸೆನಾನ್ ಲ್ಯಾಂಪ್ ಕೂಡಾ ಹೊಂದಿರಲಿದೆ.

ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್

ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್

ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ ಮತ್ತೊಂದು ಪ್ರಮುಖ ಫೀಚರ್ ಆಗಿರಲಿದೆ.

ರಿಯರ್ ಲ್ಯಾಂಪ್

ರಿಯರ್ ಲ್ಯಾಂಪ್

'ಸಿ' ಆಕಾರವನ್ನು ಪಡೆದುಕೊಂಡಿರುವ ರಿಯರ್ ಲ್ಯಾಂಪ್ ಸ್ಕೋಡಾ ವರ್ಚಸ್ಸನ್ನು ಹೆಚ್ಚಿಸಿದೆ.

ರಿಯರ್ ಲುಕ್

ರಿಯರ್ ಲುಕ್

ಒಟ್ಟಿನಲ್ಲಿ ಹಿಂದುಗಡೆ ಸಹ ದಿಟ್ಟತನದ ಲುಕ್ ನೀಡುವಲ್ಲಿ ಸ್ಕೋಡಾ ಯಶಸನ್ನು ಕಂಡಿದೆ.

ಒಆರ್‌ವಿಎಂ

ಒಆರ್‌ವಿಎಂ

ಹೈಯರ್ ಎಂಡ್ ಲಗ್ಷುರಿ ಕಾರುಗಳಲ್ಲಿರುವಂತಹ ಹೊರಗಿನ ರಿಯರ್ ವ್ಯೂ ಮಿರರ್ ಇಂಡಿಕೇಟರ್ ಲ್ಯಾಂಪ್‌ಗಳನ್ನು ಲಗತ್ತಿಸಲಾಗಿದೆ.

ಅಲಾಯ್ ವೀಲ್

ಅಲಾಯ್ ವೀಲ್

ಎಲ್ಲ ವೆರಿಯಂಟ್‌ಗಳು ಸ್ಟಾಂಡರ್ಡ್ 16 ಇಂಚು ಅಲಾಯ್ ವೀಲ್ ಪಡೆದುಕೊಳ್ಳಲಿದೆ.

ಒಳಮೈ

ಒಳಮೈ

ನೂತನ ಸ್ಕೋಡಾ ಒಕ್ಟಾವಿವಾ ಐಷಾರಾಮಿ ಇಂಟಿರಿಯರ್ ಫೀಚರ್ಸ್‌ಗಳನ್ನು ಪಡೆದುಕೊಳ್ಳಲಿದೆ. ಪ್ರಾಯೋಗಿಕವಾಗಿಯೂ ಇದು ಆರಾಮದಾಯಕ ಪಯಣವನ್ನು ಒದಗಿಸಲಿದೆ.

ಸ್ಟೀರಿಂಗ್ ವೀಲ್

ಸ್ಟೀರಿಂಗ್ ವೀಲ್

ಇದರ 4 ಸ್ಪೋಕ್ ಸ್ಟೀರಿಂಗ್ ವೀಲ್ ಹಾಗೂ ಇದರಲ್ಲಿ ಹೊಂದಿಕೊಂಡಿರುವ ಆಡಿಯೋ ಕಂಟ್ರೋಲ್ ಚಾಲಕರಿಗೆ ಸುಲಭವಾಗಿ ಹ್ಯಾಂಡಲ್ ಮಾಡಬಹುದಾಗಿದೆ.

ಒಕ್ಟಾವಿಯಾ ಈಸ್ ಬ್ಯಾಕ್; ನಿಮ್ಮ ನಿರೀಕ್ಷೆ ಮುಟ್ಟಿತೇ?

12 ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಡ್ರೈವರ್ ಸೀಟು ಹಾಗೂ ಮೆಮೆರಿ ಫಂಕ್ಷನ್ ಹೈಯರ್ ಎಂಡ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.

ಮಾಹಿತಿ ಸಿಸ್ಟಂ

ಮಾಹಿತಿ ಸಿಸ್ಟಂ

ಇದರಲ್ಲಿ 5.8 ಇಂಚು ಟಚ್ ಸ್ಕ್ರೀನ್ ಮಾಹಿತಿ ಸಿಸ್ಟಂ ಆಳವಡಿಸಲಾಗಿದ್ದು, ಅಗತ್ಯಕ್ಕನುಸಾರವಾಗಿ ಬಳಕೆ ಮಾಡಬಹುದಾಗಿದೆ.

ಆಡಿಯೋ ಸಿಸ್ಟಂ

ಆಡಿಯೋ ಸಿಸ್ಟಂ

ಸಂಗೀತ ಇಷ್ಟಪಡುವವರಿಗಾಗಿ ಆಡಿಯೋ ಸಿಸ್ಟಂ ನಿಮ್ಮ ಪಯಣವನ್ನು ಇನ್ನಷ್ಟು ಮಧುರವಾಗಿಸಲಿದೆ.

ಸನ್ ರೂಫ್

ಸನ್ ರೂಫ್

ಇನ್ನು ಹೈ ಎಂಡ್ ಕಾರುಗಳಲ್ಲಿ ಮಾತ್ರ ಕಂಡುಬರುವಂತಹ ಸನ್ ರೂಫ್ ಕೂಡಾ ನಿಮಗೆ ಸ್ಕೋಡಾ ಆವೃತ್ತಿಯಲ್ಲಿ ಲಭಿಸಲಿದೆ. ಇದನ್ನು ಸ್ವಯಂಚಾಲಿತವಾಗಿ ನಿಯಂತ್ರಿಸಬಹುದಾಗಿದೆ.

ಕಂಫರ್ಟ್ ಜೋನ್

ಕಂಫರ್ಟ್ ಜೋನ್

ಮೊದಲೇ ತಿಳಿಸಿರುವಂತೆಯೇ ಕಾರಿನ ಒಟ್ಟಾರೆ ಗಾತ್ರದಲ್ಲಿ ವರ್ಧನೆವುಂಟಾಗಿರುವಂತೆಯೇ ಉತ್ತಮ ಸಿಟ್ಟಿಂಗ್ ವ್ಯವಸ್ಥೆ ಆಳವಡಿಸಲು ನೆರವಾಗಿದೆ.

ರಿಯರ್

ರಿಯರ್

ಇನ್ನು ಹಿಂದುಗಡೆ ಪ್ರಯಾಣಿಕರಿಗೂ ಆರಾಮದಾಯಕ ಪಯಣ ಖಾತ್ರಿಪಡಿಸಲು ರಿಯರ್ ಏರ್ ವೆಂಟ್ಸ್ ಕೂಡಾ ಆಳವಡಿಸಲಾಗಿದೆ.

ಬೂಟ್ ಸ್ಪೇಸ್

ಬೂಟ್ ಸ್ಪೇಸ್

ನೂತನ ಸ್ಕೋಡಾ ಒಕ್ಟಾವಿಯಾ 590 ಲೀಟರ್ ಲಗ್ಗೇಜ್ ಸ್ಪೇಸ್ ಹೊಂದಿದೆ. ಇದರ ಮಡಚಬಹುದಾದ ರಿಯರ್ ಸೀಟು ಇನ್ನು 1000 ಲೀಟರ್ ಹೆಚ್ಚುವರಿ ಬೂಟ್ ಸ್ಪೇಸ್ ನೀಡಲಿದೆ.

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್

ಇದರಲ್ಲಿ 1.4 ಲೀಟರ್ ಟಿಎಸ್‌ಐ (ಟರ್ಬೊ) ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ. ಇದು 140 ಅಶ್ವಶಕ್ತಿ (250 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಫ್ರಂಟ್ ವೀಲ್ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಡ್ರೈವಿಂಗ್ ಅನುಭವ

ಡ್ರೈವಿಂಗ್ ಅನುಭವ

ಫೋಕ್ಸ್‌ವ್ಯಾಗನ್ ಜೆಟ್ಟಾದಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಲಗತ್ತಿಸಲಾಗಿದೆ. ಇದು ಹೆಚ್ಚಿನ ಕಂಫರ್ಟ್ ಡ್ರೈವಿಂಗ್ ಅನುಭವ ನೀಡಲಿದೆ.

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್

ಇದರ ಜತೆಗೆ 2.0 ಲೀಟರ್ ಟಿಡಿಐ (ಟರ್ಬೊ) ಡೀಸೆಲ್ ಎಂಜಿನ್ (148 ಅಶ್ವಶಕ್ತಿ, 320 ಎನ್‌ಎಂ ಟಾರ್ಕ್) ಕೂಡಾ ಇದರಲ್ಲಿ ಆಳವಡಿಸಲಾಗಿದೆ. ಇದು 6 ಸ್ಪೀಡ್ ಮ್ಯಾನುವಲ್ ಹಾಗೂ 6 ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ಡ್ರೈವಿಂಗ್ ಅನುಭವ

ಡ್ರೈವಿಂಗ್ ಅನುಭವ

ಇದರ ಡೀಸೆಲ್ ಎಂಜಿನ್ ಸಹ ದೂರ ಪ್ರಯಾಣದಲ್ಲೂ ಸ್ಥಿರವಾದ ವೇಗತೆಯಲ್ಲಿ ಹೆಚ್ಚಿನ ಸುಖಕರ ಪಯಣದ ಅನುಭವ ನೀಡಲಿದೆ.

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್

ಇವೆರಡಲ್ಲದೆ 1.8 ಲೀಟರ್ ಟಿಎಸ್‌ಐ (ಟರ್ಬೊ) ಪೆಟ್ರೋಲ್ ಎಂಜಿನ್ (177 ಅಶ್ವಶಕ್ತಿ, 250 ಎನ್‌ಎಂ ಟಾರ್ಕ್) ಕೂಡಾ ಇರಲಿದೆ. ಇದು 7 ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ಡ್ರೈವಿಂಗ್ ಅನುಭವ

ಡ್ರೈವಿಂಗ್ ಅನುಭವ

ಮಲ್ಟಿ ಲಿಂಕ್ ರಿಯರ್ ಸಸ್ಪೆಷನ್‌ನ್ಲಲಿ ಆಗಮನಿಸುವ ಏಕಮಾತ್ರ 1.8 ಲೀಟರ್ ಟಿಎಸ್‌ಐ ಪೆಟ್ರೋಲ್ ವೆರಿಯಂಟ್ ಆಗಿದ್ದರಿಂದ ನಿಮ್ಮ ಚಾಲನೆಯನ್ನು ಹೆಚ್ಚು ಆನಂದದಾಯಕವಾಗಿಸಬಹುದಾಗಿದೆ.

ಸುರಕ್ಷತೆ

ಸುರಕ್ಷತೆ

ಎಬಿಎಸ್ ಜತೆಗೆ ಇಬಿಡಿ ಮತ್ತು ಎಲ್ಲ ವೆರಿಯಂಟ್‌ಗಳಿಗೂ ಸ್ಟಾಂಡರ್ಡ್ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್

ಸುರಕ್ಷತೆ

ಸುರಕ್ಷತೆ

ಹಾಗೆಯೇ ಸ್ಥಿರತೆಯ ನಿಯಂತ್ರಣ ಒದಗಿಸಲು ಎಲ್ಲ ವೆರಿಯಂಟ್‌ಗಳಲ್ಲೂ ಸ್ಟಾಂಡರ್ಡ್ ಎಲೆಕ್ಟ್ರಾನಿಕ್ ಏಡ್ ಸೇವೆ ಲಭಿಸಲಿದೆ.

ಸುರಕ್ಷತೆ

ಸುರಕ್ಷತೆ

ಇದರ ಜತೆಗೆ ಎಲ್ಲ ವೆರಿಯಂಟ್‌ಗಳಿಗೂ ಸ್ಟಾಂಡರ್ಡ್ ಫ್ರಂಟ್ ಆಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್ ಜತೆ ಆಡಿಯೋ ಸಿಗ್ನಲ್ ಹಾಗೂ ಮಾಹಿತಿ ಸಿಸ್ಟಂ‌ನಲ್ಲಿ ಡಿಸ್‌ಪ್ಲೇ ವ್ಯವಸ್ಥೆಯಿರಲಿದೆ.

ಸುರಕ್ಷತೆ

ಸುರಕ್ಷತೆ

ಇನ್ನು ಆಕ್ಟಿವ್ ಹಾಗೂ ಎಂಬಿಷನ್ ವೆರಿಯಂಟ್‌ಗಳಲ್ಲಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಲಭ್ಯವಿರಲಿದೆ. ಫ್ರಂಟ್ ಹಾಗೂ ಸೈಡ್ ಏರ್‌ಬ್ಯಾಗ್ ಜತೆಗೆ ಕರ್ಟೈನ್ ಓರ್‌ಬ್ಯಾಗ್ ಫ್ರಂಟ್ ಸೇರಿದಂತೆ ರಿಯರ್ ಪ್ರಯಾಣಿಕರಿಗೂ ಸುರಕ್ಷತೆಯನ್ನು ಖಾತ್ರಿಪಡಿಸಲಿದೆ.

ದರ ಮಾಹಿತಿ

ದರ ಮಾಹಿತಿ

ಥರ್ಡ್ ಜನರೇಷನ್ ಸ್ಕೋಡಾ ಒಕ್ಟಾವಿಯಾ ಅಕ್ಟೋಬರ್ 3ರಂದು ಲಾಂಚ್ ಆಗುವ ನಿರೀಕ್ಷೆಯಿದ್ದು, ಬೇಸ್ ಆಕ್ಟಿವ್ ವೆರಿಯಂಟ್ 11.5 ಲಕ್ಷ ರು.ಗಳಿಂದ 12.5 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಹಾಗೆಯೇ ಎಲೆಗನ್ಸ್ ವೆರಿಯಂಟ್ 15ರಿಂದ 16 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಫೋಕ್ಸ್‌ವ್ಯಾಗನ್ ಎಂಕ್ಯೂಬಿ ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ 2013 ಸ್ಕೋಡಾ ಒಕ್ಟಾವಿಯಾ ಹೆಚ್ಚು ಸ್ಥಳಾವಕಾಶ ಹೊಂದಿರುವ ಸೆಡಾನ್ ಕಾರಾಗಿದೆ. ತನ್ನ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಹೆಚ್ಚು ಸುರಕ್ಷತಾ ಮಾನದಂಡಗಳನ್ನು ಅನುಸರಿಸಲಾಗಿದೆ. ಒಟ್ಟಿನಲ್ಲಿ ಸ್ಮರ್ಧಾತ್ಮಕ ದರಗಳಲ್ಲಿ ಆಗಮಿಸಿದ್ದಲ್ಲಿ ಹಿಂದಿನ ದಾಖಲೆಗಳನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

More from DriveSpark

Article Published On: Saturday, September 28, 2013, 11:20 [IST]
English summary
The third gen Octavia promises to bring the magic back. The new car is aided by the much talked about MQB platform which is its core. Slide through the gallery to learn all about the car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+