2023 Tata Nexon EV Review: ಟಾಟಾ ನೆಕ್ಸಾನ್ ಇವಿ ರಿವ್ಯೂ.. ಇದರ ರೇಂಜ್ ಬೇರೆ ಲೆವೆಲ್!
ಭಾರತದಲ್ಲಿ ಟಾಟಾ (Tata) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿದೆ. ಅದರಲ್ಲೂ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ತನಗೆ ಯಾರು ಸರಿಸಾಟಿಯೇ ಇಲ್ಲವೆಂಬಂತೆ ಮುಗ್ಗುತ್ತಿದೆ. ಇತ್ತೀಚೆಗೆ, ಇಂಧನ ಚಾಲಿತ ನವೀಕರಿಸಿದ ನೆಕ್ಸಾನ್ ಎಸ್‌ಯುವಿಯನ್ನು ಪರಿಚಯಿಸಿತ್ತು. ಬಹುತೇಕರು, ಹೊಸ ಅಪ್ಡೇಟ್ ನೆಕ್ಸಾನ್ ಇವಿ ಯಾವಾಗ ಬಿಡುಗಡೆಯಾಗುತ್ತದೆಯೋ ಎಂದು ತಲೆ ಕೆಡಿಸಿಕೊಂಡಿದ್ದರು.
ಅವರೆಲ್ಲ ನೀರಿಕ್ಷೆಯಂತೆ ನವೀಕರಣಗೊಂಡಿರುವ ಟಾಟಾ ನೆಕ್ಸಾನ್ ಇವಿ (Tata Nexon EV) ನಾಡಿದ್ದು (ಸೆಪ್ಟೆಂಬರ್ 14) ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹಾಗಾದರೇ, ಈ ನೂತನ ಕಾರು ಯಾವೆಲ್ಲ ಬದಲಾವಣೆಗಳನ್ನೂ ಹೊಂದಿದೆ. ವೈಶಿಷ್ಟ್ಯಗಳು ಹೇಗಿರಲಿದೆ ಎಂಬ ಕುತೂಹಲ ಹಲವರಲ್ಲಿ ಇರಬಹುದು. ನಮ್ಮ ತಂಡಕ್ಕೆ ಪುಣೆಯಲ್ಲಿ ನೆಕ್ಸಾನ್ ಇವಿ ಟೆಸ್ಟ್ ಡ್ರೈವ್ ಮಾಡಲು ಅವಕಾಶ ದೊರೆಯಿತು. ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ.

ಟಾಟಾ ನೆಕ್ಸಾನ್ ಇವಿ ವಿನ್ಯಾಸ & ವೈಶಿಷ್ಟ್ಯಗಳು: ನವೀಕರಣಗೊಂಡಿರುವ ಇಂಧನ ಚಾಲಿತ (ICE) ನೆಕ್ಸಾನ್ ಎಸ್‌ಯುವಿಗೆ ಹೋಲಿಸಿದರೆ, ಹೊಸ ನೆಕ್ಸಾನ್ ಇವಿ ಕೂಡ ಕಂಪನಿಯ ಕರ್ವ್ವ್ ಕಾನ್ಸೆಪ್ಟ್ ಕಾರಿನಂತೆ ಆಕರ್ಷಕ ವಿನ್ಯಾಸ ಹೊಂದಿದೆ. ಮುಂಭಾಗ, ಸ್ಲಿಕ್ ಸ್ಪ್ಲಿಟ್ ಹೆಡ್‌ಲ್ಯಾಂಪ್ ಅತ್ಯಾಧುನಿಕವಾಗಿದ್ದು, ಎಲ್ಇಡಿ ಲೈಟ್ ಸ್ಟ್ರಿಪ್ ಬಾನೆಟ್‌ನಲ್ಲಿ ಚಲಿಸುತ್ತದೆ. ಜೊತೆಯಲ್ಲಿ ಚಾರ್ಜಿಂಗ್ ಇಂಡಿಕೇಟರ್ ಆಗಿಯೂ ಕಾರ್ಯನಿರ್ವಹಿಸುತ್ತದೆ.
ಇಂಧನ ಚಾಲಿತ ಆವೃತ್ತಿಗೆ ಹೋಲಿಸಿದರೆ, ನವೀಕರಣಗೊಂಡಿರುವ ಟಾಟಾ ನೆಕ್ಸಾನ್ ಇವಿ ಹಿಂಭಾಗ ಹಾಗೂ ಬದಿಗಳಲ್ಲಿ (ಸೈಡ್) 'ಇವಿ' ಎಂಬ ಬ್ಯಾಡ್ಜ್ ಹೊಂದಿರುವುದು ಪ್ರಮುಖ ಬದಲಾವಣೆಯಾಗಿದೆ. ಇದು ಬಿಟ್ಟರೆ, ಗ್ರಿಲ್ ಸೆಕ್ಷನ್ ನಲ್ಲಿ ಟಾಟಾ ಲೋಗೋ ಒಳಗೊಂಡಿದೆ. ಹಿಂಭಾಗದ ಫಾಕ್ಸ್ ಬ್ಯಾಷ್ ಪ್ಲೇಟ್‌ಗೆ ವಿಭಿನ್ನ ಲುಕ್ ಕೊಡಲಾಗಿದೆ. ಇದು, ನೋಡುಗರನ್ನು ಈ ಕಾರಿನತ್ತ ಸೆಳೆಯುತ್ತದೆ.

ಅಲ್ಲದೆ, ಟಾಟಾ ನೆಕ್ಸಾನ್ ಇವಿಯ ನೂತನ ಕನೆಕ್ಟ್ದ್ ರೇರ್ ಲೈಟ್ಸ್, ರೂಫ್ - ಮೌಂಟೆಡ್ ಸ್ಪಾಯ್ಲರ್ ಹಾಗೂ ಹೊಸ ವೀಲ್ಸ್ ನವೀಕರಿಸಿದ ನೆಕ್ಸಾನ್ (ICE) ಎಸ್‌ಯುವಿಗೆ ಹೋಲಿಕೆಯಾಗುತ್ತದೆ. ಕ್ಯಾಬಿನ್ ಒಳಭಾಗದಲ್ಲಿರುವ ಲೇಯರ್ಡ್ ಡ್ಯಾಶ್, ವೆಂಟಿಲೇಟೆಡ್ ಸೀಟ್ಸ್, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸಲುವಾಗಿ ಪಡೆದಿರುವ ಡ್ಯುಯಲ್ - ಡಿಸ್ಪ್ಲೇ ಕೂಡ ಅದೇ ರೀತಿಯಲ್ಲಿದೆ.
ಉಳಿದ ವೈಶಿಷ್ಟ್ಯಗಳ ಕಡೆ ಗಮನ ನೀಡುವುದಾದರೆ, ಕೂಲ್ಡ್ ಗ್ಲೋವ್ ಬಾಕ್ಸ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಟಚ್- ಎಚ್‌ವಿಎಸಿ (HVAC) ಕಂಟ್ರೋಲ್, ಸನ್‌ರೂಫ್, ಜೆಬಿಎಲ್ ಸೌಂಡ್ ಸಿಸ್ಟಮ್ ನೆಕ್ಸಾನ್ (ICE) ಎಸ್‌ಯುವಿ ರೀತಿಯೇ ಇವೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ISOFIX ಚೈಲ್ಡ್ ಸೀಟ್ ಆಂಕರಿಂಗ್ ಪಾಯಿಂಟ್ಸ್, ಪಾರ್ಕಿಂಗ್ ಸೆನ್ಸರ್ಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ನೆಕ್ಸಾನ್ ಇವಿ ರೇಂಜ್ ಕಾರ್ಯಕ್ಷಮತೆ: ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ನೆಕ್ಸಾನ್ ಇವಿ, ಮ್ಯಾಕ್ಸ್ ಹಾಗೂ ಪ್ರೈಮ್ ಎಂಬ ಎರಡು ರೂಪಾಂತರಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅದೇ ರೀತಿಯಲ್ಲಿ ನವೀಕರಣಗೊಂಡಿರುವ ನೆಕ್ಸಾನ್ ಇವಿ ಮೀಡಿಯಂ ರೇಂಜ್ (ಎಂಆರ್) ಮತ್ತು ಲಾಂಗ್ ರೇಂಜ್ (ಎಲ್ಆರ್) ವೇರಿಯೆಂಟ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ.
ಬ್ಯಾಟರಿ ಪ್ಯಾಕ್ ಬಗ್ಗೆ ಮಾತನಾಡುವುದಾದರೆ, ಹಿಂದಿನ ಮಾದರಿಗೆ ಹೋಲಿಕೆಯಾಗುವ ಬ್ಯಾಟರಿಯನ್ನೇ ಹೊಂದಿದ್ದು, ಎಂಆರ್ ರೂಪಾಂತರ 30kWh ಹಾಗೂ ಎಲ್ಆರ್ ರೂಪಾಂತರ 40.5kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಮುಖ್ಯವಾಗಿ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಎಂಆರ್ ವೇರಿಯೆಂಟ್ 127bhp ಹಾಗೂ ಎಲ್ಆರ್ ವೇರಿಯೆಂಟ್ 143bhp ಪವರ್ ಹೊರಹಾಕುತ್ತದೆ.

ಟಾಟಾ ನೆಕ್ಸಾನ್ ಇವಿ ಎಂಆರ್ ರೂಪಾಂತರ ಕೇವಲ 8.9 ಸೆಕೆಂಡುಗಳಲ್ಲಿ 0-100km/h ವೇಗವನ್ನು ಪಡೆಯಲಿದ್ದು, 150km/h ಟಾಪ್ ಸ್ವೀಡ್ ಹೊಂದಿದೆ. ಇವೆರೆಡು ಮಾದರಿಗಳು, 215Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿವೆ. ಹಿಂದಿನ ನೆಕ್ಸಾನ್ ಇವಿ ಪ್ರೈಮ್ ರೂಪಾಂತರಕ್ಕೆ ಹೋಲಿಸಿದರೆ, ಎಂಆರ್ ವೇರಿಯೆಂಟ್ 30Nm ಹಾಗೂ ಮಾಕ್ಸ್ ರೂಪಾಂತರಕ್ಕೆ ಹೋಲಿಕೆ ಮಾಡಿದರೆ, ಎಲ್ಆರ್ ವೇರಿಯೆಂಟ್ 38Nm ಕಡಿಮೆ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ.
ನವೀಕರಣಗೊಂಡಿರುವ ಟಾಟಾ ನೆಕ್ಸಾನ್ ಇವಿ ರೇಂಜ್ ಬಗ್ಗೆ ಹೇಳುವುದಾದರೆ, ಇದರ ಎಂಆರ್ ರೂಪಾಂತರ ಸಂಪೂರ್ಣ ಚಾರ್ಜಿನಲ್ಲಿ 325 km ಹಾಗೂ ಎಲ್ಆರ್ ರೂಪಾಂತರ 465 km ರೇಂಜ್ ನೀಡುತ್ತದೆ. ಹಿಂದಿನ ಮಾದರಿಗೆ ಹೋಲಿಕೆ ಮಾಡಿದರೆ, ಎರಡು ಮಾದರಿಗಳು 12 km ಹೆಚ್ಚುವರಿಯಾಗಿ ರೇಂಜ್ ಹೊಂದಿವೆ.

ಚಾರ್ಜಿಂಗ್ ಬಗ್ಗೆ ಹೇಳುವುದಾದರೆ, ಮನೆ ವಿದ್ಯುತ್ ಬಳಕೆಯಲ್ಲಿ ಎಂಆರ್ ರೂಪಾಂತರ 10.5 ಗಂಟೆ, ಎಲ್ಆರ್ ರೂಪಾಂತರ 15 ಗಂಟೆಯಲ್ಲಿ ಚಾರ್ಜ್ ಆಗುತ್ತದೆ. ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಇವೆರೆಡು ಮಾದರಿಗಳು ಕೇವಲ 56 ನಿಮಿಷದಲ್ಲಿ 10 ರಿಂದ 80 ಚಾರ್ಜ್ ಆಗುತ್ತವೆ. 7.2kW ಚಾರ್ಜರ್ ಆಯ್ಕೆಯಲ್ಲಿ ಎಂಆರ್ ವೇರಿಯೆಂಟ್ ಬ್ಯಾಟರಿ 10-100% ಚಾರ್ಜ್ ಆಗಲು 4.3 ಗಂಟೆ, ಎಂಆರ್ ವೇರಿಯೆಂಟ್ 6 ಗಂಟೆಯಲ್ಲಿ ಚಾರ್ಜ್ ಆಗುತ್ತದೆ.
ನೆಕ್ಸಾನ್ ಇವಿ ಡ್ರೈವಿಂಗ್ ಇಂಪ್ರೆಷನ್: ಹೊಸ ನೆಕ್ಸಾನ್ ಇವಿ, ಮೂರು ಡ್ರೈವಿಂಗ್ ಮೋಡ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, ಇಕೋ, ಸಿಟಿ ಹಾಗೂ ಸ್ಪೋರ್ಟ್ಸ್, ಅವುಗಳ ಅನ್ವಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಎಂಆರ್ ರೂಪಾಂತರ 8.9 ಸೆಕೆಂಡುಗಳಲ್ಲಿ 100km/h ವೇಗವನ್ನು ಪಡೆಯಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಅದೇ ರೀತಿಯಲ್ಲಿ ಚಾಲನೆ ಮಾಡುವಾಗ ಕಂಡುಬಂತು.

ನವೀಕರಿಸಿದ ನೆಕ್ಸಾನ್ ಇವಿ ಹಳ್ಳ - ದಿಣ್ಣೆ, ಉಬ್ಬು - ತಗ್ಗು ಸೇರಿದಂತೆ ಎಂತಹ ರಸ್ತೆಯಲ್ಲಿ ಬೇಕಾದರೂ ಸುಲಭ ಓಡಿಸಬಹುದು. ಸಸ್ಪೆನ್ಷನ್ ಸೆಟಪ್ ಕೂಡ ಅದ್ಬುತವಾಗಿದ್ದು, ಬ್ರೇಕ್ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ತಂಡ ಟೆಸ್ಟ್ ಡ್ರೈವ್ ಮಾಡಿದ ನೆಕ್ಸಾನ್ ಇವಿ, ಕಂಪನಿ ಹೇಳಿರುವಂತೆ ರೇಂಜ್ ನೀಡುತ್ತದೆಯೇ ಎಂಬುದನ್ನು ಪರೀಕ್ಷೆ ಮಾಡಲು ಸಮಯವಿರಲಿಲ್ಲ. ಆದರೂ, ಅದೇ ತರಹ ರೇಂಜ್ ನೀಡಲಿದೆ.
ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ಟಾಟಾ, ನೂತನ ನೆಕ್ಸಾನ್ ಇವಿ ಬೆಲೆ ಬಗ್ಗೆ ಎಲ್ಲಿಯೂ ಮಾಹಿತಿಯನ್ನು ಬಹಿರಂಗಪಡಿಸಲ್ಲ. ಸರಿ ಸುಮಾರು ರೂ. 20 ಲಕ್ಷ ದರದಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಹಿಂದಿನ ಮಾದರಿಗೆ ಹೋಲಿಕೆ ಮಾಡಿದರೆ, ಹೊಸ ಕಾರು, ಸಾಕಷ್ಟು ಅತ್ಯಾಧುನಿಕ ವಿನ್ಯಾಸ ಹೊಂದಿದೆ. ಇದು, ನೋಡುಗರನ್ನು ಬಹುತೇಕ ಆಕರ್ಷಿಸುತ್ತದೆ. ಮುಂಬರುವ ಹಬ್ಬದ ಋತುವಿನಲ್ಲಿ ಈ ಎಲೆಕ್ಟ್ರಿಕ್ ಕಾರಿಗೆ ಭರ್ಜರಿ ಬೇಡಿಕೆ ಬರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








