ಮತ್ತೆ ಅಖಾಡಕ್ಕೆ ಅಮೇರಿಕನ್‌ ಆಫ್‌ರೋಡ್‌ ಕಿಂಗ್‌: 2024 ಜೀಪ್‌ ರಾಂಗ್ಲರ್‌ ಫೇಸ್‌ಲಿಫ್ಟ್ ರಿವ್ಯೂ‌!

ಅಮೇರಿಕನ್‌ ಕಾರು ನಿರ್ಮಾಣ ಕಂಪನಿ ಜೀಪ್‌ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಜೀಪ್‌ ಕಂಪನಿಯ ಪ್ರಸಿದ್ಧ ಕಾರುಗಳಲ್ಲಿ ರಾಂಗ್ಲರ್‌ ಸಹ ಒಂದು. ಸಾಕಷ್ಟು ಆಫ್‌ರೋಡ್‌ ಸಾಮರ್ಥ್ಯವಿರುವ ಈ ಕಾರು ನಮ್ಮ ನಡುವೆ ಹಲವು ಸೆಲೆಬ್ರಿಟಿಗಳು ಖರೀದಿ ಮಾಡಿದ್ದಾರೆ. ಇದೀಗ ಜೀಪ್‌, ಭಾರತದಲ್ಲಿ ತನ್ನ ರಾಂಗ್ಲರ್‌ ಕಾರಿನ ಫೇಸ್‌ಲಿಫ್ಟ್‌ ಅನ್ನು ಬಿಡುಗಡೆ ಮಾಡಿದೆ.

ಹೌದು, ಜಾಗತಿಕವಾಗಿ ಜೀಪ್‌, ತನ್ನ ರಾಂಗ್ಲರ್‌ ಕಾರು ಮಾದರಿಯ ಫೇಸ್‌ಲಿಫ್ಟ್‌ ಅನ್ನುಕಳೆದ ವರ್ಷವೇ ಬಿಡುಗಡೆ ಮಾಡಿತ್ತು. ಆದರೆ ಇದು ಭಾರತೀಯ ಮಾರುಕಟ್ಟೆಗೆ ಬಂದಿರಲಿಲ್ಲ. ಇದೀಗ ಕೊನೆಗೂ ಈ ರಾಂಗ್ಲರ್‌ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಇಂದಿನ ಈ ಲೇಖನ ಅದಕ್ಕಾಗಿ ಮೀಸಲು. ಹೊಸ 2024 ಜೀಪ್‌ ರಾಂಗ್ಲರ್‌ ಬಗ್ಗೆ ತಿಳಿದುಕೊಳ್ಳಲು, ಈ ಲೇಖನವನ್ನು ಸಂಪೂರ್ಣವಾಗಿ ಓದಿ.

2024 Jeep Wrangler Facelift Review Engine Performance And More

ವಿನ್ಯಾಸ: ಜೀಪ್‌ ರಾಂಗ್ಲರ್‌ನಲ್ಲಿ (2024 Jeep Wrangler) ಈ ಹಿಂದಿನ ಮಾದರಿಗೆ ಏನು ಬದಲಾಗಿದೆ ಮತ್ತು ಬದಲಾಗಿಲ್ಲ ಎಂದು ನೊಡುವುದಾದರೆ, ಈ ಕಾರಿನ ಹೊರಾಂಗಣ ವಿಭಾಗದಲ್ಲಿ ಸಣ್ಣ ಪುಟ್ಟ ಬದಲಾವಣೆಯಷ್ಟೇ ಆಗಿದೆ. ಹೊಸ ಅಪ್‌ಟೆಟೆಟ್‌ ಗ್ರಿಲ್‌, 17 ಮತ್ತು 18 ಇಂಚ್‌ ಅಯ್ಕೆಯಲ್ಲಿನ ಲಾಯ್‌ ವ್ಹೀಲ್‌ಗಳು, ಮತ್ತು ನೀವು ಆಯ್ದುಕೊಳ್ಳುವ ಆಯ್ಕೆಯ ಆಧಾರದ ಮೇಲೆ ಗೊರಿಲ್ಲಾ ಗ್ಲಾಸ್‌ ವಿಂಡ್‌ ಶೀಲ್ಡ್‌ಗಳು ಈ ಕಾರಿನಲ್ಲಿ ಹೊಸದಾಗಿ ಲಭ್ಯವಿದೆ.

ಈ ಕಾರಿನ ಗ್ರಿಲ್‌ ನೋಡುವುದಾದರೆ, ಕಳೆದ ಬಾರಿಯ ವಿನ್ಯಾಸವನ್ನು ಹೋಲುತ್ತದೆಯಾದರೂ, ಇದೀಗ ಈ ಗ್ರಿಲ್‌ ಸಂಪೂರ್ಣ ಕಪ್ಪು ಬಣ್ಣದಲ್ಲಿ ಫಿನಿಶಿಂಗ್‌ ಅನ್ನುಹೊಂದಿದೆ. ಇದರಲ್ಲಿಯೇ ಫ್ರಂಟ್‌ ಪಾರ್ಕಿಂಗ್‌ ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ. ಉಳಿದಂತೆ ಕಳೆದ ಬಾರಿಯ ರಾಂಗ್ಲರ್‌ ವಿನ್ಯಾಸವನ್ನೇ ಹೋಲುತ್ತಿದ್ದು, ಹೆಚ್ಚಾಗಿ ಬದಲಾವಣೆಗಳನ್ನು ಮಾಡಲಾಗಿಲ್ಲ.

2024 Jeep Wrangler Facelift Review Engine Performance And More

ಇಂಟೀರಿಯರ್‌: ಈ ಕಾರಿನ ಇಂಟೀರಿಯರ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದು ಹೇಳಬಹುದು. ಇದೀಗ ಹೊಸದಾಗಿ 12.3 ಇಂಚ್‌ನ ಇನ್ಪೋಟೇನ್‌ಮೆಂಟ್‌ ಡಿಸ್ಪ್ಲೇ ಈ ಕಾರಿನಲ್ಲಿ ಲಭ್ಯವಾಗುತ್ತಿದೆ. ಇದರಲ್ಲಿ ಜೀಪ್‌ನ ಇತ್ತೀಚಿನ ಅನ್‌ಕನೆಕ್ಟ್‌ 5 ಆಪರೆಟಿಂಗ್‌ ಸಿಸ್ಟಂ ಅನ್ನು ಕಾಣಬಹುದಾಗಿದೆ. ಇನ್ನು ಈ ಡಿಸ್ಪ್ಲೇಯು ವೈರ್‌ಲೆಸ್‌ ಆ್ಯಂಡ್ರಾಯ್ಡ್‌ ಆಟೋ ಮತ್ತು ಆ್ಯಪಲ್‌ ಕಾರ್‌ಪ್ಲೇ ಬೆಂಬಲಿತವಾಗಿದೆ.

ಇನ್ನು ಈ ಕಾರಿನ ಇಂಟೀರಿಯರ್‌ನಲ್ಲಿ ಎಸಿ ವೆಂಡ್ಸ್‌ಗಳನ್ನು ನೋಡುವುದಾದರೆ, ಸ್ಲಿಮ್‌ಲೈನ್ ಆಯತಾಕರದ ಆಕೃತಿಯನ್ನು ಇದು ಹೊಂದಿದ್ದು, ಆಫ್‌ರೋಡ್ ಸಂಧರ್ಭದಲ್ಲಿ ಈ ಕಾರಿನಲ್ಲಿ ಡೋರ್‌ ಇಲ್ಲದರಿರುವುದರಿಂದ ಅಷ್ಟಾಗಿ ಕಾರಿನ ಒಳಭಾಗವನ್ನು ತಂಪಾಗಿಡುತ್ತವೆ ಎಂದು ಹೇಳಲಾಗುವುದಿಲ್ಲ. 12 ರೀತಿಯಲ್ಲಿ ಅಡ್ಜಸ್ಟ್‌ ಮಾಡಬಹುದಾದ ಸೀಟ್‌ಗಳು ಈ ಕಾರಿನಲ್ಲಿ ಲಭ್ಯವಿದೆ.

2024 Jeep Wrangler Facelift Review Engine Performance And More

ಸುರಕ್ಷತೆ: 2024 ಜೀಪ್‌ ರಾಂಗ್ಲರ್‌ನ ಸುರಕ್ಷತೆಯ ಬಗ್ಗೆ ಮಾತನಾಡುವುದಾದರೆ, ಅತ್ಯಾಧುನಿಕ ಟ್ರೈವರ್‌ ಅಸಿಸ್ಟೆಂಟ್‌ ಸಿಸ್ಟಂ/ಅಡಾಸ್‌ ಅನ್ನು ಅಳವಡಿಸಲಾಗಿದೆ. ಅದೇ ರೀತಿ ಸಾಧಾರಣವಾಗಿ ಈ ಕಾರಿನಲ್ಲಿ ಸಿಗುವಂತಹ ಇತರ ಸೇಫ್ಟಿ ಫೀಚರ್‌ಗಳಾದ ೬ ಏರ್‌ ಬ್ಯಾಗ್‌ಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌, ಹಿಲ್‌ ಸ್ಟಾರ್ಟ್‌ ಅಸಿಸ್ಟ್‌, ಹಿಲ್‌ ಡಿಸೆಂಟ್‌ ಕಂಟ್ರೋಲ್‌, ಎಲೆಕ್ಟ್ರಾನಿಕ್‌ ರೋಲ್‌ ಬಿಗಿಟೇಷನ್, ಆಟೋ ಹೆಡ್‌ಲ್ಯಾಂಪ್‌, ಟೈರ್‌ ಪ್ರೆಶರ್‌ ಮಾನಿಟರಿಂಗ್‌, ರೇರ್‌ ಪಾರ್ಕಿಂಗ್‌ ಸೆನ್ಸಾರ್ ಜೊತೆಗೆ ಪಾರ್ಕಿಂಗ್‌ ಕ್ಯಾಮೆರಾಗಳು ಲಭ್ಯವಿದೆ.

ಎಂಜಿನ್‌ ಮತ್ತು ಪರ್ಫಾಮೆನ್ಸ್‌: ಹೊಸ ಜೀಪ್‌ ರಾಂಗ್ಲರ್‌ನಲ್ಲಿ 2.0-ಲೀಟರ್‌ ಟರ್ಬೋ ಪೆಟ್ರೋಲ್‌ ಫಿಯಟ್‌ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಭಾರತದಲ್ಲಿ ಲಭ್ಯವಿರುವ ರಾಂಗ್ಲರ್‌ಗೆ ೮ ಸ್ಪೀಡ್‌ ಟಾರ್ಕ್‌ ಕನ್ವರ್ಟರ್‌ ಗೇರ್‌ ಬಾಕ್ಸ್‌ ಆಯ್ಕೆಯಾಗಿ ಲಬ್ಯವಾಗಲಿದೆ. ಈ ಎಂಜಿನ್‌ ಸಹಾಯದಿಂದ ಜೀಪ್‌ ರಾಂಗ್ಲರ್‌ ಸುಮಾರು 270bhp ಮತ್ತು 400Nm ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. ಇದು ಫೋರ್‌ ವ್ಹೀಲ್‌ ಟ್ರೈವ್‌ ಬೆಂಬಲಿತವಾಗಿದೆ.

2024 Jeep Wrangler Facelift Review Engine Performance And More

ಇನ್ನು ಇಷ್ಟೆಲ್ಲಾ ಪವರ್‌ ಮತ್ತು ಪರ್ಫಾಮೆನ್ಸ್ ಜೊತೆಗೆ ಈ ಕಾರಿನಲ್ಲಿ ಇದೀಗ ಹೊಸ ಆಫ್‌ರೋಡ್‌ ಮೋಡ್‌ಗಳು ಸಹ ಲಭ್ಯವಿದೆ. ಇದರ ಸಹಾಯದಿಂದ ನಾವು ಓಡಿಸುವ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಮೋಡ್‌ ಆಯ್ಕೆ ಮಾಡಿ, ಡ್ರೈವ್‌ ಅನ್ನು ಆನಂದಿಸಬಹುದಾಗಿದ್ದು, ಇದು ಚಾಲಕನಿಗೆ ಸಾಕಷ್ಟು ಸಹಾಯ ಮಾಡುತ್ತದೆ.

ನಾವು ಹೊಸ ಜೀಪ್‌ ರಾಂಗ್ಲರ್‌ ಅನ್ನು ಕಠಿಣವಾದ ಆಫ್‌ರೋಡ್‌ ಪ್ರದೇಶದಲ್ಲಿ ಡ್ರೈವ್‌ ಮಾಡಿದ್ದೇವೆ. ಈ ಸಂಧರ್ಭದಲ್ಲಿ ನಾವು ಗಮನಿಸಿದ ಅಂಶವೆಂದರೆ, ಸಾಕಷ್ಟು ಕಠಿಣವಾದ ಅಡೆತಡೆಗಳನ್ನು ಲೀಲಾಜಾಲವಾಗಿ ಈ ಕಾರು ಹಿಂದೆ ಹಾಕುತ್ತಿತ್ತು. ಇದಕ್ಕೆ ಪ್ರಮುಖ ಕಾರಣ ದೊಡ್ಡದಾದ ಟೈರ್‌ಗಳು. ರಗಡ್‌ ಆಗಿರುವ ಈ ಕಾರು ಹಾರ್ಡ್‌ ಕೋರ್‌ ಆಫ್‌ರೊಡ್‌ ಪ್ರೀಯರ ನೆಚ್ಚಿನ ವಾಹನ.

2024 Jeep Wrangler Facelift Review Engine Performance And More

ಇನ್ನು ಈ ಕಾರಿನಲ್ಲಿರುವ 2.0-ಲೀಟರ್‌ ಟರ್ಬೋ ಪೆಟ್ರೋಲ್‌ ಫಿಯಟ್‌ ಎಂಜಿನ್ ಕಡಿಮೆ ವೇಗದಲ್ಲೂ ಸಹ ಉತ್ತಮ ಟಾರ್ಕ್‌ ಅನ್ನು ವಾಹನದ ನಾಲ್ಕೂ ಟೈರ್‌ಗಳಿಗೆ ಸರಬರಾಜು ಮಾಡುತ್ತದೆ. ಇದೇ ಕಾರಣದಿಂದಾಗಿ ಈ ಕಾರು ಸಣ್ಣ ವೇಗದಲ್ಲಿ ದೊಡ್ಡ ದೊಡ್ಡ ಕಲ್ಲುಗಳ ನಡುವೆಯೂ ಸಾರಾಗವಾಗಿ ಚಲಿಸುತ್ತದೆ. ಈ ವಾಹನದ ಲೋ ಎಂಡ್ ಟಾರ್ಕ್ ಯಾವುದೇ ಸನ್ನಿವೇಶದಲ್ಲಿಯಾದರೂ, ಯಾವುದೇ ಭೌಗೋಳಿಕ ಪ್ರದೇಶದಲ್ಲಾದರೂ‌ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

ಹೊಸ 2024 ಜೀಪ್‌ ರಾಂಗ್ಲರ್‌ ಬಗ್ಗೆ ಒಂದೆರಡು ಮಾತಿನಲ್ಲಿ ಹೇಳಬೇಕಾದರೆ, ಫೇಸ್‌ಲಿಫ್ಟ್‌ ಮಾದರಿಯಾಗಿದ್ದರೂ ಹೊರ ಭಾಗದಲ್ಲಿ ಹೆಚ್ಚು ಬದಲಾವಣೆಗಳೇನು ಕಾಣುವುದಿಲ್ಲ. ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಹೊರ ಭಾಗದ ಕಾರ್ಯಗಳು ಮುಗಿಸಿರುವ ಜೀಪ್‌, ಈ ಕಾರಿನ ಒಳ ಭಾಗದಲ್ಲಿ ಹೆಚ್ಚಿನ ಬದಲಾವಣೆಗಳನ್ನು ತಂದಿದೆ.

2024 Jeep Wrangler Facelift Review Engine Performance And More

ಜೀಪ್‌ ಈ ರಾಂಗ್ಲರ್‌ ಎಸ್‌ಯುವಿಯನ್ನು ಫೇಸ್‌ಲಿಫ್ಟ್‌ ಮಾದರಿಯ ಮೂಲಕವಾಗಿ ಗ್ರಾಹಕರಿಗೆ ಮತ್ತಷ್ಟು ಇಷ್ಟವಾಗುವ ರೀತಿಯಲ್ಲಿ ಮಾರ್ಪಾಡು ಮಾಡಿದೆ. ನೀವೇನಾದರೂ, ಬಜೆಟ್‌ನ ಹಂಗಿಲ್ಲದೆ, ಒಂದು ಉತ್ತಮ ಆಫ್‌ರೋಡ್‌ ಕಾರನ್ನು ನೋಡುತ್ತಿದ್ದೀರಿ ಎಂದಾದರೆ, ಹೊಸ ರಾಂಗ್ಲರ್‌ ನಿಮ್ಮ ಮೊದಲ ಆಯ್ಕೆಯಾಗಬೇಕು ಎಂಬುದು ನಮ್ಮ ಅಭಿಪ್ರಾಯ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, April 25, 2024, 11:30 [IST]
English summary
2024 jeep wrangler facelift review engine performance and more
Read more on ಜೀಪ್ jeep india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+