ಹೊಸ ಕಾರು ಖರೀದಿಸಲು ಪ್ಲಾನ್ ಇದೆಯಾ? ನಿಮಗಿಲ್ಲಿದೆ ಖುಷಿ ಸುದ್ದಿ... ಜೀಪ್ ಎಸ್‍ಯುವಿ ಬೆಲೆ ಕಡಿತ!

ಅಮೆರಿಕ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಫಾರ್ಚೂನರ್ ಎಸ್‍ಯುವಿಗೆ ಪೈಪೋಟಿಯಾಗಿ ಮೆರಿಡಿಯನ್ 7-ಸೀಟರ್ ಪ್ರೀಮಿಯಂ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. ಜೀಪ್ ಮೆರಿಡಿಯನ್ (Jeep Meridian) ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಜೀಪ್ ಮೆರಿಡಿಯನ್ ಎಸ್‍ಯುವಿಯನ್ನು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ ಮತ್ತು ಕಂಪಾಸ್ ಆಧಾರಿತವಾದ ಫ್ಲಾಟ್ ಫಾರ್ಮ್ ಅನ್ನು ಹಂಚಿಕೊಳ್ಳುತ್ತದೆ. ಇದೀಗ ಈ ಜೀಪ್ ಮೆರಿಡಿಯನ್ ಎಸ್‍ಯುವಿಯ ಬೆಲೆಯನ್ನು ಕಡಿತಗೊಳಿಸಲಾಗಿದೆ. ಈ ಜನಪ್ರಿಯ ಫುಲ್ ಸೈಜ್ ಎಸ್‍ಯುವಿಯನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಉತ್ತಮ ಅವಕಾಶವಾಗಿದೆ.

ಜೀಪ್ ಮೆರಿಡಿಯನ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.29.49 ಲಕ್ಷವಾಗಿದೆ. ಈ ಹಿಂದೆ ಜೀಪ್ ಮೆರಿಡಿಯನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.31.23 ಲಕ್ಷವಾಗಿತ್ತು. ಈ ಬೆಲೆಗಳು ಸೀಮಿತ ಅವಧಿಗೆ ಮಾತ್ರ ಎಂದು ನಿರೀಕ್ಷಿಸಲಾಗಿದೆ. ಜೀಪ್ ಮೆರಿಡಿಯನ್ ಎಸ್‍ಯುವಿಯು ಓವರ್‌ಲ್ಯಾಂಡ್ ಮತ್ತು ಲಿಮಿಟೆಡ್ (O) ಎಂಬ ಎರಡು ಟ್ರಿಮ್‌ಗಳಲ್ಲಿ ಮಾರಾಟ ಮಾಡುತ್ತದೆ.

Jeep Meridian

ಜೀಪ್ ಮೆರಿಡಿಯನ್ ಮಾದರಿಯು ಜನಪ್ರಿಯ ಕಂಪಾಸ್ ಎಸ್‍ಯುವಿಯನ್ನು ಆಧರಿಸಿದೆ. ಜೀಪ್ ಮೆರಿಡಿಯನ್ ತನ್ನ ಪ್ರತಿಸ್ಪರ್ಧಿಗಳಿಗೆ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ. ಜೀಪ್ ಮೆರಿಡಿಯನ್ ಮಾದರಿ ದಕ್ಷಿಣ ಅಮೆರಿಕಾದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಜೀಪ್ ಕಮಾಂಡರ್‌ನೊಂದಿಗೆ ಹಲವಾರು ಸಾಮ್ಯತೆಯನ್ನು ಹೊಂದಿದೆ. ಈ ಜೀಪ್ ಪ್ರೀಮಿಯಂ ಎಸ್‍ಯುವಿಯ ಮುಂಭಾಗವನ್ನು ಕಂಪಾಸ್‌ಗೆ ಹೋಲಿಸಿದರೆ ವಿಭಿನ್ನ ಸ್ಟೈಲಿಂಗ್ ಅಂಶಗಳೊಂದಿಗೆ ಇದು ಹೆಚ್ಚು ಮಸ್ಕ್ಲರ್ ಲುಕ್ ಅನ್ನು ಹೊಂದಿದೆ.

ಈ ಮೂರು-ಸಾಲಿನ ಮೆರಿಡಿಯನ್‌ ಎಸ್‍ಯುವಿಯು ಸುಮಾರು 364 ಎಂಎಂ ಉದ್ದ, 41 ಎಂಎಂ ಅಗಲ ಮತ್ತು 42 ಎಂಎಂ ಎತ್ತರವನ್ನು ಹೊಂದಿದೆ. ಜೀಪ್ ಮೆರಿಡಿಯನ್‌ ಎಸ್‌ಯುವಿಯು 2794 ಎಂಎಂ ವೀಲ್‌ಬೇಸ್‌ ಅನ್ನು ಹೊಂದಿದೆ. ಈ ಜೀಪ್ ಮೆರಿಡಿಯನ್‌ ಎಸ್‍ಯುವಿಯಲ್ಲಿ 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ II ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ.

Jeep Meridian

ಈ ಎಂಜಿನ್ 168 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಜೋಡಿಸಲಾಗಿದೆ. ಟ್ಯೂನ್ ಮಾಡಲಾದ ಎಂಜಿನ್‌ನಲ್ಲಿ ಕಂಪನಿಯು ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಜೋಡಣೆ ಮಾಡಿದೆ.

ಇದರೊಂದಿಗೆ ಫ್ರಂಟ್ ವ್ವೀಲ್ ಡ್ರೈವ್ ಮಾದರಿಯಲ್ಲಿ ಮ್ಯಾನುವಲ್ ಮತ್ತು ಆಟೋ ಮ್ಯಾಟಿಕ್ ಮಾದರಿಗಳಿದ್ದರೆ ಆಲ್ ವ್ಹೀಲ್ ಡ್ರೈವ್ ಮಾದರಿಯಲ್ಲಿ ಕೇವಲ ಆಟೋಮ್ಯಾಟಿಕ್ ಮಾದರಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಈ ಮೆರಿಡಿಯನ್ ಎಸ್‍ಯುವಿಯ ಮುಂಭಾಗದ ಫಾಸಿಕ ವಿಶಿಷ್ಟವಾದ ಕ್ರೋಮ್ ಸ್ಲೇಟೆಡ್ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ.

ಇದರೊಂದಿಗೆ ಮಸ್ಕಲರ್ ಬಾನೆಟ್ ರಚನೆ, ಅಗಲವನ್ನು ಒಳಗೊಂಡ ದಪ್ಪ ಅಡ್ಡ ರೇಖೆಯೊಂದಿಗೆ ಸ್ಪೋರ್ಟಿ ಬಂಪರ್, ಅಗಲವಾದ ಸೆಂಟ್ರಲ್ ಏರ್ ಟೆಕ್ ಮತ್ತು ಬಾನೆಟ್‌ನ ಅಂಚಿನಲ್ಲಿ ಜೀಪ್ ಬ್ಯಾಡ್ಜ್ ಹೊಂದಿದೆ. ಈ ಜೀಪ್ ಮೆರಿಡಿಯನ್‌ ಎಸ್‍ಯುವಿಯ ಇತರ ಸ್ಟೈಲಿಂಗ್ ಮುಖ್ಯಾಂಶಗಳು ಸ್ಕ್ವೇರ್-ಆಫ್ ವ್ಹೀಲ್ ಆರ್ಚ್‌ಗಳು, ಬ್ಲ್ಯಾಕ್ ಬಾಡಿ ಕ್ಲಾಡಿಂಗ್ ಮತ್ತು ಮುಂಭಾಗದ ಡೋರುಗಳು, ದೊಡ್ಡ ವಿಂಡೋಗಲು ಮತ್ತು ಪ್ರಮುಖ ರೂಫ್ ರೈಲ್ ಗಳ ಮೇಲೆ ಮೆರಿಡಿಯನ್ ಎಂದು ಬರೆದಿದೆ.

ಜೀಪ್ ಮೆರಿಡಿಯನ್ ಎಸ್‍ಯುವಿಯಲ್ಲಿ ಸುತ್ತುವ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಮತ್ತು ನೇರವಾದ ಟೈಲ್‌ಗೇಟ್ ಅನ್ನು ಹೊಂದಿದೆ. ಈ ಮೆರಿಡಿಯನ್ ಎಸ್‍ಯುವಿ ಸಿಂಗಲ್ ಮತ್ತು ಡ್ಯುಯಲ್ ಟೋನ್ ಬಣ್ಣಗಳಲ್ಲಿ ಲಭ್ಯವಿರಲಿದೆ. ಇನ್ನು ಜೀಪ್ ಕಂಪಾಸ್ ಎಸ್‍ಯುವಿಗೆ ಹೋಲಿಸಿದರೆ, ಜೀಪ್ ಮೆರಿಡಿಯನ್ ಎಸ್‍ಯುವಿಯ ಒಳಭಾಗವು ಬ್ರೌನ್ ಥೀಮ್ ಅನ್ನು ಹೊಂದಿದ್ದು, 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ.

ಈ ಎಸ್‍ಯುವಿಯಲ್ಲಿ 8 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, 360 ಡಿಗ್ರಿ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೊಲ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೇರಿದಂತೆ 60ಕ್ಕೂ ಹೆಚ್ಚು ಸುರಕ್ಷಾ ಫೀಚರ್ಸ್ ನೀಡಲಾಗಿದೆ. ಜೀಪ್ ಮೆರಿಡಿಯನ್ ಮೂಲತಃ ಕಂಪಾಸ್‌ನ 7-ಸೀಟರುಗಳ ಆವೃತ್ತಿಯಾಗಿದೆ, ಇದು ಈಗಾಗಲೇ ಕಮಾಂಡರ್ ಆಗಿ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಆದರೆ ಭಾರತದಲ್ಲಿ 'ಮೆರಿಡಿಯನ್' ಹೆಸರನ್ನು ನೀಡಲಾಗಿದೆ.

More from DriveSpark

Article Published On: Wednesday, July 17, 2024, 19:07 [IST]
English summary
Jeep meridian suv gets price cut details
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+