ಜೀಪ್‌ನ ಈ ಕಾರು ಖರೀದಿಸುವವರು ಇದನ್ನು ಗಮನಿಸಿ: ಅಡಾಸ್‌ ಫೀಚರ್‌ ತರಲು ಇಷ್ಟು ತಡವಾಗಿದ್ದು ಯಾಕೆ?

ಕಾರು ಪ್ರೀಯರಿಗೆ 2024 ಎಂಬುದು ಫೇಸ್‌ಲಿಫ್ಟ್‌ಗಳ ವರ್ಷ ಎಂದೇ ಹೇಳಬಹುದು. ಈ ವರ್ಷದ ಆರಂಭದಿಂದ ಹಿಡಿದು ಕೊನೆಯವರೆಗೂ ಸಾಕಷ್ಟು ಕಂಪನಿಗಳು ತಮ್ಮ ಕಾರುಗಳ ಫೇಸ್‌ಲಿಫ್ಟ್‌ ಮಾದರಿಗಳನ್ನು ಮಾರುಕಟ್ಟೆಗೆ ತರುತ್ತಿದೆ,. ಇದೀಗ ಈ ಸಾಲಿಗೆ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತೊಂದು ಅಮೇರಿಕನ್‌ ಕಂಪನಿಯೂ ಸೇರುತ್ತಿದೆ.

ಜೀಪ್‌ ಎಂಬುದು ಅಮೇರಿಕಾ ಮೂಲದ ಪ್ರಖ್ಯಾತ ಕಾರು ನಿರ್ಮಾಣ ಕಂಪನಿ. ತನ್ನ ಕಂಪಾಸ್‌ ಕಾರು ಮಾದರಿಯ ಮೂಲಕ ಭಾರತದಲ್ಲಿ ಮನೆ ಮಾತಾಗಿರುವ ಈ ಕಾರು ಕಂಪನಿ, ಇದು ಮಾತ್ರವಲ್ಲದೆ ಇನ್ನೂ ಹಲವಾರು ಕಾರು ಮಾದರಿಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದ್ದು, ಇದರಲ್ಲಿ ಜೀಪ್‌ ಮೆರಿಡಿಯನ್‌ ಮತ್ತು ಜೀಪ್‌ ರಾಂಗ್ಲರ್‌ ಪ್ರಮುಖವಾದುದು.

Jeep Meridian To Get ADAS In Its Upcoming Facelift Model

ಇದೀಗ ಜೀಪ್‌ ಕಂಪನಿಯು ತನ್ನ ಮೆರಿಡಿಯನ್‌ (Jeep Meridian) ಕಾರಿಗೆ ಫೇಸ್‌ಲಿಫ್ಟ್‌ ಟಚ್‌ ಅನ್ನು ನೀಡುತ್ತಿದೆ. ಈ ಫೇಸ್‌ಲಿಫ್ಟ್‌ ಮಾದರಿಯಲ್ಲಿ ಪ್ರಮುಖವಾಗಿ ಹಲವಾರು ಫೀಚರ್‌ಗಳಿದ್ದರೂ ಎಲ್ಲರೂ ಗಮನ ಸೆಳೆಯುವ ವಿಷಯವೆಂದರೆ ಈ ಕಾರಿನಲ್ಲಿ ಅತ್ಯಾಧುನಿಕ ಲೆವೆಲ್‌ 2 ಆಡಾಸ್‌ ಫೀಚರ್‌ ಸಿಗಲಿದೆ. ಅಡಾಸ್‌ ಎಂಬುದು ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆಂಟ್‌ ಸಿಸ್ಟಂ. ಇದು ವಾಹನ ಚಲಾವಣೆ ಮಾಡುವಲ್ಲಿ ಚಾಲಕನಿಗೆ ಸಹಾಯ ಮಾಡುವ ಪೀಚರ್‌ ಆಗಿದೆ.

ಇತ್ತೀಚಿನ ಎಲ್ಲಾ ಪ್ರೀಮಿಯಂ ವಾಹನಗಳಲ್ಲಿ ನಾವು ಈ ಫೀಚರ್‌ ಅನ್ನು ಕಾಣಬಹುದಾಗಿದೆ. ಇದೀಗ ಜೀಪ್‌ ಕಂಪನಿ ಮೆರಿಡಿಯನ್‌ ಫೇಸ್‌ಲಿಫ್ಟ್‌ಗೂ ಇದನ್ನು ತರಲಿದ್ದು, ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಇದು ಮಾತ್ರವಲ್ಲದೇ ಜೀಪ್‌ ತನ್ನ ಮೆರಿಡಿಯನ್‌ನಲ್ಲಿ ಇನ್ನೂ ಹತ್ತು ಹಲವಾರು ಬದಲಾವಣೆಗಳನ್ನು ತರಲಿದೆ ಎಂದು ತಿಳಿದು ಬಂದಿದೆ.

Jeep Meridian To Get ADAS In Its Upcoming Facelift Model

ಜೀಪ್ ಮೆರಿಡಿಯನ್ ಮೂಲತಃ ಕಂಪಾಸ್‌ನ 7-ಸೀಟರುಗಳ ಆವೃತ್ತಿಯಾಗಿದೆ, ಇದು ಈಗಾಗಲೇ ಕಮಾಂಡರ್ ಆಗಿ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಆದರೆ ಭಾರತದಲ್ಲಿ ಇಂಡಿಯಾ-ಸ್ಪೆಕ್ ಮಾದರಿಯನ್ನು 'ಮೆರಿಡಿಯನ್' ಹೆಸರನ್ನು ನೀಡಲಾಗಿದೆ, ಏಕೆಂದರೆ ಮಹೀಂದ್ರಾ ಕಂಪನಿಯು ಭಾರತದಲ್ಲಿ 'ಕಮಾಂಡರ್' ಟ್ರೇಡ್‌ಮಾರ್ಕ್ ಹೊಂದಿದೆ.

ಇನ್ನು ಈ ಕಾರಿನ ಬೆಲೆ ಮತ್ತು ಇತರ ವಿಷಯಗಳನ್ನು ನೋಡುವುದಾದರೆ, ಈ ಕಾರಿನ ಬೇಸ್ ಲಿಮಿಟೆಡ್ (O) 4x2MT ರೂಪಾಂತರದ ಬೆಲೆಯು ರೂ.33.60 ಲಕ್ಷವಾಗಿದ್ದು, ಟಾಪ್-ಎಂಡ್ ಓವರ್‌ಲ್ಯಾಂಡ್ 4x4 AT ರೂಪಾಂತರದ ಬೆಲೆಯು ರೂ.39.66 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಈ ಜೀಪ್ ಪ್ರೀಮಿಯಂ ಎಸ್‍ಯುವಿಯ ಮುಂಭಾಗವನ್ನು ಕಂಪಾಸ್‌ಗೆ ಹೋಲಿಸಿದರೆ ವಿಭಿನ್ನ ಸ್ಟೈಲಿಂಗ್ ಅಂಶಗಳೊಂದಿಗೆ ಇದು ಹೆಚ್ಚು ಮಸ್ಕ್ಲರ್ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗದ ಫಾಸಿಕ ವಿಶಿಷ್ಟವಾದ ಕ್ರೋಮ್ ಸ್ಲೇಟೆಡ್ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ. ಇದರೊಂದಿಗೆ ಮಸ್ಕಲರ್ ಬಾನೆಟ್ ರಚನೆ, ಅಗಲವನ್ನು ಒಳಗೊಂಡ ದಪ್ಪ ಅಡ್ಡ ರೇಖೆಯೊಂದಿಗೆ ಸ್ಪೋರ್ಟಿ ಬಂಪರ್, ಅಗಲವಾದ ಸೆಂಟ್ರಲ್ ಏರ್ ಟೆಕ್ ಮತ್ತು ಬಾನೆಟ್‌ನ ಅಂಚಿನಲ್ಲಿ ಜೀಪ್ ಬ್ಯಾಡ್ಜ್ ಹೊಂದಿದೆ.

ಈ ಜೀಪ್ ಮೆರಿಡಿಯನ್‌ ಎಸ್‍ಯುವಿಯಲ್ಲಿ 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ II ಡೀಸೆಲ್ ಎಂಜಿನ್‌ ಅನ್ನು ಹೊಂದಿರಲಿದೆ. ಈ ಎಂಜಿನ್ 168 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಜೋಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, May 22, 2024, 14:41 [IST]
English summary
Jeep meridian to get adas in its upcoming facelift model
Read more on ಜೀಪ್ jeep india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+