ನಿಸ್ಸಾನ್ ಎಕ್ಸ್-ಟ್ರಯಲ್ ರಿವ್ಯೂ: ಬೆಸ್ಟ್ 7-ಸೀಟರ್ ಹೈಬ್ರಿಡ್ ಕಾರು... 7-ಏರ್‌ಬ್ಯಾಗ್ಸ್, ಸನ್‌ರೂಫ್!
ಭಾರತದಲ್ಲಿ ನಿಸ್ಸಾನ್ ತನ್ನ X-ಟ್ರಯಲ್ SUV ಅನ್ನು ಮೊದಲ ಬಾರಿಗೆ 2005 ರಲ್ಲಿ ಬಿಡುಗಡೆ ಮಾಡಿತು. ಈ ಮೊದಲ-ಜೆನ್ ನಿಸ್ಸಾನ್ ಎಕ್ಸ್-ಟ್ರಯಲ್ ಕುಟುಂಬವನ್ನು ಆರಾಮವಾಗಿ ಸಾಗಿಸುವ ಬೆಸ್ಟ್ ಎಸ್‌ಯುವಿ ಎನ್ನಿಸಿಕೊಳ್ಳುವಂತೆ ನಿರ್ಮಿಸಲಾಗಿತ್ತು. ಈ SUV ಅನ್ನು ಚೆನ್ನೈನಲ್ಲಿರುವ ರೆನಾಲ್ಟ್-ನಿಸ್ಸಾನ್ ಮೈತ್ರಿ ಉತ್ಪಾದನಾ ಘಟಕದಲ್ಲಿ ಜೋಡಿಸಲ್ಪಟ್ಟಿತು. ಬಳಿಕ ಎರಡನೇ ತಲೆಮಾರಿನ X-ಟ್ರಯಲ್ ಪರಿಚಯಿಸಿದರು, ಇದು ಗಾತ್ರದಲ್ಲಿ ದೊಡ್ಡದಾಗಿತ್ತು. ಹೆಚ್ಚು ಆಫ್-ರೋಡ್ ಲಕ್ಷಣಗಳನ್ನು ಒಳಗೊಂಡು ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯಗಳನ್ನು ಒಳಗೊಂಡಿತ್ತು. ಬಳಿಕ ಭಾರತದಲ್ಲಿ ಕಂಪನಿಯು X-ಟ್ರಯಲ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿತು. ಅಂತೆಯೇ X-ಟ್ರಯಲ್ ಕಥೆಯು 2014 ರಲ್ಲಿ ಕೊನೆಗೊಂಡಿತು. ಈ ಮೂಲಕ ಭಾರತಲ್ಲಿ ಒಂಬತ್ತು ವರ್ಷಗಳ ಸುದೀರ್ಘ ಪ್ರಯಾಣವನ್ನು X-ಟ್ರಯಲ್ ಕೊನೆಗೊಳಿಸಿತು.
ಈಗ, X-ಟ್ರಯಲ್ ಭಾರತದಿಂದ ನಿರ್ಗಮಿಸಿ ಒಂದು ದಶಕದ ನಂತರ, ಜಪಾನಿನ SUV ಮತ್ತೊಮ್ಮೆ ತನ್ನ ಹೊಸ ನಾಲ್ಕನೇ-ಜನ್ (T33) ಅವತಾರದಲ್ಲಿ ಮರಳಿದೆ. ಹೊಸ 2024 ರ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್‌ನ ಪರ್ಫಾಮೆನ್ಸ್ ಹೇಗಿದೆ ಎಂಬುದನ್ನು ತಿಳಿಯಲು ದೆಹಲಿಯಲ್ಲಿ ಈ SUV ಅನ್ನು ಓಡಿಸಲು ನಮಗೆ ಇತ್ತೀಚೆಗೆ ಅವಕಾಶ ಸಿಕ್ಕಿತು, ಬನ್ನಿ ಹಾಗಾದ್ರೆ ಈ ಹೊಸ ಎಸ್‌ಯುವಿ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯೋಣ.

ವಿನ್ಯಾಸ ಮತ್ತು ವೈಶಿಷ್ಟ್ಯಗಳು: ಹೊಸ ನಾಲ್ಕನೇ ತಲೆಮಾರಿನ ನಿಸ್ಸಾನ್ ಎಕ್ಸ್-ಟ್ರಯಲ್ SUV ಕ್ರಾಸ್‌ಒವರ್ ನಂತಲ್ಲದೇ ಈಗ ಹೆಚ್ಚು SUV ವಿನ್ಯಾಸಕ್ಕೆ ಮರಳಿದೆ. ಮುಂಭಾಗವು ನೇರವಾಗಿ ಡಬಲ್ ವಿ-ಮೋಷನ್ ಗ್ರಿಲ್ ಹೊಂದಿದೆ. ಎರಡೂ ಬದಿಗಳಲ್ಲಿ ಗ್ರಿಲ್ ಅನ್ನು ಸುತ್ತುವರೆದಿರುವುದು ವಿಭಜಿತ ಎಲ್ಇಡಿ ಹೆಡ್ಲೈಟ್ ಸೆಟಪ್ ಇದ್ದು, ಇದು 'U' ಅಕ್ಷರದ ಆಕಾರವನ್ನು ಹೊಂದಿದೆ.
ತೀಕ್ಷ್ಣವಾದ ಮೇಲ್ಭಾಗದ ವಿಭಾಗವು DRL ಮತ್ತು ಇಂಡಿಕೇಟರ್ ಎರಡಕ್ಕೂ ಕಾರ್ಯನಿರ್ವಹಿಸುತ್ತದೆ. ಹೆಡ್‌ಲೈಟ್‌ಗಳು ಮುಂಭಾಗದ ಬಂಪರ್‌ನಲ್ಲಿ ವೀಲ್‌ಆರ್ಚ್‌ಗಳ ಕಡೆಗೆ ಗಾಳಿಯನ್ನು ಹರಿಸುವ ದ್ವಾರಗಳ (ಏರ್‌ವೆಂಟ್) ಪಕ್ಕದಲ್ಲಿ ಕೆಳಕ್ಕೆ ಕುಳಿತುಕೊಳ್ಳುತ್ತವೆ. ಮುಂಭಾಗದ ಬಂಪರ್‌ನ ಕೆಳಗಿನ ಭಾಗವು ಸಕ್ರಿಯ ಶಟರ್‌ಗಳೊಂದಿಗೆ ದೊಡ್ಡ ಏರ್ ಇಂಟೇಕ್ ಹೊಂದಿದೆ. ಇದು ಎಂಜಿನ್‌ಗೆ ತಂಪಾದ ಗಾಳಿಯನ್ನು ಹರಿಸುತ್ತದೆ.

ಹೊಸ ಎಕ್ಸ್-ಟ್ರಯಲ್‌ನ ಬದಿಗಳಲ್ಲಿ 20-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ. ಅದರ ಮೇಲೆ 255/40 ಟೈರ್‌ಗಳನ್ನು ನೀಡಲಾಗಿದೆ. ಹೊಸ ನಿಸ್ಸಾನ್ ಎಕ್ಸ್-ಟ್ರಯಲ್‌ನ ಇತರ ಮುಖ್ಯಾಂಶಗಳೆಂದರೆ ಫ್ಲೋಟಿಂಗ್ ರೂಫ್ ವಿನ್ಯಾಸ, ಬ್ಲ್ಯಾಕ್ಡ್-ಔಟ್ ಎ, ಬಿ ಮತ್ತು ಸಿ ಪಿಲ್ಲರ್‌ಗಳು, ಬ್ರೇಕ್ ಲೈಟ್‌ಗಳಿಗೆ ಬೂಮರಾಂಗ್-ಆಕಾರದ ಸಿಗ್ನೇಚರ್ ಲೈಟಿಂಗ್ ಎಲಿಮೆಂಟ್, ಸುತ್ತುವರಿದ ಎಲ್‌ಇಡಿ ಟೈಲ್‌ಲೈಟ್‌ಗಳು ಮತ್ತು ಸಣ್ಣ ರೂಫ್-ಮೌಂಟೆಡ್ ಸ್ಪಾಯ್ಲರ್ ಅನ್ನು ಒಳಗೊಂಡಿದೆ.
ಇಂಟೀರಿಯರ್: ಒಳಗೆ ಹೆಜ್ಜೆ ಇಡುತ್ತಿದ್ದಂತೆ ನಿಮಗೆ ಪ್ರೀಮಿಯಂ ಅನುಭವ ನೀಡಲು ಸ್ವಲ್ಪ ಮೃದು ಸಾಮಗ್ರಿಗಳನ್ನು ಹೊಂದಿರುವ ಒಳಾಂಗಣ ನೀಡಲಾಗಿದೆ. ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಫ್ಲಾಟ್-ಬಾಟಮ್-ಸ್ಟೀರಿಂಗ್ ವೀಲ್, 12.3-ಇಂಚಿನ ಡ್ರೈವರ್‌ಸ್ ಡಿಸ್ಪ್ಲೇ, ಮಲ್ಟಿ-ಲೇಯರ್ಡ್ ಡ್ಯಾಶ್‌ನ ಮಧ್ಯಭಾಗವು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, 360-ಡಿಗ್ರಿ ಕ್ಯಾಮೆರಾ ಸೆಟಪ್‌ನ ಔಟ್‌ಪುಟ್ ಅನ್ನು ಪ್ರದರ್ಶಿಸುತ್ತದೆ.

ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಕೆಳಗೆ ಅದರ ವಿವಿಧ ಕಾರ್ಯಗಳನ್ನು ನಿಯಂತ್ರಿಸಲು ಬಟನ್‌ಗಳಿವೆ, ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, USB ಪೋರ್ಟ್‌ಗಳು, 12V ಸಾಕೆಟ್ ಮತ್ತು ಎಂಜಿನ್ ಸ್ಟಾರ್ಟ್-ಸ್ಟಾಪ್ ಬಟನ್ ನೀಡಲಾಗಿದೆ. ಚಾಲಕ ಮತ್ತು ಪ್ರಯಾಣಿಕರ ಆಸನಗಳ ನಡುವಿನ ಕೇಂದ್ರ ವಿಭಾಗವು ವೈರ್‌ಲೆಸ್ ಫೋನ್ ಚಾರ್ಜರ್, ಗೇರ್ ಶಿಫ್ಟರ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಡ್ರೈವ್ ಮೋಡ್ ಸ್ವಿಚ್ ಮತ್ತು ಕಪ್ ಹೋಲ್ಡರ್‌ಗಳನ್ನು ಹೊಂದಿದೆ.
ಭಾರತಕ್ಕಾಗಿ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‌ಯುವಿಯ ಮೂರು-ಸಾಲು ಏಳು-ಆಸನಗಳ ಆವೃತ್ತಿಯಾಗಿದೆ. 40/20/40 ಸ್ಪ್ಲಿಟ್ ಜೊತೆಗೆ ರಿಕ್ಲೈನ್ ಕಾರ್ಯವನ್ನು ಒಳಗೊಂಡಿರುವ ಮಧ್ಯದ ಸಾಲಿನಂತೆ ಮುಂಭಾಗದ ಆಸನಗಳು ಆರಾಮದಾಯಕವಾಗಿವೆ. ಎರಡನೇ ಸಾಲಿನ ಆಸನಗಳು ಇನ್ನೂ ಎತ್ತರದ ನಿವಾಸಿಗಳಿಗೆ ಸಾಕಷ್ಟು ಸ್ಥಳಾವಕಾಶವನ್ನು ನೀಡುತ್ತದೆ. ದೊಡ್ಡದಾದ ಸನ್‌ರೂಫ್ ಕ್ಯಾಬಿನ್ ಜೊತೆಗೆ ಹೆಚ್ಚಿನ ಸ್ಥಳಾವಕಾಶವನ್ನು ನೀಡಲಾಗಿದೆ.

ಮೂರನೇ ಸಾಲಿನ ಆಸನಗಳು ವಯಸ್ಕರಿಗೆ ನಿಜವಾಗಿಯೂ ಹೆಚ್ಚಿನ ಸ್ಥಳಾವಕಾಶ ನೀಡುವುದಿಲ್ಲ. ಮಕ್ಕಳಿಗೆ ಮೂರನೇ ಸಾಲು ಉತ್ತಮವಾಗಿದೆ. ವಿಶಾಲವಾದ ತೆರೆಯುವ ಬಾಗಿಲುಗಳು ಮತ್ತು ರೋಲಿಂಗ್ ಎರಡನೇ ಸಾಲಿನ ಆಸನಗಳ ಹೊರತಾಗಿಯೂ, ಆಸನದ ಸ್ಥಾನವು ಉತ್ತಮವಾಗಿಲ್ಲ. ಉಳಿದಂತೆ ಹತ್ತಲು ಹಾಗೂ ಇಳಿಯಲು ಇದು ಅಷ್ಟೇನು ತೊಂದರೆ ಎನೆಸುವುದಿಲ್ಲ.
ಸುರಕ್ಷತೆಯ ದೃಷ್ಟಿಯಿಂದ, ಎಕ್ಸ್-ಟ್ರಯಲ್ ಏಳು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, VDC, ಟ್ರಾಕ್ಷನ್ ಕಂಟ್ರೋಲ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ ಸಿಸ್ಟಮ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.

ವಿಶೇಷಣಗಳು ಮತ್ತು ಆಯಾಮಗಳು: 2024 ನಿಸ್ಸಾನ್ ಎಕ್ಸ್-ಟ್ರಯಲ್ ಅನ್ನು ಕೇವಲ ಒಂದೇ ಡ್ರೈವ್‌ಟ್ರೇನ್ ಕೊಡುಗೆಯೊಂದಿಗೆ ನೀಡಲಾಗುತ್ತದೆ. ಇದು 1.5-ಲೀಟರ್ ವೇರಿಯಬಲ್ ಜ್ಯಾಮಿತಿ ಟರ್ಬೊ, ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 4,800 rpm ನಲ್ಲಿ 161bhp ಪವರ್ ಮತ್ತು 2,800 ಮತ್ತು 3,600rpm ನಡುವೆ 300Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ.
ಇದರ ಎಂಜಿನ್ 12V ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಹೊಂದಿದ್ದು, ನಿರಂತರವಾಗಿ ವೇರಿಯಬಲ್ ಟ್ರಾನ್ಸ್‌ಮಿಷನ್ (CVT) ಮೂಲಕ X-ಟ್ರಯಲ್‌ನ ಮುಂಭಾಗದ ಚಕ್ರಗಳಿಗೆ ತನ್ನ ಪವರ್ ಕಳುಹಿಸುತ್ತದೆ. ನಿಸ್ಸಾನ್ X-ಟ್ರಯಲ್ 0-100km/h ವೇಗವನ್ನು ಕೇವಲ 9.6 ಸೆಕೆಂಡ್‌ಗಳಲ್ಲಿ ತಲುಪುತ್ತದೆ ಹಾಗೆಯೇ ಇದರ ಗರಿಷ್ಟ ವೇಗ 200km/h ಇದೆ. 13.7km/l ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ.

ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ 4,680mm ಉದ್ದ, 1,840mm ಅಗಲ ಮತ್ತು 1,725mm ಎತ್ತರ, 2,705mm ವ್ಹೀಲ್‌ಬೇಸ್ ಹೊಂದಿದೆ. ಹಾಗೆಯೇ 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ. ನೀವು ದೊಡ್ಡ ಕುಟುಂಬವನ್ನು ಹೊಂದಿದ್ದರೆ 585-ಲೀಟರ್ ಬೂಟ್‌ನ ಪೂರ್ಣ ಸಾಮರ್ಥ್ಯವನ್ನು ಪ್ರವೇಶಿಸಲು ಮೂರನೇ ಸಾಲಿನ ಆಸನಗಳನ್ನು ಮಡಚಲು ನಾವು ಶಿಫಾರಸು ಮಾಡುತ್ತೇವೆ. ಇನ್ನು ಎರಡನೇ ಸಾಲಿನ ಆಸನಗಳನ್ನು ಮಡಚುವುದರಿಂದ 1,484 ಲೀಟರ್ ಸಂಗ್ರಹಣಾ ಸ್ಥಳವನ್ನು ಪಡೆಯಬಹುದು.
ಡ್ರೈವಿಂಗ್ ಇಂಪ್ರೆಷನ್ಸ್: ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಆರಾಮಕ್ಕಾಗಿ ನಿರ್ಮಿಸಲಾದ SUV ಆಗಿದೆ. ಚಾಲನೆ ಮಾಡುವ ರೀತಿ ಅದನ್ನು ಪ್ರತಿಬಿಂಬಿಸುತ್ತದೆ. ಇದು ಹೆದ್ದಾರಿಗಳಲ್ಲಿ ಸಂಪೂರ್ಣ ಸುಲಭವಾಗಿ ಪ್ರಯಾಣಿಸುತ್ತದೆ. ಪಟ್ಟಣದಲ್ಲಿಯೂ ಸಹ, ಇದು ಸಾಕಷ್ಟು ಆರಾಮದಾಯಕ ಕಾರು. 1.5-ಲೀಟರ್ ಎಂಜಿನ್‌ನಲ್ಲಿರುವ ವೇರಿಯಬಲ್ ಜ್ಯಾಮಿತಿ ಟರ್ಬೊ ಉತ್ತಮವಾಗಿದೆ. ಕಡಿಮೆ ವೇಗದಲ್ಲಿ, ಇದು ಹೆಚ್ಚಿನ ಸಂಕುಚಿತ ಅನುಪಾತವನ್ನು (14:1) ನಿರ್ವಹಿಸುತ್ತದೆ. ಈ ಮೂಲಕ ನಿಮಗೆ ಮೈಲೇಜ್ ನೀಡುತ್ತದೆ.

ಆಕ್ಸಿಲರೇಟರ್ ಅನ್ನು ಹೆಚ್ಚಾಗಿ ಮ್ಯಾಶ್ ಮಾಡಿದ್ರೆ ಎಂಜಿನ್ ಕಡಿಮೆ-ಸಂಕುಚಿತ ಅನುಪಾತಕ್ಕೆ (8:1) ಬದಲಾಯಿಸುತ್ತದೆ, ಈ ಮೂಲಕ ಮೂರು-ಸಿಲಿಂಡರ್ ಎಂಜಿನ್ ಪವರ್ ನಿಮಗೆ ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತದೆ. ಹಾಗೆಯೇ 1.5-ಲೀಟರ್ ಎಂಜಿನ್ ಸ್ವಲ್ಪ ಕರ್ಕಶವಾದ ಶಬ್ದವನ್ನು ಉಂಟುಮಾಡುತ್ತದೆ. ಇದು ಆಕ್ಸಿಲರೇಟರ್ ಒತ್ತುವ ಶಬ್ದಕ್ಕೆ ಹೊಂದಿಕೆಯಾಗುವುದಿಲ್ಲ.
ಆಫರ್‌ನಲ್ಲಿ ಇಕೋ, ಸ್ಟ್ಯಾಂಡರ್ಡ್ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳಿವೆ. ಇವು ಥ್ರೊಟಲ್ ಪ್ರತಿಕ್ರಿಯೆ ಮತ್ತು ಸ್ಟೀರಿಂಗ್ ತೂಕದಲ್ಲಿ ಬದಲಾವಣೆಯನ್ನು ತರುತ್ತದೆ. ಸ್ಟ್ಯಾಂಡರ್ಡ್ ಮೋಡ್‌ನಲ್ಲಿ ಸ್ಟೀರಿಂಗ್ ಸಾಕಷ್ಟು ಹಗುರವಾಗಿದ್ದು, ಪಾರ್ಕಿಂಗ್ ಮಾಡುವಾಗ ತುಂಬಾ ಆರಾಮವೆನಿಸುತ್ತದೆ.

2024 ನಿಸ್ಸಾನ್ ಎಕ್ಸ್-ಟ್ರಯಲ್‌ನ ಸಸ್ಪೆನ್ಶನ್ ಸೆಟಪ್ ಸಾಕಷ್ಟು ಮೃದುವಾಗಿದ್ದು, ನೀವು ಹೆಚ್ಚಿನ ವೇಗದಲ್ಲಿ ಗುಂಡಿಯಲ್ಲಿ ಓಡಿಸುವುದನ್ನು ಹೊರತುಪಡಿಸಿ, ಇತರ ಎಲ್ಲಾ ರಸ್ತೆಗಳನ್ನು ಸುಲಭವಾಗಿ ವ್ಯವಹರಿಸುತ್ತದೆ. ಮೃದುವಾದ ಸಸ್ಪೆನ್ಷನ್ ಎಂದರೆ ಹೆಚ್ಚಿನ ತಿರುವ ಇರುವ ರಸ್ತೆಗಳಲ್ಲಿ ಸ್ವಲ್ಪ ಬಾಡಿ ರೋಲ್ ಇದೆ. ಆದರೆ ಹೆಚ್ಚಿನ ವೇಗದಲ್ಲಿ ಹೆದ್ದಾರಿಯಲ್ಲಿ, ಎಕ್ಸ್-ಟ್ರಯಲ್ ನೆಟ್ಟಂತೆ ಭಾಸವಾಗುತ್ತದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ನಿಸ್ಸಾನ್ ಎಕ್ಸ್-ಟ್ರಯಲ್ ಜಪಾನಿನ ಮಾರ್ಕ್ ಸುಮಾರು ಒಂದು ದಶಕದ ನಂತರ ಭಾರತೀಯ ಕಾರು ಮಾರುಕಟ್ಟೆಗೆ ಹೆಚ್ಚು ಇಷ್ಟವಾದ ಹೆಸರನ್ನು ಮರಳಿ ತರುತ್ತಿರುವುದು ಖುಷಿಯ ವಿಚಾರ. ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಒಂದು ಪರಿಪೂರ್ಣ SUV ಆಗಿದ್ದು, ಇದು ನಗರದಲ್ಲಿ ಮತ್ತು ದೀರ್ಘ ಪ್ರಯಾಣಗಳಿಗೆ ಆರಾಮದಾಯಕವಾಗಿದೆ, ಇದು ದೊಡ್ಡ ಫ್ಯಾಮಿಲಿ SUV ಅನ್ನು ಹುಡುಕುತ್ತಿರುವವರಿಗೆ ಪರಿಪೂರ್ಣ ಆಯ್ಕೆಯಾಗಿದೆ.


Click it and Unblock the Notifications








