ಬಿವೈಡಿ ಇಮ್ಯಾಕ್ಸ್ 7 ರಿವ್ಯೂ: ಚೀನಾದ ಕಾರೆಂದು ಚಿಂತಿಸಬೇಡಿ... ಗರಿಷ್ಠ ಸುರಕ್ಷತೆಯ ಅದ್ಭುತ ಫ್ಯಾಮಿಲಿ ಕಾರು
ವಿಶ್ವದಾದ್ಯಂತ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಚೀನಾ ಮೂಲದ ಬಿವೈಡಿ (BYD) ಗುರುತಿಸಿಕೊಂಡಿದೆ. ಬಿಲ್ಡ್ ಯುವರ್ ಡ್ರೀಮ್ (ಬಿವೈಡಿ) ಕಂಪನಿಯು ಜನಪ್ರಿಯ ಟೆಸ್ಲಾ ಜೊತೆ ಪೈಪೋಟಿ ನಡೆಸುತ್ತಿದೆ. ಭಾರತಕ್ಕೆ ಬಿವೈಡಿ (BYD) ಕಂಪನಿಯು 2021ರಲ್ಲಿ e6 ಎಂಬ ಮಾದರಿಯೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತು. ಆದರೆ 2022ರಲ್ಲಿ ಬಿವೈಡಿ ಕಂಪನಿಯು ಸಾರ್ವಜನಿಕರಿಗಾಗಿ e6 ಮಾರಾಟ ಪ್ರಾರಂಭಿಸಿತು. ನಂತರ ಬಿವೈಡಿ ಕಂಪನಿಯು ಆಟ್ಟೊ 3 ಕಾಂಪ್ಯಾಕ್ಟ್ ಕ್ರಾಸ್ಒವರ್ ಬಿಡುಗಡೆಗೊಳಿಸಿತು. ಈ ವರ್ಷದ ಆರಂಭದಲ್ಲಿ ಮಾರ್ಚ್‌ನಲ್ಲಿ ಸೀಲ್ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ಬಿಡುಗಡೆಗೊಳಿಸಿತು.
ಎಸ್‍ಯುವಿ, ಐಷಾರಾಮಿ ಸ್ಪೋರ್ಟ್ಸ್ ಕಾರಿನಂತಹ ವ್ಯಾಪಕ ಕಾರುಗಳ ಸರಣಿಯನ್ನು ಹೊಂದಿರುವ ಬಿವೈಡಿ (BYD) ಬ್ರ್ಯಾಂಡ್ ಜನರನ್ನು ಆಕರ್ಷಿಸುತ್ತಿದೆ. ಬಿವೈಡಿ ಕಂಪನಿಯು ತನ್ನ ಹೊಸ ಬಿವೈಡಿ ಇಮ್ಯಾಕ್ಸ್ 7 (BYD eMax 7) ಎಂಪಿವಿ ಕಾರನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಬಿವೈಡಿ ಇಮ್ಯಾಕ್ಸ್ 7 ಎಲೆಕ್ಟ್ರಿಕ್ ಕಾರನ್ನು ನಾವು ಇತ್ತೀಚೆಗೆ ಚೆನ್ನೈನಲ್ಲಿ ಡ್ರೈವ್ ಮಾಡಿದ್ದೇವೆ. ಈ ಕಾರಿನ ವಿನ್ಯಾಸ, ಫೀಚರ್ಸ್, ಪರ್ಫಾಮೆನ್ಸ್, ಡ್ರೈವಿಂಗ್ ಅನುಭವ ಮತ್ತು ಹೆಚ್ಚಿನ ಮಾಹಿತಿ ಇಲ್ಲಿದೆ.

ವಿನ್ಯಾಸ: ಹೊಸ ಬಿವೈಡಿ ಇಮ್ಯಾಕ್ಸ್ 7 ಕಾರು ಮುಂಭಾಗವು "ಡ್ರ್ಯಾಗನ್ ಫೇಸ್" ವಿನ್ಯಾಸವನ್ನು ಹೊಂದಿದೆ. ಈ ಬಿವೈಡಿ ಎಂಪಿವಿಯು ಹೊಸ LED ಹೆಡ್‌ಲ್ಯಾಂಪ್‌ಗಳನ್ನು LED ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಪಡೆಯುತ್ತದೆ ಮತ್ತು ಅದರ ಮೇಲೆ BYD ನೇಮ್‌ಪ್ಲೇಟ್‌ನೊಂದಿಗೆ ಕ್ರೋಮ್ ಬಾರ್ ಕನೆಕ್ಟ್ ಅನ್ನು ಹೊಂದಿದೆ.
ಈ ಹೊಸ ಕಾರಿನ ಮುಂಭಾಗದ ಬಂಪರ್ ಮತ್ತು ದೊಡ್ಡ ಸೆಂಟ್ರಲ್ ಏರ್ ಇನ್‌ಟೇಕ್ ಅನ್ನು ಒಳಗೊಂಡಿವೆ, ಸಾಮಾನ್ಯ ICE ವಾಹನದಲ್ಲಿರುವಂತೆ ಇದು ADAS ಲೆವೆಲ್ 2 ಗಾಗಿ ಕೆಲವು ಕಿಟ್‌ಗಳನ್ನು ಹೊಂದಿದೆ. ಇನ್ನು 225/55 R17 ಟೈರ್‌ಗಳಲ್ಲಿ ಹೊಸ ವಿನ್ಯಾಸದ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಕೂಡ ಹೊಂದಿವೆ.

ಈ ಬಿವೈಡಿ ಇಮ್ಯಾಕ್ಸ್ 7 ಕಾರಿನಲ್ಲಿ ಹೊಸ ಕನೆಕ್ಟಿವಿಟಿ ED ಟೈಲ್‌ಲ್ಯಾಂಪ್‌ಗಳನ್ನು ಹೆಡ್‌ಲ್ಯಾಂಪ್‌ಗಳಂತೆಯೇ ಕ್ರೋಮ್ ಸ್ಟ್ರಿಪ್ ಅಂಶಗಳೊಂದಿಗೆ ಹೊಂದಿದೆ. ಇನ್ನು ಇಮ್ಯಾಕ್ಸ್ 7 ಬ್ಯಾಡ್ಜಿಂಗ್ ಅನ್ನು ನೀಡಲಾಗಿದೆ. ಈ ಹೊಸ ಎಂಪಿವಿಯು 180-ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದ್ದು, ಇನ್ನು ಮೂರನೇ ಸಾಲಿನ ಸೀಟುಗಳನ್ನು ಮಾಡಿಚಿದರೆ ಬೂಟ್ ಸ್ಪೇಸ್ ಅನ್ನು 400 ಲೀಟರ್‌ಗಳಿಂದ 580 ಲೀಟರ್‌ಗಳಿಗೆ ಹೆಚ್ಚಿಸಬಹುದು.
ಇಂಟಿರಿಯರ್ ಮತ್ತು ಫೀಚರ್ಸ್: ಈ ಹೊಸ ಬಿವೈಡಿ ಇಮ್ಯಾಕ್ಸ್ 7 ಕಾರು ಒಳಾಭಗದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಗಮನಿಸಬಹುದು. ಅತ್ಯಂತ ಸುಲಭವಾಗಿ ಗಮನಿಸಬಹುದಾದ ಬದಲಾವಣೆಯೆಂದರೆ ಫಾಕ್ಸ್ ಲೆದರ್ ಸೀಟ್ ಅಪ್ಹೋಲ್‌ಸ್ಟರಿ, ಇದು ಕಂದು ಬಣ್ಣದ ಬಣ್ಣವನ್ನು ಹೊಂದಿದಿದೆ. ಈ ಎಂಪಿವಿಯು 7 ಮತ್ತು 6 ಸೀಟಿಂಗ್ ಆಯ್ಕೆಗಳನ್ನು ಮಾರಾಟ ಮಾಡಲಾಗುತ್ತದೆ.

ಈ ಕಾರಿನಲ್ಲಿ ದೊಡ್ಡದಾದ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ಅನ್ನು ಸಹ ಹೊಂದಿದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಸಂಪೂರ್ಟ್ ಮಾಡುತ್ತದೆ. ಮತ್ತು ಆನ್‌ಬೋರ್ಡ್ ಸಟ್ನಾವ್ ಅನ್ನು ಸಹ ನೀಡುತ್ತದೆ. ಅನಲಾಗ್ ಸೂಜಿ ಟರ್ನರ್‌ಗಳ ನಡುವೆ ಇರುವ 5-ಇಂಚಿನ ಮಲ್ಟಿ-ಇನ್ಫೋರ್ ಮೆಶನ್ಡಿಸ್‌ಪ್ಲೇ ಸೇರಿದಂತೆ ಅದರ ಹಿಂದೆ ಡಯಲ್‌ಗಳೊಂದಿಗೆ ಹೊಸ ಸ್ಟೀರಿಂಗ್ ವೀಲ್ ಕೂಡ ಇದೆ.
ಹೊಸ ಗೇರ್ ಲಿವರ್, ಡ್ರೈವ್ ಮೋಡ್ ಸೆಲೆಕ್ಟರ್, ಹಾಗೆಯೇ ಡಿಫಾಗ್ಗರ್‌ಗಳು ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳ ಕಂಟ್ರೋಲ್ ಗಳನ್ನು ಒಳಗೊಂಡಂತೆ ಸೆಂಟ್ರಲ್ ಕನ್ಸೋಲ್‌ನಲ್ಲಿ ಹೊಸ ಸ್ವಿಚ್‌ಗಿಯರ್ ಅನ್ನು ಸಹ ಕಾಣಬಹುದು. ಮಧ್ಯದ ಸಾಲಿನ ಸೀಟುಗಳನ್ನು ಏಳು-ಸೀಟುಗಳನ ಮಾದರಿಯಲ್ಲಿ ಬೆಂಚ್ ರೂಪದಲ್ಲಿ ಅಥವಾ ಆರು-ಸೀಟುಗಳನ ಮಾದರಿಯಲ್ಲಿ ಕ್ಯಾಪ್ಟನ್ ಸೀಟ್‌ಗಳಾಗಿ ನೀಡಲಾಗುತ್ತದೆ. ಮೂರನೇ ಸಾಲಿನ ಸೀಟುಗಳು ಹೆಚ್ಚು ಮಕ್ಕಳಿಗೆ ಓಕೆ ಆಗಿದೆ.

ಇತರ ಪ್ರಮುಖ ಫೀಚರ್ಸ್ ಗಳಾಗಿ, ಪನರೊಮಿಕ್ ಗ್ಲಾಸ್ ರೂಫ್, ಪವರ್ಡ್ ಮತ್ತು ವೆಂಟಿಲೆಟಡ್ ಸೀಟುಗಳು, ಫ್ರೇಮ್‌ಲೆಸ್ ಫ್ರಂಟ್ ವೈಪರ್‌ಗಳು ಮತ್ತು ರೂಫ್ ರೈಲ್‌ಗಳು, ಇತರ ಬಿಟ್‌ಗಳೊಂದಿಗೆ ಬರುತ್ತದೆ.ಎರಡನೇ ಮತ್ತು ಮೂರನೇ ಸಾಲುಗಳಿಗಾಗಿ AC ಸಿಸ್ಟಮ್‌ಗಾಗಿ ರೂಫ್-ಮೌಂಟೆಡ್ ವೆಂಟ್‌ಗಳು, 360-ಡಿಗ್ರಿ ಕ್ಯಾಮೆರಾ, ಬಹು USB A. ಮತ್ತು ಸಿ ಪೋರ್ಟ್‌ಗಳು ಮತ್ತು ಡ್ಯುಯಲ್ ವೈರ್‌ಲೆಸ್ ಫೋನ್ ಚಾರ್ಜರ್‌ಗಳಳಿವೆ.
ಸುರಕ್ಷತಾ ಫೀಚರ್ಸ್: ಈ ಕಾರಿನಲ್ಲಿ ಸುರಕ್ಷತೆಗಾಗಿ, 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ESC, ಟ್ರಾಕ್ಷನ್ ಕಂಟ್ರೋಲ್, ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು TPMS ಅನ್ನು ಒಳಗೊಂಡಿದೆ. ಇದರೊಂದಿಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಅಟಾನಮಸ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪಿಂಗ್ ಅಸಿಸ್ಟ್, ಲ್ಯಾಂಡೆ ಡಿಪಾರ್ಚರ್ ವಾರ್ನಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ನಂತಹ ಫೀಚರ್ಸ್ ಗಳೊಂದಿಗೆ ಲೆವೆಲ್ 2 ಎಡಿಎಎಸ್ ಸೆಟಪ್ ಅನ್ನು ಸಹ ಹೊಂದಿದೆ.

ಪವರ್‌ಟ್ರೇನ್: ಹೊಸ ಬಿವೈಡಿ ಇಮ್ಯಾಕ್ಸ್ 7 ಕಾರಿನಲ್ಲಿ ದೊಡ್ಡ ಬದಲಾವಣೆಗಳು ಪವರ್‌ಟ್ರೇನ್ ರೂಪದಲ್ಲಿ ಬರುತ್ತವೆ. ಈ ಕಾರಿನ ಪ್ರೀಮಿಯಂ ಮತ್ತು ಸುಪೀರಿಯರ್ ರೂಪಾಂತರಗಳಲ್ಲಿ ಎರಡು ಬ್ಯಾಟರಿ ಪ್ಯಾಕ್‌ಗಳಲ್ಲಿ ದೊಡ್ಡದಾಗಿದೆ. ಈ ಕಾರಿನ ಪ್ರೀಮಿಯಂ ರೂಪಾಂತರ 55.4kWh ಬ್ಯಾಟರಿ ಪ್ಯಾಕ್ ಮತ್ತು ಸುಪೀರಿಯರ್ ಮಾದರಿಯು 71.8kWh ಬ್ಯಾಟರಿ ಪ್ಯಾಕ್ ಹೊಂದಿದೆ. ಪ್ರೀಮಿಯಂ ಟ್ರಿಮ್ 163hp ಪವರ್ ಮತ್ತುಸುಪೀರಿಯರ್ ಮಾದರಿಯು 204hp ಪವರ್ ಉತ್ಪಾದಿಸುತ್ತದೆ. ಎರಡೂ ರೂಪಾಂತರಗಳು 310Nm ಟಾರ್ಕ್ ಉತ್ಪಾದಿಸುತ್ತದೆ.
ಡ್ರೈವಿಂಗ್ ಅನುಭವ: ಹೊಸ ಬಿವೈಡಿ ಇಮ್ಯಾಕ್ಸ್ 7 ಕಾರಿನಲ್ಲಿ ಡ್ರೈವಿಂಗ್ ವೇಲೆ ಪವರ್ ಡೆಲಿವರಿ ಉತ್ತಮವಾಗಿದೆ. ನಗರದಲ್ಲಿ ಡ್ರೈವಿಂಗ್ ಅನುಭವ ಅದ್ಭುತವಾಗಿದೆ. ಕಡಿಮೆ ವೇಗದಲ್ಲಿ, ಸ್ಟೀರಿಂಗ್ ಸಾಕಷ್ಟು ಹಗುರವಾಗಿರುತ್ತದೆ. ನಗರದ ಬೀದಿಗಳಲ್ಲಿ ಸುಲಭವಾಗಿ ಡ್ರೈವ್ ಮಾಡಬಹುದು. ಹೊಸ ಬಿವೈಡಿ ಇಮ್ಯಾಕ್ಸ್ 7 ಕಾರಿನಲ್ಲಿ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳಿವೆ.

ಈ ಕಾರಿನ ಇಕೋ ಮೋಡ್ ಸಾಕಷ್ಟು ಶಾಂತವಾಗಿರುತ್ತದೆ, ಸಾಮಾನ್ಯ ಡ್ರೈವಿಂಗ್ ಅನುಭವನ್ನು ನೀಡುತ್ತದೆ. ನಾರ್ಮಲ್ ಮೋಡ್ ಕೂಡ ನಿರೀಕ್ಷಿಸುವ ಪವರ್ ನೊಂದಿಗೆ ಚಲಿಸುತ್ತದೆ. ಇನ್ನು ಸ್ಪೋರ್ಟ್ ಮೋಡ್ ನಲ್ಲಿ ಹೆಚ್ಚಿನ ಪವರ್ ಮತ್ತು ತ್ವರಿತ ಟಾರ್ಕ್‌ನೊಂದಿಗೆ ಪರ್ಫಾಮೆನ್ಸ್ ಕಾರಿನಂತೆ ಡ್ರೈವಿಂಗ್ ಅನುಭವವನ್ನು ನೀಡುತ್ತದೆ. ಇದು ನಿಮಗೆ ಸುಲಭವಾಗಿ ಮೂರು ಅಂಕಿಗಳ ವೇಗವನ್ನು ಪಡೆದುಕೊಳ್ಳುತ್ತದೆ.
ಈ ಕಾರಿನ ಸಸ್ಪೆಕ್ಷನ್ ತುಂಬಾ ಗಟ್ಟಿಯಾಗಿಲ್ಲ, ನೀವು ರಸ್ತೆಯ ಉಬ್ಬುಗಳಲ್ಲಿ ಚಲಿಸುವಾಗ ಇದು ಅನುಭವಾಗುತ್ತದೆ. ಇನ್ನು ಈ ಕಾರಿನ ಬ್ರೇಕಿಂಗ್ ಸಿಸ್ಟಂ ಮುಂಭಾಗದಲ್ಲಿ ಏರ್ ಇರುವ ಡಿಸ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಸಾಮಾನ್ಯ ಡಿಸ್ಕ್‌ಗಳನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಈ ಎಲೆಕ್ಟ್ರಿಕ್ ಕಾರು ನಿಮಗೆ ಉತ್ತಮ ಡ್ರೈವಿಂಗ್ ಅನುಭವವನ್ನು ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಇಡೀ ಕುಟುಂಬವುಆದಂಬರದೊಂದಿಗೆ ಪ್ರಯಾಣ ಮಾಡಲು ಉತ್ತಮ ಫ್ಯಾಮಿಲಿ ಕಾರ್ ಆಗಿ ಆಯ್ಕೆ ಮಾಡಿಕೊಳ್ಳಬಹುದು. ನೀವು ಸಿಟಿಯಿಂದ ಹೊರಗೆ ದೂರ ಪ್ರಯಾಣಿಸಲು ಕೂಡ ಈ ಐಷಾರಾಮಿ ಬಿವೈಡಿ ಇಮ್ಯಾಕ್ಸ್ 7 ಎಲೆಕ್ಟ್ರಿಕ್ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದು. ಇನ್ನು ಆಕರ್ಷಕ ವಿನ್ಯಾಸ, ಭರ್ಜರಿ ಪರ್ಫಾಮೆನ್ಸ್ ಜೊತೆಗೆ ಲಕ್ಷುರಿ ಫಿಚರ್ಸ್ ಗಳನ್ನು ಹೊಂದಿವೆ.


Click it and Unblock the Notifications








