BYD Seal Review: 580 ಕಿ.ಮೀ ಓಡುವ ಬಿವೈಡಿ ಸೀಲ್ ಎಲೆಕ್ಟ್ರಿಕ್ ಕಾರಿನ ವಿಮರ್ಶೆ.. ಹೇಗಿದೆ ಗೊತ್ತಾ?

ಚೀನಾದ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಬಿಲ್ಡ್ ಯುವರ್ ಡ್ರೀಮ್ಸ್ (ಬಿವೈಡಿ - BYD), 2017ರಲ್ಲಿ ಎಲೆಕ್ಟ್ರಿಕ್ ಬಸ್‌ಗಳೊಂದಿಗೆ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿತು. ಆ ಬಳಿಕ, 2021ರಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು 'ಇ6' ಅನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತು.

ಮೊದಲಿಗೆ 'ಇ6' ಎಂಪಿವಿಯನ್ನು ವಾಣಿಜ್ಯ ಬಳಕೆಗಾಗಿ ಮಾತ್ರ ಮಾರಾಟಗೊಳಿಸಲಾಗುತ್ತಿತ್ತು. ಅಂತಿಮವಾಗಿ 2022ರಲ್ಲಿ ಈ ಎಂಪಿವಿಯನ್ನು ಎಲ್ಲ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಾಯಿತು. ಅದೇ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಬಿವೈಡಿ ಕಂಪನಿಯು ತನ್ನ ಎರಡನೇ ಎಲೆಕ್ಟ್ರಿಕ್ ಕಾರು ಆಟ್ಟೋ 3 (Atto 3)ಯನ್ನು ಪರಿಚಯಿಸಿತ್ತು. ಇತ್ತೀಚೆಗೆ, ನೂತನ ಸೀಲ್ (Seal) ಸೆಡಾನ್‌ನ್ನು ಹೊರತಂದಿದೆ.

BYD Seal Car Review

ನಮ್ಮ 'ಡ್ರೈವ್ ಸ್ಪಾರ್ಕ್' ತಂಡದ ಪ್ರತಿನಿಧಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹೊಚ್ಚ ಹೊಸ ಬಿವೈಡಿ ಸೀಲ್ (BYD Seal) ಸೆಡಾನ್ ಟೆಸ್ಟ್ ಡ್ರೈವ್ ನಡೆಸಲು ಅವಕಾಶ ದೊರೆಯಿತು. ಈ ಕಾರಿನ ವಿನ್ಯಾಸವೇನು, ಕಾರ್ಯಕ್ಷಮತೆ ಹೇಗಿದೆ, ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದರ ಕುರಿತು ಸಂಪೂರ್ಣವಾಗಿ ವಿವರಿಸಿದ್ದೇವೆ... ಬನ್ನಿ ತಿಳಿಯೋಣ.

ಬಿವೈಡಿ ಸೀಲ್ ಹೊರಭಾಗದ ವಿನ್ಯಾಸ: ಈ ಕಾರು ನೋಡುಗರ ಕಣ್ಮನ ಸೆಳೆಯುವ ಅತ್ಯಾಧುನಿಕ ವಿನ್ಯಾಸ (ಡಿಸೈನ್)ವನ್ನು ಪಡೆದಿದೆ. ಸಾಗರ (Ocean)ದ ಮನೋಜ್ಞ ಪರಿಕಲ್ಪನೆಯನ್ನು ಆಧರಿಸಿದ್ದು, ಬರೋಬ್ಬರಿ 4,800 ಎಂಎಂ ಉದ್ದವಿದೆ. ಇದು ಬಿಎಂಡಬ್ಲ್ಯೂ 3 ಸೀರಿಯಸ್ ಕಾರಿನ ವೀಲ್-ಬೇಸ್‌ಗೆ ಸಮನಾಗಿದೆ. ಇದರ ಮುಂಭಾಗ (ಫ್ರಂಟ್) ಆಕರ್ಷಕ ಸ್ಪ್ಲಿಟ್ ಲೈಟಿಂಗ್ ಸೆಟಪ್ ಅನ್ನು ಒಳಗೊಂಡಿದೆ. ಬಾನೆಟ್‌ನ ಪಕ್ಕದಲ್ಲಿ ಹೆಡ್‌ಲೈಟ್‌ಗಳಿದ್ದು, ಆಕರ್ಷಕ ಎಲ್‌ಇಡಿ ಡಿಆರ್‌ಎಲ್‌ಗಳನ್ನೂ ಹೊಂದಿದೆ.

BYD Seal Car Review

ಇದೇ ಮುಂಭಾಗದ ಬಾನೆಟ್‌ನೊಳಗೆ 50-ಲೀಟರ್ ಸಾಮರ್ಥ್ಯದ ಫ್ರಂಕ್ (ಪುಟ್ಟ ಸ್ಟೋರೇಜ್) ಕೂಡ ಒಳಗೊಂಡಿದ್ದು, ಚಾರ್ಜರ್ & ಚಾರ್ಜಿಂಗ್ ಕೇಬಲ್‌ಗಳನ್ನು ಸುಲಭವಾಗಿ ಇಡಬಹುದು. ಮೇಲ್ಭಾಗ (ರೂಫ್) ಕೂಪ್ ರೀತಿಯ ಆಕಾರವನ್ನು ಪಡೆದಿದೆ. ಅಂದರೆ ಮೇಲ್ಛಾವಣಿಯನ್ನು ಬಗ್ಗಿಸಲಾಗಿದೆ. ಇದನ್ನು ಗಾಜಿನಿಂದ ಮಾಡಲಾಗಿದ್ದು, ತಾಪಮಾನವನ್ನು ಹೀರಿಕೊಳ್ಳುವಂತೆ ಸಿದ್ದಪಡಿಸಲಾಗಿದೆ.

ನೂತನ ಬಿವೈಡಿ ಸೀಲ್ ಸೆಡಾನ್ ಬದಿ (ಸೈಡ್)ಗಳ ವಿನ್ಯಾಸವು ಅತ್ಯುತ್ತಮವಾಗಿದ್ದು, ಫ್ಲಶ್ ಡೋರ್ ಹ್ಯಾಂಡಲ್‌ಗಳನ್ನು ತನ್ನದಾಗಿಸಿಕೊಂಡಿದೆ. ಹೆಚ್ಚಿನ ದೂರವನ್ನು ಆರಾಮದಾಯಕವಾಗಿ ಪ್ರಯಾಣಿಸಲು ಸಾಧ್ಯವಾಗುವಂತೆ 19-ಇಂಚಿನ ಏರೋ ವೀಲ್ (ಚಕ್ರ)ಗಳನ್ನು ಕೂಡ ಪಡೆದಿದೆ. ಹಿಂಭಾಗ (ರೇರ್)ವು ಸಾಕಷ್ಟು ಉತ್ತಮವಾಗಿದ್ದು, ಬೂಟ್‌ನಲ್ಲಿ ಫುಲ್ ವಿಡ್ತ್ (ಪೂರ್ಣ-ಅಗಲ) ಲೈಟ್-ಬಾರ್‌ಗೆ ಹೊಂದಿಕೆಯಾಗುವ ಟೈಲ್‌ಲೈಟ್ ಪಡೆದಿದೆ.

BYD Seal Car Review

ಈ ಕಾರು ಹೆಚ್ಚು ಲಗೇಜ್ ಇಡಲು 400 ಲೀಟರ್ ಸಾಮರ್ಥ್ಯದ ಬೂಟ್‌ ಸ್ಪೇಸ್ (ಡಿಕ್ಕಿ) ಅನ್ನು ಹೊಂದಿದೆ. ಇದರಿಂದ ಪ್ರವಾಸ ಅಥವಾ ದೂರದ ಊರುಗಳಿಗೆ ಹೋಗುವ ಸಂದರ್ಭದಲ್ಲಿ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಆದರೆ, ಸ್ಪೇರ್ ವೀಲ್ (ಹೆಚ್ಚುವರಿ ಚಕ್ರ) ಇಲ್ಲದಿರುವುದು ಸ್ವಲ್ಪ ಬೇಸರವನ್ನು ತರಿಸುತ್ತದೆ.

ಬಿವೈಡಿ ಸೀಲ್ ಒಳಭಾಗದ ವಿನ್ಯಾಸ ಮತ್ತು ವೈಶಿಷ್ಟ್ಯಗಳು: ಈ ಕಾರಿನ ಕ್ಯಾಬಿನ್‌ ಬಹಳಷ್ಟು ಐಷಾರಾಮಿಯಾಗಿದೆ. ಡ್ಯಾಶ್‌ಬೋರ್ಡ್‌ನಿಂದ ಹಿಡಿದು ಡೋರ್ (ಬಾಗಿಲು)ಗಳನ್ನು ಗುಣಮಟ್ಟದ ವಸ್ತುಗಳನ್ನು ಬಳಸಿ ತಯಾರಿಸಲಾಗಿದೆ. ಡ್ಯಾಶ್‌ಬೋರ್ಡ್‌ ಮಧ್ಯಭಾಗದಲ್ಲಿ ಆಟ್ಟೋ 3 ಕಾರಿನಂತೆ ಬೃಹದಾಕಾರದ 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ಹೊಂದಿದೆ. ಇದನ್ನು ಸುಲಭವಾಗಿ ತಿರುಗಿಸಬಹುದು.

BYD Seal Car Review

ಈ ಇನ್ಫೋಟೈನ್‌ಮೆಂಟ್ ಸ್ಕ್ರೀನ್ 'ವೈರ್‌ಲೆಸ್ ಆಂಡ್ರಾಯ್ಡ್ ಆಟೋ'ವನ್ನು ಸಪೋರ್ಟ್ (ಬೆಂಬಲ) ಮಾಡಲಿದ್ದು, ಪ್ರಯಾಣಿಕರಿಗೆ ಅತ್ಯುತ್ತಮ ಅನುಭವವನ್ನು ಒದಗಿಸುತ್ತದೆ. ಜೊತೆಗೆ ಏರ್ ಕಂಡೀಷನ್ ಕಂಟ್ರೋಲ್ ಸಿಸ್ಟಮ್ ಸೇರಿದಂತೆ ವಿವಿಧ ಮೆನುಗಳನ್ನು ಒಳಗೊಂಡಿದೆ. ಮತ್ತೊಂದು 10.25-ಇಂಚಿನ ಡಿಸ್ಪ್ಲೇಯು ಸ್ಟೀರಿಂಗ್ ವೀಲ್ ಹಿಂಭಾಗದಲ್ಲಿದ್ದು, ಚಾಲಕರಿಗೆ ಪ್ರಯಾಣದ ವೇಳೆಯಲ್ಲಿ ಅಗತ್ಯವಿರುವ ಎಲ್ಲ ವಿವರವನ್ನು ತೋರಿಸುತ್ತದೆ.

ಹೆಡ್ಸ್ ಅಪ್ ಡಿಸ್ಪ್ಲೇ, 360 - ಡಿಗ್ರಿ ಕ್ಯಾಮೆರಾ, ಪ್ರೀಮಿಯಂ ಆಡಿಯೋ ಸಿಸ್ಟಮ್, 2 ವೈರ್‌ಲೆಸ್ ಫೋನ್ ಚಾರ್ಜಿಂಗ್ ಪ್ಯಾಡ್‌, ಯುಎಸ್‌‍ಬಿ ಎ & ಸಿ ಪೋರ್ಟ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ತೆರಳಬಹುದು.

BYD Seal Car Review

ಬಿವೈಡಿ ಸೀಲ್ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ನೀಡುತ್ತದೆ. ಈ ಕಾರು, ಯುರೋ ಎನ್‌ಸಿಎಪಿ (Euro NCAP) ಕ್ರ್ಯಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ವಯಸ್ಕ ಮತ್ತು ಮಕ್ಕಳ ರಕ್ಷಣೆ ವಿಭಾಗದಲ್ಲಿ ಶೇಕಡ 89%ಗೆ 86% ಅಂಕಗಳನ್ನು ಗಳಿಸಿದೆ. 9 ಏರ್‌ಬ್ಯಾಗ್‌, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಒಳಗೊಂಡಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಬಿವೈಡಿ ಸೀಲ್ ಬೆಲೆ ಮತ್ತು ಕಾರ್ಯಕ್ಷಮತೆ: ಈ ಕಾರು ದೇಶೀಯ ಮಾರುಕಟ್ಟೆಯಲ್ಲಿ ಮೂರು ರೂಪಾಂತರಗಳ ಆಯ್ಕೆಯಲ್ಲಿ ಖರೀದಿದಾರರಿಗೆ ಲಭ್ಯವಿದೆ. ಡೈನಾಮಿಕ್ ರೂ.41 ಲಕ್ಷ, ಪ್ರೀಮಿಯಂ ರೂ.45.5 ಲಕ್ಷ ಹಾಗೂ ಪರ್ಫಾರ್ಮೆನ್ಸ್ ರೂ.53 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಡೈನಾಮಿಕ್ & ಪ್ರೀಮಿಯಂ ಮಾದರಿಗಳು ಸಿಂಗಲ್ ಮೋಟರ್-ರೇರ್ ವೀಲ್ ಡ್ರೈವ್ ಅನ್ನು ಹೊಂದಿವೆ. ಪರ್ಫಾರ್ಮೆನ್ಸ್ ಆವೃತ್ತಿಯು ಟೂ ಎಲೆಕ್ಟ್ರಿಕ್ ಮೋಟಾರ್-ಆಲ್ ವೀಲ್ ಡೈವ್ ತಂತ್ರಜ್ಞಾನವನ್ನು ಪಡೆದಿದೆ.

BYD Seal Car Review

ಈ ಸೀಲ್ ಸೆಡಾನ್, ಬಿವೈಡಿ ಕಂಪನಿಯ ಮಾಡ್ಯುಲರ್ ಇ - ಪ್ಲಾಟ್‌ಫಾರ್ಮ್ 3.0 ಸೆಟಪ್‌ನ್ನು ಆಧರಿಸಿದ್ದು, 800ವಿ ಎಲೆಕ್ಟ್ರಿಕಲ್ ಆರ್ಕಿಟೆಕ್ಚರ್ ಅನ್ನು ಹೊಂದಿದೆ. ವಿಶೇಷವಾಗಿ ಚಾಸಿಸ್‌ನಲ್ಲಿ ಬ್ಲೇಡ್ ಎಲ್‌ಎಸ್‌ಪಿ ಬ್ಯಾಟರಿಯನ್ನು ಅಳವಡಿಕೆ ಮಾಡಲಾಗಿದ್ದು, ಪ್ರಯಾಣದ ವೇಳೆಯಲ್ಲಿ ಹೆಚ್ಚಿನ ಸುರಕ್ಷತೆಯನ್ನು ಖಾತ್ರಿ ಪಡಿಸುತ್ತದೆ ಎಂದು ಹೇಳಬಹುದು.

ಬಿವೈಡಿ ಸೀಲ್ ಆರಂಭಿಕ ರೂಪಾಂತರವಾಗಿರುವ 'ಡೈನಾಮಿಕ್' 61.44 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 510 ಕಿಲೋಮಿಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್, 201 ಬಿಹೆಚ್‍ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 310 ಎನ್ಎಂ ಪೀಕ್ ಟಾರ್ಕ್ಉತ್ಪಾದಿಸುತ್ತದೆ. ಕೇವಲ 7.5 ಸೆಕೆಂಡುಗಳಲ್ಲಿ 0-100 ಕೆಎಂ/ಹೆಚ್ ವೇಗವನ್ನು ಪಡೆಯುತ್ತದೆ.

BYD Seal Car Review

ಬಿವೈಡಿ ಸೀಲ್ 'ಪ್ರೀಮಿಯಂ' ಮಾದರಿ, 82.56 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಪಡೆದಿದ್ದು, ಭರ್ತಿ ಚಾರ್ಜ್ ನಲ್ಲಿ 650 ಕಿ.ಮೀ ಕ್ರಮಿಸುತ್ತದೆ. ಈ ಕಾರಿನೊಳಗಿರುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ 308 ಬಿಹೆಚ್‍ಪಿ ಪವರ್ ಹಾಗೂ 360 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ 5.9 ಸೆಕೆಂಡುಗಳಲ್ಲಿ 0-100 ಕೆಎಂ/ಹೆಚ್ ವೇಗವನ್ನು ಹೊಂದಲಿದೆ.

'ಪರ್ಫಾರ್ಮೆನ್ಸ್' ಆವೃತ್ತಿಯು ಕೂಡ 82.56 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಭರ್ತಿ ಚಾರ್ಜ್ ನಲ್ಲಿ 580 ಕಿ.ಮೀ ಓಡುತ್ತದೆ. ಇದರಲ್ಲಿರುವ ಟೂ ಎಲೆಕ್ಟ್ರಿಕ್ ಮೋಟಾರ್ 523 ಬಿಹೆಚ್‍ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 670 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 3.8 ಸೆಕೆಂಡುಗಳಲ್ಲಿ 0-100 ಕೆಎಂ/ಹೆಚ್ ವೇಗವನ್ನು ಪಡೆಯಲಿದೆ.

ಚಾರ್ಜಿಂಗ್ ವಿಚಾರಕ್ಕೆ ಬರುವುದಾದರೆ, ದೊಡ್ಡದಾದ ಬ್ಯಾಟರಿ ಪ್ಯಾಕ್ ಪಡೆದಿರುವ ಈ ಸೀಲ್ ಕಾರಿನ ರೂಪಾಂತರಗಳು 150ಕೆಡಬ್ಲ್ಯೂ ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಗೆ ಹೊಂದಾಣಿಕೆಯಾಗುತ್ತವೆ. ಇದರ ಬಳಕೆಯಲ್ಲಿ ಕೇವಲ 45 ನಿಮಿಷಗಳಲ್ಲಿ ಶೇಕಡ 0-80% ಬ್ಯಾಟರಿ ಚಾರ್ಜ್ ಆಗುತ್ತದೆ. ಉಳಿದ ಚಾರ್ಜರ್ ಗಳು ನಿಧಾನಗತಿಯಲ್ಲಿ ಬ್ಯಾಟರಿಗೆ ಶಕ್ತಿ (ಪವರ್)ಯನ್ನು ತುಂಬುತ್ತವೆ.

ಚಾಲನಾ ಅನುಭವ: ನಮ್ಮ ತಂಡಕ್ಕೆ ಸೀಲ್ ಕಾರಿನ ಪರ್ಫಾರ್ಮೆನ್ಸ್ ರೂಪಾಂತರವನ್ನು ಓಡಿಸುವ ಅವಕಾಶ ದೊರೆಯಿತು. ಈ ಕಾರಿನ ಎಲ್ಲ ಮಾದರಿಗಳು ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವಿಂಗ್ ಮೋಡ್ ಆಯ್ಕೆಗಳನ್ನು ಹೊಂದಿವೆ. ಚಾಲನೆ ವೇಳೆ, ಒಂದೊಂದು ಮೋಡ್ ನಲ್ಲಿಯೂ ವಿಭಿನ್ನವಾದ ಅನುಭವ ಲಭ್ಯವಾಯಿತು. ಅದರಲ್ಲೂ ಸ್ಪೋರ್ಟ್ ಮೋಡ್‌ನಲ್ಲಿ ಈ ಕಾರು ಕೇವಲ 3.8 ಸೆಕೆಂಡ್ 0-100 ಕೆಎಂ/ಹೆಚ್ ವೇಗವನ್ನು ಪಡೆದಿದ್ದು, ನಮ್ಮನ್ನು ಆಶ್ಚರ್ಯಚಕಿತಗೊಳಿಸಿತು.

ಈ ಬಿವೈಡಿ ಸೀಲ್ ಸೆಡಾನ್ ನ ಸ್ಟೀರಿಂಗ್ ವೀಲ್‌ ಕೂಡ ಚಾಲಕ ಸ್ನೇಹಿಯಾಗಿದ್ದು, ಆರಾಮದಾಯಕವಾಗಿ ಕಾರನ್ನು ಓಡಿಸಲು ನೇರವಾಗುತ್ತದೆ. ಇದು ಗಟ್ಟಿಮುಟ್ಟಾದ ಚಾಸಿಸ್ ಅನ್ನು ಹೊಂದಿದ್ದು, ಉಬ್ಬು-ತಗ್ಗು ಹಾಗೂ ಅಂಕುಡೊಂಕಿನ ರಸ್ತೆಯಲ್ಲಿಯೂ ಸುಲಭವಾಗಿ ಚಾಲನೆ ಮಾಡಬಹುದು. ಬ್ರೇಕ್ ಗಳು ಕೂಡ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ಬಿವೈಡಿ ಸೀಲ್ ಬೆಲೆಗೆ ತಕ್ಕಂತೆಯೇ ಅತ್ಯುತ್ತಮ ಕಾರಾಗಿದ್ದು, ಸಂಪೂರ್ಣ ಚಾರ್ಜ್ ನಲ್ಲಿ ಗರಿಷ್ಠ ದೂರವನ್ನು ಕ್ರಮಿಸುತ್ತದೆ. ಜೊತೆಗೆ ಮನಸೆಳೆಯುವ ವೈಶಿಷ್ಟ್ಯಗಳನ್ನು ಹೊಂದಿದ್ದು, ಬಹುತೇಕ ಗ್ರಾಹಕರಿಗೆ ಇಷ್ಟವಾಗಬಹುದು. ಆದಾಗ್ಯೂ ಇದರ ದರ ಕೊಂಚ ಹೆಚ್ಚಿದ್ದು, ಮಧ್ಯಮ ವರ್ಗದ ಜನರು ಈ ಸೆಡಾನ್ ಖರೀದಿಸಲು ಹಿಂದೇಟು ಹಾಕಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, April 22, 2024, 9:01 [IST]
English summary
Byd seal review driving impression engine performance details
Read more on ಬಿವೈಡಿ byd
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+