ಹ್ಯುಂಡೈ ಕ್ರೆಟಾ ನಿಮ್ಮ ನೆಚ್ಚಿನ ಎಸ್‌ಯುವಿ ಆಗಬಹುದೇ?

By Nagaraja

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ ಇಂಡಿಯಾ ಕಳೆದ ವರ್ಷ ಅತಿ ನೂತನ ಕ್ರೆಡಾ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಬಿಡುಗಡೆಗೊಳಿಸಿತ್ತು. ಅತ್ಯಾಧುನಿಕ ವಿನ್ಯಾಸ, ನಿರ್ವಹಣೆ ಹಾಗೂ ಎಂಜಿನ್ ಆಯ್ಕೆಗಳು ಕ್ರೆಟಾ ಯಶಸ್ವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.

Also Read: ಇಕೊಸ್ಪೋರ್ಟ್‌ಗೆ ಎಚ್ಚರಿಕೆಯ ಕರೆ ಗಂಟೆ ನೀಡಿದ ವಿಟಾರಾ ಬ್ರಿಝಾ

ಹಾಗಿದ್ದರೂ ಹ್ಯುಂಡೈ ಕ್ರೆಟಾ ಖರೀದಿಗೆ ಯೋಗ್ಯವೇ ಎಂಬ ಸಂಶಯ ನಿಮ್ಮನ್ನು ಕಾಡಬಹುದು. ಈ ಸಂಬಂಧ ಒಂದು ವಿಸೃತ ಲೇಖನವನ್ನು ನಾವಿಂದು ನಿಮ್ಮ ಮುಂದಿಡಲಿದ್ದೇವೆ.

ಹಿನ್ನೆಡೆ

ಹಿನ್ನೆಡೆ

ಧನಾತ್ಮಕ ಅಂಶ ಚರ್ಚಿಸುವ ಮೊದಲು ಹ್ಯುಂಡೈ ಕ್ರೆಟಾ ಕಾರಿನ ಹಿನ್ನೆಡಯನ್ನು ಚರ್ಚಿಸಿದರೆ ಒಳಿತು. ಪ್ರತಿಸ್ಪರ್ಧಿಗಳನ್ನು ಹೋಲಿಸಿದಾಗ ಹ್ಯುಂಡೈ ಕ್ರೆಟಾ ದುಬಾರಿ ಎನಿಸುತ್ತಿದೆ. ಅಷ್ಟಕ್ಕೂ ಇದರ ಬೆಂಗಳೂರು ಎಕ್ಸ್ ಶೋ ರೂಂ ಬೆಲೆ ಎಷ್ಟು ಗೊತ್ತೇ? ಮುಂದೆ ಸಾಗಿರಿ

ಹ್ಯುಂಡೈ ಕ್ರೆಟಾ ಬೆಲೆ (ಎಕ್ಸ್ ಶೋ ರೂಂ ಬೆಂಗಳೂರು)

ಹ್ಯುಂಡೈ ಕ್ರೆಟಾ ಬೆಲೆ (ಎಕ್ಸ್ ಶೋ ರೂಂ ಬೆಂಗಳೂರು)

ಪೆಟ್ರೋಲ್

1.6 ಲೀಟರ್ ಡ್ಯುಯಲ್ ವಿಟಿವಿಟಿ 6 ಸ್ಪೀಡ್ ಮ್ಯಾನುವಲ್ ಬೇಸ್: 9.26 ಲಕ್ಷ ರು.

1.6 ಲೀಟರ್ ಡ್ಯುಯಲ್ ವಿಟಿವಿಟಿ 6 ಸ್ಪೀಡ್ ಮ್ಯಾನುವಲ್ ಎಸ್: 10.28 ಲಕ್ಷ ರು.

1.6 ಲೀಟರ್ ಡ್ಯುಯಲ್ ವಿಟಿವಿಟಿ 6 ಸ್ಪೀಡ್ ಮ್ಯಾನುವಲ್ ಎಸ್ಎಕ್ಸ್ ಪ್ಲಸ್: 11.99 ಲಕ್ಷ ರು.

ಹ್ಯುಂಡೈ ಕ್ರೆಟಾ ಬೆಲೆ (ಎಕ್ಸ್ ಶೋ ರೂಂ ಬೆಂಗಳೂರು)

ಹ್ಯುಂಡೈ ಕ್ರೆಟಾ ಬೆಲೆ (ಎಕ್ಸ್ ಶೋ ರೂಂ ಬೆಂಗಳೂರು)

ಡೀಸೆಲ್

1.4 ಲೀಟರ್ ಸಿಆರ್‌ಡಿಐ 6 ಸ್ಪೀಡ್ ಮ್ಯಾನುವಲ್ ಬೇಸ್: 10.18 ಲಕ್ಷ ರು.

1.4 ಲೀಟರ್ ಸಿಆರ್‌ಡಿಐ 6 ಸ್ಪೀಡ್ ಮ್ಯಾನುವಲ್ ಎಸ್: 11.18 ಲಕ್ಷ ರು.

1.4 ಲೀಟರ್ ಸಿಆರ್‌ಡಿಐ 6 ಸ್ಪೀಡ್ ಮ್ಯಾನುವಲ್ ಎಸ್ ಪ್ಲಸ್: 12.26 ಲಕ್ಷ ರು.

1.4 ಲೀಟರ್ ಸಿಆರ್‌ಡಿಐ ವಿಜಿಟಿ 6 ಸ್ಪೀಡ್ ಮ್ಯಾನುವಲ್ ಎಸ್ ಎಕ್ಸ್: 12.52 ಲಕ್ಷ ರು.

1.4 ಲೀಟರ್ ಸಿಆರ್‌ಡಿಐ ವಿಜಿಟಿ 6 ಸ್ಪೀಡ್ ಮ್ಯಾನುವಲ್ ಎಸ್‌ಎಕ್ಸ್ ಪ್ಲಸ್: 13.54 ಲಕ್ಷ ರು.

1.4 ಲೀಟರ್ ಸಿಆರ್‌ಡಿಐ ವಿಜಿಟಿ 6 ಸ್ಪೀಡ್ ಮ್ಯಾನುವಲ್ ಎಸ್ ಎಕ್ಸ್ (ಐಚ್ಛಿಕ): 14.62 ಲಕ್ಷ ರು.

1.4 ಲೀಟರ್ ಸಿಆರ್‌ಡಿಐ ವಿಜಿಟಿ 6 ಸ್ಪೀಡ್ ಆಟೋಮ್ಯಾಟಿಕ್ ಎಸ್ ಎಕ್ಸ್ ಪ್ಲಸ್: 14.59 ಲಕ್ಷ ರು.

 ಹಿನ್ನೆಡೆ - ವೈಶಿಷ್ಟ್ಯಗಳು

ಹಿನ್ನೆಡೆ - ವೈಶಿಷ್ಟ್ಯಗಳು

ಇನ್ನು ಕೆಲವೊಂದು ಗಮನಾರ್ಹ ವೈಶಿಷ್ಟ್ಯಗಳ ಹಿನ್ನೆಡೆಯನ್ನು ಹ್ಯುಂಡೈ ಕ್ರೆಟಾ ಅನುಭವಿಸುತ್ತಿದೆ. ಅವುಗಳನ್ನು ಇಲ್ಲಿ ಪಟ್ಟಿ ಮಾಡಿ ಕೊಡಲಾಗಿದೆ.

  • ಆಲ್ ವೀಲ್ ಚಾಲನಾ ವ್ಯವಸ್ಥೆ,
  • ಮೂರನೇ ಸಾಲಿನ ಆಸನ ವ್ಯವಸ್ಥೆ,
  • ಹೊರಗಡೆ ಆಟೋಮ್ಯಾಟಿಕ್ ರಿಯರ್ ವ್ಯೂ ಮಿರರ್,
  • ಆಟೋಮ್ಯಾಟಿಕ್ ಡೇ/ನೈಟ್ ಇನ್ ಸೈಡ್ ರಿಯರ್ ವ್ಯೂ ಮಿರರ್,
  • ಹಿನ್ನೆಡೆ - ವೈಶಿಷ್ಟ್ಯಗಳು

    ಹಿನ್ನೆಡೆ - ವೈಶಿಷ್ಟ್ಯಗಳು

    • ಎತ್ತರ ಹೊಂದಾಣಿಸಬಹುದಾದ ಸೀಟು ಬೆಲ್ಟ್,
    • ಹೊಂದಾಣಿಸಬಹುದಾದ ಚಾಲಕ ಆರ್ಮ್ ರೆಸ್ಟ್,
    • ಕೂಲ್ಡ್ ಗ್ಲೋವ್ ಬಾಕ್ಸ್,
    • ಸನ್ ರೂಫ್
    • ಹಿನ್ನೆಡೆ - ನಿರ್ವಹಣೆ ಮತ್ತು ಸುರಕ್ಷತೆ

      ಹಿನ್ನೆಡೆ - ನಿರ್ವಹಣೆ ಮತ್ತು ಸುರಕ್ಷತೆ

      ಪ್ರತಿಯೊಂದು ಕಾರಿನ ಯಶಸ್ವಿನಲ್ಲೂ ನಿರ್ವಹಣೆ ಮತ್ತು ಸುರಕ್ಷತೆ ಅತಿ ಮುಖ್ಯ ಘಟಕವೆನಿಸುತ್ತದೆ. ಆದರೆ ಕ್ರೆಟಾದಲ್ಲಿರುವ ಕೊರತೆಗಳೇನು ನೋಡೋಣವೇ...

      • ಸಮಾನ ತಾಂತ್ರಿಕತೆ ಹೊಂದಿರುವ ವೆರ್ನಾಗೆ ಹೋಲಿಸಿದಾಗ ಪಿಕಪ್ ಪವರ್ ಉನ್ನತ್ತ ಮಟ್ಟದಲ್ಲಿಲ್ಲ,
      • ಆಟೋಮ್ಯಾಟಿಕ್ ವೆರಿಯಂಟ್ ಸ್ವಲ್ಪ ನಿಧಾನವಾಗಿ ಹೋಗು,
      • ಕ್ರೂಸ್ ಕಂಟ್ರೋಲ್,
      • ಟಾಪ್ ಎಂಡ್ ವೆರಿಯಂಟ್ ನಲ್ಲಿ ಮಾತ್ರ ಆರು ಏರ್ ಬ್ಯಾಗ್ ಗಳ ವ್ಯವಸ್ಥೆ,
      • ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್ ವ್ಯವಸ್ಥೆಯಿಲ್ಲ.
      • ಹಿಂಬದಿ ಡೋರ್ ಗಳಿಗೆ ಮಾತ್ರ ಚೈಲ್ಡ್ ಲಾಕ್ ಸೇವೆ.
      • ಮುನ್ನೆಡೆ

        ಮುನ್ನೆಡೆ

        ಈಗ ಹ್ಯುಂಡೈ ಕ್ರೆಟಾ ಯಾವೆಲ್ಲ ವಿಭಾಗದಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿ ನಿಂತಿದೆ ಎಂಬುದರ ಜಲಕ್ ಇಲ್ಲಿದೆ ನೋಡಿ...

        • ಒಳಮೈ - ಸೆಗ್ಮೆಂಟ್ ಬೆಸ್ಟ್ ಡ್ಯಾಶ್ ಬೋರ್ಡ್ ಡಿಸೈನ್,
        • ಪರಿಣಾಮಕಾರಿ ಸ್ಟಾಟಿಕ್ ಕಾರ್ನರಿಂಗ್ ಲೈಟ್ಸ್,
        • ಪ್ರಭಾವಶಾಲಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
        • ಆಟೋ ಟರ್ನ್ ಆಫ್ ಹೆಡ್ ಲ್ಯಾಪ್.
        • ಆಡಿಯೋ/ವಿಡಿಯೋ ನೇವಿಗೇಷನ್ ಸಿಸ್ಟಂಗಳಲ್ಲಿ ನೈಟ್ ಮೋಡ್.
        • ಮುನ್ನಡೆ - ನಿರ್ವಹಣೆ ಮತ್ತು ಸುರಕ್ಷತೆ

          ಮುನ್ನಡೆ - ನಿರ್ವಹಣೆ ಮತ್ತು ಸುರಕ್ಷತೆ

          • ಅತ್ಯುತ್ತಮ ಎಂಜಿನ್ ಆಯ್ಕೆಗಳು - 1.6 ಮತ್ತು 1.4 ಲೀಟರ್ (ಡೀಸೆಲ್/ಪೆಟ್ರೋಲ್), 1.6 ಲೀಟರ್ ಪೆಟ್ರೋಲ್
          • ಪ್ರತಿಸ್ಪರ್ಧಿಗಿಂತಲೂ ಅತ್ಯುತ್ತಮ ಆಟೋಮ್ಯಾಟಿಕ್ ವೆರಿಯಂಟ್,
          • ಶಕ್ತಿಶಾಲಿ ಪೆಟ್ರೋಲ್ ವೆರಿಯಂಟ್,
          • ಸುರಕ್ಷತೆ - ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ
          • ಮುನ್ನಡೆ - ವಿನ್ಯಾಸ

            ಮುನ್ನಡೆ - ವಿನ್ಯಾಸ

            ವಿನ್ಯಾಸದ ವಿಚಾರಕ್ಕೂ ಬಂದಾಗ ಹ್ಯುಂಡೈ ಕ್ರೆಟಾ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದೆ.

            • ಫ್ಯೂಯಿಡಿಕ್ ವಿನ್ಯಾಸ - ಧೈರ್ಯಶಾಲಿ ಮತ್ತು ಪ್ರಭಾವ
            • ಮೂರು ರೇಖೆಗಳ ಕ್ರೋಮ್ ಗ್ರಿಲ್,
            • ಅತ್ಯುತ್ತಮ ಸ್ಥಳಾವಕಾಶ,
            • ಅಚ್ಚುಕಟ್ಟಾದ ರಚನೆ,
            • ಫ್ರಂಟ್ ಮತ್ತು ರಿಯರ್ ವಾಶರ್
            • ರಿವರ್ಸ್ ಕ್ಯಾಮೆರಾ
            • ಸ್ಟೈಲಿಂಗ್

              ಸ್ಟೈಲಿಂಗ್

              • 17 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್,
              • ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
              • ಎಲ್‌ಇಡಿ ಸ್ಥಾನಿಕ ಲ್ಯಾಂಪ್,
              • ಸ್ಥಿರ ಬಾಗುವಿಕೆ,
              • ಲೆಥರ್ ಸೀಟು,
              • ಶಾರ್ಕ್ ಫಿನ್ ಆಂಟಿನಾ
              • ಹೈ-ಟೆಕ್ ವೈಶಿಷ್ಟ್ಯ

                ಹೈ-ಟೆಕ್ ವೈಶಿಷ್ಟ್ಯ

                • ಆಡಿಯೋ ವಿಡಿಯೋ ನೇವಿಗೇಷನ್ ಸಿಸ್ಟಂ (ಎವಿಎನ್),
                • 5 ಇಂಚಿನ ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ,
                • ಸೂಪರ್ ವಿಷನ್ ಕ್ಲಸ್ಟರ್,
                • ಸ್ಮಾರ್ಟ್ ಕೀ ಜೊತೆ ಪುಶ್ ಬಟನ್ ಸ್ಟ್ಯಾರ್ಟ್,
                • ಅನುಕೂಲತೆ

                  ಅನುಕೂಲತೆ

                  • ಎಫ್‌ಎಟಿಸಿ (FATC) ಜೊತೆ ಕ್ಲಸ್ಟರ್ ಐಯನೈಜರ್ (Cluster ionizer),
                  • ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್,
                  • ಹಿಂದುಗಡೆಯೂ ಎಸಿ ವೆಂಟ್ಸ್,
                  • ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್,
                  • 1 ಜಿಬಿ ಆಂತರಿಕ ಮೆಮರಿ
                  • ಅಂತಿಮ ತೀರ್ಪು

                    ಅಂತಿಮ ತೀರ್ಪು

                    ನೀವು ಕ್ರೆಟಾ ಖರೀದಿಸುವಷ್ಟು ಸಮರ್ಥರಾಗಿದ್ದಲ್ಲಿ ಹಿಂದೂ ಮುಂದೂ ನೋಡದೇ ಸೆಗ್ಮೆಂಟ್ ಲೀಡರ್ ಈ ಕಾರನ್ನು ಖರೀದಿಸಬಹುದಾಗಿದೆ. ಯಾಕೆಂದರೆ ಬೆಲೆ ಹಾಗೂ ಸಣ್ಣ ಪುಟ್ಟ ವಿಚಾರವನ್ನು ಬಿಟ್ಟರೆ ಎಲ್ಲ ವಿಭಾಗದಲ್ಲೂ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿ ನಿಂತಿದೆ.

                    ಇವನ್ನೂ ಓದಿ...

                    ಕ್ರೆಟಾ vs ಡಸ್ಟರ್; ಮಿನಿ ಎಸ್‌ಯುವಿಗಳ ಧ ಮಲ್ಲ ಯುದ್ಧ

                    ಹ್ಯುಂಡೈ ಕ್ರೆಟಾ ಮಿನಿ ಎಸ್‌ಯುವಿ ವಿಶಿಷ್ಟತೆಗಳೇನು?

Article Published On: Friday, March 18, 2016, 12:37 [IST]
English summary
How Good Is the Hyundai Creta? A Quick Overview Of The Pros & Cons
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+