ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಫೋಕ್ಸ್‌ವ್ಯಾಗನ್ ಟೈಗನ್ ವಿಶೇಷತೆ ಏನು?

ಭಾರತೀಯರು ಎಸ್‌ಯುವಿಗಳನ್ನು ಹೆಚ್ಚು ಇಷ್ಟ ಪಡುತ್ತಿದ್ದಾರೆ. ಇದಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ವಿವಿಧ ಕಂಪನಿಗಳ ಎಸ್‌ಯುವಿಗಳೇ ಸಾಕ್ಷಿಯಾಗಿವೆ. ಭಾರತದಲ್ಲಿ ಮೈಕ್ರೋ ಎಸ್‌ಯುವಿಯಿಂದ ಹಿಡಿದು ದೊಡ್ಡ ಗಾತ್ರದ ಎಸ್‌ಯುವಿ ಹಾಗೂ ಪ್ರೀಮಿಯಂ ಎಸ್‌ಯುವಿಗಳವರೆಗೆ ಎಲ್ಲಾ ರೀತಿಯ ಎಸ್‌ಯುವಿಗಳನ್ನು ಮಾರಾಟ ಮಾಡಲಾಗುತ್ತದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಆದರೆ ಮಿಡ್ ರೇಂಜ್ ಎಸ್‌ಯುವಿ ಸೆಗ್ ಮೆಂಟಿನಲ್ಲಿ ಹೆಚ್ಚು ಎಸ್‌ಯುವಿಗಳನ್ನು ಮಾರಾಟ ಮಾಡಲಾಗುತ್ತದೆ. ಫೋಕ್ಸ್‌ವ್ಯಾಗನ್ ಕಂಪನಿಯು ಈ ಸೆಗ್ ಮೆಂಟಿನಲ್ಲಿ ತನ್ನ ಟೈಗನ್‌ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ. ಈ ಎಸ್‌ಯುವಿಯು ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರಂನಲ್ಲಿ ನಿರ್ಮಾಣವಾಗಿದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಈ ಎಸ್‌ಯುವಿಯು ಕಂಪನಿಯ ಇಂಡಿಯಾ 2.0 ಯೋಜನೆಯಲ್ಲಿ ಹೊರಬಂದ ಫೋಕ್ಸ್‌ವ್ಯಾಗನ್‌ ಕಂಪನಿಯ ಮೊದಲ ವಾಹನವಾಗಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಟೈಗನ್ ಎಸ್‌ಯುವಿಯನ್ನು ಹಸ್ಲರ್ ಮೋಡ್ ಆನ್ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಪ್ರಚಾರ ಮಾಡುತ್ತಿದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ನಾವು ಇತ್ತೀಚಿಗೆ ಟೈಗನ್ ಎಸ್‌ಯುವಿಯನ್ನು ಚಾಲನೆ ಮಾಡಿದೆವು. ಈ ಎಸ್‌ಯುವಿಗೆ ಸಂಬಂಧಿಸಿದ ಸಂಪೂರ್ಣ ರಿವ್ಯೂವನ್ನು ಈ ಲೇಖನದಲ್ಲಿ ನೋಡೋಣ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ವಿನ್ಯಾಸ ಹಾಗೂ ಶೈಲಿ

ಮೊದಲ ನೋಟದಲ್ಲಿಯೇ ಟೈಗನ್ ಎಸ್‌ಯುವಿಯನ್ನು ಫೋಕ್ಸ್‌ವ್ಯಾಗನ್ ಕಂಪನಿಯ ವಾಹನವೆಂದು ಗುರುತಿಸಬಹುದು. ಈ ಎಸ್‌ಯುವಿಯು ಫೋಕ್ಸ್‌ವ್ಯಾಗನ್ ಕಂಪನಿಯ ಸ್ಟೈಲಿಂಗ್ ಅಂಶಗಳನ್ನು ಹೊಂದಿದೆ. ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿಯಲ್ಲಿ ಕಂಪನಿಯ ಡಿಸೈನ್ ಲ್ಯಾಂಗ್ವೇಜ್ ಬಳಸಲಾಗಿದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಈ ಎಸ್‌ಯುವಿಯ ಮುಂಭಾಗದಲ್ಲಿರುವ ಎರಡು ಸ್ಲಾಟ್ ಕ್ರೋಮ್ ಗ್ರಿಲ್‌ನಲ್ಲಿ ಫೋಕ್ಸ್‌ವ್ಯಾಗನ್ ಬ್ಯಾಡ್ಜ್ ನೀಡಲಾಗಿದೆ. ಈ ಎಸ್‌ಯುವಿಯ ಮೇಲಿರುವ ಸಾಕಷ್ಟು ಕ್ರೋಮ್ ಬಿಟ್‌ಗಳು ಎಸ್‌ಯುವಿಯನ್ನು ಹೆಚ್ಚು ಪ್ರೀಮಿಯಂ ಆಗಿ ಕಾಣುವಂತೆ ಮಾಡುತ್ತವೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಈ ಎಸ್‌ಯುವಿಯ ಮುಂಭಾಗದಲ್ಲಿ ಫಾಗ್ ಲ್ಯಾಂಪ್ ಹಾಗೂ ಹನಿಕೂಂಬ್ ಗ್ರಿಲ್ ನೀಡಲಾಗಿದೆ. ಈ ಎಸ್‌ಯುವಿಯ ಮೇಲಿರುವ ಲೈನ್'ಗಳು ಈ ಎಸ್‌ಯುವಿಗೆಮಸ್ಕ್ಯುಲರ್ ಲುಕ್ ನೀಡುತ್ತವೆ. ಲ್ ಆರ್ಕ್'ಗಳು ಈ ಎಸ್‌ಯುವಿಯ ಸ್ಟೈಲಿಂಗ್‌ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಈ ಎಸ್‌ಯುವಿಯ ಸೈಡ್ ಪ್ರೊಫೈಲ್'ನಲ್ಲಿ ಆಕರ್ಷಕವಾದ 17 ಇಂಚಿನ ಅಲಾಯ್ ವ್ಹೀಲ್, ಡೋರುಗಳಿಗೆ ಸಮಾನಾಂತರವಾಗಿ ಚಲಿಸುವ ಡಬಲ್ ಕ್ರೀಸ್ ಲೈನ್‌ ಹಾಗೂ ರೇರ್ ಫೆಂಡರ್‌ಗಳನ್ನು ನೀಡಲಾಗಿದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಹಿಂಭಾಗದಲ್ಲಿರುವ ಕ್ರೋಮ್ ಸ್ಟ್ರಿಪ್ ಬಂಪರ್‌ನ ಅಗಲಕ್ಕೆ ಅಡ್ಡಲಾಗಿ ಚಲಿಸುತ್ತದೆ. ಟೇಲ್ ಗೇಟ್‌ನ ಕೆಳಭಾಗದ ಕ್ರೀಸ್ ಲೈನ್ ಹಿಂಭಾಗಕ್ಕೆ ಹೊಸ ಶೈಲಿಯನ್ನುನೀಡುತ್ತದೆ. ಟೇಲ್ ಲ್ಯಾಂಪ್ ಎಸ್‌ಯುವಿಯನ್ನು ಸೂಪರ್ ಪ್ರೀಮಿಯಂ ಆಗಿ ಕಾಣುವಂತೆ ಮಾಡುತ್ತದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಟೇಲ್ ಲ್ಯಾಂಪ್ ಹಿಂಭಾಗದ ಅಗಲದಲ್ಲಿ ಸಂಪೂರ್ಣವಾಗಿ ಚಲಿಸುವುದರ ಜೊತೆಗೆ ಕಾರಿನ ಅಗಲವನ್ನು ಎತ್ತಿ ತೋರಿಸುತ್ತದೆ. ಬ್ಯಾಕ್ ಔಟ್ ವಿನ್ಯಾಸದಲ್ಲಿರುವ ಟೇಲ್ ಲ್ಯಾಂಪ್ ಕೆಂಪು ಬೆಳಕಿನ ಅಂಶಗಳನ್ನು ಆವರಿಸುತ್ತದೆ. ಇದರಿಂದ ಕಠಿಣ ಸ್ಪರ್ಧೆಯಿರುವ ಈ ಸೆಗ್ ಮೆಂಟಿನಲ್ಲಿ ಟೈಗನ್ ಎಸ್‌ಯುವಿಯನ್ನು ಎದ್ದು ಕಾಣುವಂತೆ ಮಾಡುತ್ತದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಕಾಕ್‌ಪಿಟ್ ಹಾಗೂ ಇಂಟಿರಿಯರ್

ಈ ಎಸ್‌ಯುವಿಯು ಕ್ರೋಮ್ ಸ್ಟ್ರಿಪ್‌ ಹೊಂದಿರುವ ಅನನ್ಯ ಹ್ಯಾಂಡಲ್‌ಬಾರ್ ನೊಂದಿಗೆ ಪ್ರೀಮಿಯಂ ಇಂಟಿರಿಯರ್'ಗೆ ಸ್ವಾಗತಿಸುತ್ತದೆ. ಫೋಕ್ಸ್‌ವ್ಯಾಗನ್ ಟೈಗನ್‌ನಲ್ಲಿ ವಿವಿಧ ಬಣ್ಣಗಳು ಹಾಗೂ ಸಾಮಗ್ರಿಗಳಿವೆ. ಜೊತೆಗೆ ಸೀಟುಗಳು ಹಾಗೂ ಡ್ಯಾಶ್‌ಬೋರ್ಡ್‌ನಲ್ಲಿ ಕಾಂಟ್ರಾಸ್ಟ್ ಕಲರ್'ಗಳಿವೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಡ್ಯಾಶ್‌ಬೋರ್ಡ್‌ನ ಪ್ರಮುಖ ಅಂಶವೆಂದರೆ ಸಿಲ್ವರ್ ಸ್ತ್ರೈಪ್. ಇದು ಇಡೀ ಡ್ಯಾಶ್‌ಬೋರ್ಡ್‌ನಲ್ಲಿ ಹಾದುಹೋಗುತ್ತದೆ. ಇದು ಡ್ಯಾಶ್‌ಬೋರ್ಡ್‌ನಲ್ಲಿರುವ ಎಲ್ಲಾ ಇತರ ಅಂಶಗಳನ್ನು ಆವರಿಸುತ್ತದೆ. ಡ್ಯಾಶ್‌ಬೋರ್ಡ್‌ನಲ್ಲಿ ಸೆಂಟರ್ ಸ್ಟೇಜ್'ನಲ್ಲಿರುವುದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಮುಂಭಾಗದ ಪ್ರಯಾಣಿಕರ ಬದಿಯರುವ ಫಾಕ್ಸ್ ಕಾರ್ಬನ್ ಫೈಬರ್ ಅಂಶವು ಆಕರ್ಷಕವಾಗಿ ಕಾಣುತ್ತದೆ. ಡ್ಯಾಶ್‌ಬೋರ್ಡ್‌ನ ಎರಡೂ ತುದಿಗಳಲ್ಲಿ ಕೆಲವು ಫ್ಯಾನ್ಸಿ ಎಸಿ ವೆಂಟ್'ಗಳನ್ನು ನೀಡಲಾಗಿದೆ. ಟಚ್‌ಸ್ಕ್ರೀನ್‌ನ ಕೆಳಗೆ ಸೆಂಟ್ರಲ್ ಎಸಿ ವೆಂಟ್‌ಗಳಿವೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಹ್ಯಾಪ್ಟಿಕ್ ಟಚ್ ಎಲಿಮೆಂಟ್ ಹೊಂದಿರುವ ಕ್ಲೈಮೇಟ್ ಕಂಟ್ರೋಲ್ ಪ್ಯಾನಲ್ ಸಾಕಷ್ಟು ಪ್ರೀಮಿಯಂ ಆಗಿ ಕಾಣುವಂತೆ ಮಾಡುತ್ತದೆ. ಅದರ ಕೆಳಗೆ ಯುಎಸ್‌ಬಿ ಪೋರ್ಟ್‌ಗಳು ಹಾಗೂ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಹೊಂದಿರುವ ಕ್ಯೂಬಿಹೋಲ್ ನೀಡಲಾಗಿದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಯುನಿಟ್ ಫೋಕ್ಸ್‌ವ್ಯಾಗನ್‌ ಪ್ಲೇ ಹಾಗೂ ಫೀಚರ್'ಗಳ ದೊಡ್ಡ ಪಟ್ಟಿಯನ್ನು ಹೊಂದಿದೆ. ಈ ಯುನಿಟ್ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಹೊಂದಿದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗುವ 8 ಇಂಚಿನ ಟಿಎಫ್‌ಟಿ ಸ್ಕ್ರೀನ್‌ ಈ ಎಸ್‌ಯುವಿಯ ವೇಗ, ಸರಾಸರಿ ವೇಗ, ಸರಾಸರಿ ಇಂಧನ ಕ್ಷಮತೆ, ಓಡೋಮೀಟರ್, ವ್ಯಾಪ್ತಿ, ಇತ್ಯಾದಿಗಳ ಮಾಹಿತಿಯನ್ನು ಪ್ರದರ್ಶಿಸುತ್ತದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಫೋಕ್ಸ್‌ವ್ಯಾಗನ್ ಟೈಗನ್ ಡ್ಯುಯಲ್-ಟೋನ್ ಸೀಟ್‌ಗಳನ್ನು ಹೊಂದಿದೆ. ಈ ಸೀಟುಗಳು ವೆಂಟಿಲೇಟೆಡ್ ಆಗಿವೆ. ಈ ಎಸ್‌ಯುವಿಯಲ್ಲಿ ಎಲೆಕ್ಟ್ರಿಕ್ ಸನ್ ರೂಫ್ ಹಾಗೂ ಹಿಂಬದಿಯ ಸವಾರರಿಗಾಗಿ ಎಸಿ ವೆಂಟ್‌ಗಳನ್ನು ನೀಡಲಾಗಿದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಕಂಫರ್ಟ್, ಪ್ರಾಕ್ಟಿಕಲಿಟಿ ಹಾಗೂ ಬೂಟ್ ಸ್ಪೇಸ್

ಫೋಕ್ಸ್‌ವ್ಯಾಗನ್ ಕಾರುಗಳು ಯಾವಾಗಲೂ ಆರಾಮದಾಯಕವಾಗಿರುತ್ತವೆ. ಟೈಗನ್ ಸಹ ಇದರಿಂದ ಹೊರತಾಗಿಲ್ಲ. ಸೀಟುಗಳು ಸ್ಪೋರ್ಟಿಯಾಗಿಲ್ಲ ಬದಲಿಗೆಹೆಚ್ಚು ಆರಾಮದಾಯಕವಾಗಿವೆ. ಫ್ರಂಟ್ ಸೀಟುಗಳು ವೆಂಟಿಲೇಟೆಡ್ ಆಗಿವೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಈ ಸೀಟುಗಳು ಚಾಲಕ ಹಾಗೂ ಮುಂಭಾಗದ ಪ್ರಯಾಣಿಕರಿಗೆ ಲ್ಯಾಟರಲ್ ಸಪೋರ್ಟ್, ಥೈ ಸಪೋರ್ಟ್ ನೀಡುತ್ತವೆ. ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿಯ ಹಿಂಭಾಗದಲ್ಲಿ, ವಿಶಾಲವಾದ ಲೆಗ್‌ರೂಮ್ ಹಾಗೂ ಹೆಡ್‌ರೂಮ್ ನೀಡಲಾಗಿದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಹಿಂಭಾಗದ ಪ್ರಯಾಣಿಕರಿಗಾಗಿ ಫೋಲ್ಡ್ ಮಾಡಬಹುದಾದ ಆರ್ಮ್‌ರೆಸ್ಟ್, ಕಪ್‌ಹೋಲ್ಡರ್‌ಗಳನ್ನು ನೀಡಲಾಗಿದೆ. ಸೆಂಟರ್ ಕನ್ಸೋಲ್‌ನಲ್ಲಿ ಎರಡನೇ ಸಾಲಿನ ಪ್ರಯಾಣಿಕರಿಗಾಗಿ ಮೀಸಲಾದ ಎಸಿ ವೆಂಟ್‌ಗಳಿವೆ. ಎಸಿ ವೆಂಟ್‌ಗಳ ಕೆಳಗೆ ಸ್ಮಾರ್ಟ್‌ಫೋನ್‌ ಚಾರ್ಜಿಂಗ್'ಗಾಗಿ ಎರಡು ಟೈಪ್ ಸಿ ಪೋರ್ಟ್‌ಗಳನ್ನು ನೀಡಲಾಗಿದೆ. ಎಲೆಕ್ಟ್ರಿಕ್ ಸನ್ ರೂಫ್ ಫೋಕ್ಸ್‌ವ್ಯಾಗನ್ ಟೈಗನ್ ರೂಂ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಗಾತ್ರ

ಗಾತ್ರ ಫೋಕ್ಸ್‌ವ್ಯಾಗನ್ ಟೈಗನ್
ಉದ್ದ 4,221 ಎಂಎಂ
ಅಗಲ 1,760ಎಂಎಂ
ಎತ್ತರ 1,612 ಎಂಎಂ
ವ್ಹೀಲ್‌ಬೇಸ್ 2,651 ಎಂಎಂ
ಬೂಟ್ ಸ್ಪೇಸ್ 385 ಲೀಟರ್
ಗ್ರೌಂಡ್ ಕ್ಲಿಯರೆನ್ಸ್ 205ಎಂಎಂ
ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಎಂಜಿನ್ ಕಾರ್ಯಕ್ಷಮತೆ ಹಾಗೂ ಚಾಲನಾ ಅನಿಸಿಕೆಗಳು

ಫೋಕ್ಸ್‌ವ್ಯಾಗನ್ ಟೈಗನ್‌ ಎಸ್‌ಯುವಿಯನ್ನು 1.0 ಲೀಟರ್ ಟಿ‌ಎಸ್‌ಐ ಹಾಗೂ 1.5 ಲೀಟರ್ ಟಿ‌ಎಸ್‌ಐ ಎಂಬ ಎರಡು ಪೆಟ್ರೋಲ್ ಎಂಜಿನ್‌ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ನಾವು 1.5 ಲೀಟರ್ ಟಿ‌ಎಸ್‌ಐ ಎಂಜಿನ್‌ ಹೊಂದಿರುವ ಮಾದರಿಯನ್ನು ಚಾಲನೆ ಮಾಡಿದೆವು. ಈ ಎಂಜಿನ್'ನೊಂದಿಗೆ 7 ಸ್ಪೀಡ್ ಡಿ‌ಎಸ್‌ಜಿ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಈ ಎಂಜಿನ್ 150 ಬಿ‌ಹೆಚ್‌ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್ ಉತ್ಪಾಡಿಸುತ್ತದೆ. 1.5 ಲೀಟರ್ ಟಿ‌ಎಸ್‌ಐ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಕೂಡ ನೀಡಲಾಗುತ್ತದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಮತ್ತೊಂದೆಡೆ 1.0 ಲೀಟರ್ ಟಿ‌ಎಸ್‌ಐ ಎಂಜಿನ್ 115 ಬಿ‌ಹೆಚ್‌ಪಿ ಪವರ್ ಹಾಗೂ 175 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ನೊಂದಿಗೆ ಜೋಡಿಸಲಾಗಿದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ನಾವು ಚಾಲನೆ ಮಾಡಿದ 1.5 ಲೀಟರ್ ಟಿ‌ಎಸ್‌ಐ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಎಂಜಿನ್'ನಲ್ಲಿ ಪವರ್ ಡೆಲಿವರಿ ಆರಂಭದಲ್ಲಿ ಲಿನಿಯರ್ ಆಗಿರುತ್ತದೆ. ಆದರೆ ಇದು ಹೆಚ್ಚು ಮಧ್ಯ ಶ್ರೇಣಿ ಹಾಗೂ ಟಾಪ್ ಎಂಡ್ ಅನ್ನು ಹೊಂದಿದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಡಿಕ್ಯೂ 200 7 ಸ್ಪೀಡ್ ಡಿ‌ಎಸ್‌ಜಿ ಟ್ರಾನ್ಸ್ ಮಿಷನ್ ಯುನಿಟ್ ಅತ್ಯುತ್ತಮವಾಗಿದ್ದು, ಗೇರ್‌ಗಳ ಮೂಲಕ ವೇಗವಾಗಿ ಬದಲಾಗುತ್ತದೆ. ಈಗ ಡಿಕ್ಯೂ 200 ಪರಿಷ್ಕೃತವಾಗಿದ್ದು, ಹೆಚ್ಚು ವಿಶ್ವಾಸಾರ್ಹವಾಗಿದೆ. ಗೇರ್ ಬಾಕ್ಸ್ ಎಸ್ ಹಾಗೂ ಡಿ ಮೋಡ್‌ಗಳನ್ನು ಹೊಂದಿದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಡಿ ಮೋಡ್‌ನಲ್ಲಿ ಕಾರು ಯೋಗ್ಯ ವೇಗದಲ್ಲಿ ಗೇರ್‌ಗಳನ್ನು ಬದಲಿಸಿ ಡ್ರೈವ್ ಅನ್ನು ಹೆಚ್ಚು ಆರಾಮದಾಯಕವಾಗಿಸುತ್ತದೆ. ಎಂಜಿನ್ ಅನ್ನು ಹೆಚ್ಚು ತಿರುಗಿಸಲು ಅನುಮತಿಸದೆ ಗೇರ್‌ಗಳ ಮೂಲಕ ಹೋಗುತ್ತದೆ, ಇದರಿಂದ ಇಂಧನ ಬಳಕೆ ಕೂಡ ತುಲನಾತ್ಮಕವಾಗಿ ಕಡಿಮೆಯಾಗಿದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಎಸ್ ಮೋಡ್‌ನಲ್ಲಿ ಗೇರ್‌ ಶಿಫ್ಟ್‌ಗಳು ವೇಗವಾಗಿ ಬದಲಾಗುತ್ತವೆ. ಹೊಸ ಟೈಗನ್ ಎಸ್‌ಯುವಿಯಲ್ಲಿ ಯಾವುದೇ ರಿಸರ್ವ್ ಡ್ರೈವಿಂಗ್ ಮೋಡ್'ಗಳನ್ನು ನೀಡಲಾಗಿಲ್ಲ. ಈ ಎಸ್‌ಯುವಿಯ ಸೆಟಪ್ ಸ್ವಲ್ಪ ಗಟ್ಟಿಯಾಗಿದೆ ಎಂದೆನಿಸುತ್ತದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಟೈಗನ್ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದ್ದು, ಎತ್ತರವಾಗಿರುವ ಬಾಡಿ ಹಾಗೂ ರೂಫ್ ಹೊಂದಿರುವುದರಿಂದ ಸ್ವಲ್ಪ ಬಾಡಿ ರೋಲ್ ಇದೆ. ಆದರೆ ಈ ಸೆಗ್ ಮೆಂಟಿನಲ್ಲಿರುವ ಇತರ ಎಸ್‌ಯುವಿಗಳಂತಿರದೇ ಎಲ್ಲಾ ಹಂಪ್ ಹಾಗೂ ರಸ್ತೆ ಗುಂಡಿಗಳಲ್ಲಿ ಸುಲಭವಾಗಿ ಸಾಗುತ್ತದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಈ ಎಸ್‌ಯುವಿಯಲ್ಲಿರುವ ಎನ್‌ವಿ‌ಹೆಚ್ ಲೆವೆಲ್ ಯೋಗ್ಯವಾಗಿದೆ. ಒಳ್ಳೆಯ ಇನ್ಸುಲೇಷನ್ ಕಾರಣಕ್ಕೆ ಹೊರಗಿನಿಂದ ಕಡಿಮೆ ಶಬ್ದವು ಕ್ಯಾಬಿನ್‌ನೊಳಗೆ ಪ್ರವೇಶಿಸುತ್ತದೆ. ಆದರೆ ಟೈಗನ್ 4,200 ಆರ್‌ಪಿಎಂನಲ್ಲಿ ಚಲಿಸಿದ ನಂತರ ಕ್ಯಾಬಿನ್‌ನಲ್ಲಿ ಇಂಜಿನ್ ಶಬ್ದ ಹರಿದಾಡುವುದನ್ನು ಕೇಳಬಹುದು.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಕಡಿಮೆ ರೆವ್‌ಗಳಲ್ಲಿ ಈ ಎಸ್‌ಯುವಿಯು ನಿಶಬ್ದವಾಗಿ ಚಲಿಸುತ್ತದೆ. ನಾವು ಕೆಲ ಕಾಲ ಮಾತ್ರ ಈ ಎಸ್‌ಯುವಿಯನ್ನು ಚಾಲನೆ ಮಾಡಿದ ಕಾರಣ ಈ ಎಸ್‌ಯುವಿಯ ಮೈಲೇಜ್ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗಲಿಲ್ಲ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ನಾವು ಈ ಎಸ್‌ಯುವಿಯನ್ನು ಸಿಟಿಯೊಳಗೆ ಹಾಗೂ ಹೈವೇಗಳಲ್ಲಿ ಚಾಲನೆ ಮಾಡಿದಾಗ ಎಂಐಡಿ ಸ್ಕ್ರೀನ್ ಪ್ರತಿ ಲೀಟರ್ ಪೆಟ್ರೋಲಿಗೆ 8.4 ರಿಂದ 10.2 ಕಿ.ಮೀಗಳ ಇಂಧನ ದಕ್ಷತೆಯ ಅಂಕಿಅಂಶವನ್ನು ಪ್ರದರ್ಶಿಸಿತು. ನಾವು ಶೀಘ್ರದಲ್ಲೇ ಈ ಎಸ್‌ಯುವಿಯ ಸರಿಯಾದ ರಸ್ತೆ ಪರೀಕ್ಷೆಯ ವಿಮರ್ಶೆ ಮಾಡಿ ಮಾಹಿತಿ ನೀಡುತ್ತೇವೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಸುರಕ್ಷತಾ ಫೀಚರ್'ಗಳು ಹಾಗೂ ಇನ್ನಿತರ ಪ್ರಮುಖ ಫೀಚರ್'ಗಳು

ಫೋಕ್ಸ್‌ವ್ಯಾಗನ್ ಕಂಪನಿಯು ಟೈಗನ್ ಎಸ್‌ಯುವಿಯಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟಯರ್ ಪ್ರೆಷರ್ ಡಿಪ್ಲೇಶನ್ ವಾರ್ನಿಂಗ್, ಪಾರ್ಕ್ ಡಿಸ್ಟೆನ್ಸ್ ಕಂಟ್ರೋಲ್, ರೇರ್ ವೀವ್ ಕ್ಯಾಮೆರಾ, ಹಿಲ್ ಹೋಲ್ಡ್ ಕಂಟ್ರೋಲ್, ಆರು ಏರ್‌ಬ್ಯಾಗ್‌, ಇಬಿಡಿ ಹೊಂದಿರುವ ಎಬಿಎಸ್ ಸೇರಿದಂತೆ ಹಲವಾರು ಸುರಕ್ಷತಾ ಫೀಚರ್'ಗಳನ್ನು ನೀಡಿದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿಯು ವಿಡಬ್ಲ್ಯೂ ಪ್ಲೇ ಜೊತೆ 10 ಇಂಚಿನ ಟಚ್ ಸ್ಕ್ರೀನ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಎಲೆಕ್ಟ್ರಿಕ್ ಸನ್ ರೂಫ್, ಸ್ಮಾರ್ಟ್ ಟಚ್ ಕ್ಲೈಮೆಟ್ರಾನಿಕ್ ಆಟೋ ಎಸಿ, ಎಲ್‌ಇಡಿ ಲೈಟಿಂಗ್, ರೆಡ್ ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹಲವು ಫೀಚರ್'ಗಳನ್ನು ಹೊಂದಿದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಸ್ಪರ್ಧಿಗಳು ಹಾಗೂ ವಾಸ್ತವಾಂಶ

ಫೋಕ್ಸ್‌ವ್ಯಾಗನ್ ಟೈಗನ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಸ್ಪರ್ಧಾತ್ಮಕ ವಿಭಾಗಗಳಲ್ಲಿ ಒಂದನ್ನು ಪ್ರವೇಶಿಸುತ್ತದೆ. ಸ್ಪರ್ಧಿಗಳ ಪಟ್ಟಿಯಲ್ಲಿ ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್ ಸೇರಿವೆ. ಇವೆಲ್ಲವೂ ಅದ್ಭುತವಾದ ಎಸ್ಯುವಿಗಳು ಮತ್ತು ಫೋಕ್ಸ್‌ವ್ಯಾಗನ್ ಟೈಗನ್‌ಗೆ ಅದರ ಕೆಲಸವು ಕಟ್ ಆಗಿರುವಂತೆ ತೋರುತ್ತದೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಪ್ರಮುಖ ಸ್ಪರ್ಧಿಗಳು ಹಾಗೂ ಹೋಲಿಕೆ:

ವಿಶೇಷತೆಗಳು ಫೋಕ್ಸ್‌ವ್ಯಾಗನ್ ಟೈಗನ್ ಸ್ಕೋಡಾ ಕುಶಾಕ್ ಹ್ಯುಂಡೈ ಕ್ರೆಟಾ ಕಿಯಾ ಸೆಲ್ಟೋಸ್
ಎಂಜಿನ್ 1.0-ಲೀಟರ್ ಟರ್ಬೊ ಪೆಟ್ರೋಲ್ / 1.5-ಲೀಟರ್ ಟರ್ಬೊ ಪೆಟ್ರೋಲ್ 1.0-ಲೀಟರ್ ಟರ್ಬೊ ಪೆಟ್ರೋಲ್ / 1.5-ಲೀಟರ್ ಟರ್ಬೊ ಪೆಟ್ರೋಲ್ 1.5-ಲೀಟರ್ ಪೆಟ್ರೋಲ್ / 1.5-ಲೀಟರ್ ಟರ್ಬೊ-ಡೀಸೆಲ್ / 1.4-ಲೀಟರ್ ಟರ್ಬೊ-ಪೆಟ್ರೋಲ್ 1.5-ಲೀಟರ್ ಪೆಟ್ರೋಲ್ / 1.5-ಲೀಟರ್ ಟರ್ಬೊ-ಡೀಸೆಲ್ / 1.4-ಲೀಟರ್ ಟರ್ಬೊ ಪೆಟ್ರೋಲ್
ಪವರ್ 114 ಬಿ‌ಹೆಚ್‌ಪಿ / 147.5 ಬಿ‌ಹೆಚ್‌ಪಿ 114 ಬಿ‌ಹೆಚ್‌ಪಿ / 147.5 ಬಿ‌ಹೆಚ್‌ಪಿ 113.4 ಬಿ‌ಹೆಚ್‌ಪಿ / 113.4 ಬಿ‌ಹೆಚ್‌ಪಿ / 140 ಬಿ‌ಹೆಚ್‌ಪಿ 113.4 ಬಿ‌ಹೆಚ್‌ಪಿ / 113.4 ಬಿ‌ಹೆಚ್‌ಪಿ / 140 ಬಿ‌ಹೆಚ್‌ಪಿ
ಟಾರ್ಕ್ 175 ಎನ್ಎಂ/ 250 ಎನ್ಎಂ 175 ಎನ್ಎಂ / 250 ಎನ್ಎಂ 144 ಎನ್ಎಂ / 250 ಎನ್ಎಂ / 242.2 ಎನ್ಎಂ 144 ಎನ್ಎಂ / 250 ಎನ್ಎಂ / 242.2 ಎನ್ಎಂ
ಟ್ರಾನ್ಸ್'ಮಿಷನ್ 6-ಸ್ಪೀಡ್ ಮ್ಯಾನುವಲ್ / 6-ಸ್ಪೀಡ್ ಆಟೋಮ್ಯಾಟಿಕ್ / 7-ಸ್ಪೀಡ್ ಡಿಎಸ್‌ಜಿ 6-ಸ್ಪೀಡ್ ಮ್ಯಾನುವಲ್ / 6-ಸ್ಪೀಡ್ ಆಟೋಮ್ಯಾಟಿಕ್ / 7-ಸ್ಪೀಡ್ ಡಿಎಸ್‌ಜಿ 6-ಸ್ಪೀಡ್ ಮ್ಯಾನುಯಲ್ / ಐವಿಟಿ / 6-ಸ್ಪೀಡ್ ಆಟೋಮ್ಯಾಟಿಕ್ / 7-ಸ್ಪೀಡ್ ಡಿಸಿಟಿ 6-ಸ್ಪೀಡ್ ಮ್ಯಾನುವಲ್ / ಸಿವಿಟಿ / 6-ಸ್ಪೀಡ್ ಐಎಂಟಿ / 6-ಸ್ಪೀಡ್ ಆಟೋಮ್ಯಾಟಿಕ್ / 7-ಸ್ಪೀಡ್ ಡಿಸಿಟಿ
ಬೆಲೆ ಇನ್ನೂ ಘೋಷಿಸಿಲ್ಲ ರೂ. 10.49 ಲಕ್ಷಗಳಿಂದ ರೂ. 17.59 ಲಕ್ಷಗಳವರೆಗೆ ರೂ. 9.99 ಲಕ್ಷಗಳಿಂದ ರೂ. 17.70 ಲಕ್ಷಗಳವರೆಗೆ ರೂ. 9.95 ಲಕ್ಷಗಳಿಂದ ರೂ. 17.65 ಲಕ್ಷಗಳವರೆಗೆ
ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಟೈಗನ್ ಇಂಡಿಯಾ 2.0 ಯೋಜನೆಯಡಿಯಲ್ಲಿ ಫೋಕ್ಸ್‌ವ್ಯಾಗನ್‌ನ ಕಂಪನಿಯು ನಿರ್ಮಿಸಿರುವ ಮೊದಲ ಎಸ್‌ಯುವಿಯಾಗಿದೆ. ಈ ಎಸ್‌ಯುವಿಯು ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರಂ ಅನ್ನು ಆಧರಿಸಿದೆ. ಈ ಪ್ಲಾಟ್‌ಫಾರಂ ಅಡಿಯಲ್ಲಿ ಭವಿಷ್ಯದಲ್ಲಿ ಹಲವು ಕಾರುಗಳು ಉತ್ಪಾದನೆಯಾಗುವ ನಿರೀಕ್ಷೆಗಳಿವೆ.

ಫೋಕ್ಸ್‌ವ್ಯಾಗನ್ ಟೈಗನ್ ವಿಮರ್ಶೆ

ಈ ಎಸ್‌ಯುವಿಯು ಆಕರ್ಷಕವಾಗಿದ್ದು, ಹಲವಾರು ಫೀಚರ್'ಗಳನ್ನು ಹೊಂದಿದೆ. ಎಂಜಿನ್ ಹಾಗೂ ಗೇರ್ ಬಾಕ್ಸ್ ಆಯ್ಕೆಗಳು ಸಹ ಅದ್ಭುತವಾಗಿವೆ.ಈಗ ವಾಹನ ಪ್ರಿಯರ ಕಣ್ಣುಗಳು ಫೋಕ್ಸ್‌ವ್ಯಾಗನ್‌ ಟೈಗನ್ ನತ್ತ ಮುಖ ಮಾಡಿವೆ. ಈ ಎಸ್‌ಯುವಿಯು ಸ್ಪರ್ಧಾತ್ಮಕ ಬೆಲೆ ಪಡೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Volkswagen taigun review design exterior interior engine performance and other details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X