ಪರ್ಫಾಮೆನ್ಸ್ ಕಾರು ಪ್ರಿಯರ ಗಮನಸೆಳೆದ ಲ್ಯಾಂಬೊರ್ಗಿನಿ ಉರುಸ್ ಪರ್ಫಾರ್ಮಂಟೆ ಎಸ್‍ಯುವಿಯ ರಿವ್ಯೂ

ಇಟಾಲಿಯನ್ ಸೂಪರ್‌ಕಾರ್ ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ಜಾಗತಿಕವಾಗಿ ಬಹಳ ಜನಪ್ರಿಯ ಬ್ರ್ಯಾಂಡ್ ಆಗಿದೆ. ಹಲವಾರು ಸೂಪರ್ ಕಾರು ಪ್ರಿಯರು ಕನಸಿನ ಕಾರು ಲ್ಯಾಂಬೊರ್ಗಿನಿ ಆಗಿದೆ. ಈ ಲ್ಯಾಂಬೊರ್ಗಿನಿ ಬ್ರ್ಯಾಂಡ್ ಎಷ್ಟು ಜನಪ್ರಿಯವೆಂದರೆ, ಸೂಪರ್ ಕಾರು ಎಂದ ತಕ್ಷಣ ಜನರ ಮನ್ನಸ್ಸಿಗೆ ಮೊದಲು ಬರುವುದು ಲ್ಯಾಂಬೊರ್ಗಿನಿ.

1980ರಲ್ಲೊ Rambo Lambo LM 002 ಎಂಬ ಹೆಸರಿನ ಎಸ್‍ಯುವಿಯೊಂದಿಗೆ ತನ್ನ ಪ್ರಯಾಣವನ್ನು ಆರಂಭಿಸಿತು. ನಂತರದಲ್ಲಿ ಲ್ಯಾಂಬೊರ್ಗಿನಿ ಸಾಲು ಸಾಲು ಸೂಪರ್ ಕಾರುಗಳು ಬಿಡುಗಡೆಗೊಂಡಿತು. ಅವುಗಳು ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿತು. ನಂತರ ಲ್ಯಾಂಬೊರ್ಗಿನಿ ಉರುಸ್ ಎಸ್‍ಯುವಿಯು ಹೊಸ ದಾಖಲೆಗಳನ್ನು ಸೃಷ್ಟಿಸಿತು. ಈ ಉರುಸ್ ಎಸ್‍ಯುವಿ ಕನ್ನಡ ಚಲಚಿತ್ರ ಸೆಲಬ್ರಿಟುಗಳು ಸೇರಿದಂತೆ ಹಲವು ಸೆಲಬ್ರಿಟಿಗಳ ಮೆಚ್ಚಿನ ಕಾರ್ ಆಗಿದೆ.

ಪರ್ಫಾಮೆನ್ಸ್ ಕಾರು ಪ್ರಿಯರ ಗಮನಸೆಳೆದ ಲ್ಯಾಂಬೊರ್ಗಿನಿ ಉರುಸ್ ಪರ್ಫಾರ್ಮಂಟೆ ಎಸ್‍ಯುವಿಯ ರಿವ್ಯೂ

ಆದರೆ ಈ ಟಾಪ್-ಸೆಲ್ಲರ್ ಉರುಸ್ ಬಿಡುಗಡೆಯಾದ ಆರಂಭದಲ್ಲಿ ಟ್ವಿನ್-ಟರ್ಬೊ V8 ಎಂಜಿನ್ ನಿಂದಾಗಿ ಲ್ಯಾಂಬೋ ಸೂಟ್‌ನಲ್ಲಿ ಆಡಿ ಕ್ಯೂ7 ಅಥವಾ ಪೋರ್ಷೆ ಕೇಯೆನ್ ಹೊರತುಪಡಿಸಿ ಬೇರೇನೂ ಅಲ್ಲ ಎಂದು ಮೊದಲಿಗೆ ಅಪಹಾಸ್ಯಕ್ಕೀಡಾಯಿತು. ಉರುಸ್‌ನ ಸಾರ್ವಕಾಲಿಕ ಹೆಚ್ಚಿನ ಮಾರಾಟದೊಂದಿಗೆ ಟೀಕಾಕಾರರಿಗೆ ಉತ್ತರ ನೀಡಿತು. ಲ್ಯಾಂಬೊರ್ಗಿನಿ ಕಳೆದ ವರ್ಷ ನವೀಕರಿಸಿದ ಎಸ್‍ಯುವಿಯ ಎರಡು ಆವೃತ್ತಿಗಳನ್ನು ಹೊರತರುವ ಮೂಲಕ ಉರುಸ್ ತನ್ನ ಸರಣಿಯನ್ನು ವಿಸ್ತರಿಸಿದೆ.

ಇದು ಲ್ಯಾಂಬೊರ್ಗಿನಿ ಉರುಸ್ ಎಸ್ ಮತ್ತು ಉರುಸ್ ಪರ್ಫಾರ್ಮೆಂಟೆ ಆಗಿದೆ. ಉರುಸ್ ಎಸ್ ಸ್ವಲ್ಪ ನವೀಕರಿಸಿದ ಆವೃತ್ತಿಯಾಗಿದ್ದರೂ, ಎರಡನೆಯದು ಸೂಪರ್ ಎಸ್‍ಯುವಿಯು ವಿಮರ್ಶಕರ ಬಾಯಿ ಮುಚ್ಚಿಸುವಂತ ಮಾದರಿಯಾಗಿದೆ. ಲ್ಯಾಂಬೊರ್ಗಿನಿ ತನ್ನ ಹಗುರವಾದ ಮತ್ತು ಹೆಚ್ಚು ಪವರ್ ಪೂಲ್ ವಿಶೇಷ ಆವೃತ್ತಿಯ ಸೂಪರ್‌ಕಾರ್‌ಗಳಲ್ಲಿ 'ಪರ್ಫಾರ್ಮಂಟೆ' ಬ್ಯಾಡ್ಜ್ ಅನ್ನು ಮಾತ್ರ ಸೇರಿಸಿದೆ.

ಪರ್ಫಾಮೆನ್ಸ್ ಕಾರು ಪ್ರಿಯರ ಗಮನಸೆಳೆದ ಲ್ಯಾಂಬೊರ್ಗಿನಿ ಉರುಸ್ ಪರ್ಫಾರ್ಮಂಟೆ ಎಸ್‍ಯುವಿಯ ರಿವ್ಯೂ

ಆದ್ದರಿಂದ ಅದರ 'ಸೂಪರ್ ಎಸ್‍ಯುವಿಯ ಬ್ಯಾಡ್ಜ್ ಹಾಕುವುದನ್ನು ಸಮರ್ಥಿಸಲು ಮತ್ತು ಅದರ ವಿಮರ್ಶಕರ ಬಾಯಿ ಮುಚ್ಚಿಸಲು, ಉರುಸ್ 47 ಕಿಲೋಗಳನ್ನು ಇಳಿಸಿತು ಮತ್ತು ಪವರ್ ಉತ್ಪಾದನೆಯನ್ನು ಕೂಡ ಹೆಚ್ಚಿಸಿತು. ಈ ಲ್ಯಾಂಬೊರ್ಗಿನಿ ಉರುಸ್ ಎಸ್‍ಯುವಿಯು ಹೊಸ ಆಫ್‌ರೋಡಿಂಗ್ ಮೋಡ್ ಅನ್ನು ಹೊಂದಿದೆ. ಪರ್ಫಾಮೆನ್ಸ್ ಎಸ್‍ಯುವಿ ಬಯಸುವ ಗ್ರಾಹಕರನ್ನು ಕೂಡ ಇದು ಸೆಳೆದಿದೆ.

ಇನ್ನು ಲ್ಯಾಂಬೊರ್ಗಿನಿ ಕಾರುಗಳು ಭಾರತ ರಸ್ತೆಗಳಿಗೆ ಸೂಕ್ತವಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಉರುಸ್ ಭಾರತದ ರಸ್ತೆಗೆ ಹೇಳಿ ಮಾಡಿಸಿದಂತಿದೆ. ಲ್ಯಾಂಬೊರ್ಗಿನಿ ಉರುಸ್ ಪರ್ಫಾರ್ಮಂಟೆ ಎಸ್‍ಯುವಿಯನ್ನು ನಾವು ಬೆಂಗಳೂರಿನಲ್ಲಿ ಡ್ರೈವ್ ಮಾಡಿದ್ದೇವೆ. ಈ ಸೂಪರ್ ಎಸ್‍ಯುವಿ ಡ್ರೈವಿಂಗ್ ಅನುಭವ ಮತ್ತು ಈ ಎಸ್‍ಯುವಿ ವೈಶಿಷ್ಟಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಪರ್ಫಾಮೆನ್ಸ್ ಕಾರು ಪ್ರಿಯರ ಗಮನಸೆಳೆದ ಲ್ಯಾಂಬೊರ್ಗಿನಿ ಉರುಸ್ ಪರ್ಫಾರ್ಮಂಟೆ ಎಸ್‍ಯುವಿಯ ರಿವ್ಯೂ

ವಿನ್ಯಾಸ: ಲ್ಯಾಂಬೊರ್ಗಿನಿ ಉರುಸ್ ಪರ್ಫಾರ್ಮಂಟೆ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸ್ಟೈಲಿಂಗ್ ವಿಭಾಗಕ್ಕೆ ಬಂದಾಗ OG ಉರುಸ್ 'ಸರಿಯಾದ' ಲಂಬೋರ್ಗಿನಿಯಾಗಿತ್ತು. ಉರುಸ್ ಪರ್ಫಾರ್ಮೆಂಟೆಯು ಹೊಸ ಏರ್ ಕರ್ಟೈನ್ ನೊಂದಿಗೆ ಪರಿಷ್ಕೃತ ಮುಂಭಾಗದ ಬಂಪರ್ ಅನ್ನು ಹೊಂದಿದೆ ಮತ್ತು ಅದರ ಹಿಂದೆ ವೆಂಟ್ಸ್ ಗಳನ್ನು ಹೊಂದಿವೆ.

ಪರ್ಫಾರ್ಮೆಂಟೆ ಹೊಸ ವ್ಹೀಲ್ ಗಳು ಮತ್ತು ಕಾರ್ಬನ್ ಫೈಬರ್ ಸೈಡ್ ಸ್ಕರ್ಟ್‌ಗಳು ಮತ್ತು ಹಿಂಭಾಗದಲ್ಲಿ ಹೊಸ ವ್ಹಿಂಗ್ ಒಂದೇ ಹಗುರವಾದ ವಸ್ತುಗಳಿಂದ ಮಾಡಿದ ಸೈಡ್ ಫಿನ್‌ಗಳೊಂದಿಗೆ ಹೊಂದಿದೆ. ಉರುಸ್ ಪರ್ಫ್‌ನ ಡಿಫ್ಯೂಸರ್ ಅನ್ನು ಕಾರ್ಬನ್ ಫೈಬರ್‌ನಿಂದಲೂ ತಯಾರಿಸಲಾಗುತ್ತದೆ ಮತ್ತು ಹಿಂಭಾಗದ ಬಂಪರ್‌ನ ಎರಡೂ ಬದಿಯಲ್ಲಿ ನಾಲ್ಕು ಟೈಲ್‌ಪೈಪ್‌ಗಳು ಅಕ್ರಾಪೋವಿಕ್‌ನಿಂದ ಹಗುರವಾದ ಟೈಟಾನಿಯಂ ಎಕ್ಸಾಸೃ ಸಿಸ್ಟಂಗಳನ್ನು ನೀಡಿದೆ.

ಈ ಲ್ಯಾಂಬೊರ್ಗಿನಿ ಉರುಸ್ ಪರ್ಫಾರ್ಮಂಟೆ ಎಸ್‍ಯುವಿ ಒಳಬಾಗವು ಒಜಿ ಉರುಸ್‌ಗೆ ಹೋಲುತ್ತವೆ. ಆದರೆ ರೂಫ್ ಹೆಡ್‌ಲೈನರ್ ಸೇರಿದಂತೆ ನೀವು ಸಾಕಷ್ಟು ಅಲ್ಕಾಂಟಾರಾವನ್ನು ಪಡೆಯುತ್ತೀರಿ. ಸೀಟುಗಳು ಹೊಲಿಗೆಯನ್ನು ಹೊಂದಿವೆ, ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್‌ನಲ್ಲಿನ ಹೊಸ ಗ್ರಾಫಿಕ್ಸ್ ಮತ್ತು ಮೋಡ್ ಸೆಲೆಕ್ಟರ್‌ನಲ್ಲಿ ಹೊಸ ರ್ಯಾಲಿ ಆಯ್ಕೆಯೊಂದಿಗೆ ಇತರ URUS ಮಾದರಿಗಳಿಂದ ಪ್ರತ್ಯೇಕಿಸುತ್ತದೆ.

ಎಂಜಿನ್ ಮತ್ತು ಪರ್ಫಾಮೆನ್ಸ್: ಲ್ಯಾಂಬೊರ್ಗಿನಿ ಉರುಸ್ ಪರ್ಫಾರ್ಮೆಂಟೆ ಎಸ್‍ಯುವಿ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V8 ಎಂಜಿನ್‌ನ ಅತ್ಯಂತ ಪವರ್ ಫುಲ್ ಆವೃತ್ತಿಯಿಂದ ಚಾಲಿತವಾಗಿದೆ. ಈ ಎಂಜಿನ್ 6,000rpm ನಲ್ಲಿ 666 hp (657bhp) ಮತ್ತು 2,250 ರಿಂದ 4,500 rpm ನಲ್ಲಿ 850 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮೂಲಕ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.

ಈ ಉರುಸ್ ಪರ್ಫಾರ್ಮೆಂಟೆ ಎಸ್‍ಯುವಿ 48V ಆಕ್ಟಿವ್ ಆಂಟಿ-ರೋಲ್ ಬಾರ್‌ಗಳೊಂದಿಗೆ ಹೊಸ ಆಕ್ಟಿವ್ ಚಾಸಿಸ್ ಸೆಟಪ್ ಅನ್ನು ಹೊಂದಿದೆ. ಹಗುರವಾದ ಪರ್ಫಾಮೆನ್ಸ್ ಎಸ್‍ಯುವಿ ರೇರ್-ವ್ಹೀಲ್ ಸ್ಟೀರಿಂಗ್ ಮತ್ತು ಹೊಸ ಕಾಯಿಲ್-ಸ್ಪ್ರಿಂಗ್ ಸಸ್ಪೆನ್ಶನ್ ಅನ್ನು ಹಳೆಯದಾದ, ಭಾರವಾದ ಏರ್ ಸಸ್ಪೆನ್ಶನ್ ಸೆಟಪ್ ಅನ್ನು 20mm ರಷ್ಟು ಕಡಿಮೆಗೊಳಿಸಿದೆ. ಲ್ಯಾಂಬೊರ್ಗಿನಿ ಉರುಸ್ ಪರ್ಫಾರ್ಮೆಂಟೆ ಎಸ್‍ಯುವಿ 22 ಅಥವಾ 23 ಇಂಚುಗಳ ಸ್ನ್ಯಾಜಿ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಈ ಲ್ಯಾಂಬೊರ್ಗಿನಿ ಉರುಸ್ ಪರ್ಫಾರ್ಮೆಂಟೆ ಎಸ್‍ಯುವಿ ಕೇವಲ 3.3 ಸೆಕೆಂಡ್‌ಗಳಲ್ಲಿ 0-100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು 200 ಕಿ.ಮೀ ವೇಗವನ್ನು ಪಡೆದುಕೊಳ್ಳಲು 11.5 ಸೆಕೆಂಡುಗಳ ಸಮಯವನ್ನು ತೆಗೆದುಕೊಳ್ಳುತ್ತದ ಎಂದು ಲ್ಯಾಂಬೊರ್ಗಿನಿ ಹೇಳಿಕೊಂಡಿದೆ. ಈ ಲ್ಯಾಂಬೊರ್ಗಿನಿ ಉರುಸ್ ಎಸ್‍ಯುವಿಯು 308 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ.

ಇನ್ನು ಈ ಲ್ಯಾಂಬೊರ್ಗಿನಿ ಉರುಸ್ ಪರ್ಫಾರ್ಮೆಂಟೆ ಎಸ್‍ಯುವಿ 5,137 mm ಉದ್ದ, 2,026 mm ಅಗಲ ಮತ್ತು 1,618 mm ಎತ್ತರ ಮತ್ತು 3,006 mm ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಲ್ಯಾಂಬೊರ್ಗಿನಿ ಉರುಸ್ ಪರ್ಫಾರ್ಮೆಂಟೆ ಎಸ್‍ಯುವಿಯು 2,150 ಕೆಜಿ ತೂಕವನ್ನು ಹೊಂದಿದೆ.

ಡ್ರೈವಿಂಗ್ ಅನುಭವ: ಲ್ಯಾಂಬೊರ್ಗಿನಿ ಉರುಸ್ ಪರ್ಫಾರ್ಮೆಂಟೆ ಎಸ್‍ಯುವಿಯನ್ನು ನಾವು ಬೆಂಗಳೂರಿನ ಹಲವು ಕಡೆಗಳಲ್ಲಿ ಡ್ರೈವ್ ಮಾಡಿದ್ದೇವೆ. ನಂದಿ ಬೆಟ್ಟ ಮೇಲೆ ಹೋಗುವ ರಸ್ತೆಯಲ್ಲಿಯು ಕೂಡ ಈ ಎಸ್‍ಯುವಿಯನ್ನು ಡ್ರೈವ್ ಮಾಡಿದ್ದೇವೆ. ಒಟ್ಟು ಸುಮಾರು 36 ಕಿಲೋಮೀಟರ್ ದೂರದಲ್ಲಿ ನಾವು ಸೂಪರ್ ಎಸ್‌ಯುವಿಯನ್ನು ಹೆದ್ದಾರಿಯಲ್ಲಿ ಮತ್ತು ಕಡಿದಾದ, ಹೇರ್‌ಪಿನ್-ಇನ್ಫ್ಯೂಸ್ಡ್ ರಸ್ತೆಯಲ್ಲಿ ನಂದಿ ಬೆಟ್ಟದ ಮೇಲೆ ಮತ್ತು ಕೆಳಗೆ ಡ್ರೈವ್ ಮಾಡಿದ್ದೇವೆ.

ಕಡಿಮೆಗೊಳಿಸಲಾದ ಕಾಯಿಲ್-ಓವರ್ ಸಸ್ಪೆನ್ಷನ್ ಸೆಟಪ್ ಜೊತೆಗೆ Trofeo R ಟೈರ್‌ಗಳೊಂದಿಗೆ ರಸ್ತೆಯ ಮೇಲೆ ಹಿಡಿತ ಸಾಧಿಸುತ್ತದೆ. ಕೆಟ್ಟ ರಸ್ತೆಗಳಲ್ಲಿಯು ಕೂಡ ಇದರ ಪವರ್ ಫುಲ್ ಎಂಜಿನ್ ನೊಂದಿಗೆ ಮುನ್ನುಗುತ್ತದೆ. ಕಸ್ಟಮ್ EGO ಮೋಡ್‌ನೊಂದಿಗೆ. ಥ್ರೊಟಲ್ ಪ್ರತಿಕ್ರಿಯೆಯು ಕ್ಷಿಪ್ರವಾಗಿರುತ್ತದೆ ಒಮ್ಮೆ ನಂದಿ ಬೆಟ್ಟದ ಕಿರುದಾದ ರಸ್ತೆಗಳಲ್ಲಿ, ಉರುಸ್ ಎಸ್‍ಯುವಿಯು ಸುಲಭವಾಗಿ ಸಾಗಿತು.

ಇನ್ನು ಎರಡನೇ ಭಾಗವು ಬ್ರೆನ್ ರೇಸ್‌ವೇಯಲ್ಲಿ ನಿರ್ಮಾಣ ಹಂತದಲ್ಲಿರುವ ಕೋರ್ಸ್‌ನ ಸುತ್ತಲೂ ಒಂದೆರಡು ಸುತ್ತ ರೌಂಡ್ ಡ್ರೈವ್ ಮಾಡಿದ್ದೇವೆ. ಕೋರ್ಸ್‌ನ ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿ ಮರಳು ಮತ್ತು ಜಲ್ಲಿಕಲ್ಲುಗಳಿಂದ ಕೂಡಿದೆ. ಆದರೆ ಈ ಎಸ್‍ಯುವಿಯು ಹೊಸ ಆಫ್-ರೋಡಿಂಗ್ 'ರ್ಯಾಲಿ' ಮೋಡ್‌ನಲ್ಲಿ ಸುಲಭವಾಗಿ ಸಾಗಿತು.ಈ ಮೋಡ್‌ನಲ್ಲಿ, ಉರುಸ್ ಪರ್ಫಾರ್ಮೆಂಟೆಯ ಆಲ್-ವೀಲ್-ಡ್ರೈವ್ ಸಿಸ್ಟಮ್‌ನಿಂದ ಹೆಚ್ಚಿನ ಪವರ್ ಅನ್ನು ಹಿಂದಿನ ಚಕ್ರಗಳಿಗೆ ಕಳುಹಿಸಲಾಗುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಲ್ಯಾಂಬೊರ್ಗಿನಿ ಉರುಸ್ ಪರ್ಫಾರ್ಮೆಂಟೆ ಎಸ್‍ಯುವಿ ಮಾದರಿಯು ಹಿಂದೆಂದಿಗಿಂತಲೂ ಹಗುರವಾಗಿದೆ. ಈ ಎಸ್‍ಯುವಿಯು ಸರಿಸಾಟಿ ಇಲ್ಲದ ಪರ್ಫಾಮೆನ್ಸ್ ಆನ್ನು ನೀಡುತ್ತದೆ. ಇನ್ನು ಈ ಎಸ್‍ಯುವಿಯ ಎಕ್ಸಾಸ್ಟ್ ನಿಂದ ಬರುವ ಸೌಂಡ್ ಮತ್ತು ಇದರ ಪರ್ಫಾಮೆನ್ಸ್ ಈ ಎಸ್‍ಯುವಿ ಉತ್ತಮ ಡ್ರೈವಿಂಗ್ ಅನುಭವನ್ನು ನೀಡುತ್ತದೆ. ಈ ಸೂಪರ್ ಎಸ್‍ಯುವಿಯನ್ನು ಎಂತಹ ರಸ್ತೆಯಲ್ಲಿಯು ಧ್ರೈರ್ಯವಾಗಿ ತೆಗೆದುಕೊಂಡು ಹೋಗಬಹುದು. ಇದರ ಉತ್ತಮ ಪರ್ಫಾಮೆನ್ಸ್ ನಿಂದ ಡ್ರೈವ್ ಮಾಡುವರಿಗೆ ಹೆಚ್ಚಿನ ನಂಬಿಕೆಯನ್ನು ಒದಗಿಸುತ್ತದೆ.

More from DriveSpark

Article Published On: Thursday, March 9, 2023, 13:01 [IST]
English summary
Lamborghini urus performante review specs design features details in kannad
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+