ಭಾರತದಲ್ಲಿ ಯಾರೂ ಇನ್ನೊಂದು ವರ್ಷ ಲ್ಯಾಂಬೋರ್ಗಿನಿ ಖರೀದಿಸುವಂತಿಲ್ಲ: ಕಾರಣ ತಿಳಿದು ಬೆಚ್ಚಿಬೀಳಬೇಡಿ!
ಭಾರತದಲ್ಲಿ ಲ್ಯಾಂಬೋರ್ಗಿನಿಯಂತಹ ಕಾರುಗಳ ಕ್ರೇಜ್ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತು. ಸಾಮಾನ್ಯ ವರ್ಗದವರಿಗೆ ಕನಸಿನ ಕುದುರೆಯಾಗಿರುವ ಲಕ್ಷುರಿ ಕಾರು ಲ್ಯಾಂಬೋರ್ಗಿನಿ ಭಾರತದಲ್ಲಿ ಈ ಪಾಟಿ ಫೇಮಸ್ ಆಗಲು ಇದರ ಅಗ್ರೆಸಿವ್ ಲುಕ್ ಮತ್ತು ಸಾಟಿಯಿಲ್ಲದ ಪರ್ಫಾಮೆನ್ಸೇ ಕಾರಣ ಎಂದರೆ ಅದು ಅತಿಶಯೋಕ್ತಿಯಾಗಲಾರದು.
ಸದ್ಯಕ್ಕೆ ವಿಶ್ವದಾದ್ಯಂತ ಕಳೆದ ವರ್ಷದಿಂದ ತನ್ನ ನಾಗಲೋಟವನ್ನು ಮುಂದುವರೆಸಿದೆ. ಕಳೆದ ವರ್ಷ ಈ ಲ್ಯಾಂಬೋರ್ಗಿನಿ ಸುಮಾರು 10000 ಕಾರುಗಳನ್ನು ಮಾರಾಟ ಮಾಡಿ ದಾಖಲೆ ಸೃಷ್ಟಿಸಿತ್ತು. ಲ್ಯಾಂಬೋರ್ಗಿನಿಗೆ ಭಾರತ ಸಣ್ಣ ಮಾರುಕಟ್ಟೆಯಾಗಿದ್ದು, ವರ್ಷ ಕಳೆದಂತೆ ಭಾರತದಲ್ಲಿ ಲ್ಯಾಂಬೋರ್ಗಿನಿ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಲ್ಯಾಂಬೋರ್ಗಿನಿ ಆಟೋಮೊಬಿಲಿ ಸಿಇಒ ಸ್ಟೀಫನ್ ವಿಂಕ್‌ಮನ್ ಹೇಳಿದ್ದಾರೆ.

ಮಾಹಿತಿಯ ಪ್ರಕಾರ ಭಾರತಕ್ಕೆ ಸುಮರು 200 ಲ್ಯಾಂಬೋರ್ಗಿನಿ (Lamborghini) ಆರ್ಡರ್‌ಗಳು ಪೆಂಡಿಂಗ್‌ನಲ್ಲಿದೆ ಎಂದು ತಿಳಿದು ಬಂದಿದ್ದು, ಇದರಲ್ಲಿ ರೆವೆಲ್ಟೋ, ಹುರಾಕಾನ್, ಉರುಸ್ ಹೈಬ್ರಿಡ್‌ನಂತಹ ಕಾರುಗಳ ಒಳಗೊಂಡಿದೆ. ಸದ್ಯಕ್ಕೆ ಜಾಗತಿಕವಾಗಿ ಲ್ಯಾಂಬೋರ್ಗಿನಿಯ ಸುಮಾರು 20000 ಯೂನಿಟ್ ಆರ್ಡರ್ ಬಾಕಿಯಿದ್ದು, ಭಾರತದಲ್ಲಿ ಮುಂದಿನ ವರ್ಷದವರೆಗೆ ಲ್ಯಾಂಬೋರ್ಗಿನಿ ಕಾರುಗಳ ಬುಕಿಂಗ್ ಭರ್ತಿಯಾಗಿದೆ ಎಂದು ತಿಳಿದು ಬಂದಿದೆ.
ಭಾರತದಲ್ಲಿ ಲ್ಯಾಂಬೋರ್ಗಿನಿಯ ಹುರಾಕಾನ್ ಸಾಕಷ್ಟು ಪ್ರಸಿದ್ದವಾದುದು. ಲ್ಯಾಂಬೋರ್ಗಿನಿ ಹುರಾಕಾನ್ ಎಸ್‌ಟಿಒ ಬಗ್ಗೆ ನೋಡುವುದಾದರೆ, ಭಾರತದಲ್ಲಿ ಈ ಕಾರು 2021 ರಲ್ಲಿ ಔದ್ಯೋಗಿಕವಾಗಿ ಲಾಂಚ್ ಆಗಿತ್ತು. ಇದು ಸಾಧಾರಣ ಹುರಾಕಾನ್‌ಗಿಂತ ಬಹಳ ವ್ಯತ್ಯಸ್ಥವಾಗಿದೆ. ಲ್ಯಾಂಬೋರ್ಗಿನಿ ಟ್ರೋಫಿಯೋ ಇವೋ ರೇಸ್ ಕಾರ್ ಅನ್ನು ಆಧರಿಸಿ ತಯಾರಿಸಲಾಗಿದೆ.

ಸುಮಾರು 4.99 ಕೋಟಿ ಬೆಲೆ ಬಾಳುವ ಈ ಕಾರು, 5.2 ಲೀಟರ್ V10 ಎಂಜಿನ್ ಜೊತೆ ಬರುತ್ತದೆ. ಈ ಎಂಜಿನ್ ಸಹಾಯದಿಂದ ಸುಮಾರು 640 ಪಿಎಸ್ ಪವರ್ ಮತ್ತು 565 ಎನ್‌ಎಮ್ ಟಾರ್ಕ್ ಅನ್ನು ಈ ಕಾರು ಉತ್ಪಾದಿಸುತ್ತದೆ. ನಮ್ಮಲ್ಲಿ ಹಲವು ಸೆಲೆಬ್ರಿಟಿಗಳು ಲ್ಯಾಂಬೋರ್ಗಿನಿ ಹುರಾಕಾನ್‌ನ ವಿವಿಧ ಮಾದರಿಯ ಕಾರುಗಳನ್ನು ಖರೀದಿ ಮಾಡಿದ್ದಾರೆ.
ಇತ್ತೀಚೆಗೆ ಬಾಲಿವುಡ್ ಖ್ಯಾತ ನಟಿ ಶ್ರದ್ಧಾ ಕಪೂರ್ (Shraddha Kapoor) ಭಾರತದಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಹೊಚ್ಚಹೊಸ ಲ್ಯಾಂಬೋರ್ಗಿನಿ ಹುರಾಕನ್ ಖರೀದಿಸಿದ್ದಾರೆ. ಶ್ರದ್ಧಾ ಕಪೂರ್ ಅವರು 4.5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಮಾದರಿಯನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಕಾರು ಕೆಂಪು ಬಣ್ಣ ಮಾದರಿಯಾಗಿದೆ.
ಈ ಲ್ಯಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಸೂಪರ್ ಕಾರು 325 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಸೂಪರ್ ಕಾರಿನಲ್ಲಿ 3.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಸೂಪರ್ ಕಾರು 9.1 ಸೆಕೆಂಡುಗಳಲ್ಲಿ 200 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಟೊಯೊಟಾ ಫಾರ್ಚೂನರ್ ಎಸ್‍ಯುವಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು.
ಇತ್ತೀಚೆಗಷ್ಟೇ ತಂದೆಯೊಬ್ಬರು ತನ್ನ ಮಗನಿಗೆ 18 ವರ್ಷ ತುಂಬಿದ ಕೂಡಲೇ ಲ್ಯಾಂಬೋರ್ಗಿನಿ ಕಾರನ್ನು ಉಡುಗೊರೆ ನೀಡಿದ ಘಟನೆ ವರದಿಯಾಗಿತ್ತು. ಪೋಷಕರು ತಮ್ಮ ಮಕ್ಕಳಿಗೆ ಏನೇನೋ ಉಡುಗೊರೆಗಳು ನೀಡುವುದನ್ನು ನೋಡಿದ್ದೇವೆ. ಆದರೆ ಕೋಟಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿರುವ ಕೆಲವೇ ಘಟನೆಗಳಲ್ಲಿ ಇದೂ ಸಹ ಒಂದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








