18ನೇ ವರ್ಷದ ಹುಟ್ಟುಹಬ್ಬಕ್ಕೆ ಲ್ಯಾಂಬೋರ್ಗಿನಿ ಗಿಫ್ಟ್‌ ನೀಡಿದ ತಂದೆ: 5 ಕೊಟಿಯ ಕಾರು ಕಂಡು ಮೂಕನಾದ ಮಗ!

ದುಡ್ಡಿದ್ದರೆ ಮನುಷ್ಯ ಏನು ಬೇಕಾದರೂ ಮಾಡಬಲ್ಲ. ಈ ಮಾತಿಗೆ ಈಗಾಗಲೇ ಹಲವಾರು ಉದಾಹರಣೆಗಳು ನಮ್ಮ ಮುಂದೆ ಇದೆ. ಆದರೆ ಅದೆಲ್ಲಕ್ಕಿಂತ ವಿಲಕ್ಷಣವಾದ ಘಟನೆಯೊಂದು ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಈ ಘಟನೆ ಬಗ್ಗೆ ಪರ ಮತ್ತು ವಿರೋಧಗಳ ಭಾರೀ ಚರ್ಚೆಗಳು ನಡೆಯುತ್ತಿವೆ.

ಇಲ್ಲೊಂದು ಕಡೆ ತನ್ನ ಮಗನಿಗೆ 18 ವರ್ಷ ತುಂಬಿದ ಕೂಡಲೇ ತಂದೆಯೊಬ್ಬ ಆತನಿಗೆ ಲ್ಯಾಂಬೋರ್ಗಿನಿ ಕಾರನ್ನು ಉಡುಗೊರೆ ನೀಡಿದ ಘಟನೆ ವರದಿಯಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಏನೇನೋ ಉಡುಗೊರೆಗಳು ನೀಡುವುದನ್ನು ನೋಡಿದ್ದೇವೆ. ಆದರೆ ಕೋಟಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿರುವ ಕೆಲವೇ ಘಟನೆಗಳಲ್ಲಿ ಇದೂ ಸಹ ಒಂದು.

Indian father surprises son with Lamborghini Huracan STO on 18th birthday

ತರುಶ್‌ ರುಂಗ್ತಾ ಎಂಬ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಈ ಕುರಿತಾದ ವಿಡಿಯೋ ಶೇರ್‌ ಮಾಡಲಾಗಿದೆ. ಇತ್ತೀಚೆಗಷ್ಟೇ ಈ ಹುಡುಗ 18 ವರ್ಷ ವಯಸ್ಸನ್ನು ಪೂರ್ಣಗೊಳಿಸಿದ್ದ. ಮಾಹಿತಿಗಳಂತೆ ಈ ಬಾಲಕ ಲ್ಯಾಂಬೋರ್ಗಿನಿ ಕಾರುಗಳ ಬಹುದೊಡ್ಡ ಫ್ಯಾನ್ ಎಂದು ಅಪ್ಪನಿಗೆ ತಿಳಿದಿತ್ತು ಎನ್ನಲಾಗಿದೆ. ಹಾಗಾಗಿ ಮಗನ 18 ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲೋಸುಗ ತನ್ನ ಮಗನಿಗೆ ಲ್ಯಾಂಬೋರ್ಗಿನಿ ಹುರಾಕಾನ್‌ STO ಅನ್ನು ( Lamborghini Huracan STO) ಗಿಫ್ಟ್‌ ನೀಡಿದ್ದಾರೆ.

ಈ ಕುರಿತಾದ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದು ತನ್ನ ತಂದೆಗೆ ಕೃತಜ್ಞತೆಯನ್ನು ತಿಳಿಸಿದ್ದಾನೆ. ನನ್ನ 18ನೇ ವರ್ಷದ ಹುಟ್ಟು ಹಬ್ಬ ಇದಕ್ಕಿಂದ ಅದ್ಭುತವಾಗಿ ಮೂಡಿ ಬರಲು ಸಾಧ್ಯವಿಲ್ಲ. ಇಷ್ಟು ದೊಡ್ಡ ಗಿಫ್ಟ್‌ ಕೊಟ್ಟ ನನ್ನ ತಂದೆಗೆ ನಾನು ಚಿರರುಣಿ ಎಂದು ವಿಡಿಯೋ ಕ್ಯಾಪ್ಷನ್‌ನಲ್ಲಿ ಹೇಳಿಕೊಂಡಿದ್ದಾನೆ.

ಇನ್ನು ಈತ ಗಿಫ್ಟ್‌ ನೀಡಿದ ಲ್ಯಾಂಬೋರ್ಗಿನಿ ಹುರಾಕಾನ್‌ ಎಸ್‌ಟಿಒ ಬಗ್ಗೆ ನೋಡುವುದಾದರೆ, ಭಾರತದಲ್ಲಿ ಈ ಕಾರು 2021 ರಲ್ಲಿ ಔದ್ಯೋಗಿಕವಾಗಿ ಲಾಂಚ್ ಆಗಿತ್ತು. ಇದು ಸಾಧಾರಣ ಹುರಾಕಾನ್‌ಗಿಂತ ಬಹಳ ವ್ಯತ್ಯಸ್ಥವಾಗಿದೆ. ಲ್ಯಾಂಬೋರ್ಗಿನಿ ಟ್ರೋಫಿಯೋ ಇವೋ ರೇಸ್‌ ಕಾರ್‌ ಅನ್ನು ಆಧರಿಸಿ ತಯಾರಿಸಲಾಗಿದೆ.

ಸುಮಾರು 4.99 ಕೋಟಿ ಬೆಲೆ ಬಾಳುವ ಈ ಕಾರು, 5.2 ಲೀಟರ್‌ V10 ಎಂಜಿನ್‌ ಜೊತೆ ಬರುತ್ತದೆ. ಈ ಎಂಜಿನ್‌ ಸಹಾಯದಿಂದ ಸುಮಾರು 640 ಪಿಎಸ್‌ ಪವರ್ ಮತ್ತು 565 ಎನ್‌ಎಮ್‌ ಟಾರ್ಕ್‌ ಅನ್ನು ಈ ಕಾರು ಉತ್ಪಾದಿಸುತ್ತದೆ. ನಮ್ಮಲ್ಲಿ ಹಲವು ಸೆಲೆಬ್ರಿಟಿಗಳು ಲ್ಯಾಂಬೋರ್ಗಿನಿ ಹುರಾಕಾನ್‌ನ ವಿವಿಧ ಮಾದರಿಯ ಕಾರುಗಳನ್ನು ಖರೀದಿ ಮಾಡಿದ್ದಾರೆ.

Indian father surprises son with Lamborghini Huracan STO on 18th birthday

ಇತ್ತೀಚೆಗೆ ಬಾಲಿವುಡ್ ಖ್ಯಾತ ನಟಿ ಶ್ರದ್ಧಾ ಕಪೂರ್ (Shraddha Kapoor) ಭಾರತದಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಹೊಚ್ಚಹೊಸ ಲ್ಯಾಂಬೋರ್ಗಿನಿ ಹುರಾಕನ್ ಖರೀದಿಸಿದ್ದಾರೆ. ಶ್ರದ್ಧಾ ಕಪೂರ್ ಅವರು 4.5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಮಾದರಿಯನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಕಾರು ಕೆಂಪು ಬಣ್ಣ ಮಾದರಿಯಾಗಿದೆ.

ಟ್ರ್ಯಾಕ್-ಫೋಕಸ್ಡ್ STO ರೂಪಾಂತರವು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಇದು ಮಾರಾಟದಲ್ಲಿರುವ ಅತ್ಯಂತ ಶಕ್ತಿಶಾಲಿ ಹುರಾಕನ್ ಅಲ್ಲ.ಈ ಲ್ಯಾಂಬೋರ್ಗಿನಿಯ ಹುರಾಕನ್ ಟೆಕ್ನಿಕಾ ಕಾರು (Lamborghini Huracan Tecnica) ಕಾರು ಅನಾವರಣಗೊಳಿಸಿತು. ಸಿಯಾನ್ ಹೈಬ್ರಿಡ್ ಹೈಪರ್‌ಕಾರ್‌ನಿಂದ ಪ್ರೇರಿತವಾದ ವಿನ್ಯಾಸ ಅಂಶಗಳನ್ನು ಒಳಗೊಂಡಿದೆ. ಗಮನಾರ್ಹವಾಗಿ, ಮುಂಭಾಗ ಮತ್ತು ಹಿಂಭಾಗದ ಫಾಸಿಕದಲ್ಲಿ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ.

ಈ ಲ್ಯಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಸೂಪರ್ ಕಾರು 325 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಸೂಪರ್ ಕಾರಿನಲ್ಲಿ 3.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಸೂಪರ್ ಕಾರು 9.1 ಸೆಕೆಂಡುಗಳಲ್ಲಿ 200 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಬಾಲಿವುಡ್ ನಟಿ ಶ್ರದ್ಧಾ ಕಪೂರ್ಅವರು ಟೊಯೊಟಾ ಫಾರ್ಚೂನರ್ ಎಸ್‍ಯುವಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, April 4, 2024, 11:01 [IST]
English summary
Indian father surprises son with lamborghini huracan sto on 18th birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+