Suzuki: ಹೊಸ ಸ್ಕೂಟರ್ ಖರೀದಿಸಲು ದುಡ್ಡಿಲ್ವಾ.. ನೂತನ ಸುಜುಕಿ ಇ ಆಕ್ಸೆಸ್ ಬಾಡಿಗೆಗೆ ಸಿಗುತ್ತೆ, 1 ಗಂಟೆಗೆ ಬರೀ 28 ರೂಪಾಯಿ!
ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India) & ರಾಯಲ್ ಬ್ರದರ್ಸ್ ರೆಂಟಲ್ಸ್ (Royal Brothers Rentals) ಒಪ್ಪಂದ ಮಾಡಿಕೊಂಡಿವೆ. ಈ ಪಾಲುದಾರಿಕೆಯ ಭಾಗವಾಗಿ ಹೊಚ್ಚ ಹೊಸ 'ಇ-ಆಕ್ಸೆಸ್' ಸ್ಕೂಟರ್‌ನ್ನು ಬಾಡಿಗೆ ಮತ್ತು ಚಂದಾದಾರಿಕೆಯ ರೂಪದಲ್ಲಿ ಸವಾರರ ಬಳಕೆಗೆ ನೀಡಲಾಗುತ್ತದೆ. ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ವಿಶಾಖಪಟ್ಟಣ, ಭುವನೇಶ್ವರ, ಜೈಪುರ ಹಾಗೂ ಗುರುಗ್ರಾಮದಲ್ಲಿ ಈ ಸೇವೆ ಲಭ್ಯವಾಗಲಿದೆ.
ಆಸಕ್ತರು 'ಸುಜುಕಿ ಆಕ್ಸೆಸ್' ಇ-ಸ್ಕೂಟರ್‌ನ್ನು ಒಂದು ವರ್ಷದವರೆಗೆ ಚಂದಾದಾರಿಕೆ ತೆಗೆದುಕೊಂಡು ಉಪಯೋಗಿಸಬಹುದು. ಜೊತೆಗೆ 24 ಗಂಟೆಗಳ ಅವಧಿಗೂ ಬಾಡಿಗೆ ಪಡೆಯಬಹುದು. 1 ಗಂಟೆಗೆ ರೂ.28 ಶುಲ್ಕವನ್ನು ನಿಗದಿಪಡಿಸಲಾಗಿದೆ. ಅಂದರೆ, ದಿನವಿಡಿ ಬಳಸಿದರೆ, ರೂ.672 ಬಾಡಿಗೆ ಕಟ್ಟಬೇಕು.

ಸುಜುಕಿ ಇ ಆಕ್ಸೆಸ್ (Suzuki E Access) ವಿಶೇಷತೆಗಳೇನು:
ಇದು ಸ್ವಲ್ಪ ಮಟ್ಟಿಗೆ ದುಬಾರಿ ಬೆಲೆಯನ್ನು ಹೊಂದಿದೆ. ರೂ.1.88 ಲಕ್ಷ ಎಕ್ಸ್-ಶೋರೂಂ ದರವನ್ನು ಪಡೆದಿದೆ. ಬಹುತೇಕ ನಗರದಲ್ಲಿ ರೂ.2.07 ಲಕ್ಷವರೆಗೆ ಆನ್-ರೋಡ್ ಬೆಲೆಯಿದ್ದು, ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಉತ್ತಮವಾದ ಎಲ್‌ಇಡಿ ಹೆಡ್‌ಲೈಟ್, ಎಲ್‌ಇಡಿ ಇಂಡಿಕೇಟರ್‌ಗಳು, ಟೈಲ್‌ಲೈಟ್ & 12-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಸಾಕಷ್ಟು ವಿಶಾಲವಾಗಿದೆ. 1,860 ಮಿ.ಮೀ ಉದ್ದ, 715 ಮಿ.ಮೀ ಅಗಲ ಹಾಗೂ 1,135 ಮಿ.ಮೀ ಎತ್ತರವಿದೆ. 165 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,305 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಮೆಟಾಲಿಕ್ ಮ್ಯಾಟ್ ಸ್ಟೆಲ್ಲಾರ್ ಬ್ಲೂ ಹಾಗೂ ಮೆಟಾಲಿಕ್ ಮ್ಯಾಟ್ ಫೈಬ್ರೊಯಿನ್ ಗ್ರೇ ಎಂಬ ಆಕರ್ಷಕ ಬಣ್ಣದ ಆಯ್ಕೆಯಲ್ಲಿಯೂ ಸಿಗುತ್ತದೆ.

ನೂತನ 'ಇ ಆಕ್ಸೆಸ್' ಬೆಲೆಗೆ ತಕ್ಕಂತೆ ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 3.07 ಕಿಲೋ ವ್ಯಾಟ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 95 ಕಿ.ಮೀ ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. ಇದರಲ್ಲಿರುವ ಬಲಿಷ್ಠ ಎಲೆಕ್ಟ್ರಿಕ್ ಮೋಟಾರ್, 4.1 ಕೆಡಬ್ಲ್ಯೂ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 15 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಇದು 71 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. 4.2-ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ, ರಿಮೋಟ್ ಸ್ಟಾರ್ಟ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇಕೋ, ರೈಡ್ ಎ & ರೈಡ್ ಬಿ ಎಂಬ ಮೂರು ಅತ್ಯಾಧುನಿಕ ರೈಡಿಂಗ್ ಮೋಡ್‌ಗಳನ್ನು ಪಡೆದಿದೆ.

ಈ ಸ್ಕೂಟರ್‌ನಲ್ಲಿರುವ ಬ್ಯಾಟರಿಯು ಡಿಸಿ ಫಾಸ್ಟ್ ಚಾರ್ಜರ್ ಉಪಯೋಗದಲ್ಲಿ ಕೇವಲ 2 ಗಂಟೆ 12 ನಿಮಿಷಗಳಲ್ಲಿ 0 ರಿಂದ 100% ಚಾರ್ಜ್ ಆಗುತ್ತದೆ. ಅದೇ ರೀತಿಯಲ್ಲಿ ಎಸಿ ಚಾರ್ಜರ್ ಬಳಕೆಯಲ್ಲಿ 6 ಗಂಟೆ 42 ನಿಮಿಷಗಳಲ್ಲಿ ಭರ್ತಿಯಾಗಿ ಚಾರ್ಜ್ ಆಗಿ ಬಿಡುತ್ತದೆ.
ಹೊಸ 'ಇ ಆಕ್ಸೆಸ್' ಸುರಕ್ಷತೆಗೂ ಹೆಸರುವಾಗಿದೆ. ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಸ್ವಿಂಗರ್ಮ್ ಮೌಂಟೆಡ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಹಾಗೆಯೇ ಡ್ರಮ್ & ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಒಟ್ಟಾರೆಯಾಗಿ ನೂತನ 'ಸುಜುಕಿ ಇ ಆಕ್ಸೆಸ್' ಬಾಡಿಗೆಗೆ ಸಿಗುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಇದರಿಂದ ಸುಲಭವಾಗಿ ನಿರ್ದಿಷ್ಟ ಗಮ್ಯ ಸ್ಥಾನವನ್ನು ತಲುಪಬಹುದಾಗಿದ್ದು, ಪ್ರತಿನಿತ್ಯ ಕಚೇರಿ ಕೆಲಸಕ್ಕೆ ತೆರಳುವವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ನೀವು 'ಇ-ಆಕ್ಸೆಸ್'ನ್ನು ಬಾಡಿಗೆ ಪಡೆಯಬೇಕೇ.. ಹಾಗಾದರೆ 'ರಾಯಲ್ ಬ್ರದರ್ಸ್ ರೆಂಟಲ್ಸ್'ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿರಿ.


Click it and Unblock the Notifications








