Suzuki: ಭಾರತದಲ್ಲಿ ಜಪಾನ್ ಸ್ಕೂಟರ್ ಹೊಸ ಬಣ್ಣದೊಂದಿಗೆ ಬಿಡುಗಡೆ: ಬೆಲೆಯೆಷ್ಟು?
ಜಪಾನ್‌ನ ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ದ್ವಿಚಕ್ರ ವಾಹನ ಅಂಗಸಂಸ್ಥೆಯಾದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ, ಇಂದು ಸುಜುಕಿ ಬರ್ಗ್‌ಮನ್ ಸ್ಟ್ರೀಟ್ EX ಸ್ಕೂಟರ್‌ಗೆ ಹೊಸ ಬಣ್ಣವಾದ 'ಪರ್ಲ್ ಗ್ರೇಸ್ ವೈಟ್' ಆಯ್ಕೆಯನ್ನು ಪರಿಚಯಿಸಿದೆ. ಇದು ಸ್ಕೂಟರ್‌ಗೆ ಹೊಸ ಆಕರ್ಷಣೆಯನ್ನು ಸೇರಿಸಿದ್ದು, ಮತ್ತಷ್ಟು ಸ್ಪೋರ್ಟಿ ಲುಕ್ ನೀಡಿದೆ. ಈ ಹೊಸ ಬಣ್ಣದ ಪರಿಚಯದೊಂದಿಗೆ, ಸುಜುಕಿ ಬರ್ಗ್‌ಮನ್ ಸ್ಟ್ರೀಟ್ EX ಈಗ ಪರ್ಲ್ ಗ್ರೇಸ್ ವೈಟ್ (ಹೊಸದು), ಮೆಟಾಲಿಕ್ ರಾಯಲ್ ಬ್ರಾಂಜ್ ಮತ್ತು ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ನಂ.2 ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.
ಹೊಸ ಬರ್ಗ್‌ಮನ್ ಸ್ಟ್ರೀಟ್ EX ಸ್ಕೂಟರ್ ಪ್ರಮುಖ ವೈಶಿಷ್ಟ್ಯಗಳಲ್ಲಿ ಸುಜುಕಿ ರೈಡ್ ಕನೆಕ್ಟ್‌ನೊಂದಿಗೆ ಬ್ಲೂಟೂತ್ ಮಲ್ಟಿ - ಫಂಕ್ಷನ್ ಡಿಜಿಟಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್‌ಇಡಿ ಹೆಡ್‌ಲೈಟ್ ಮತ್ತು ಟೈಲ್ ಲ್ಯಾಂಪ್, ಬಾಡಿ-ಮೌಂಟೆಡ್ ವಿಂಡ್‌ಸ್ಕ್ರೀನ್, ಸೀಟಿನ ಕೆಳಗೆ ದೊಡ್ಡ 21.5 ಲೀಟರ್ ಸ್ಟೋರೇಜ್, ಆರಾಮದಾಯಕ ಡ್ಯುಯಲ್ ಟೋನ್ ಸೀಟ್ ಸೇರಿವೆ.

ದೈನಂದಿನ ಸವಾರಿ ಅನುಕೂಲವನ್ನು ಹೆಚ್ಚಿಸುವ ಮೂಲಕ, ಸ್ಕೂಟರ್ ಎಂಜಿನ್ ಆಟೋ ಸ್ಟಾಪ್ - ಸ್ಟಾರ್ಟ್ (EASS) ಸಿಸ್ಟಮ್ ಅನ್ನು ಸಹ ಹೊಂದಿದೆ. ಇದು ಐಡ್ಲಿಂಗ್ ಸಮಯದಲ್ಲಿ ಆಟೋಮ್ಯಾಟಿಕ್ ಆಗಿ ಎಂಜಿನ್ ಅನ್ನು ಸ್ಟಾಪ್ ಮಾಡುತ್ತದೆ. ಸವಾರ ಥ್ರೊಟಲ್ ಅನ್ನು ಆನ್ ಮಾಡಿದಾಗ ಮರು-ಪ್ರಾರಂಭಿಸುತ್ತದೆ. ಇದು ಸ್ಟಾಪ್- ಅಂಡ್ -ಗೋ ಟ್ರಾಫಿಕ್‌ನಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೊಸ ಬರ್ಗ್‌ಮನ್ ಸ್ಟ್ರೀಟ್ EX ಸ್ಕೂಟರ್‌ನ EASS ಸಿಸ್ಟಮ್, ಸುಜುಕಿ ಈಸಿ ಸ್ಟಾರ್ಟ್ ಸಿಸ್ಟಮ್‌ನೊಂದಿಗೆ ಸಂಯೋಜಿತವಾಗಿ ಕಾರ್ಯನಿರ್ವಹಿಸುತ್ತದೆ. ಇದು ಎಂಜಿನ್ ಅನ್ನು ಸ್ಟಾರ್ಟರ್ ಸ್ವಿಚ್‌ನ ಒಂದೇ ಪುಶ್‌ನೊಂದಿಗೆ ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ಸ್ಕೂಟರ್‌ನಲ್ಲಿರುವ ಸೈಲೆಂಟ್ ಸ್ಟಾರ್ಟರ್ ಸಿಸ್ಟಮ್ ಸುಗಮ ಮತ್ತು ಶಾಂತವಾದ ಸ್ಟಾರ್ಟ್ ಅನ್ನು ಖಚಿತಪಡಿಸುತ್ತದೆ.

ಹೊಸ ಬರ್ಗ್‌ಮನ್ ಸ್ಟ್ರೀಟ್ EX ಸ್ಕೂಟರ್ 100/80-12 ಟೈರ್ ಪ್ರೊಫೈಲ್ ಹೊಂದಿರುವ ಇದರ 12 - ಇಂಚಿನ ಹಿಂಬದಿ ಚಕ್ರವು ರೈಡ್ ಸ್ಟೆಬಿಲಿಟಿ ಮತ್ತು ಕುಶಲತೆಯನ್ನು ಹೆಚ್ಚಿಸುತ್ತದೆ. ಇದಕ್ಕೆ ವಿಶಾಲವಾದ, ಹೆಚ್ಚು ಪ್ರೀಮಿಯಂ ಮತ್ತು ಐಷಾರಾಮಿ ನಿಲುವನ್ನು ನೀಡುತ್ತದೆ. ಉದ್ದವಾದ ಮತ್ತು ತುಂಬಾ ಅಗಲವಾದ ಇದರ ಸೀಟ್, ಪ್ರಯಾಣಿಕರಿಬ್ಬರಿಗೂ ಆರಾಮದಾಯಕವಾಗಿ ಕೂರುವಂತೆ ಹೊಂದಿಕೊಳ್ಳುತ್ತದೆ.
ಪ್ರಸ್ತುತ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ EX ರೂ. 1,07,902 (ಎಕ್ಸ್ - ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಎಂಜಿನ್ ವಿಷಯಕ್ಕೆ ಬಂದರೆ ಸಂಪೂರ್ಣ ಅಲ್ಯೂಮಿನಿಯಂ 124cc, 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಹೊಂದಿರುವ ಪವರ್‌ಫುಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 8.6 PS ಪವರ್ ಮತ್ತು 10 Nm ಟಾರ್ಕ್ ಹೊರಹಾಕುತ್ತದೆ. ಈ ಪವರ್ ಔಟ್‌ಪುಟ್ ಸ್ಕೂಟರ್ ಗಾತ್ರಕ್ಕೆ ತಕ್ಕಂತೆ ಸವಾರರಿಗೆ ಆರಾಮ ಪ್ರಯಾಣ ಅನುಭವ ನೀಡುವುದಾಗಿ ಸುಜುಕಿ ಹೇಳಿಕೊಂಡಿದೆ.

ಹೊಸ ಬರ್ಗ್‌ಮನ್ ಸ್ಟ್ರೀಟ್ EX ಸ್ಕೂಟರ್ ಬ್ರ್ಯಾಂಡ್‌ನ ಇಕೋ ಪರ್ಫಾರ್ಮೆನ್ಸ್ ಆಲ್ಫಾ (SEP-α) ಎಂಜಿನ್ ತಂತ್ರಜ್ಞಾನವನ್ನು ಹೊಂದಿದ್ದು, ಸುಧಾರಿತ ಫ್ಯೂಲ್ ಇಂಜೆಕ್ಷನ್ ತಂತ್ರಜ್ಞಾನದೊಂದಿಗೆ ಕಡಿಮೆ ಇಂಧನ ಬಳಕೆ ಮತ್ತು ಕಾರ್ಬನ್ ಹೊರಸೂಸುವಿಕೆಗೆ ಕಾರಣವಾಗುತ್ತದೆ. ಜೊತೆಗೆ ಪವರ್‌ಫುಲ್ ವೇಗವರ್ಧನೆ ಮತ್ತು ಉತ್ತಮ ಸ್ಪಂದಿಸುವ ಪರ್ಫಾಮೆನ್ಸ್ ನೀಡುತ್ತದೆ.
ಸುಜುಕಿಯ ಮಾರಾಟ ಮತ್ತು ಮಾರುಕಟ್ಟೆ ಉಪಾಧ್ಯಕ್ಷ ದೀಪಕ್ ಮುಟ್ರೆಜಾ ಮಾತನಾಡಿ, "ಬರ್ಗ್‌ಮನ್ ಸ್ಟ್ರೀಟ್ EX ಸ್ಕೂಟರ್ ವಿಶಿಷ್ಟ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ಉತ್ತಮ ಸವಾರಿ ಸೌಕರ್ಯಕ್ಕೆ ಮೆಚ್ಚುಗೆ ಪಡೆದಿದೆ. ಈ ಹೊಸ ಬಣ್ಣದ ಪರಿಚಯದೊಂದಿಗೆ ಒಟ್ಟಾರೆ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದ್ದೇವೆ. ಅಲ್ಲದೆ ಸ್ಕೂಟರ್‌ನ ವಿಶ್ವಾಸಾರ್ಹ ಗುಣಮಟ್ಟ ಮತ್ತು ಸವಾರಿ ಸವಾರಿ ಸೌಕರ್ಯದಲ್ಲಿ ಯಾವುದೆ ಬದಲಾವಣೆ ಆಗಿಲ್ಲ" ಎಂದರು.


Click it and Unblock the Notifications








