ಮೊನ್ನೆಯಷ್ಟೆ ಸ್ಪೋರ್ಟಿ ಬಣ್ಣದಲ್ಲಿ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ EX ಬಿಡುಗಡೆ: ಬೆಲೆಯೆಷ್ಟು?

ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ, ಮೊನ್ನೆಯಷ್ಟೆ ಹೊಸ 'ಪರ್ಲ್ ಗ್ರೇಸ್ ವೈಟ್' ಬಣ್ಣದ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ EX ಸ್ಕೂಟರ್ ಬಿಡುಗಡೆ ಮಾಡಿದೆ. ಈ ಬರ್ಗ್‌ಮನ್ ಸ್ಟ್ರೀಟ್ EX ಸ್ಕೂಟರ್ ವಿಶಿಷ್ಟ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ಉತ್ತಮ ಸವಾರಿ ಸೌಕರ್ಯಕ್ಕೆ ಮೆಚ್ಚುಗೆ ಪಡೆದಿದೆ. ಈಗ ಹೊಸ ಬಣ್ಣದ ಪರಿಚಯದೊಂದಿಗೆ ಒಟ್ಟಾರೆ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದ್ದೇವೆ. ಅಲ್ಲದೆ ಸ್ಕೂಟರ್‌ನ ವಿಶ್ವಾಸಾರ್ಹ ಗುಣಮಟ್ಟ ಮತ್ತು ಸವಾರಿ ಸೌಕರ್ಯದಲ್ಲಿ ಯಾವುದೆ ಬದಲಾವಣೆ ಆಗಿಲ್ಲ ಎಂದು ಸುಜುಕಿ ತಿಳಿಸಿದೆ.

ಹೊಸ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ EX ವಿಶೇಷತೆಗಳು

ಪ್ರಸ್ತುತ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ EX ರೂ. 1,07,902 (ಎಕ್ಸ್ - ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಬಣ್ಣವು ಸ್ಕೂಟರ್‌ಗೆ ಹೊಸ ಆಕರ್ಷಣೆಯನ್ನು ಸೇರಿಸಿದ್ದು, ಮತ್ತಷ್ಟು ಸ್ಪೋರ್ಟಿ ಲುಕ್ ನೀಡಿದೆ. ದೈನಂದಿನ ಸವಾರಿ ಅನುಕೂಲವನ್ನು ಹೆಚ್ಚಿಸುವ ಮೂಲಕ, ಸ್ಕೂಟರ್ ಎಂಜಿನ್ ಆಟೋ ಸ್ಟಾಪ್ - ಸ್ಟಾರ್ಟ್ (EASS) ಸಿಸ್ಟಮ್ ಅನ್ನು ಸಹ ಹೊಂದಿದೆ. ಇದು ಐಡ್ಲಿಂಗ್ ಸಮಯದಲ್ಲಿ ಆಟೋಮ್ಯಾಟಿಕ್ ಆಗಿ ಎಂಜಿನ್ ಅನ್ನು ಸ್ಟಾಪ್ ಮಾಡುತ್ತದೆ.

new-suzuki-pearl-grace-white-burgman-street-ex-top-things

ಈ ಹೊಸ ಬಣ್ಣದ ಪರಿಚಯದೊಂದಿಗೆ, ಸುಜುಕಿ ಬರ್ಗ್‌ಮನ್ ಸ್ಟ್ರೀಟ್ EX ಈಗ ಪರ್ಲ್ ಗ್ರೇಸ್ ವೈಟ್ (ಹೊಸದು), ಮೆಟಾಲಿಕ್ ರಾಯಲ್ ಬ್ರಾಂಜ್ ಮತ್ತು ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ನಂ.2 ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಕೂಟರ್ ಸವಾರ ಥ್ರೊಟಲ್ ಅನ್ನು ಆನ್ ಮಾಡಿದಾಗ ಮರು-ಪ್ರಾರಂಭಿಸುತ್ತದೆ. ಇದು ಸ್ಟಾಪ್- ಅಂಡ್ -ಗೋ ಟ್ರಾಫಿಕ್‌ನಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೊಸ ಬರ್ಗ್‌ಮನ್ ಸ್ಟ್ರೀಟ್ EX ಸ್ಕೂಟರ್ ಪ್ರಮುಖ ವೈಶಿಷ್ಟ್ಯಗಳಲ್ಲಿ ಎಲ್‌ಇಡಿ ಹೆಡ್‌ಲೈಟ್ ಮತ್ತು ಟೈಲ್ ಲ್ಯಾಂಪ್, ಬಾಡಿ-ಮೌಂಟೆಡ್ ವಿಂಡ್‌ಸ್ಕ್ರೀನ್, ಸುಜುಕಿ ರೈಡ್ ಕನೆಕ್ಟ್‌ನೊಂದಿಗೆ ಬ್ಲೂಟೂತ್ ಮಲ್ಟಿ - ಫಂಕ್ಷನ್ ಡಿಜಿಟಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೀಟಿನ ಕೆಳಗೆ ದೊಡ್ಡ 21.5 ಲೀಟರ್‌ ಸ್ಟೋರೇಜ್, ಆರಾಮದಾಯಕ ಡ್ಯುಯಲ್ ಟೋನ್ ಸೀಟ್ ಸೇರಿವೆ.

new-suzuki-pearl-grace-white-burgman-street-ex-top-things

ಎಂಜಿನ್ ವಿಷಯಕ್ಕೆ ಬಂದರೆ ಇದು 8.6 PS ಪವರ್ ಮತ್ತು 10 Nm ಟಾರ್ಕ್ ಹೊರಹಾಕುವ ಸಂಪೂರ್ಣ ಅಲ್ಯೂಮಿನಿಯಂ 124cc, 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಹೊಂದಿರುವ ಪವರ್‌ಫುಲ್ ಎಂಜಿನ್‌ನೊಂದಿಗೆ ಬರುತ್ತದೆ. ಹೊಸ ಬರ್ಗ್‌ಮನ್ ಸ್ಟ್ರೀಟ್ EX ಸ್ಕೂಟರ್ ಬ್ರ್ಯಾಂಡ್‌ನ ಇಕೋ ಪರ್ಫಾರ್ಮೆನ್ಸ್ ಆಲ್ಫಾ (SEP-α) ಎಂಜಿನ್ ತಂತ್ರಜ್ಞಾನವನ್ನು ಹೊಂದಿದೆ.

ಸ್ಕೂಟರ್‌ನ ಎಂಜಿನ್‌ ಪವರ್‌ ಔಟ್‌ಪುಟ್‌ ಸ್ಕೂಟರ್ ಗಾತ್ರಕ್ಕೆ ತಕ್ಕಂತೆ ಸವಾರರಿಗೆ ಆರಾಮ ಪ್ರಯಾಣ ಅನುಭವ ನೀಡುವುದಾಗಿ ಸುಜುಕಿ ಹೇಳಿಕೊಂಡಿದೆ. ಸುಧಾರಿತ ಫ್ಯೂಲ್ ಇಂಜೆಕ್ಷನ್ ತಂತ್ರಜ್ಞಾನದೊಂದಿಗೆ ಕಡಿಮೆ ಇಂಧನ ಬಳಕೆ ಮತ್ತು ಕಾರ್ಬನ್ ಹೊರಸೂಸುವಿಕೆಗೆ ಕಾರಣವಾಗುತ್ತದೆ. ಜೊತೆಗೆ ಪವರ್‌ಫುಲ್ ವೇಗವರ್ಧನೆ ಮತ್ತು ಉತ್ತಮ ಸ್ಪಂದಿಸುವ ಪರ್ಫಾಮೆನ್ಸ್ ನೀಡುತ್ತದೆ.

new-suzuki-pearl-grace-white-burgman-street-ex-top-things

ಹೊಸ ಬರ್ಗ್‌ಮನ್ ಸ್ಟ್ರೀಟ್ EX ಸ್ಕೂಟರ್‌ನ EASS ಸಿಸ್ಟಮ್, ಸುಜುಕಿ ಈಸಿ ಸ್ಟಾರ್ಟ್ ಸಿಸ್ಟಮ್‌ನೊಂದಿಗೆ ಸಂಯೋಜಿತವಾಗಿ ಕಾರ್ಯನಿರ್ವಹಿಸುತ್ತದೆ. ಇದು ಎಂಜಿನ್ ಅನ್ನು ಸ್ಟಾರ್ಟರ್ ಸ್ವಿಚ್‌ನ ಒಂದೇ ಪುಶ್‌ನೊಂದಿಗೆ ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ಸ್ಕೂಟರ್‌ನಲ್ಲಿರುವ ಸೈಲೆಂಟ್ ಸ್ಟಾರ್ಟರ್ ಸಿಸ್ಟಮ್ ಸುಗಮ ಮತ್ತು ಶಾಂತವಾದ ಸ್ಟಾರ್ಟ್ ಅನ್ನು ಖಚಿತಪಡಿಸುತ್ತದೆ.

ಹೊಸ ಬರ್ಗ್‌ಮನ್ ಸ್ಟ್ರೀಟ್ EX ಸ್ಕೂಟರ್ ಇದಕ್ಕೆ ವಿಶಾಲವಾದ, ಹೆಚ್ಚು ಪ್ರೀಮಿಯಂ ಮತ್ತು ಐಷಾರಾಮಿ ನಿಲುವನ್ನು ನೀಡುತ್ತದೆ. ಉದ್ದವಾದ ಮತ್ತು ತುಂಬಾ ಅಗಲವಾದ ಇದರ ಸೀಟ್, ಪ್ರಯಾಣಿಕರಿಬ್ಬರಿಗೂ ಆರಾಮದಾಯಕವಾಗಿ ಕೂರುವಂತೆ ಹೊಂದಿಕೊಳ್ಳುತ್ತದೆ. 100/80-12 ಟೈರ್ ಪ್ರೊಫೈಲ್ ಹೊಂದಿರುವ ಇದರ 12 - ಇಂಚಿನ ಹಿಂಬದಿ ಚಕ್ರವು ರೈಡ್ ಸ್ಟೆಬಿಲಿಟಿ ಮತ್ತು ಕುಶಲತೆಯನ್ನು ಹೆಚ್ಚಿಸುತ್ತದೆ.

More from DriveSpark

Article Published On: Sunday, March 15, 2026, 12:41 [IST]
English summary
New suzuki pearl grace white burgman street ex top things
Read more on suzuki motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+