ರಾಯಲ್ ಎನ್‌ಫೀಲ್ಡ್ ಮೋಟೋವರ್ಸ್ 2026: ಹಿಮಾಲಯನ್ 750 ಟ್ವಿನ್ ಲಾಂಚ್ ಆಗುತ್ತಾ? ಬೈಕ್ ಪ್ರಿಯರಿಗೆ ಭರ್ಜರಿ ಸಪ್ರೈಸ್!
ರಾಯಲ್ ಎನ್‌ಫೀಲ್ಡ್‌ನ ಬಹುನಿರೀಕ್ಷಿತ 'ಮೋಟೋವರ್ಸ್ 2026' ಈವೆಂಟ್ ನವೆಂಬರ್ 27ರಿಂದ 29ರವರೆಗೆ ಗೋವಾದ ವಾಗಟೋರ್‌ನಲ್ಲಿರುವ ಹಿಲ್‌ಟಾಪ್‌ನಲ್ಲಿ ನಡೆಯಲಿದೆ. ಈ ಬಾರಿಯ ಮೋಟೋವರ್ಸ್‌ನಲ್ಲಿ ಯಾವ ಹೊಸ ಬೈಕ್‌ಗಳು ಲಾಂಚ್ ಆಗಲಿವೆ, ಬುಕಿಂಗ್ ಯಾವಾಗ ಆರಂಭವಾಗಲಿದೆ ಹಾಗೂ ಈ ಈವೆಂಟ್ ಅನ್ನು ಲೈವ್ ಆಗಿ ನೋಡುವುದು ಹೇಗೆ ಎಂಬ ಕುತೂಹಲ ಬೈಕ್ ಪ್ರಿಯರಲ್ಲಿ ಹೆಚ್ಚಾಗಿದೆ. ಭಾರತದ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಹಿಮಾಲಯನ್ ಟ್ವಿನ್, ಇವಿ ಅಪ್‌ಡೇಟ್‌ಗಳು ಮತ್ತು ಲಿಮಿಟೆಡ್-ಎಡಿಷನ್ ಅಕ್ಸೆಸರಿಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಅನಾವರಣದ ಪೂರ್ಣ ವೇಳಾಪಟ್ಟಿಯನ್ನು ರಾಯಲ್ ಎನ್‌ಫೀಲ್ಡ್ ಇನ್ನು ಅಧಿಕೃತವಾಗಿ ಹಂಚಿಕೊಂಡಿಲ್ಲವಾದರೂ, ದಿನಾಂಕ ಮತ್ತು ಸ್ಥಳವನ್ನು ಖಚಿತಪಡಿಸಿದೆ.
ಇತ್ತೀಚೆಗೆ ನಡೆದ EICMA ಶೋ ನಂತರ, ರಾಯಲ್ ಎನ್‌ಫೀಲ್ಡ್‌ನ ಹಿಮಾಲಯನ್ 750 ಟ್ವಿನ್ ಈ ಬಾರಿಯ ಮುಖ್ಯ ಆಕರ್ಷಣೆಯಾಗಲಿದೆ ಎಂಬ ಚರ್ಚೆ ಜೋರಾಗಿದೆ. ಮಿಲನ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾದಾರ್ಪಣೆ ಮಾಡಿದ ನಂತರ ಭಾರತದಲ್ಲಿ ಪ್ರದರ್ಶನಗೊಳ್ಳುವ ಸುಳಿವನ್ನು ರಾಯಲ್ ಎನ್‌ಫೀಲ್ಡ್ ಟೀಸರ್ ನೀಡಿತ್ತು. ಗೋವಾದಲ್ಲಿ ಯಾವ ಬೈಕ್ ಲಾಂಚ್ ಆಗಲಿದೆ ಎಂಬುದನ್ನು ಕಂಪನಿ ಇನ್ನೂ ಅಧಿಕೃತಗೊಳಿಸಿಲ್ಲ. ಆದಾಗ್ಯೂ, 2023ರಲ್ಲಿ ಮೋಟೋವರ್ಸ್ ಈವೆಂಟ್‌ನಲ್ಲೇ ಬುಕಿಂಗ್ ಆರಂಭಿಸಿ, ಕೇವಲ ಒಂದೇ ವಾರದಲ್ಲಿ ಡೆಲಿವರಿ ನೀಡಲಾಗಿತ್ತು. ಹಾಗಾಗಿ, ಈ ಬಾರಿಯೂ ಅದೇ ರೀತಿಯ ಸಪ್ರೈಸ್ ಇರಬಹುದು ಎಂಬ ನಿರೀಕ್ಷೆಯಿದೆ.

ಮೋಟೋವರ್ಸ್ 2026 ಲೈವ್ ಸ್ಟ್ರೀಮಿಂಗ್ ಮತ್ತು ವೇಳಾಪಟ್ಟಿ
ರಾಯಲ್ ಎನ್‌ಫೀಲ್ಡ್ ತನ್ನ ಮುಖ್ಯ ಈವೆಂಟ್‌ಗಳನ್ನು ಸಾಮಾನ್ಯವಾಗಿ ರಾಯಲ್ ಎನ್‌ಫೀಲ್ಡ್ ಟಿವಿ ಮತ್ತು ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡುತ್ತದೆ. ನವೆಂಬರ್ 11ರ ವೇಳೆಗೆ ಬೈಕ್ ಅನಾವರಣದ ನಿಖರ ಸಮಯ ಪ್ರಕಟವಾಗಿಲ್ಲ. ಆದ್ದರಿಂದ ಲೈವ್ ಅಪ್‌ಡೇಟ್‌ಗಳಿಗಾಗಿ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ನೋಟಿಫಿಕೇಶನ್ ಆನ್ ಮಾಡಿಕೊಳ್ಳುವುದು ಒಳಿತು. ಕಳೆದ ವರ್ಷ ಪ್ರತಿದಿನದ ಮುಖ್ಯಾಂಶಗಳನ್ನು ವೀಡಿಯೊಗಳ ಮೂಲಕ ಅಭಿಮಾನಿಗಳಿಗೆ ಕಂಪನಿ ತಲುಪಿಸಿತ್ತು.
ರಾಯಲ್ ಎನ್‌ಫೀಲ್ಡ್ ನಿರೀಕ್ಷಿತ ಬೆಲೆ ಮತ್ತು ಬೈಯರ್ ಗೈಡ್
| ಮಾದರಿ (ನಿರೀಕ್ಷಿತ) | ಬೆಲೆ ಶ್ರೇಣಿ (ಎಕ್ಸ್‑ಶೋರೂಂ) | ಸ್ಥಿತಿ |
|---|---|---|
| ಹಿಮಾಲಯನ್ 750 ಟ್ವಿನ್ | ₹4.0–4.5 ಲಕ್ಷ | ಅಂದಾಜು ಬೆಲೆ; RE ಅಧಿಕೃತಗೊಳಿಸಬೇಕಿದೆ |
ಕಂಪನಿಯು 2023ರ ಮಾದರಿಯನ್ನೇ ಅನುಸರಿಸಿದರೆ, ಮೋಟೋವರ್ಸ್ ಈವೆಂಟ್ ಸಮಯದಲ್ಲೇ ಬುಕಿಂಗ್ ಆರಂಭವಾಗಿ, ಶೀಘ್ರದಲ್ಲೇ ಟೆಸ್ಟ್ ರೈಡ್‌ಗಳು ಸಿಗುವ ಸಾಧ್ಯತೆಯಿದೆ. ನೀವು ಪಿಲಿಯನ್ ಜೊತೆ ಸುದೀರ್ಘ ಹೈವೇ ರೈಡ್ ಮಾಡಲು ಹೆಚ್ಚು ಪವರ್‌ಫುಲ್ ಬೈಕ್ ಹುಡುಕುತ್ತಿದ್ದರೆ, ಸ್ವಲ್ಪ ಕಾಯುವುದು ಉತ್ತಮ. ಒಂದು ವೇಳೆ ನಿಮಗೆ ಬಜೆಟ್, ಹಗುರವಾದ ಬೈಕ್ ಅಥವಾ ತಕ್ಷಣದ ಡೆಲಿವರಿ ಮುಖ್ಯವಾಗಿದ್ದರೆ, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಿಮಾಲಯನ್ 450 ಅತ್ಯುತ್ತಮ ಆಯ್ಕೆ. 750 ಟ್ವಿನ್ ಬೈಕ್‌ನ ಬೆಲೆ ₹4.0 ರಿಂದ 4.5 ಲಕ್ಷದ ಆಸುಪಾಸಿನಲ್ಲಿರಬಹುದು ಎಂದು ಅಂದಾಜಿಸಲಾಗಿದೆ.
ಸ್ಪರ್ಧಿಗಳ ಪೈಪೋಟಿಯೂ ಸಹ ನಿಮ್ಮ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಟಿಎಂ ಸಂಸ್ಥೆಯು ಇತ್ತೀಚೆಗೆ EICMA ನಲ್ಲಿ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದು, ಶೀಘ್ರದಲ್ಲೇ ಭಾರತದಲ್ಲೂ ಹೊಸ ಟೀಸರ್‌ಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ. ಇತ್ತೀಚೆಗಷ್ಟೇ ಅಂದರೆ ಅಕ್ಟೋಬರ್‌ನಲ್ಲಿ ಟ್ರಯಂಫ್ ತನ್ನ ಹೊಸ 'ಬೊನ್ನೆವಿಲ್ಲೆ T40' ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇತ್ತ ಹೋಂಡಾ ಕಂಪನಿಯು ₹7.44 ಲಕ್ಷ ಬೆಲೆಯಲ್ಲಿ E-Clutch ಹೊಂದಿರುವ 'NX500' ಅಡ್ವೆಂಚರ್ ಬೈಕ್ ಪರಿಚಯಿಸಿ ಗ್ರಾಹಕರನ್ನು ಸೆಳೆಯುತ್ತಿದೆ. ಗೋವಾದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಬುಕ್ ಮಾಡುವ ಮುನ್ನ ಈ ಎಲ್ಲ ಸ್ಪರ್ಧಿಗಳ ಬೈಕ್‌ಗಳ ಮೇಲೆಯೂ ಒಂದು ಕಣ್ಣಿಟ್ಟಿರಿ.


Click it and Unblock the Notifications
